Home
ಸುದ್ದಿಜಾಲ

ನಿಮ್ಮ ಸ್ಮಾರ್ಟ್‌ ಡಿವೈಸ್‌ಗಳು ಎಷ್ಟು ಸೇಫ್?ಎಲ್ಲಾ ಪಾಸ್‌ವರ್ಡ್‌ಗಳನ್ನು ಭೇದಿಸಲಿದೆ ಎಐ!

ಚಾಟ್‌ಜಿಪಿಟಿ ಸೇರಿದಂತೆ ವಿವಿಧ ಎಐ ಆಧಾರಿತ ತಂತ್ರಜ್ಞಾನ ಇಂದು ಎಲ್ಲಾ ಕಡೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಈ ನಡುವೆ ಚಾಟ್‌ಜಿಪಿಟಿಗೆ ಪೈಪೋಟಿ ನೀಡಲು ಇತರೆ ಟೆಕ್‌ ದೈತ್ಯರೂ ಸಹ ತಮ್ಮದೇ ಆದ ಎಐ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದ್ದು, ಇವು ಒಂದನ್ನೊಂದು ಮೀರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಿವೆ. ಈ ನಡುವೆ ನಾವು ನೀವೆಲ್ಲಾ ಶಾಕ್‌ ಆಗುವ ವಿಷಯವೊಂದು ಹೊರಬಿದ್ದಿದೆ.

ಹೌದು, ಕೆಲವು ತಿಂಗಳುಗಳಿಂದ ಎಐ ಅನ್ನು ಎಲ್ಲಾ ವಲಯದಲ್ಲೂ ಬಳಕೆ ಮಾಡಲಾಗುತ್ತಿದ್ದು, ಈ ಮೂಲಕ ಮಾನವ ಶಕ್ತಿಗೆ ಕಡಿವಾಣ ಹಾಕಲಾಗುತ್ತಿದೆ. ಪ್ರಮುಖ ಕೆಲಸಗಳನ್ನು ಮಾಡಲು ಈ ಎಐ ಸಾಮರ್ಥ್ಯ ಪಡೆದುಕೊಂಡಿದೆ. ಈ ನಡುವೆ ಭದ್ರತಾ ತಜ್ಞರು ಎಐ ಬಳಕೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದು, ಈ ಎಐ ಯಾಕೆ ಸೈಬರ್ ಸುರಕ್ಷತೆಯ ಬೆದರಿಕೆಯಾಗಿರಬಹುದು ಎಂದು ಪ್ರಶ್ನಿಸಿದ್ದಾರೆ. ಹಾಗಿದ್ರೆ, ಇದರಿಂದ ಉಂಟಾಗುವ ಸಮಸ್ಯೆಗಳು ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಮಾರ್ಟ್‌ ಡಿವೈಸ್‌ಗಳು ಎಷ್ಟು ಸೇಫ್‌?ಎಲ್ಲಾ ಪಾಸ್‌ವರ್ಡ್‌ಗಳನ್ನು ಭೇದಿಸಲಿದ ಎಐ!

ಎಐನಿಂದ ಆಗುವ ಸಮಸ್ಯೆ ಏನು?: ಹೊಸ ಅಧ್ಯಯನದ ಪ್ರಕಾರ ಈ ಎಐ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಭೇದಿಸುತ್ತದೆ ಎಂದು ತಿಳಿದುಬಂದಿದೆ. ಹೋಮ್ ಸೆಕ್ಯುರಿಟಿ ಹೀರೋಸ್‌ನ ಅಧ್ಯಯನದ ಪ್ರಕಾರ ಎಲ್ಲಾ ಸಾಮಾನ್ಯ ಪಾಸ್‌ವರ್ಡ್‌ಗಳಲ್ಲಿ ಸುಮಾರು 51% ಎಐ ನಿಂದ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಭೇದಿಸಬಹುದು. ಹಾಗೆಯೇ 65% ಸಾಮಾನ್ಯ ಪಾಸ್‌ವರ್ಡ್‌ಗಳನ್ನು ಒಂದು ಗಂಟೆಯೊಳಗೆ ಭೇದಿಸಬಹುದಾಗಿದ್ದು ಉಳಿದ 81% ಪಾಸ್‌ವರ್ಡ್‌ಗಳನ್ನು ಒಂದು ತಿಂಗಳಿಗಿಂತ ಕಡಿಮೆ ಸಮಯದಲ್ಲಿ ಈ ಎಐ ಭೇದಿಸಲಿದೆ ಎಂದು ಕಂಡುಕೊಳ್ಳಲಾಗಿದೆ.

ಹೋಮ್ ಸೆಕ್ಯುರಿಟಿ ಹೀರೋಸ್‌ ಸಂಸ್ಥೆಯು 15,680,000 ಕ್ಕೂ ಹೆಚ್ಚು ಪಾಸ್‌ವರ್ಡ್‌ಗಳ ಪಟ್ಟಿಯನ್ನು ಈ ಅಧ್ಯಯನದ ವೇಳೆ ಬಳಕೆ ಮಾಡಲಾಗಿದ್ದು, ಪಾಸ್‌ಗ್ಯಾನ್ (PassGAN) ಎಂಬ ಎಐ ಪಾಸ್‌ವರ್ಡ್ ಕ್ರ್ಯಾಕರ್ ಅನ್ನು ಬಳಕೆ ಮಾಡಿಕೊಂಡಿದೆ. ಇದರಿಂದ ಪಾಸ್‌ವರ್ಡ್‌ ವಿಚಾರದಲ್ಲಿ ಪ್ರಮುಖವಾದ ಮಾಹಿತಿಯನ್ನು ಕಂಡುಕೊಳ್ಳಲಾಗಿದ್ದು, ಆ ಸಂಬಂಧ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಸ್ಮಾರ್ಟ್‌ ಡಿವೈಸ್‌ಗಳು ಎಷ್ಟು ಸೇಫ್‌?ಎಲ್ಲಾ ಪಾಸ್‌ವರ್ಡ್‌ಗಳನ್ನು ಭೇದಿಸಲಿದ ಎಐ!

ಇನ್ನು ಈ ಎಐ ನಿಂದ ಯಾವ ರೀತಿಯ ಪಾಸ್‌ವರ್ಡ್‌ಗಳು ಸುರಕ್ಷಿತ ಎಂಬ ವಿಷಯವನ್ನು ಕಂಡುಕೊಳ್ಳಲಾಗಿದ್ದು, ಅದರಂತೆ 18 ಕ್ಕಿಂತ ಹೆಚ್ಚು ಅಕ್ಷರಗಳನ್ನು ಹೊಂದಿರುವ ಪಾಸ್‌ವರ್ಡ್‌ಗಳು ಸಾಮಾನ್ಯವಾಗಿ ಎಐ ಪಾಸ್‌ವರ್ಡ್ ಕ್ರ್ಯಾಕರ್‌ಗಳ ವಿರುದ್ಧ ಸುರಕ್ಷಿತವಾಗಿರುತ್ತವೆ ಎಂದು ತಿಳಿದುಬಂದಿದೆ. ನಂಬರ್‌ ಇರುವ ಪಾಸ್‌ವರ್ಡ್‌ಗಳನ್ನು ಭೇದಿಸಲು ಪಾಸ್‌ಗ್ಯಾನ್ ಕನಿಷ್ಠ 10 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.ಆದರೆ ಚಿಹ್ನೆಗಳು, ಸಂಖ್ಯೆಗಳು, ಲೋವರ್ ಕೇಸ್ ಅಕ್ಷರಗಳು ಮತ್ತು ದೊಡ್ಡಕ್ಷರಗಳನ್ನು ಒಳಗೊಂಡಿರುವ ಪಾಸ್‌ವರ್ಡ್‌ಗಳನ್ನು ಭೇದಿಸಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ.

ಅಂತೆಯೇ ಕೇವಲ ಸಣ್ಣ ಅಕ್ಷರಗಳನ್ನು ಹೊಂದಿರುವ ಹತ್ತು ಅಕ್ಷರದ ಪಾಸ್‌ವರ್ಡ್ ಹ್ಯಾಕ್ ಮಾಡಲು ಒಂದು ಗಂಟೆ ತೆಗೆದುಕೊಳ್ಳುವ ಎಐ, ಹತ್ತು ಅಕ್ಷರಗಳ ಮಿಶ್ರ ಕೇಸ್ ಪಾಸ್‌ವರ್ಡ್ ಭೇದಿಸಲು ನಾಲ್ಕು ವಾರಗಳನ್ನು ತೆಗೆದುಕೊಳ್ಳುತ್ತದೆ. ಹಾಗೆಯೆ ಅಕ್ಷರಗಳು, ಚಿಹ್ನೆಗಳು ಮತ್ತು ಸಂಖ್ಯೆಗಳು ಇರುವ ಪಾಸ್‌ವರ್ಡ್‌ ಅನ್ನು ಭೇದಿಸಲು ಐದು ವರ್ಷಗಳೇ ಬೇಕಾಗಬಹುದು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಸ್ಮಾರ್ಟ್‌ ಡಿವೈಸ್‌ಗಳು ಎಷ್ಟು ಸೇಫ್‌?ಎಲ್ಲಾ ಪಾಸ್‌ವರ್ಡ್‌ಗಳನ್ನು ಭೇದಿಸಲಿದ ಎಐ!

ಈ ಕಾರಣಕ್ಕೆ ನಿಮ್ಮ ನೀವೇನಾದರೂ ಕೇವಲ 10 ಅಕ್ಷರಗಳನ್ನು ಹೊಂದಿರುವ ಪಾಸ್‌ವರ್ಡ್‌ ರಚಿಸಿಕೊಂಡಿದ್ದರೆ ಈ ಎಐ ಸುಲಭವಾಗಿ ಪತ್ತೆ ಮಾಡುತ್ತದೆ. ಇದರಿಂದಾಗಿ ಸೈಬರ್‌ ಕಳ್ಳರು ನಿಮ್ಮ ಸ್ಮಾರ್ಟ್‌ ಡಿವೈಸ್‌ಗಳನ್ನು ಹ್ಯಾಕ್‌ ಮಾಡಲು ಸುಲಭ ಮಾರ್ಗ ತೋರಿದಂತೆ ಆಗುತ್ತದೆ. ಪರಿಣಾಮ ಹೆಚ್ಚಿನ ಅಕ್ಷರಗಳು ಇರುವ ಪಾಸ್‌ವರ್ಡ್‌ ರಚಿಸಲು ಸಲಹೆ ನೀಡಲಾಗಿದೆ. ಅದೂ ಸಹ ವಿವಿಧ ರೀತಿಯ ಅಕ್ಷರಗಳನ್ನು ಒಳಗೊಂಡಂತೆ.

Best Mobiles in India

English summary
AI has been successful in cracking any kind of passwords and experts have warned why AI can be a cyber security threat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+