ಕರ್ನಾಟಕದಲ್ಲಿ ಐಡಿಯಾ ಆಫರ್‌ಗಳ ಮೇಲೆ 62% ಕಡಿತ

By Shwetha
|

ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುವ ಪಣ ತೊಟ್ಟಿರುವ ಐಡಿಯಾ ಭಾರತದ ಹೆಚ್ಚು ವೇಗದ ಬೆಳೆವಣಿಗೆಯನ್ನು ಕಾಣುತ್ತಿರುವ ಟೆಲಿಕಾಮ್ ಆಪರೇಟರ್ ಎಂದೆನಿಸಿದೆ. ಕರ್ನಾಟಕದಲ್ಲಿ ದೊರೆಯುತ್ತಿರುವ ರಿಚಾರ್ಜ್ ಪ್ಯಾಕ್‌ಗಳಲ್ಲಿ ಇದು 62% ಕಡಿತಗೊಳಿಸುವ ತೀರ್ಮಾನವನ್ನು ಕೈಗೊಂಡಿದೆ. ಆದಷ್ಟು ಕಡಿಮೆ ದರದಲ್ಲಿ ಐಡಿಯಾ ಬಳಕೆದಾರರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಓದಿರಿ: ಜಿಯೋಗೆ ಪೈಪೋಟಿ ನೀಡಹೊರಟಿರುವ ಏರ್‌ಟೆಲ್ ಆಫರ್ಸ್

ಐಡಿಯಾ ಪ್ಯಾಕ್

ಐಡಿಯಾ ಪ್ಯಾಕ್

ಐಡಿಯಾ ಪ್ಯಾಕ್ ರೂ 84 ರ ದರದಲ್ಲಿ ಬಂದಿದ್ದು ಐಡಿಯಾದಿಂದ ಐಡಿಯಾಗೆ ಸ್ಥಳೀಯ ಕರೆಗಳು 10ಪೈಸೆ/ನಿಮಿಷಕ್ಕೆ ಇದು ರೂ 32 ಕ್ಕೆ ಲಭ್ಯವಾಗುತ್ತಿದ್ದು ರೂ 65 ರ ಪ್ಯಾಕ್ ಸ್ಥಳೀಯ ಕರೆಗಳನ್ನು 30 ಪೈಸಾ/ನಿಮಿಷಕ್ಕೆ ಈಗ ರೂ 29 ಕ್ಕೆ ಲಭ್ಯವಾಗುತ್ತಿದೆ

ಯೋಜನೆ

ಯೋಜನೆ

25 ಪೈಸೆ/ನಿಮಿಷ ಇರುವ ಎಸ್‌ಟಿಡಿ ಪ್ಯಾಕ್ ರೂ 28 ಕ್ಕೆ ದೊರೆಯುತ್ತಿದ್ದು, ಈ ಪ್ಯಾಕ್ ಈ ಹಿಂದೆ ರೂ 67 ಕ್ಕೆ ಲಭ್ಯವಾಗುತ್ತಿತ್ತು.

ಸ್ಥಳೀಯ ರೀಟೈಲ್ ಸ್ಟೋರ್‌

ಸ್ಥಳೀಯ ರೀಟೈಲ್ ಸ್ಟೋರ್‌

ಈ ಎಲ್ಲಾ ಪ್ಯಾಕ್‌ಗಳು ನಿಮ್ಮ ಸ್ಥಳೀಯ ರೀಟೈಲ್ ಸ್ಟೋರ್‌ಗಳಲ್ಲಿ ಲಭ್ಯವಿದ್ದು 28 ದಿನಗಳ ವ್ಯಾಲಿಡಿಯನ್ನು ಪಡೆದುಕೊಂಡಿದೆ ಮತ್ತು 1 ನಿಮಿಷದ ಶುಲ್ಕವನ್ನು ಯಾವುದೇ ಪ್ಯಾಕ್‌ಗೆ ನೀವು ಪಡೆದುಕೊಳ್ಳುತ್ತೀರಿ.

ಟಾರಿಫ್ ಪ್ಯಾಕ್‌

ಟಾರಿಫ್ ಪ್ಯಾಕ್‌

ಐಡಿಯಾ ಇತರ ಕೆಲವು ಟಾರಿಫ್ ಪ್ಯಾಕ್‌ಗಳ ದರವನ್ನು ಕಡಿತಗೊಳಿಸಿದ್ದು ವಿವರಗಳು ಈ ಕೆಳಗಿನಂತಿವೆ:

ಹೊಸದಾಗಿ ಘೋಷಿಸಿರುವ ಆಫರ್‌

ಹೊಸದಾಗಿ ಘೋಷಿಸಿರುವ ಆಫರ್‌

ಕರ್ನಾಟಕದಲ್ಲಿ ಹೊಸದಾಗಿ ಘೋಷಿಸಿರುವ ಆಫರ್‌ಗಳ ಬಗ್ಗೆ ಕರ್ನಾಟಕದ ಮುಖ್ಯ ಆಪರೇಟಿಂಗ್ ಅಧಿಕಾರಿ ಶಿವ ಗಣಪತಿ ಮಾತನಾಡಿದ್ದು, ಕರ್ನಾಟಕದಲ್ಲಿ ಜನಸಂಖ್ಯೆಯ ಹೆಚ್ಚಿನ ಭಾಗವು ಧ್ವನಿಯನ್ನೇ ಸಂವಹನದ ಪ್ರಮುಖ ವಿಧಾನವಾಗಿ ಆರಿಸಿಕೊಂಡಿದೆ. ಕೈಗೆಟಕುವ ಬೆಲೆಯಲ್ಲಿ ಉತ್ತಮ ವೈರ್‌ಲೆಸ್ ಅನುಭವವನ್ನು ಪ್ರಸ್ತುತ ಗ್ರಾಹಕರಿಗೆ ನೀಡುವುದು ನಮ್ಮ ಗುರಿಯಾಗಿದೆ.

ಯೋಜನೆಗಳ ಪ್ರಯೋಜನ

ಯೋಜನೆಗಳ ಪ್ರಯೋಜನ

ನಮ್ಮ ಗ್ರಾಹಕರು ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ಶಿವ ಗಣಪತಿ ನುಡಿದಿದ್ದಾರೆ. ಐಡಿಯಾವು ಕರ್ನಾಟಕದಲ್ಲಿ 8.5 ಮಿಲಿಯನ್ ಗ್ರಾಹಕರನ್ನು ಹೊಂದಿದೆ. 900MHZ ನಲ್ಲಿ 2ಜಿ ಸೇವೆಗಳನ್ನು ಕಂಪೆನಿ ಒದಗಿಸಲಿದೆ, ಅಂತೆಯೇ ಹೈ ಸ್ಪೀಡ್ 4ಜಿ ಸೇವೆಗಳನ್ನು 1800Mhz ನಲ್ಲಿ ನೀಡುತ್ತಿದೆ ಮತ್ತು 3ಜಿ ಸೇವೆಗಳನ್ನು ಐಸಿಆರ್ ಮೂಲಕ ಒದಗಿಸುತ್ತಿದೆ.

Best Mobiles in India

English summary
India's fastest growing telecom operator, announced upto 62% reduction in the MRP of various recharge packs available in Karnataka.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X