Home
ಸುದ್ದಿಜಾಲ

ಮೆಸ್ಸಿ ಜಾದೂ... ಕಡಿಮೆ ಅವಧಿಯಲ್ಲೇ ಚಂದಾದಾರರ ಸಂಖ್ಯೆ ದುಪ್ಪಟ್ಟು ಮಾಡಿಕೊಂಡ ಆಪಲ್‌!

ಕ್ರೀಡಾ ಪ್ರೇಮಿಗಳಿಗೆ ಲಿಯೋ ಮೆಸ್ಸಿ (Lionel Messi) ಅಂದ್ರೆ ಹುಚ್ಚು ಅಭಿಮಾನ. ಇವರ ಆಟಕ್ಕೆ ಮನಸೋಲದ ಮನಸ್ಸುಗಳೇ ಇಲ್ಲ. ಲಿಯೋನೆಲ್ ಆಂಡ್ರೆಸ್ ಮೆಸ್ಸಿ ಅರ್ಜೆಂಟೀನಾದ ವೃತ್ತಿಪರ ಫುಟ್‌ಬಾಲ್ ಆಟಗಾರರಾಗಿದ್ದು, ಅವರು ಮೇಜರ್ ಲೀಗ್ ಸಾಕರ್ ಕ್ಲಬ್ ಇಂಟರ್ ಮಿಯಾಮಿ ಮತ್ತು ಅರ್ಜೆಂಟೀನಾ ರಾಷ್ಟ್ರೀಯ ತಂಡದಲ್ಲಿ ನಾಯಕರಾಗಿ ಆಡುತ್ತಾರೆ. ಈ ನಡುವೆ ಇವರಿಂದಾಗಿ ಆಪಲ್‌ ಭರ್ಜರಿ ಲಾಭ ಪಡೆದಿದೆ.

ಹೌದು, ಲಿಯೋನೆಲ್ ಮೆಸ್ಸಿ ಇಂಟರ್ ಮಿಯಾಮಿ ನಲ್ಲಿ ಆಡಲು ಯುಎಸ್‌ಗೆ ತೆರಳಿದ್ದಾರೆ. ವಿಷಯ ಏನೆಂದರೆ ಪ್ರಪಂಚದ ಕೆಲವು ಭಾಗಗಳಲ್ಲಿ ಫುಟ್‌ಬಾಲ್(Football) ಅತ್ಯಂತ ಜನಪ್ರಿಯ ಕ್ರೀಡೆಯಾಗಿಲ್ಲ. ಅದಾಗ್ಯೂ ಮೇಜರ್ ಲೀಗ್‌ಗೆ ಮೆಸ್ಸಿಯ ಆಗಮನವು ಈ ಲೀಗ್‌ಗೆ ವಿಶೇಷ ವರ್ಚಸ್ಸನ್ನು ತಂದುಕೊಟ್ಟಿದೆ. ಈ ಕಾರಣದಿಂದಲೇ ಆಪಲ್‌ ಟಿವಿ+ ನಲ್ಲಿ ಮೇಜರ್ ಲೀಗ್ ಪಾಸ್‌ಗಾಗಿ ಜನ ಮುಗಿಬಿದ್ದಿದ್ದಾರೆ.

ಮೆಸ್ಸಿ ಜಾದೂ... ಕಡಿಮೆ ಅವಧಿಯಲ್ಲೇ ಚಂದಾದಾರರ ಸಂಖ್ಯೆ ದುಪ್ಪಟ್ಟು ಮಾಡಿಕೊಂಡ ಆಪಲ್

ಇನ್ನು ಮೆಸ್ಸಿಯ ಆಗಮನದ ಹಿನ್ನೆಲೆ ಮೇಜರ್ ಲೀಗ್ ಪಾಸ್ ಚಂದಾದಾರರು ದ್ವಿಗುಣಗೊಂಡಿದ್ದಾರೆ ಎಂದು ಇಂಟರ್ ಮಿಯಾಮಿ ಮಾಲೀಕರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, 'ಮೆಸ್ಸಿ ಎಫೆಕ್ಟ್ ನಿಜ!, ಮೆಸ್ಸಿ ಪಂದ್ಯಗಳಿಗೆ ಸ್ಪ್ಯಾನಿಷ್ ವೀಕ್ಷಕರ ಸಂಖ್ಯೆ 50% ಮೀರಿದೆ ಹಾಗೂ ಇದು ಏರುತ್ತಲೇ ಇದೆ. ಇದು ಜಾಗತಿಕ ಅಭಿಮಾನಿಗಳಿಗೆ ರೋಮಾಂಚನಕಾರಿಯಾಗಿದೆ' ಎಂದು ಉಲ್ಲೇಖಿಸಿದ್ದಾರೆ.

ಇನ್ನು MLS ಸೀಸನ್ ಪಾಸ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಮೂರು ಪಂದ್ಯಗಳನ್ನು ಜುಲೈ 19-26 ರ ವಾರದಲ್ಲಿ ಆಡಲಾಗಿದೆ. ವಿಶ್ವದ ಅತ್ಯಂತ ಪ್ರಸಿದ್ಧ ಸಾಕರ್ ಆಟಗಾರರಲ್ಲಿ ಪ್ರಮುಖರಾಗಿರುವ ಲಿಯೋನೆಲ್ ಮೆಸ್ಸಿ ಆ ವಾರ ಲೀಗ್‌ನಲ್ಲಿ ಆಡಿದ್ದಾರೆ. ಮೆಸ್ಸಿಯ ಆಗಮನದ ಮೊದಲು MLS ಸೀಸನ್ ಪಾಸ್ ಸುಮಾರು 1 ಮಿಲಿಯನ್ ಚಂದಾದಾರರನ್ನು ಮಾತ್ರ ಹೊಂದಿತ್ತು ಎಂದು ಆಪಲ್‌ ಅಧಿಕೃತವಾಗಿ ಮಾಹಿತಿ ನೀಡಿದೆ.

ಹಾಗೆಯೇ ಮೆಸ್ಸಿ ಲೀಗ್‌ಗೆ ಎಂಟ್ರಿಯಾದ ನಂತರ ಸುಮಾರು 2 ಮಿಲಿಯನ್ ಬಳಕೆದಾರರು ಆಪಲ್‌ ಟಿವಿ +(Apple TV+) ನಲ್ಲಿ MLS ಸೀಸನ್ ಪಾಸ್‌ಗೆ ಚಂದಾದಾರರಾಗಿದ್ದಾರೆ. ಇದು ವೀಕ್ಷಕರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಇದಕ್ಕೆ ಮೆಸ್ಸಿಯ ಜನಪ್ರಿಯತೆಯೂ ಕಾರಣ ಎಂದು ತಿಳಿಸಲಾಗಿದೆ. ಇನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಮೆಸ್ಸಿಯನ್ನು ನೋಡಲು ಅಭಿಮಾನಿಗಳು ಮುಗಿಬೀಳುವುದು ಸಾಮಾನ್ಯವಾಗಿದೆ.

ಮೆಸ್ಸಿಗೆ ವಿಶೇಷ ಕವರೇಜ್ : ಪ್ರಮುಖ ವಿಷಯ ಏನೆಂದರೆ ಮೆಸ್ಸಿಯನ್ನು ಈ ಆಟದಲ್ಲಿ ವಿಶೇಷವಾಗಿ ತೋರಿಸಲಾಗುತ್ತಿದೆ. ಇದಕ್ಕಾಗಿ 18 ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಇದರೊಂದಿಗೆ ಸ್ಟೆಡಿಕ್ಯಾಮ್, ನಾಲ್ಕು ಸೂಪರ್-ಸ್ಲೋ-ಮೋಷನ್ ಕ್ಯಾಮೆರಾ,ಸ್ಕೈಕ್ಯಾಮ್, ಡ್ರೋನ್, ಸ್ಪ್ಯಾನಿಷ್ ಮತ್ತು ಇಂಗ್ಲಿಷ್‌ನಲ್ಲಿ ಸೈಡ್‌ಲೈನ್ ವರದಿಗಾರಿಕೆ, ಸಂದರ್ಶನಗಳು ಮತ್ತು ತಜ್ಞರ ವಿಶ್ಲೇಷಣೆಯೊಂದಿಗೆ ಮೀಸಲಾದ ಒಂದು-ಗಂಟೆಯ ಪ್ರಿಗೇಮ್ ಶೋ ಅನ್ನು ತೋರಿಸಲಾಗುತ್ತದೆ ಎಂದು ಆಪಲ್‌ ತಿಳಿಸಿದೆ.

ಮೆಸ್ಸಿಯ ಪ್ರತಿ ಪೋಸ್ಟ್‌ಗೆ 22 ಕೋಟಿ: ಮಗದೊಂದು ವಿಷಯದಲ್ಲಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಇನ್‌ಸ್ಟಾಗ್ರಾಮ್‌ ನಲ್ಲಿ 600 ಮಿಲಿಯನ್ ಫಾಲೋವರ್ಸ್‌ಗಳನ್ನು ದಾಟಿದ ವಿಶ್ವದ ಮೊದಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಪರ್ ಹೆಚ್‌ಕ್ಯು ಅಪ್‌ಡೇಟ್ ಈ ಸಂಬಂಧ ವರದಿ ಬಿಡುಗಡೆ ಮಾಡಿದ್ದು, ಇನ್‌ಸ್ಟಾಗ್ರಾಮ್‌ನಿಂದ ಅತಿ ಹೆಚ್ಚು ಆದಾಯ ಗಳಿಸುವ ಟಾಪ್ 100 ವ್ಯಕ್ತಿಗಳ ಪಟ್ಟಿಯಲ್ಲಿ ಓರ್ವ ಭಾರತೀಯ ಇದ್ದಾರೆ.

ವಿರಾಟ್‌ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಉಳಿದಂತೆ ರೊನಾಲ್ಡೊ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿ ಪೋಸ್ಟ್‌ಗೆ 26.76 ಕೋಟಿ ರೂಪಾಯಿಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದು, ನಂತರದಲ್ಲಿ ಲಿಯೋನೆಲ್ ಮೆಸ್ಸಿ ಪ್ರತಿ ಪೋಸ್ಟ್‌ಗೆ ಸುಮಾರು 22 ಕೋಟಿ ರೂ.ಗಳನ್ನು ಪಡೆಯುತ್ತಾರಂತೆ.

ಮೆಸ್ಸಿ ಜಾದೂ... ಕಡಿಮೆ ಅವಧಿಯಲ್ಲೇ ಚಂದಾದಾರರ ಸಂಖ್ಯೆ ದುಪ್ಪಟ್ಟು ಮಾಡಿಕೊಂಡ ಆಪಲ್

ಇದರೊಂದಿಗೆ ವಿರಾಟ್‌ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿ ಪೋಸ್ಟ್‌ಗೆ 11.45 ಕೋಟಿ ರೂಪಾಯಿಗಳನ್ನು ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸದ್ಯಕ್ಕೆ ರೋಹಿತ್ ಶರ್ಮಾ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಕೇವಲ 29.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಇದು ಕೊಹ್ಲಿಯ ಅನುಯಾಯಿಗಳಲ್ಲಿ ಸುಮಾರು 10 % ಆಗಿದೆ. ಕೆಲವು ವರ್ಷಗಳ ಹಿಂದಿನ ವರದಿಗಳ ಪ್ರಕಾರ, ರೋಹಿತ್ ಶರ್ಮಾ ಇನ್‌ಸ್ಟಾಗ್ರಾಮ್ ನಲ್ಲಿ ಪ್ರತಿ ಪೋಸ್ಟ್‌ಗೆ ಸುಮಾರು 75 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದರು.

ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರು ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸುಮಾರು 1 ಕೋಟಿ ಗಳಿಸಬಹುದಾಗಿದೆ. ಆದರೆ, ಧೋನಿ ತಮ್ಮ ಸ್ವಂತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಯಾವುದೇ ಪೋಸ್ಟ್‌ ಅನ್ನು ಮಾಡುವುದಿಲ್ಲ. ಧೋನಿ ಅವರ ಕೊನೆಯ ಪೋಸ್ಟ್ ಕಳೆದ ತಿಂಗಳು ಅವರ 42 ನೇ ಹುಟ್ಟುಹಬ್ಬ ಆಚರಣೆ ಆಗಿದೆ. ಇದು 10 ಮಿಲಿಯನ್ ಲೈಕ್‌ಗಳನ್ನು ಗಳಿಸಿದೆ.

Best Mobiles in India

English summary
Lionel Messi has moved to the US to play for Inter Miami. Meanwhile, fans are showing interest for a pass on Apple TV+ to watch Messi. By this the number of subscribers has doubled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+