ಜಿಯೋ ಮತ್ತು ಏರ್‌ಟೆಲ್‌ ನಂತರ, ಐಡಿಯಾದಿಂದ eKYC ಸಿಮ್ ಆಕ್ಟಿವೇಶನ್

By Suneel
|

ಭಾರತದಲ್ಲಿ ಅತಿವೇಗದ ಬೆಳವಣಿಗೆಯ ಟೆಲಿಕಾಂ ಆಪರೇಟ್ 'ಐಡಿಯಾ' ಸೆಲ್ಯುಲಾರ್ 'electronic- Know Your Customer (e-KYC)' ಆಧಾರಿತ ಆಕ್ಟಿವೇಶನ್‌ ಅನ್ನು ಪ್ರೀಪೇಡ್‌ ಮತ್ತು ಪೋಸ್ಟ್‌ಪೇಡ್‌ ಗ್ರಾಹಕರಿಗಾಗಿ ಪ್ರಕಟಣೆ ಗೊಳಿಸಿದೆ. ಅಂದಹಾಗೆ ಐಡಿಯಾ e-KYC ಆಕ್ಟಿವೇಶನ್‌ ಅನ್ನು ದೇಶದ 22 ವೃತ್ತಗಳಲ್ಲಿ ನೀಡುವ ಬಗ್ಗೆ ಪ್ರಕಟಣೆ ಹೊರಡಿಸಿದೆ.

ಜಿಯೋ ಮತ್ತು ಏರ್‌ಟೆಲ್‌ ನಂತರ, ಐಡಿಯಾದಿಂದ eKYC ಸಿಮ್ ಆಕ್ಟಿವೇಶನ್

ದೆಹಲಿಯಲ್ಲಿ ಉತ್ತಮ ಮಾರ್ಗದರ್ಶನ ದೊರೆತ ನಂತರ ಪಾನ್‌ ಇಂಡಿಯಾ e-KYC ಪ್ರಕ್ರಿಯೆಯನ್ನು UIDAI ಸಹಯೋಗದೊಂದಿಗೆ DoT ಮಾರ್ಗದರ್ಶನದಲ್ಲಿ ಜಾರಿಗೊಳಿಸಿದೆ.

e-KYC ಆಕ್ಟಿವೇಶನ್ ಗ್ರಾಹಕರಿಗೆ ತಮ್ಮ ಆಧಾರ್ ಕಾರ್ಡ್ ಮೂಲಕ ಪ್ರಾಥಮಿಕವಾಗಿ ವೆರಿಫಿಕೇಶನ್ ಹೊಂದಲು ಮತ್ತು ಸಿಮ್ ಆಕ್ಟಿವೇಶನ್‌ ಮಾಡಲು ಸಹಾಯಕವಾಗಿದೆ. ಗ್ರಾಹಕರಿಗೆ ಎಲ್ಲಾ ಐಡಿಯಾ ಸ್ಟೋರ್‌ಗಳಲ್ಲಿ ಬಯೋಮೆಟ್ರಿಕ್ ವೆರಿಫಿಕೇಶನ್ ಸೌಲಭ್ಯ ಒದಗಿಸುವುದರೊಂದಿಗೆ, ಹಲವು ಬ್ರ್ಯಾಂಡೆಡ್ ಪ್ರಿಪೇಡ್‌ ಸ್ಟೋರ್‌ಗಳನ್ನು ವಿಸ್ತರಿಸಲಾಗುತ್ತದೆಯಂತೆ.

ಐಡಿಯಾ ಸೆಲ್ಯುಲಾರ್‌ನ ಮುಖ್ಯ ಸೇವೆ ಡೆಲಿವರಿ ಅಧಿಕಾರಿಯಾದ 'ಶ್ರೀ ಶರ್ಮ ನಾರಾಯಣ್'ರವರು e-KYC ಕುರಿತು "ಪೇಪರ್‌ಲೆಸ್ ಮತ್ತು ಸಂಪೂರ್ಣ ಡಿಜಿಟಲ್‌ ಮಾದರಿಯ ಗ್ರಾಹಕ ಸ್ವಾಧೀನ ಆಧಾರಿತ e-KYC ಆಕ್ಟಿವೇಶನ್ ಆಧಾರ್ ಕಾರ್ಡ್‌ ಆಧಾರಿತವಾಗಿದೆ. ಅಲ್ಲದೇ ಗ್ರಾಹಕ ಕೇಂದ್ರಿತ ವಿಧಾನವಾಗಿದೆ", ಎಂದಿದ್ದಾರೆ.

ಜಿಯೋ ಮತ್ತು ಏರ್‌ಟೆಲ್‌ ನಂತರ, ಐಡಿಯಾದಿಂದ eKYC ಸಿಮ್ ಆಕ್ಟಿವೇಶನ್

ಹೊಸ ಗ್ರಾಹಕರಿಗೆ e-KYC ಆಕ್ಟಿವೇಶನ್‌ ಕ್ರಮವು ಅನುಕೂಲವಾಗಿದೆ. ಅಲ್ಲದೇ ಪೇಪರ್‌ ಬಳಕೆ ಕಡಿಮೆ ಆಗುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯವಾಗುತ್ತದೆ.

ಗ್ರಾಹಕರು ಪ್ರಸ್ತುತದಲ್ಲಿ ಐಡಿಯಾ ರೀಟೇಲ್‌ ಅಥವಾ ಮೈ ಐಡಿಯಾ ಸ್ಟೋರ್‌ಗಳಿಗೆ ಹೋದಲ್ಲಿ, ಪೇಪರ್‌ಲೆಸ್‌ ಮತ್ತು ಅತಿವೇಗದ ಆಕ್ಟಿವೇಶನ್‌ ಅನ್ನು ಪ್ರಿಪೇಡ್‌ ಮತ್ತು ಪೋಸ್ಟ್‌ಪೇಡ್‌ ಗ್ರಾಹಕರು e-KYC ವಿಧಾನದಿಂದ ಪಡೆಯಬಹುದು.ಆಧಾರ್‌ ಕಾರ್ಡ್' ಬಯೋಮೆಟ್ರಿಕ್‌ ವೇರಿಫಿಕೇಶನ್ ಪ್ರಕ್ರಿಯೆಗೆ ಅಗತ್ಯವಾಗಿದೆ.

ಕರ್ನಾಟಕದಲ್ಲಿ ಐಡಿಯಾ ಆಫರ್‌ಗಳ ಮೇಲೆ 62% ಕಡಿತ

Best Mobiles in India

English summary
After Reliance Jio and Airtel, Idea Opens eKYC SIM Activation. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X