ಟೆಲಿಕಾಂಗೆ ಮತ್ತೆ ಶಾಕ್ ನೀಡಿದ 'ಟ್ರಾಯ್'...ಗ್ರಾಹಕರಿಗೆ ಆಗುತ್ತಿದ್ದ ಭಾರಿ ವಂಚನೆಗೆ ಬ್ರೇಕ್!!
ಟ್ರಾಯ್ ಜಿಯೋ ಪರವಾಗಿದೆಯೋ ದೇಶದ ಪರವಾಗಿದೆಯೋ ಗೊತ್ತಾಗುತ್ತಿಲ್ಲ.!!
ಟ್ರಾಯ್ ಜಿಯೋ ಪರವಾಗಿದೆಯೋ ದೇಶದ ಪರವಾಗಿದೆಯೋ ಗೊತ್ತಾಗುತ್ತಿಲ್ಲ. ಹೌದು, ಏಪ್ರಿಲ್‌ನಲ್ಲಿ ಜಿಯೋ ಸಲ್ಲಿಸಿರುವ ದೂರನ್ನು ಟ್ರಾಯ್ ಮಾನ್ಯ ಮಾಡಿದ್ದು, ಜಿಯೋಗೆ ಮತ್ತು ಟೆಲಿಕಾಂ ಗ್ರಾಹಕರಿಗೆ ಮತ್ತೊಂದು ಗೆಲುವು ದೊರಕಿದೆ.!! ಒಟ್ಟಿನಲ್ಲಿ ಇದರಿಂದ ಗ್ರಾಹಕರಿಗೆ ಮತ್ತೊಂದು ಭಾರಿ ಆಫರ್ ಸಿಕ್ಕಿದೆ.!!
ಜಿಯೋ ಏನೇ ಮುಟ್ಟಿದರೂ ಚಿನ್ನವಾಗುತ್ತಿದೆ. ಇತರ ಟೆಲಿಕಾಂ ಕಂಪೆನಿಗಳು ಸುಳ್ಳು ಜಾಹಿರಾತು ಮತ್ತು ತಾರತಮ್ಯದ ಆಫರ್‌ಗಳನ್ನು ಜನರಿಗೆ ನೀಡುತ್ತಿವೆ. ಇದರಿಂದ ಜನರನ್ನು ಮೊಸಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಅವರು ಮಾಡುತ್ತಿದ್ದಾರೆ ಎಂದು ಟ್ರಾಯ್‌ಗೆ ಜಿಯೋ ದೂರಸಲ್ಲಿಸಿತ್ತು.!! ಇಷ್ಟೇ ಅಲ್ಲದೇ ನೇರವಾಗಿ ಏರ್‌ಟೆಲ್ ಮೇಲೆ ಕೂಡ ಏಪ್ರಿಲ್‌ನಲ್ಲಿ ದೂರನ್ನು ದಾಖಲಿಸಿತ್ತು. ಈಗ ಆ ದೂರನ್ನು ಟ್ರಾಯ್ ಮಾನ್ಯ ಮಾಡಿದೆ.!!
ಓದಿರಿ: ಜಿಯೋಗೆ ಸೆಡ್ಡು..19 ರೂ.ಮತ್ತು 49 ರೂ.ಗೆ ವೊಡಾಫೋನ್ ಬಂಪರ್ ಆಫರ್!!
ಹಾಗಾದರೆ, ಟ್ರಾಯ್ ಜಿಯೋ ದೂರಿಗೆ ಸ್ಪಂದಿಸಿ ಇತರ ಟೆಲಿಕಾಂಗಳಿಗೆ ನೀಡಿರುವ ನಿರ್ದೇಶನಗಳೇನು? ಇದರಿಂದ ಟೆಲಿಕಾಂನಲ್ಲಿ ಆಗಬಹುದಾದ ಬದಲಾವಣೆಗಳೇನು? ಏರ್‌ಟೆಲ್‌ನ ಮುಂದಿನ ನಡೆಯೇನು? ಗ್ರಾಹಕರಿಗೆ ಏನು ಲಾಭ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜಿಯೋ ದೂರಿಗೆ ಸ್ಪಂದಿಸಿದ ಟ್ರಾಯ್.!!
ತನ್ನದೇ ಗ್ರಾಹಕರಿಗೆ ತಾರತಮ್ಯದ ಆಫರ್‌ಗಳನ್ನು ಟೆಲಿಕಾಂ ಕಂಪೆನಿಗಳು ನೀಡುತ್ತಿವೆ. ಜಿಯೋವನ್ನು ಮಣಿಸುವ ಪ್ರಯತ್ನದ ಜೊತೆಯಲ್ಲಿ ಜನರನ್ನು ಮೊಸಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಉಳಿದ ಟೆಲಿಕಾಂಗಳು ಮಾಡುತ್ತಿವೆ ಎಂದು ಟ್ರಾಯ್‌ಗೆ ಜಿಯೋ ದೂರಸಲ್ಲಿತ್ತು. ಇದನ್ನು ಕೂಲಂಕುಶವಾಗಿ ಪರಿಗಣಿಸಿರುವ ಟ್ರಾಯ್ ದೂರನ್ನು ಮಾನ್ಯಮಾಡಿದೆ.!!

ಟೆಲಿಕಾಂಗಳಿಗೆ ನೀಡಿರುವ ನಿರ್ಧೇಶನಗಳೇನು?
ಟೆಲಿಕಾಂಗಳು ತನ್ನದೇ ಗ್ರಾಹಕರಿಗೆ ಬೇರೆ ಬೇರೆ ರೀತಿಯ ಆಫರ್‌ಗಳನ್ನು ನೀಡುತ್ತಿರುವುದನ್ನು ಟ್ರಾಯ್ ಗಮನಿಸಿದೆ. ಹಾಗಾಗಿ, ಟ್ರಾಯ್ ಗಮನಕ್ಕೆ ಬಾರದೆ ಯಾವುದೇ ಕಾರಣಕ್ಕೂ ಯಾವ ಆಫರ್‌ಗಳನ್ನು ನೀಡಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದೆ. ತನ್ನದೇ ಗ್ರಾಹಕರಿಗೆ ತಾರತಮ್ಯ ಮಾಡುವ ಟೆಲಿಕಾಂ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.!!

ಜನರನ್ನು ಮೋಸಗೊಳಿಸುವ ಜಾಹಿರಾತು ನೀಡುವಂತಿಲ್ಲ.!!
ಏರ್‌ಟೆಲ್ ಮತ್ತು ಇತರ ಕಂಪೆನಿಗಳು ಜನರನ್ನು ಮೋಸಗೊಳಿಸುವ ಜಾಹಿರಾತರುಗಳನ್ನು ನೀಡುತ್ತಿವೆ ಎಂದು ಜಿಯೋ ಟ್ರಾಯ್‌ಗೆ ದೂರು ಸಲ್ಲಿಸಿತ್ತು. ಇದಕ್ಕೆ ಟ್ರಾಯ್ ಸ್ಪಂದಿಸಿದ್ದು, ಯಾವುದೇ ಮೋಸಗೊಳಿಸುವ ಜಾಹಿರಾತನ್ನು ಪ್ರಕಟಿಸಿದರೆ ಟೆಲಿಕಾಂ ಕಂಪೆನಿಗಳು ಭಾರಿ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.!!

ಇದರಿಂದ ಗ್ರಾಹಕರಿಗೆ ಏನು ಲಾಭ?
ತನ್ನದೇ ಗ್ರಾಹಕರಿಗೆ ತಾರತಮ್ಯ ಮಾಡುವ ಟೆಲಿಕಾಂ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಟ್ರಾಯ್ ಹೇಳಿದ್ದು, ತ್ತು ಗ್ರಾಹಕರ ಅವಶ್ಯಕತೆಯನ್ನು ಬಳಸಿಕೊಂಡು ಆಫರ್ ನೀಡಿ ಹಣ ಪೀಕುತ್ತಿದ್ದ ಟೆಲಿಕಾಂ ಕಂಪೆನಿಗಳಿ ಇನ್ನು ಏಕರೂಪ ಆಫರ್‌ಗಳನ್ನು ಬಿಡುಗಡೆ ಮಾಡಬೇಕಿದೆ. ಇದರಿಂದ ಗ್ರಾಹಕರಿಗೆ ಆಗುತ್ತಿದ್ದ ಭಾರಿ ವಂಚನೆ ನಿಲ್ಲುತ್ತದೆ.!!

ಇದಕ್ಕೆ ಏರ್‌ಟೆಲ್ ಹೇಳಿದ್ದೇನು?
ಜಿಯೋ ಮಾಡಿರುವ ಆರೋಪಗಳಿಗೆ ಹುರಳಿಲ್ಲ. ಇತರರನ್ನು ದೂಷಿಸುವ ಕೆಲಸವನ್ನು ಜಿಯೋ ಅವರ ತಂತ್ರದ ಮುಂದುವರಿಕೆ ಅಷ್ಟೆ ನೆಟ್ವರ್ಕ್ ಕೊರತೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಜಿಯೋ ನೀಡುತ್ತಿರುವ ಕಾರಣಗಳಿವು ಎಂದು ಏರ್ಟೆಲ್ ವಕ್ತಾರರು ಹೇಳಿದ್ದಾರೆ.


Click it and Unblock the Notifications








