ಜಿಯೋ "ಹ್ಯಾಪಿ ನ್ಯೂ ಇಯರ್" ಈಗ ಹಳೆ ಸುದ್ದಿ!. ಅಂಬಾನಿ ಪ್ಲಾನ್ ಇನ್ನು ಹೆಚ್ಚಿವೆ!?
ಫ್ರೀ ಡಾಟಾ ಸೇವೆಯನ್ನು ಮಾರ್ಚ್ 2017 ರ ವರಗೂ ವಿಸ್ತರಣೆ ಮಾಡಿ, ಜಿಯೋ ಮತ್ತೆ ಟೆಲಿಕಾಂ ಮಾರುಕಟ್ಟೆಯ ಅಧಿಪತಿಯಾಗುವಂತೆ ನೋಡಿಕೊಂಡರು! ಜೊತೆಗೆ ಜಿಯೋವಿನ ಮುಂದಿನ ನಡೆ ಏನು ಎಂಬುದನ್ನು ಬಿಚ್ಚಿಟ್ಟರು!
ಜಿಯೋವಿನ ಬಗ್ಗೆ ಎಲ್ಲರಿಗೂ ಇದ್ದ ಕುತೋಹಲಗಳಿಗೆ ಡಿಸೆಂಬರ್ 1 ರಂದು ಅಂಬಾನಿ ಹ್ಯಾಪಿ ನ್ಯೂ ಇಯರ್ ''happy new year" ಆಫರ್ ನೀಡುವ ಮೂಲಕ ತೆರೆ ಎಳೆದಿದ್ದಾರೆ. ಫ್ರೀ ಡಾಟಾ ಸೇವೆಯನ್ನು ಮಾರ್ಚ್ 2017 ರ ವರಗೂ ವಿಸ್ತರಣೆ ಮಾಡಿ, ಜಿಯೋ ಮತ್ತೆ ಟೆಲಿಕಾಂ ಮಾರುಕಟ್ಟೆಯ ಅಧಿಪತಿಯಾಗುವಂತೆ ನೋಡಿಕೊಂಡರು! ಜೊತೆಗೆ ಜಿಯೋವಿನ ಮುಂದಿನ ನಡೆ ಏನು ಎಂಬುದನ್ನು ಬಿಚ್ಚಿಟ್ಟರು!

ಹೌದು ಈಗಾಗಲೇ ನೀವು ತಿಳಿದಿರುವ ''happy new year" ಆಫರ್ ಈಗಾಗಲೇ ಹಳೆಯ ವಿಷಯ! ಹೊಸ ಸುದ್ದಿ ಏನೆಂದರೆ, ಶೀಘ್ರದಲ್ಲಿ ಜಿಯೋ ಪೇಮೆಂಟ್ ಬ್ಯಾಂಕ್ ಮತ್ತು ಆನ್‌ಲೈನ್ ಶಾಪಿಂಗ್ ಜಾಲತಾಣವನ್ನು ತೆರೆಯುತ್ತಿದೆ!

ಹೀಗೆ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ?
ದೇಶದಲ್ಲಿಯೇ ಮೊದಲಬಾರಿಗೆ ಪೇಮೆಂಟ್ ಬ್ಯಾಂಕ್ ಹೊರತಂದಿರುವ ಏರ್‌ಟೆಲ್ ತನ್ನ ಸೇವೆಯನ್ನು ನೀಡಲು ಪ್ರಾರಂಭಿಸಿದ ಕೆಲವೇ ದಿವಸಗಳಲ್ಲಿ ಜಿಯೋ ಪೇಮೆಂಟ್ ಬ್ಯಾಂಕ್ ತೆರೆಯುತ್ತಿದೆ! ಇನ್ನು ಆನ್‌ಲೈನ್ ದೈತ್ಯ ಶಾಪಿಂಗ್ ತಾಣಗಳಾದ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್ ಭರಾಟೆ ಕಡಿಮೆಮಾಡಲು "ಜಿಯೋ ಮಾರ್ಕೆಟ್" ಹೊರಬರುತ್ತಿದೆ ಎನ್ನಲಾಗಿದೆ!!.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋವನ್ನು ಪ್ರಪಂಚದಲ್ಲಿಯೇ ಅತ್ಯುತ್ತಮ ಬ್ರಾಂಡ್ ಮಾಡಬೇಕು ಎಂದು ಪಣತೊಟ್ಟಿರುವ ಅಂಬಾನಿ, ತನ್ನ ಎಲ್ಲಾ ನೂತನ ಡಿಜಿಟಲ್ ಸೇವೆಗಳನ್ನು ಒಟ್ಟಿಗೆ ಶುರುಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಜಿಯೋ ಫ್ರೀ ಡಾಟಾ ನೀಡುವ ಮೂಲಕ ಭಾರತದ ಆನ್‌ಲೈನ್ ಮಾರುಕಟ್ಟೆಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಭಾರತದ ಕನಸಿಗೆ ತಕ್ಕಂತೆ ಅಂಬಾನಿ ತನ್ನ ಮಾರುಕಟ್ಟೆಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಇದೇ ರೀತಿಯಲ್ಲಿ ಜಿಯೋ ಬೆಳವಣಿಗೆಯಾದರೆ ಪ್ರಪಂಚದಲ್ಲಿಯೇ ಜಿಯೋ ದೊಡ್ಡ ಬ್ರಾಂಡ್ ಆಗಿ ರೂಪುಗೊಳ್ಳಬಹುದು!
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








