ಪಬ್‌ಜಿ ಕಥೆ ಮುಗಿಯಿತು!..ಶುರುವಾಗಲಿದೆ ಹೊಸ ಗೇಮ್‌ನ ಅಬ್ಬರ!
ಕೆಲವೊಂದು ಗೇಮ್‌ಗಳು ಹಲವು ವಿಶೇಷತೆಗಳೊಂದಿಗೆ ಆಟಗಾರರಲ್ಲಿ ಕ್ರೇಜ್ ಹುಟ್ಟಿಸುತ್ತವೆ. ಗೇಮ್‌ಗೆ ಅಡಿಕ್ಟ್ ಆಗಿ ಕುಂತ್ರು ನಿಂತ್ರು ಅದೇ ಗೇಮ್‌ನ ಗುಂಗಿನಲ್ಲಿರುತ್ತಾರೆ. ಇತ್ತೀಚಿಗೆ ಇಂಥಹ ಲಕ್ಷಣಗಳನ್ನು ಆಟಗಾರರಲ್ಲಿ ಮೂಡಿಸಿದ ಗೇಮ್ ಅಂದ್ರೆ ಅದು 'ಪಬ್‌ಜಿ'. ಚೀನಾ ಮೂಲದ ಈ ಗೇಮ್ ಅನೇಕರ ಫೇವರೇಟ್ ಆಗಿದ್ದು, ಬ್ಯಾನ್ ಆಗಿ ಮರು ಜೀವ ಪಡೆದಿದೆ. ಆದರೆ ಇದೀಗ ಪಬ್‌ಜಿಗಿಂತ ಪ್ರಬಲ ಗೇಮ್ ಒಂದು ಬರಲಿದೆ.

ಹೌದು, ಚೀನಾ ಮೂಲದ ಟೆನ್ಸೆಂಟ್ ಎಂಬ ಗೇಮ್ಸ್ ಅಭಿವೃದ್ದಿ ಸಂಸ್ಥೆಯು ಪರಿಚಯಿಸಿದ ಪಬ್‌ಜಿ ಗೇಮ್ ಇತಿಹಾಸ ಸೃಷ್ಠಿಸಿದ್ದು, ಅಷ್ಟೇ ಆವಾಂತರಗಳನ್ನು ಹುಟ್ಟುಹಾಗಿದೆ. ಸ್ವಂತ ತವರು ದೇಶದಲ್ಲಿಯೇ ಪಬ್‌ಜಿ ಗೇಮ್ ಅನ್ನು ಬ್ಯಾನ್ ಮಾಡಲಾಗಿದ್ದು, ಹೀಗಾಗಿ ಟೆನ್ಸೆಂಟ್ ಸಂಸ್ಥೆ ಪಬ್‌ಜಿ ಗೇಮ್‌ಗೆ ಪ್ರತಿಯಾಗಿ ಮತ್ತೊಂದು ಸೆನ್ಸೆಶನಲ್ ಗೇಮ್ ಅನ್ನು ಲಾಂಚ್ ಮಾಡಲಿದ್ದು, ಅದರ ಹೆಸರು 'ಗೇಮ್ ಫಾರ್ ಪೀಸ್ ಫಾರ್ ಕಂಟ್ರಿ'.

ಹೊಸ 'ಗೇಮ್ ಫಾರ್ ಪೀಸ್ ಫಾರ್ ಕಂಟ್ರಿ' ಗೇಮ್ ಬಹುತೇಕ ಪಬ್‌ಜಿ ಗೇಮ್ ಅನ್ನು ಹೋಲುವಂತೆ ಡಿಸೈನ್, ಬ್ಯಾಕ್‌ಗ್ರೌಂಡ್ ಇನ್ನಿತರ ಅಂಶಗಳು ಸಹ ರಚಿತವಾಗಿದ್ದು, ಪಬ್‌ಜಿ ಗೇಮ್ ಪ್ರೇಮಿಗಳಿಗೆ ಪಬ್‌ಜಿ ಆಟದ ಅನುಭವದಂದೆ ಇರಲಿದೆ ಎನ್ನಲಾಗಿದೆ. ಹಾಗಾದರೇ ಗೇಮ್ ಫಾರ್ ಪೀಸ್ ಫಾರ್ ಕಂಟ್ರಿ' ಗೇಮ್‌ನ ವಿಶೇಷತೆಗಳೆನು ಮತ್ತು ಗೇಮ್ ಹೇಗಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪಬ್‌ಜಿಯ ಪ್ರತಿರೂಪ
ಪಬ್‌ಜಿ ಗೇಮ್ ಸಾಕಷ್ಟು ಆವಾಂತರಗಳಿಗೆ ಕಾರಣವಾಗಿದ್ದು, ಸ್ವಂತ ಚೀನಾ ದೇಶದಲ್ಲಿಯೇ ಬ್ಯಾನಗೆ ಕಾರಣವಾಗಿದೆ. ಇತ್ತೀಚಿಗೆ ಪಬ್‌ಜಿ ಆಟಕ್ಕೆ 6 ಗಂಟೆ ಮಾತ್ರ ಎಂದು ಸಮಯ ನಿಗದಿ ಸಹ ಮಾಡಲಾಗಿತ್ತು. ಹೀಗಿರುವಾಗ ಟೆನ್ಸೆಂಟ್ ಸಂಸ್ಥೆಯು ಪಬ್‌ಜಿಗೆ ಪರ್ಯಾಯವಾಗಿ 'ಗೇಮ್ ಫಾರ್ ಪೀಸ್ ಫಾರ್ ಕಂಟ್ರಿ' ಎಂಬ ಹೊಸ ಗೇಮ್ ಅನ್ನು ಪರಿಚಯಿಸಲು ಮುಂದಾಗಿದೆ.

ಗೇಮ್ ಫಾರ್ ಪೀಸ್ ಫಾರ್ ಕಂಟ್ರಿ
ಪಬ್‌ಜಿಗೆ ಬದಲಾಗಿ ಬರಲಿರುವ ಈ ಗೇಮ್ ಫಾರ್ ಪೀಸ್ ಫಾರ್ ಕಂಟ್ರಿ ಗೇಮ್ ಆಟಗಾರರಿಗೆ ಪಬ್‌ಜಿ ಆಟದ ಅನುಭವವನ್ನೆ ನೀಡಲಿದೆ. ಏಕೆಂದರೆ ಈ ಹೊಸ ಗೇಮ್‌ನಲ್ಲಿರುವ ಬಹುತೇಕ ಪಾತ್ರಗಳು ಪಬ್‌ಜಿಯಲ್ಲಿರುವಂತೆಯೆ ಇರಲಿವೆ ಹಾಗೂ ಆಟದ ಗ್ರಾಫಿಕ್ಸ್ ಡಿಸೈನ್, ಕೀವರ್ಡ್‌ಗಳು ಮತ್ತು ಬ್ಯಾಕ್‌ಗ್ರೌಂಡ್ ಪಬ್‌ಜಿ ಗೇಮ್‌ಗೆ ಹೋಲಿಕೆ ಎನಿಸಲಿವೆ.

ಗೇಮ್ ಪ್ರೊಫೈಲ್ ಮುಂದುವರಿಯಲಿದೆ
ಈಗಾಗಲೇ ಅನೇಕರು ಪಬ್‌ಜಿ ಆಟವನ್ನು ಸಿಕ್ಕಾಪಟ್ಟೆ ಆಡಿ ಹಲವು ಹಂತಗಳನ್ನು ಜಯಸಿರುತ್ತಾರೆ. ಈಗ ಹೊಸ ಗೇಮ್‌ಗೆ ಲಾಗ್ ಇನ್ ಆದಾಗ ಅವರ ಪಬ್‌ಜಿ ಗೇಮ್ ಪ್ರೊಫೈಲ್‌ನಲ್ಲಿರುವ ಅವರ ಅಚಿವಮೆಂಟ್ಸ್ ಮತ್ತು ಕಂಟೆಂಟ್ಸ್‌ಗಳು ಮುಂದುವರಿಯಲಿದೆ. ಇದು ಪಬ್‌ಜಿ ಗೇಮ್ ಆಟಗಾರರಿಗೆ ಖುಷಿ ಎನಿಸುವ ಸಂಗತಿಯಾಗಿದೆ.

ಆರಂಭದಲ್ಲಿ ಚೀನಾದಲ್ಲಿ ಮಾತ್ರ
ಪಬ್‌ಜಿಗೆ ಗುನ್ನ ನೀಡಲು ತಯಾರಾಗಿರುವ ಈ ಗೇಮ್ ಫಾರ್ ಪೀಸ್ ಫಾರ್ ಕಂಟ್ರಿ ಭಾರಿ ರೋಚಕವಾಗಿರಲಿದೆ. ಆಟಗಾರರಲ್ಲಿ ಕುತೂಹಲ ಹೆಚ್ಚಿಸಲಿದೆ. ಆದರೆ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಈ ಗೇಮ್ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ಗೇಮ್ಸ್ ಪ್ರೀಯರಿಗೆ ಲಭ್ಯವಾಗುವ ಸಾಧ್ಯತೆಗಳಿವೆ.


Click it and Unblock the Notifications








