ಐಫೋನ್ 15 ಲಾಂಚ್‌ಗೂ ಮುನ್ನವೇ; ದಿಢೀರ್ ಬೆಲೆ ಕುಸಿತ ಕಂಡಿದೆ ಈ ಜನಪ್ರಿಯ ಐಫೋನ್!
ಇಡೀ ಮೊಬೈಲ್ ಮಾರುಕಟ್ಟೆ ಇದೀಗ ಆಪಲ್ ಐಫೋನ್ 15 ಬಿಡುಗಡೆಯನ್ನು ಕಾಯುತ್ತಿದೆ. ಆದರೆ ಈ ನಡುವೆ ಜನಪ್ರಿಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಜನಪ್ರಿಯ ಐಫೋನ್‌ವೊಂದಕ್ಕೆ ಭರ್ಜರಿ ಡಿಸ್ಕೌಂಟ್ ನೀಡಿದೆ. ಹೀಗಾಗಿ ಐಫೋನ್ ಖರೀದಿಸುವ ಗ್ರಾಹಕರಿಗೆ ಸಖತ್ ಖುಷಿ ಎನಿಸಿದೆ.
ಹೌದು, ದೈತ್ಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ತಾಣದಲ್ಲಿ ಐಫೋನ್ 13 ಫೋನ್ 18% ರಷ್ಟು ಡಿಸ್ಕೌಂಟ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನಿನ 128 GB ಸ್ಟೋರೇಜ್ ವೇರಿಯಂಟ್ ಬೆಲೆಯು 69,900ರೂ. ಆಗಿದ್ದು, ಆದರೆ ಫ್ಲಿಪ್‌ಕಾರ್ಟ್ ಕೊಡುಗೆಯಲ್ಲಿ ಗ್ರಾಹಕರು 56,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ಅಂದಹಾಗೆ ಐಫೋನ್ 13 128GB, 256GB ಮತ್ತು 512GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ ಈ ಐಫೋನ್ ರೆಡ್, ಬ್ಲೂ, ಗ್ರೀನ್, ಮೀಡ್‌ನೈಟ್ ಬ್ಲ್ಯಾಕ್, ಪಿಂಕ್ ಹಾಗೂ ಸ್ಟಾರ್‌ಲೈಟ್ ಕಲರ್ ಆಯ್ಕೆಗಳನ್ನು ಪಡೆದಿದೆ. ಇನ್ನುಳಿದಂತೆ ಐಫೋನ್ 13 ಇತರೆ ಫೀಚರ್ಸ್ ಹೇಗಿವೆ ಹಾಗೂ ಐಫೋನ್ 14 ಫೋನಿನ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಫೋನ್ 13 ಪ್ರಮುಖ ಫೀಚರ್ಸ್ ಹೀಗಿವೆ :
ಐಫೋನ್ 13 ಮೊಬೈಲ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದರ ಜೊತೆಗೆ ಅತ್ಯುತ್ತಮ ಪಿಕ್ಸಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ ಈ ಐಫೋನ್ 1200 ನಿಟ್ಸ್ ಬ್ರೈಟ್ನೆಸ್ ಸಪೋರ್ಟ್ ಪಡೆದುಕೊಂಡಿದೆ. ಇದಲ್ಲದೇ ಈ ಐಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಸಾಮರ್ಥ್ಯವನ್ನು ಸಹ ಹೊಂದಿದ್ದು, 5G ಅನ್ನು ಬೆಂಬಲವನ್ನು ಕೂಡಾ ಪಡೆದಿದೆ.
ಐಫೋನ್ 13 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಆ ಪೈಕಿ ಮೊದಲ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಸೆನ್ಸಾರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅದೇ ರೀತಿ ದ್ವಿತೀಯ ಕ್ಯಾಮೆರಾ ಸಹ 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಸಾಮರ್ಥ್ಯದಲ್ಲಿ ಇದೆ. ಅತ್ಯುತ್ತಮ ಫೋಟೊ ಸೆರೆಹಿಡಿಯಲು ಪೂರಕ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಕೂಡಾ ಈ ಐಫೋನ್ ಹೊಂದಿದೆ.
ಐಫೋನ್ 14 ಫೋನಿನ ಫೀಚರ್ಸ್ ಹೀಗಿವೆ :
ಐಫೋನ್ 14 ಮೊಬೈಲ್ 6.1 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, 1200 nits ಬ್ರೈಟ್ನಸ್ ಸಪೋರ್ಟ್ ಸಹ ಒಳಗೊಂಡಿದೆ. ಇನ್ನು ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮೊದಲ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.
ಇನ್ನು ಐಫೋನ್ 14 ಫೋನ್ 3 ಸ್ಟೋರೇಜ್ ಆಯ್ಕೆಗಳನ್ನು ಇದು ಒಳಗೊಂಡಿದ್ದು, ಅವುಗಳು ಕ್ರಮವಾಗಿ 128GB, 256GB ಮತ್ತು 512 GB ಆಂತರೀಕ ಸಂಗ್ರಹದ ಆಯ್ಕೆಗಳು ಆಗಿವೆ. ಹಾಗೆಯೇ ಐಫೋನ್ 14 ಫೋನ್ 5G ಕನೆಕ್ಟಿವಿಟಿ ಆಯ್ಕೆಗಳನ್ನು ಇದು ಪಡೆದುಕೊಂಡಿದೆ. ಹಾಗೆಯೇ ಇದು ಇ-ಸಿಮ್ ಆಯ್ಕೆಯ ಬೆಂಬಲ ಕೂಡಾ ಹೊಂದಿದೆ.
ಐಫೋನ್ 14 ಪ್ಲಸ್ ಫೋನಿನ ಫೀಚರ್ಸ್ ಹೀಗಿವೆ :
ಐಫೋನ್ 14 ಪ್ಲಸ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಅನ್ನು ಪಡೆದುಕೊಂಡಿದ್ದು, OLED ಡಿಸ್‌ಪ್ಲೇ ಬೆಂಬಲ ಪಡೆದಿದೆ. ಇದರ ಡಿಸ್‌ಪ್ಲೇಯು 1200nits ಬ್ರೈಟ್ನಸ್ ಸಾಮರ್ಥ್ಯದಲ್ಲಿ ಇದೆ. ಇನ್ನು ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಪಡೆದುಕೊಂಡಿದೆ.
ಹಾಗೆಯೇ ಈ ಐಫೋನ್ ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ ಇದು ಮೂರು ಸ್ಟೋರೇಜ್ ಮಾಡೆಲ್‌ಗಳ ಆಯ್ಕೆ ಹೊಂದಿದ್ದು, ಅವುಗಳು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆ ಆಗಿವೆ. ಅಲ್ಲದೇ ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ.


Click it and Unblock the Notifications








