Home
ಸುದ್ದಿಜಾಲ

Samsung: ಇನ್ಮುಂದೆ ಹಳೆಯ ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ಗಳಿಗೂ ಎಐ ಸೌಲಭ್ಯ!

ಸ್ಯಾಮ್‌ಸಂಗ್‌ (Samsung) ಈಗಾಗಲೇ ಯಾವ ಸ್ಮಾರ್ಟ್‌ಫೋನ್‌ ಕಂಪೆನಿಗಳೂ ಸಾಧಿಸಿ ತೋರಿಸಲಾಗದ ಅದೆಷ್ಟೋ ವಿಶೇಷ ಫೀಚರ್ಸ್‌ ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಿದೆ. ಅದರಲ್ಲಿ ಈಗ ಪ್ರಮುಖವಾದುದು ಎಐ ಪ್ರಯೋಜನ.

ಹೌದು, ಇಂದು ಎಲ್ಲಾ ರೀತಿಯ ಡಿವೈಸ್‌ಗಳಲ್ಲೂ ಎಐ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಕಾರಣಕ್ಕೆ ಸ್ಯಾಮ್‌ಸಂಗ್‌ ಈ ಬಾರಿ ಅನಾವರಣ ಮಾಡಿದ ಗ್ಯಾಲಕ್ಸಿ ಫೋನ್‌ಗಳನ್ನು ಎಐ ಕೇಂದ್ರೀಕರಿಸಿಕೊಂಡೇ ಲಾಂಚ್‌ ಮಾಡಲಾಗಿದೆ. ಆದರೆ, ಈಗ ಹಳೆಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ಗಳಲ್ಲೂ (Samsung Galaxy Phone) ಈ ಸೌಲಭ್ಯ ಲಭ್ಯ ಇದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳಲ್ಲಿ ಈ ಸೌಲಭ್ಯ ಲಭ್ಯ?, ಈ ಎಐ ನಿಂದ ಏನೆಲ್ಲಾ ಮಾಡಬಹುದು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಇನ್ಮುಂದೆ ಹಳೆಯ ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ಗಳಿಗೂ ಎಐ ಸೌಲಭ್ಯ!

ಹಳೆಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ಗಳಲ್ಲಿ ಎಐ: ಹೊಸ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ಗಳಲ್ಲಿ ಲಭ್ಯ ಇರುವ ಎಐ ಸೌಲಭ್ಯದಿಂದ ಬಳಕೆದಾರರು ನೈಜ-ಸಮಯದ ಭಾಷಾಂತರ ಸೌಲಭ್ಯ ಪಡೆಯಬಹುದಾಗಿದೆ. ಈ ಸೌಲಭ್ಯ ಭಾರತದಲ್ಲಿ ಹಿಂದಿ ಭಾಷೆಯಲ್ಲೂ ಲಭ್ಯ ಇದೆ. ಅಲ್ಲದೆ ಯಾವುದೇ ಸ್ಪೀಚ್‌ ಮತ್ತು ಆಡಿಯೋವನ್ನು ಲೈವ್ ಆಗಿ ಭಾಷಾಂತರ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಫೋಟೋಗಳಿಗಾಗಿ ಜನರೇಟಿವ್ ಎಡಿಟ್ ಟೂಲ್, ಕಸ್ಟಮ್ ಜನರೇಟ್ ವಾಲ್‌ಪೇಪರ್‌ಗಳು ಮತ್ತು ಇನ್ನೂ ಹೆಚ್ಚಿನ ಸೌಲಭ್ಯ ಲಭ್ಯ ಇದ್ದು, ಈ ಎಲ್ಲಾ ಸೌಲಭ್ಯ ಈಗ ಹಳೆಯ ಫೋನ್‌ಗಳಿಗೂ ಲಭ್ಯ ಇರಲಿದೆ.

ಸ್ಯಾಮ್‌ಸಂಗ್ ತಿಂಗಳ ಹಿಂದಷ್ಟೇ ಗೂಗಲ್ ಜೆಮಿನಿ ಚಾಲಿತ ಗ್ಯಾಲಕ್ಸಿ ಎಐ ಫೀಚರ್ಸ್‌ (Google Gemini powered Galaxy AI) ಅನ್ನು 100 ಮಿಲಿಯನ್ ಗ್ಯಾಲಕ್ಸಿ ಡಿವೈಸ್‌ಗಳಿಗೆ ತರುವುದಾಗಿ ಘೋಷಿಸಿತ್ತು. ಅದರ ಭಾಗವಾಗಿಯೇ ಈಗ ಈ ವಿಷಯ ಮುನ್ನೆಲೆಗೆ ಬಂದಿದೆ. ಮೊದಲೇ ತಿಳಿಸಿದಂತೆ ವಾರದ ಹಿಂದೆ ಗ್ಯಾಲಕ್ಸಿ ಎಐ ಅನ್ನು ಸ್ಮಾರ್ಟ್ ವೇರಬಲ್‌ಗಳಿಗೆ ಪರಿಚಯಿಸಿದೆ. ಇದರಲ್ಲಿ ಗ್ಯಾಲಕ್ಸಿ ಬಡ್ಸ್‌ 2 ಪ್ರೊ, ಗ್ಯಾಲಕ್ಸಿ ಬಡ್ಸ್‌ 2, ಮತ್ತು ಗ್ಯಾಲಕ್ಸಿ ಬಡ್ಸ್‌ FE (Galaxy Buds 2 Pro, Galaxy Buds 2,Galaxy Buds FE) ಸೇರಿವೆ.

ಇನ್ಮುಂದೆ ಹಳೆಯ ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ಗಳಿಗೂ ಎಐ ಸೌಲಭ್ಯ!

ಇದರೊಂದಿಗೆ ಈಗ ಈ ಸೌಲಭ್ಯವನ್ನು 2023-ಸರಣಿಯ ಗ್ಯಾಲಕ್ಸಿ S23, S23 ಪ್ಲಸ್‌, S23 ಅಲ್ಟ್ರಾ, S23 FE, Z ಫೋಲ್ಡ್ 5, Z ಫ್ಲಿಪ್‌5, ಮತ್ತು ಟ್ಯಾಬ್‌ S9 ಸರಣಿಯ (Galaxy S23, S23 Plus, S23 Ultra, S23 FE, Z Fold 5, Z Flip 5, and Tab S9 series) ಟ್ಯಾಬ್ಲೆಟ್‌ಗಳಿಗೆ ಹೊಸ ಒನ್‌ UI 6.1 ನವೀಕರಣವನ್ನು (One UI 6.1 update) ನೀಡಲು ಸ್ಯಾಮ್‌ಸಂಗ್‌ ಮುಂದಾಗಿದೆ. ಇದು ನಿರ್ದಿಷ್ಟ ಕಾರ್ಯದ ಅವಶ್ಯಕತೆಗಳ ಆಧಾರದ ಮೇಲೆ ಗ್ಯಾಲಕ್ಸಿ ಎಐ ಗೂಗಲ್‌ನ ಜನರೇಟಿವ್ ಎಐ ಜೆಮಿನಿ ನ್ಯಾನೋ ಅಥವಾ ಜೆಮಿನಿ ಪ್ರೊ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್‌ಗಳನ್ನು (LLM) ಅವಲಂಬಿಸಿದೆ.

ಬಳಕೆದಾರರು ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲದೇ ಡಿವೈಸ್‌ನಲ್ಲಿ ಮಾಡಬಹುದಾದ ಕಾರ್ಯಗಳಿಗಾಗಿ, ಜೆಮಿನಿ ನ್ಯಾನೋ ಆಧಾರಿತ ಗ್ಯಾಲಕ್ಸಿ ಎಐ ನಲ್ಲಿ ಕೆಲಸ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಮೂಲಕ ಕ್ಲೌಡ್-ಆಧಾರಿತ ಸರ್ವರ್ ಸಂಪರ್ಕದ ಅಗತ್ಯವಿರುವ ಹೆವಿ-ಡ್ಯೂಟಿ ಕಾರ್ಯಗಳಿಗಾಗಿ ಜೆಮಿನಿ ಪ್ರೊ ಕಾರ್ಯರೂಪಕ್ಕೆ ಬರಲಿದೆ. ಅಲ್ಲದೆ ಮುಂಬರುವ ತಿಂಗಳುಗಳಲ್ಲಿ ಗೂಗಲ್‌ನ ದೊಡ್ಡ ಜೆಮಿನಿ ಅಲ್ಟ್ರಾ LLM ಮಾದರಿಯು ಚಂದಾದಾರಿಕೆ ಸೇವೆಯ ಮೂಲಕ ಸಿಗಲಿದೆ.

ಇನ್ಮುಂದೆ ಹಳೆಯ ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ಗಳಿಗೂ ಎಐ ಸೌಲಭ್ಯ!

ಗ್ರಾಹಕರು ಈಗಿನಿಂದಲೇ ಜೆಮಿನಿ ಅಲ್ಟ್ರಾವನ್ನು (Gemini Ultra) ಬಳಕೆ ಮಾಡಲು ಮುಂದಾದರೆ ಅವರು ಗೂಗಲ್‌ ಒನ್‌ ಎಐ ಪ್ರೀಮಿಯಂ ಯೋಜನೆಯೊಂದಿಗೆ ಮುಂದುವರೆಯಬಹುದಾಗಿದೆ. ಅದಗ್ಯೂ ಇದು ಆಯ್ದ ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ ಅನ್ನೋದು ನಿಮ್ಮ ಗಮನಕ್ಕೆ ಇರಲಿ. ಇನ್ನು ಗ್ಯಾಲಕ್ಸಿ ಎಐ ನ ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್ ಆಯ್ಕೆಯೊಂದಿಗೆ, ಇದು ಸಂಪೂರ್ಣ ಮೀಟಿಂಗ್ ಸೆಶನ್ ಅನ್ನು ಲಿಪ್ಯಂತರ ಮಾಡಲಿದೆ ಮತ್ತು ಸಾರಾಂಶಗಳನ್ನು ಸಹ ನೀಡಲಿದೆ.

Best Mobiles in India

English summary
AI facility will be available in older Samsung Galaxy phones. For this, Samsung is ready to give the new One UI 6.1 update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+