Home
ಸುದ್ದಿಜಾಲ

ಜಗತ್ತಿನ ಶ್ರೀಮಂತರು ಬಡವರಾಗಿದ್ದರೆ ಹೇಗಿರುತ್ತಾರೆ?..ಇಲ್ಲಿವೆ ನೋಡಿ ಫೋಟೋ!

ಪ್ರಸ್ತುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಹೆಚ್ಚು ಬಳಕೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಅನೇಕರು ಚಿತ್ರಗಳು/ ಫೋಟೊಗಳನ್ನು ತೆಗೆಯಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಉಪಕರಣಗಳನ್ನು ಬಳಸುತ್ತಿದ್ದಾರೆ. ಎಐ ಟೂಲ್‌ ಬಳಸಿಕೊಂಡು ಹಲವು ತಮಾಷೆಯ ಚಟುವಟಿಕೆಗಳೂ ನಡೆಯುತ್ತಿವೆ. ಇವು ಇಂಟರ್‌ನೆಟ್‌ನಲ್ಲೂ ಟ್ರೆಂಡಿಂಗ್‌ನಲ್ಲಿವೆ. ಕಲಾವಿದ ಗೋಕುಲ್ ಪಿಳ್ಳ ಅವರು ಕೋಟ್ಯಾಧಿಪತಿಗಳ ಫೋಟೋಗಳನ್ನು ರಚಿಸಿದ್ದು, ಅವರು ಬಡವರಾಗಿದ್ದರೆ ಹೇಗೆ ಕಾಣುತ್ತಾರೆ ಎಂಬುದನ್ನು ತೋರಿಸುತ್ತದೆ.

ಈಗ, ಒಬ್ಬ ವ್ಯಕ್ತಿ ವಾಸ್ತವವಾಗಿ ಬಡವರಂತೆ ಕಾಣುವ ವಿಶ್ವದ ಶ್ರೀಮಂತ ವ್ಯಕ್ತಿಗಳ ಕೆಲವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ರಚಿತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೆಫ್ ಬೆಜೋಸ್‌ನಿಂದ ಹಿಡಿದು ಎಲೋನ್ ಮಸ್ಕ್‌ವರೆಗಿನ ವಿಶ್ವದ ಶ್ರೀಮಂತರ ಚಿತ್ರಗಳನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ರಚಿಸಲಾಗಿದೆ.

ಜಗತ್ತಿನ ಶ್ರೀಮಂತರು ಬಡವರಾಗಿದ್ದರೆ ಹೇಗಿರುತ್ತಾರೆ?..ಇಲ್ಲಿವೆ ನೋಡಿ ಫೋಟೋ!

ಇದನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕ್ಷಣವೇ ಇಂಟರ್‌ನೆಟ್‌ನಲ್ಲಿ ಚರ್ಚೆಯಾಗುತ್ತಿದೆ. ಮಿಡ್ಜೌನಿ (Midjony) ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಿ, ಗೋಕುಲ್ ಪಿಳ್ಳೈ (Gokul Pillai) ಎಂಬವರು ವಿಶ್ವದ ಶ್ರೀಮಂತರು ಬಡವರಾಗಿದ್ದರೆ ಹೇಗಿರುತ್ತದೆ ಎಂಬ ಕಲ್ಪನೆಯನ್ನು ಸೃಷ್ಟಿಸಿದ್ದಾರೆ. ಇದು ಅಮೆರಿಕಾದ ಮಾಜಿ ಅಧ್ಯಕ್ಷ ಟ್ರಂಪ್‌ನಿಂದ ಹಿಡಿದು ಎಲೋನ್ ಮಸ್ಕ್‌ವರೆಗಿನ ವಿಶ್ವದ ಎಲ್ಲಾ ಅಗ್ರ ಬಿಲಿಯನೇರ್‌ಗಳನ್ನು ಒಳಗೊಂಡಿದೆ.

ಜಗತ್ತಿನ ಶ್ರೀಮಂತರು ಬಡವರಾಗಿದ್ದರೆ ಹೇಗಿರುತ್ತಾರೆ?..ಇಲ್ಲಿವೆ ನೋಡಿ ಫೋಟೋ!

ಹಾಗೆಯೇ, ಭಾರತ ದೇಶದ ಅಗ್ರ ಶ್ರೀಮಂತ ವ್ಯಕ್ತಿ ಮುಖೇಶ ಅಂಬಾನಿ ಕೂಡ ಅದರಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಪರಿಕರವು ಈ ಎಲ್ಲಾ ಸೂಪರ್ ಬಿಲಿಯನೇರಿಗಳು ಕೊಳೆಗೇರಿಗಳಲ್ಲಿ ಇರುವಂತೆ ಚಿತ್ರಗಳನ್ನು ರಚಿಸಿದೆ.

ಜಗತ್ತಿನ ಶ್ರೀಮಂತರು ಬಡವರಾಗಿದ್ದರೆ ಹೇಗಿರುತ್ತಾರೆ?..ಇಲ್ಲಿವೆ ನೋಡಿ ಫೋಟೋ!

ಗೋಪಾಲ ಪಿಳ್ಳೈ ಅವರು ಇದನ್ನು 'ಸ್ಲಮ್‌ಡಾಗ್ ಮಿಲಿಯನೇರ್ಸ್' ಶೀರ್ಷಿಕೆಯಡಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಡೋನಾಲ್ಡ್‌ ಟ್ರಂಪ್, ಬಿಲ್ ಗೇಟ್ಸ್, ಎಲೋನ್ ಮಸ್ಕ್ ಮುಖೇಶ ಅಂಬಾನಿ, ಮಾರ್ಕ್ ಜುಕರ್‌ಬರ್ಗ್, ವಾರೆನ್ ಬಫೆಟ್ ಮತ್ತು ಜೆಫ್ ಬೆಜೋಸ್ ಅವರ ಫೋಟೊಗಳನ್ನು ಸಹ ಹೊಂದಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಟೂಲ್‌ನಲ್ಲಿ ರಚಿತವಾದ ಈ ಚಿತ್ರಗಳು ಈಗ ಇಂಟರ್ನಟನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಚಾಟ್ ಜಿಬಿಡಿ (GBD) ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಉದ್ಯಮಕ್ಕೆ ದೊಡ್ಡ ಉತ್ತೇಜನ ನೀಡಿದೆ. ಅಂದಿನಿಂದ ವಿವಿಧ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಉಪಕರಣಗಳು ಜಗತ್ತನ್ನು ವ್ಯಾಪಿಸುತ್ತಿವೆ. ಈ AI ಪರಿಕರಗಳು ನಿಸ್ಸಂದೇಹವಾಗಿ ಅಂತರ್ಜಾಲದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಕೆಯು ಖಂಡಿತವಾಗಿ ಭಾರಿ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಲೇ ಇದ್ದಾರೆ. ಇಂತಹ ಕೆಲವು AI ಆಧಾರಿತ ಇಮೇಜ್‌ ಟೂಲ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪಿಕ್‌ಸೋ (PicSo): ಈ ಟೂಲ್‌ ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮವಾದ AI ಇಮೇಜ್ ಜನರೇಷನ್ ಆಗಿದೆ. PicSo ನೊಂದಿಗೆ, ಫೋಟೊ ನಿರ್ದಿಷ್ಟ ಶೈಲಿಗೆ ಸೀಮಿತವಾಗಿಲ್ಲ. ಬದಲಾಗಿ, ಸೈಬರ್‌ಪಂಕ್, ಪೆನ್ಸಿಲ್ ಸ್ಕೆಚ್ ಅಥವಾ ವ್ಯಾನ್ ಗಾಗ್ ಪೇಂಟಿಂಗ್‌ನಂತಹ ಹಲವಾರು ವಿಭಿನ್ನ ಶೈಲಿಗಳಲ್ಲಿ ನಿಮ್ಮ ಚಿತ್ರವನ್ನು ರಚಿಸಲು PicSo ಸಮರ್ಥವಾಗಿದೆ.

ನಾವೆಲ್‌ಎಐ (NovelAI) : AI ಚಿತ್ರಗಳನ್ನು ರಚಿಸುವ ಟೂಲ್‌ಗಳಲ್ಲಿ NovelAI ಸಹ ಪ್ರಮುಖ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದು AI ಸ್ಟೋರಿ ಜನರೇಟರ್ ಆಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು NovelAI ಗೆ ಪ್ರಾಂಪ್ಟ್ ಅನ್ನು ಸೇರಿಸಿದಾಗ, ಅಲ್ಗಾರಿದಮ್ ಅದರಿಂದ ಸಂಕೀರ್ಣವಾದ ಕಥೆಯನ್ನು ರಚಿಸುತ್ತದೆ. ಇದು ಚಿತ್ರಗಳನ್ನು ಸಹ ರಚಿಸುತ್ತದೆ. ಆದರೆ ನೀವು ಅವರ ಚಂದಾದಾರಿಕೆಗೆ ಸೈನ್ ಅಪ್ ಮಾಡಿದರೆ ಮಾತ್ರ.

ಸ್ಟಾರಿ AI ಟೂಲ್‌ : ಇದು ಅತ್ಯಂತ ಶಕ್ತಿಶಾಲಿ, ಆದರೆ ಸರಳ, AI ಚಿತ್ರ ಜನರೇಟರ್ ಆಗಿದೆ. ಇದು ಸಾಕಷ್ಟು ವಿಭಿನ್ನ ಶೈಲಿಗಳು, ಆಕಾರ ಅನುಪಾತಗಳು ಮತ್ತು ಹೆಚ್ಚಿನದನ್ನು ಹೊಂದಿದೆ. ಇದು ಬಳಕೆದಾರರಿಗೆ ರಚಿತವಾದ ಕಲಾಕೃತಿಯ ಸಂಪೂರ್ಣ ಮಾಲೀಕತ್ವವನ್ನು ಸಹ ನೀಡುತ್ತದೆ. ಸ್ಟಾರ್ರಿ AI ಎರಡು ವಿಭಿನ್ನ ವಿಧಾನಗಳನ್ನು ಹೊಂದಿದೆ: ಆಲ್ಟೇರ್ ಮತ್ತು ಓರಿಯನ್. ಒಂದು ನೈಜವಾಗಿ ಕಾಣುವ ಚಿತ್ರಗಳನ್ನು ರಚಿಸುತ್ತದೆ.

Best Mobiles in India

English summary
AI artist shows how Rich People Will Look like if they were Poor. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+