Home
ಸುದ್ದಿಜಾಲ

ಬೆಂಗಳೂರಿನ ಶಾಲೆಯೊಂದರಲ್ಲಿ ಟೀಚರ್‌ ಆದ 'ರೋಬೋಟ್‌'!

ಇಂದಿನ ತಂತ್ರಜ್ಞಾನ ಜಗತ್ತು ಹಲವು ಹೊಸ ಆಯಾಮಗಳಿಗೆ ವೇದಿಯಾಗುತ್ತಿದ್ದು, ಮನುಷ್ಯನಿಗೆ ಸರಿಸಮನಾಗಿ ನಿಲ್ಲಬಲ್ಲ ಮಾನವ ರೋಬೋಟ್‌ಗಳು ತಯಾರಾಗುತ್ತಿವೆ. ಹಲವು ಕ್ಷೇತ್ರಗಳಲ್ಲಿ ಕೆಲಸಕ್ಕೆಂದು ಮಾನವರ ಬದಲು ರೋಬೋಟ್‌ಗಳನ್ನು ಬಳಸುತ್ತಿಸುತ್ತಿದ್ದಾರೆ. ಇತ್ತೀಚಿಗೆ ನಮ್ಮ ರಾಜ್ಯದ ಕೆಲ ಹೊಟೇಲ್‌ಗಳಲ್ಲಿ ಸಪ್ಲೈಯರ್‌ ಕೆಲಸಕ್ಕೆ ರೋಬೋಟ್‌ಗಳನ್ನು ಬಳಸಿರುವ ಸಂಗತಿಗಳನ್ನು ನೀವು ಕೇಳಿರುತ್ತಿರಿ. ಆದ್ರೆ ಮಾನವ ರೋಬೋಟ್‌ಗಳು ಈಗ ಶಿಕ್ಷಕ ವೃತ್ತಿಯನ್ನು ಆರಂಭಿಸಿವೆ ಎನ್ನುವ ಸಂಗತಿ ನಿಮಗೆ ಅಚ್ಚರಿ ಎನಿಸಬಹುದು.

ಬೆಂಗಳೂರಿನ ಶಾಲೆಯೊಂದರಲ್ಲಿ ಟೀಚರ್‌ ಆದ 'ರೋಬೋಟ್‌'!

ಹೌದು, ಬೆಂಗಳೂರಿನ ಇಂದೂಸ್‌ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಲು ಮಾನವ ರೋಬೋಟ್‌ಗಳನ್ನು ಬಳಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ನೆರವಿನಿಂದ ಕೆಲಸ ಮಾಡುವ ಈ ರೋಬೋಟ್‌ಗಳು ಪ್ರತಿದಿನ ಸುಮಾರು 5 ವಿಷಯಗಳ ಕುರಿತು ಸುಮಾರು 300 ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತವೆ. ಹಾಗೂ ನಂತರ ಪಾಠದ ಕುರಿತಾಗಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತವೆ.

ಬೆಂಗಳೂರಿನ ಶಾಲೆಯೊಂದರಲ್ಲಿ ಟೀಚರ್‌ ಆದ 'ರೋಬೋಟ್‌'!

5.7 ಪೂಟ್ ಎತ್ತರ ಹೊಂದಿರುವ ಈ ರೋಬೋಟ್‌ಗಳು 45ಕಿಲೋ ತೂಕವನ್ನು ಹೊಂದಿವೆ. ಫಾರ್ಮಲ್‌ ಡ್ರೆಸ್‌ ಧರಿಸಲಾಗಿದ್ದು, ನೋಡಲು ಶಿಕ್ಷಕಿಯರಂತೆ ಕಾಣಿಸುತ್ತವೆ. ಜೀವಶಾಸ್ತ್ರ, ರಾಸಾಯನಶಾಸ್ತ್ರ, ಭೌಗೋಳ ಶಾಸ್ತ್ರ, ಭೌತಶಾಸ್ತ್ರ ಮತ್ತು ಇತಿಹಾಸ ವಿಷಯದ ಪಾಠಗಳನ್ನು ಮಾಡಲಿವೆ. ರೋಬೋಟ್‌ಗಳೊಂದಿಗೆ ಶಿಕ್ಷಕರು ಜೊತೆಗಿದ್ದು, ಬೋಧಿಸುವ ವಿಷಯದ ಕುರಿತು ಕೀ ಕಾನ್ಸೆಪ್ಟ್‌ ಮತ್ತು ಅಪ್ಲಿಕೇಶನ್‌ಗಳನ್ನು ಗಮನಕ್ಕೆ ತರುತ್ತಾರೆ.

ಬೆಂಗಳೂರಿನ ಶಾಲೆಯೊಂದರಲ್ಲಿ ಟೀಚರ್‌ ಆದ 'ರೋಬೋಟ್‌'!

ಶಾಲೆಯ ಚೀಫ್ ಡಿಸೈನ್ ಅಧಿಕಾರಿ ವಿಘ್ನೇಶ ರಾವ್ ಮತ್ತು 17 ಸದಸ್ಯರ ಒಳಗೊಂಡ ಅವರ ತಂಡ ಸೇರಿ ಒಟ್ಟು ಮೂರು ರೋಬೋಟ್‌ಗಳನ್ನು ನಿರ್ಮಿಸಿದ್ದಾರೆ. ಈ ರೋಬೋಟ್‌ಗಳ ತಯಾರಿಕೆಯಲ್ಲಿ 3D ಪ್ರಿಂಟೆಡ್‌ ಮೆಟಿರಿಯಲ್‌ಗಳು ಮತ್ತು ಸ್ಮಾರ್ಟ್‌ ಸರ್ವೋ ಮೋಟರ್‌ಗಳನ್ನು ಬಳಸಲಾಗಿದ್ದು, ಹಾಗೆಯೇ ಸಾಫ್ಟವೇರ್, ಕೃತಕ ಬುದ್ಧಿಮತ್ತೆ ಮತ್ತು ಡಿಸೈನ್‌ ತಯಾರಿಸಲು ಎರಡು ವರ್ಷಗಳೆ ಬೇಕಾಯಿತಂತೆ. ಪ್ರತಿ ರೋಬೋಟ್ ತಯಾರಿಕೆಗೆ 8ಲಕ್ಷ ಖರ್ಚಾಗಿದೆ ಎಂದಿದ್ದಾರೆ ರಾವ್.

ಶಾಲೆಯ ತರಗತಿಗಳಲ್ಲಿ ರೋಬೋಟ್‌ಗಳ ಪಾಠ ಬೋಧನೆಗೆ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಶಿಕ್ಷಕರ ಜೊತೆಗೆ ಮಾನವ ರೋಬೋಟ್‌ಗಳು ತರಗತಿಯಲ್ಲಿ ಪಾಠ ಬೋಧನೆಯಲ್ಲಿ ತೊಡಗುವುದು ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ತೇಜನ ನೀಡಲಿದೆ. ರೋಬೋಟ್‌ ಪಾಠ ಮಾಡುತ್ತಿದ್ದರೇ, ಅದೇ ವೇಳೆ ಶಿಕ್ಷಕರು ಪ್ರತಿ ವಿದ್ಯಾರ್ಥಿಗಳತ್ತ ಗಮನ ನೀಡಲು ನೆರವಾಗಲಿದೆ ಎಂದು ಇಂದೂಸ್‌ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಅರ್ಜುನ್ ರೇ ಹೇಳಿದ್ದಾರೆ.

Best Mobiles in India

English summary
Robots impart lessons daily in 5 subjects to about 300 students in Classes 7-9 in 4 sections by turns. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+