Home
ಸುದ್ದಿಜಾಲ

ಪಾರ್ಶವಾಯುವಿನಿಂದ ಬಳಲುತ್ತಿದ್ದ ಮಹಿಳೆ, 18 ವರ್ಷಗಳ ನಂತರ ಮಾತನಾಡಲು ಸಹಾಯ ಮಾಡಿದ ಎಐ!

ಎಐ (artificial intelligence) ಬಗ್ಗೆ ಇಂದು ಪರ ವಿರೋಧದ ಚರ್ಚೆ ಮುನ್ನೆಲೆಯಲ್ಲಿವೆ. ಅದರಲ್ಲೂ ಈ ಎಐ ಬಹಳಷ್ಟು ಜನರು ಜೀವನದ ಅವಿಭಾಜ್ಯ ಅಂಗದಂತೆ ರೂಪುಗೊಳ್ಳುತ್ತಾ ಬರುತ್ತಿದ್ದು, ಇದಕ್ಕೆ ನಿದರ್ಶನ ಎಂಬಂತೆ 18 ವರ್ಷಗಳಂದ ಮಾತನಾಡಲು ಆಗದ ಪಾರ್ಶವಾಯುವಿನಿಂದ ಬಳಲುತ್ತಿದ್ದ ಮಹಿಳೆ ಇದೀಗ ಎಐ ಸಹಾಯದಿಂದ ಮಾತನಾಡಿದ್ದಾರೆ.

ಹೌದು, ಅಚ್ಚರಿ ಎನಿಸಿದರೂ ಸತ್ಯ. ಅದ್ಭುತ ವೈದ್ಯಕೀಯ ತಂತ್ರಜ್ಞಾನವು ತೀವ್ರ ಪಾರ್ಶ್ವವಾಯುವಿಗೆ ಒಳಗಾದ ಮಹಿಳೆಗೆ ತನ್ನ ಮೆದುಳಿನ ಸಂಕೇತಗಳನ್ನು ಸ್ಪೀಚ್‌ ಮತ್ತು ಮುಖದ ಅಭಿವ್ಯಕ್ತಿಗಳಾಗಿ ಪರಿವರ್ತಿಸುವ ಮೂಲಕ ಡಿಜಿಟಲ್ ಅವತಾರ್‌ನಲ್ಲಿ ಸಂವಹನ ನಡೆಸಲು ಅವಕಾಶ ನೀಡಿದೆ. ಅರೇ ಇದೇಗೆ ಸಾಧ್ಯ?, ಏನಿದು ಹೊಸ ಸೌಲಭ್ಯ? ಎಂಬಿತ್ಯಾದಿ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಪಾರ್ಶವಾಯುವಿನಿಂದ ಬಳಲುತ್ತಿದ್ದ ಮಹಿಳೆ, ಮಾತನಾಡಲು ಸಹಾಯ ಮಾಡಿದ ಎಐ!

ಮೆದುಳನ್ನು ರೀಡ್‌ ಮಾಡುವ ಎಐ: ತೀವ್ರವಾಗಿ ಪಾರ್ಶ್ವವಾಯುವಿಗೆ ಒಳಗಾಗಿದ್ದ ಮಹಿಳೆಗೆ ತನ್ನ ಮೆದುಳಿನ ಸಂಕೇತಗಳನ್ನು ಸ್ಪೀಚ್‌ ಮತ್ತು ಮುಖದ ಅಭಿವ್ಯಕ್ತಿಗಳಾಗಿ ಪರಿವರ್ತಿಸುವ ಮೂಲಕ ಡಿಜಿಟಲ್ ಅವತಾರ್‌ನಲ್ಲಿ ಸಂವಹನ ನಡೆಸಲು ಅನುಕೂಲ ಮಾಡಿಕೊಡಲಾಗಿದೆ. ಪಾರ್ಶ್ವವಾಯು ಮತ್ತು ಎಲ್‌ಎಲ್‌ಎಸ್ ನಂತಹ ಪರಿಸ್ಥಿತಿಗಳಿಂದಾಗಿ ಸಂವಹನ ಮಾಡುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದ ಈ ಮಹಿಳೆ ಈಗ ತನ್ನ ಭಾವನೆಗಳನ್ನು ಈ ಮೂಲಕ ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಈ ಹಿಂದೆ ಈ ರೀತಿಯ ಸಮಸ್ಯೆಗೆ ಒಳಗಾದವರ ಹಾವಭಾವಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲ ಅವರು ಏನು ಹೇಳುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕಿತ್ತು. ಇದರಲ್ಲಿ ಕಣ್ಣಿನ ಚಲನೆ ಸಹ ಪ್ರಮುಖವಾಗಿತ್ತು. ಇದು ನೈಸರ್ಗಿಕ ಸಂಭಾಷಣೆಯ ಭಾಗವಾಗಿದ್ದರೂ ಕೆಲವೊಮ್ಮೆ ಅರ್ಥ ಮಾಡಿಕೊಳ್ಳಲು ಕಷ್ಟಕರವಾಗಿತ್ತು. ಆದರೆ, ಈ ಎಲ್ಲಾ ಸಮಸ್ಯೆಗಳಿಗೆ ಈಗ ಸುಲಭ ಪರಿಹಾರ ಸಿಕ್ಕಂತಾಗಿದೆ.

ಈ ಸಂಬಂಧ ಯೂಟ್ಯೂಬ್‌ನಲ್ಲಿ ಯುಸಿ ಸ್ಯಾನ್‌ ಫ್ರಾನ್ಸಿಸ್ಕೊ (UCSF) ವಿಡಿಯೋ ಪ್ರಕಟಿಸಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ವಿಡಿಯೋದಲ್ಲಿ ಇರುವಂತೆ, ಹೊಸ ತಂತ್ರಜ್ಞಾನವು ಮೆದುಳಿನ ಮೇಲ್ಮೈಯಲ್ಲಿ ಮೈನಸ್ಕ್ಯೂಲ್ ಎಲೆಕ್ಟ್ರೋಡ್‌ಗಳನ್ನು ಬಳಸುತ್ತದೆ, ಸ್ಪೀಚ್‌ ಮತ್ತು ಮುಖದ ಅಭಿವ್ಯಕ್ತಿಗಳನ್ನು ಕಂಟ್ರೋಲ್‌ ಮಾಡುವ ಮೆದುಳಿನ ಪ್ರದೇಶಗಳಲ್ಲಿ ವಿದ್ಯುತ್ ಚಟುವಟಿಕೆಯನ್ನು ಇದು ಪತ್ತೆ ಮಾಡುತ್ತದೆ ಎಂದು ತಿಳಿಸಲಾಗಿದೆ.

ಈ ಸಂಕೇತಗಳನ್ನು ಡಿಜಿಟಲ್ ಅವತಾರದಿಂದ ಸ್ಪೀಚ್‌ ಮತ್ತು ಅನುಗುಣವಾದ ಮುಖದ ಭಾವನೆಗಳಿಗೆ ತಕ್ಷಣ ಅನುವಾದಿಸಲಾಗುತ್ತದೆ. ಇದರಲ್ಲಿ ನಗು, ಆಶ್ಚರ್ಯದಂತಹ ಅಭಿವ್ಯಕ್ತಿಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಹೇಳಲಾಗಿದೆ. ಇದನ್ನು 47 ವರ್ಷ ವಯಸ್ಸಿನ ಆನ್ ಎಂಬುವರ ಮೇಲೆ ಪ್ರಯೋಗಿಸಲಾಗಿದೆ. ಮೆದುಳಿನ ಕಾಂಡದ ಪಾರ್ಶ್ವವಾಯು ನಂತರ 18 ವರ್ಷಗಳಿಂದ ತೀವ್ರ ಪಾರ್ಶ್ವವಾಯುವಿಗೆ ಒಳಗಾಗಿದ್ದರು.

ಈಕೆ ಆಕೆಗೆ ಮಾತನಾಡಲು ಅಥವಾ ಟೈಪ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈಗ ವಿಶೇಷವಾಗಿ ಅವರು ಚಲನೆ-ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನಿಮಿಷಕ್ಕೆ 14 ಪದಗಳವರೆಗೆ ನಿಧಾನವಾಗಿ ಸಂವಹನ ನಡೆಸಿದ್ದಾರೆ. ಆನ್ ಈಗ ಇತ್ತೀಚಿನ ಅವತಾರ್ ತಂತ್ರಜ್ಞಾನದ ಸಹಾಯದಿಂದ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಮುಂದಾಗಿದ್ದಾರೆ.

ಸಂಶೋಧನಾ ತಂಡವು ಆನ್‌ನ ಮೆದುಳಿನ ಮೇಲ್ಮೈಯಲ್ಲಿ 253 ಪೇಪರ್-ತೆಳುವಾದ ವಿದ್ಯುದ್ವಾರಗಳನ್ನು ಅಳವಡಿಸಿದೆ. ಅಂದರೆ, ಇದನ್ನು ನಿರ್ದಿಷ್ಟವಾಗಿ ಸ್ಪೀಚ್‌-ಸಂಬಂಧಿತ ಪ್ರದೇಶಗಳ ಮೇಲೆ ಇರಿಸಲಾಗಿದೆ. ಈ ವಿದ್ಯುದ್ವಾರಗಳು ಮೆದುಳಿನ ಸಂಕೇತಗಳನ್ನು ಪಡೆಯಲಿದೆ. ಇನ್ನು ವಿಭಿನ್ನ ಮಾತಿನ ಶಬ್ದಗಳಿಗಾಗಿ ತನ್ನ ವಿಶಿಷ್ಟ ಮೆದುಳಿನ ಸಂಕೇತಗಳನ್ನು ಗುರುತಿಸಲು ಎಐ ಅಲ್ಗಾರಿದಮ್ ಅನ್ನು ತರಬೇತಿ ಮಾಡಲು ಆನ್ ತಂಡದೊಂದಿಗೆ ಸಹಕರಿಸಿದ್ದಾರೆ.

ಈ ವೇಳೆ ಕಂಪ್ಯೂಟರ್ 39 ವಿಭಿನ್ನ ಶಬ್ದಗಳನ್ನು ಯಶಸ್ವಿಯಾಗಿ ಕಲಿತುಕೊಂಡಿದೆಯಂತೆ. ಜೊತೆಗೆ ಚಾಟ್‌ಜಿಪಿಟಿ ಶೈಲಿಯ ಭಾಷಾ ಮಾದರಿಯು ಈ ಸಂಕೇತಗಳನ್ನು ಸುಸಂಬದ್ಧ ವಾಕ್ಯಗಳಾಗಿ ಪರಿವರ್ತಿಸಿದೆ. ಈ ವಾಕ್ಯಗಳನ್ನು ಅವತಾರವನ್ನು ಕಂಟ್ರೋಲ್‌ ಮಾಡಲು ಬಳಸಲಾಗಿದ್ದು, ಆಕೆಯ ಮದುವೆಯ ರೆಕಾರ್ಡಿಂಗ್ ಆಧಾರದ ಮೇಲೆ ಆನ್ ಅವರ ಧ್ವನಿಯನ್ನೇ ಇದಕ್ಕೆ ನೀಡಲಾಗಿದೆ.

ಪಾರ್ಶವಾಯುವಿನಿಂದ ಬಳಲುತ್ತಿದ್ದ ಮಹಿಳೆ, ಮಾತನಾಡಲು ಸಹಾಯ ಮಾಡಿದ ಎಐ!

ಪ್ರೊಫೆಸರ್ ಎಡ್ವರ್ಡ್ ಚಾಂಗ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಸ್ಯಾನ್ ಫ್ರಾನ್ಸಿಸ್ಕೊ (UCSF) ನಲ್ಲಿ ಈ ಯೋಜನೆಯನ್ನು ಮುನ್ನಡೆಸಿದ್ದಾರೆ. ನಮ್ಮ ಗುರಿಯು ಸಂಪೂರ್ಣ, ಸಾಕಾರಗೊಂಡ ಸಂವಹನ ಮಾರ್ಗವನ್ನು ಪುನಃಸ್ಥಾಪಿಸುವುದು, ಇದು ನಿಜವಾಗಿಯೂ ಇತರರೊಂದಿಗೆ ಮಾತನಾಡಲು ಅತ್ಯಂತ ನೈಸರ್ಗಿಕ ಮಾರ್ಗವಾಗಿದೆ. ಇವು ರೋಗಿಗಳಿಗೆ ನಿಜವಾದ ಪರಿಹಾರವನ್ನು ನೀಡಲಿದೆ ಎಂದಿದ್ದಾರೆ

Best Mobiles in India

English summary
AI breakthrough medical technology has allowed a severely paralyzed woman to communicate in a digital avatar by converting her brain signals into speech and facial expressions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+