Home
ಸುದ್ದಿಜಾಲ

AI ಪ್ಲಾಟ್‌ಫಾರ್ಮ್‌ಗಳಿಂದ 300 ಮಿಲಿಯನ್ ಉದ್ಯೋಗಗಳಿಗೆ ಕಂಟಕ: ವರದಿ!

ಇತ್ತೀಚಿನ ಚಾಟ್‌ಜಿಪಿಟಿಯಂತಹ ಪ್ಲಾಟ್‌ಫಾರ್ಮ್‌ಗಳೊಂದಿಗೆ ಕೃತಕ ಬುದ್ಧಿಮತ್ತೆಯ ( artificial intelligence ) ಹೊಸ ತಂತ್ರಜ್ಞಾನ ಬರುವಿಕೆಯೊಂದಿಗೆ ಪ್ರಪಂಚದಾದ್ಯಂತ ಸುಮಾರು 300 ಮಿಲಿಯನ್ ಫುಲ್‌ ಟೈಮ್‌ ಉದ್ಯೋಗಗಳನ್ನು ಕೆಲವು ರೀತಿಯಲ್ಲಿ ಸ್ವಯಂಚಾಲಿತಗೊಳಿಸಬಹುದು ಎಂದು ಅರ್ಥಶಾಸ್ತ್ರಜ್ಞರಾದ ಗೋಲ್ಡ್‌ಮನ್ ಸ್ಯಾಚ್ಸ್ ಅವರು ಇತ್ತೀಚೆಗೆ ಹೇಳಿದ್ದಾರೆ.

'ಆರ್ಥಿಕ ಬೆಳವಣಿಗೆಯ ಮೇಲೆ ಕೃತಕ ಬುದ್ಧಿಮತ್ತೆಯ ಸಂಭಾವ್ಯ ದೊಡ್ಡ ಪರಿಣಾಮಗಳು' (The Potentially Large Effects of Artificial Intelligence on Economic Growth) ಎಂಬ ಶೀರ್ಷಿಕೆಯ ಸಂಶೋಧನಾ ಟಿಪ್ಪಣಿಯಲ್ಲಿ ಹೂಡಿಕೆ ಬ್ಯಾಂಕ್ ಜಾಗತಿಕವಾಗಿ 18% ಪ್ರತಿಶತದಷ್ಟು ಕೆಲಸವನ್ನು ಗಣಕೀಕರಣಗೊಳಿಸಬಹುದು ಎಂದು ಗಮನಿಸಿದೆ. ಇದರ ಪರಿಣಾಮಗಳು ಉದಯೋನ್ಮುಖ ಮಾರುಕಟ್ಟೆಗಳಿಗಿಂತ ಮುಂದುವರಿದ ಆರ್ಥಿಕತೆಗಳಲ್ಲಿ ಹೆಚ್ಚು ಆಳವಾಗಿ ಕಂಡುಬರುತ್ತವೆ.

AI ಪ್ಲಾಟ್‌ಫಾರ್ಮ್‌ಗಳಿಂದ 300 ಮಿಲಿಯನ್ ಉದ್ಯೋಗಗಳಿಗೆ ಕಂಟಕ: ವರದಿ!

ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ನಲ್ಲಿ ಮೂರನೇ ಎರಡರಷ್ಟು ಉದ್ಯೋಗಗಳು ಒಂದು ನಿರ್ದಿಷ್ಟ ಮಟ್ಟಿಗೆ ಸ್ವಯಂಚಾಲಿತವಾಗಿರಬಹುದು ಎಂದು ವರದಿಯಿಂದ ತಿಳಿದು ಬಂದಿದೆ. ಅರ್ಥಶಾಸ್ತ್ರಜ್ಞರಾದ ಗೋಲ್ಡ್ಮನ್ ಸ್ಯಾಚ್ಸ್ ಅವರ ಹೊಸ ವರದಿಯ ಪ್ರಕಾರ, 'ಕಾರ್ಮಿಕ ಮಾರುಕಟ್ಟೆಯು ಗಮನಾರ್ಹ ಅಡಚಣೆಯನ್ನು ಎದುರಿಸಬಹುದು. 18% ಕೆಲಸವನ್ನು ಗಣಕೀಕರಣಗೊಳಿಸಬಹುದು ಎಂದಿದ್ದಾರೆ. ಅಲ್ಲದೇ ವೈಟ್ ಕಾಲರ್ ನೌಕರರನ್ನು ಮೊದಲು ಬದಲಾಯಿಸಬಹುದು ಎಂದು ಅರ್ಥಶಾಸ್ತ್ರಜ್ಞರು ಊಹಿಸಿದ್ದಾರೆ.

'ಉತ್ಪಾದಕ AI ತನ್ನ ಭರವಸೆಯ ಸಾಮರ್ಥ್ಯ ಗಳನ್ನು ತಲುಪಿಸಿದರೆ, ಕಾರ್ಮಿಕ ಮಾರುಕಟ್ಟೆಯು ಅಡಚಣೆಯನ್ನು ಎದುರಿಸಬಹುದು. ಯುಎಸ್ ಮತ್ತು ಯುರೋಪ್ ಎರಡರಲ್ಲೂ ಔದ್ಯೋಗಿಕ ಕಾರ್ಯಗಳ ಡೇಟಾವನ್ನು ಬಳಸುವುದರಿಂದ, ಸರಿಸುಮಾರು ಮೂರನೇ ಎರಡರಷ್ಟು ಪ್ರಸ್ತುತ ಉದ್ಯೋಗಗಳು ಕೆಲವು ಹಂತದ AI ಆಟೊಮೇಷನ್‌ಗೆ ಹೊಂದಿಕೊಂಡಿವೆ ಮತ್ತು ಉತ್ಪಾದಕ AI ಸದ್ಯ ಕೆಲಸದ ನಾಲ್ಕನೇ ಒಂದು ಭಾಗವನ್ನು ಬದಲಿಸಬಹುದು ಎಂದು ವರದಿ ಮಾಡಿದೆ ಎಂದರು.

AI ಪ್ಲಾಟ್‌ಫಾರ್ಮ್‌ಗಳಿಂದ 300 ಮಿಲಿಯನ್ ಉದ್ಯೋಗಗಳಿಗೆ ಕಂಟಕ: ವರದಿ!

ಚಾಟ್‌ಜಿಪಿಟಿ ಯಂತಹ ಜನರೇಟಿವ್ AI ಸಿಸ್ಟಮ್‌ ಗಳು ಮಾನವನ ಔಟ್‌ಪುಟ್‌ಗೆ ಹೋಲುವ ಕಂಟೆಂಟ್‌ ಅನ್ನು ರಚಿಸಬಹುದು ಮತ್ತು ಮುಂದಿನ ದಶಕ ದಲ್ಲಿ ಉತ್ಪಾದಕತೆಯ ಉತ್ಕರ್ಷ ವನ್ನು ಉಂಟುಮಾಡಬಹುದು ಎಂದು ವರದಿ ತಿಳಿಸುತ್ತದೆ. ಅಲ್ಲದೇ ಮುಂದಿನ 10 ವರ್ಷಗಳಲ್ಲಿ, ಕಾರ್ಮಿಕ ಉತ್ಪಾದಕತೆ ಹೆಚ್ಚಾಗುತ್ತದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಭವಿಷ್ಯ ನುಡಿದಿದ್ದಾರೆ. ಹಾಗೆಯೇ AI ವಾರ್ಷಿಕ ಜಾಗತಿಕ GDP ಯನ್ನು 7% ರಷ್ಟು ಹೆಚ್ಚಿಸಬಹುದು ಎಂದು ಅವರು ಅಂದಾಜಿಸಿದ್ದಾರೆ.

ಚಾಟ್‌ಜಿಪಿಟಿ ಕೋಡಿಂಗ್ ಅನ್ನು ಸರಳಗೊಳಿಸುವುದು, ಸರಳ ಸ್ಕೆಚ್‌ನಿಂದ ವೆಬ್‌ಸೈಟ್ ಅನ್ನು ತ್ವರಿತವಾಗಿ ರಚಿಸುವುದು ಮತ್ತು ಅಧಿಕ ಅಂಕಗಳೊಂದಿಗೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಂತಹ ಪ್ರಭಾವಶಾಲಿ ಫೀಚರ್ಸ್‌ ಗಳನ್ನು ಹೊಂದಿದೆ. ಮಾರ್ಚ್‌ನಲ್ಲಿ, ಅದರ ಡೆವಲಪರ್ ಬೋಟ್‌ನ ಹಿಂದಿನ ಸಾಫ್ಟ್‌ವೇರ್‌ನ ಇತ್ತೀಚಿನ ಹೊಸ ಆವೃತ್ತಿಯಾದ GPT-4 ಅನ್ನು ಬಿಡುಗಡೆ ಮಾಡಿದರು.

AI ಪ್ಲಾಟ್‌ಫಾರ್ಮ್‌ಗಳಿಂದ 300 ಮಿಲಿಯನ್ ಉದ್ಯೋಗಗಳಿಗೆ ಕಂಟಕ: ವರದಿ!

ಆದಾಗ್ಯೂ, ಅರ್ಥಶಾಸ್ತ್ರಜ್ಞರಾದ ಗೋಲ್ಡ್‌ಮನ್ ಸ್ಯಾಚ್ಸ್ ತನ್ನ ವರದಿ ಯಲ್ಲಿ ಆರಂಭದಲ್ಲಿ ಕಾರ್ಮಿಕರ ಅನ್ನು ಸ್ಥಳಾಂತರಿಸುವ ತಾಂತ್ರಿಕ ಆವಿಷ್ಕಾರವು ಐತಿಹಾಸಿಕವಾಗಿ ದೀರ್ಘಾವಧಿಯಲ್ಲಿ ಉದ್ಯೋಗದ ಬೆಳವಣಿಗೆ ಯನ್ನು ಸೃಷ್ಟಿಸಿದೆ ಎಂದು ಗಮನಿಸಿದೆ. ಕೆಲಸದ ಸ್ಥಳಗಳು ಬದಲಾಗಬಹುದಾದರೂ, AI ಯ ವ್ಯಾಪಕ ಅಳವಡಿಕೆಯು ಅಂತಿಮವಾಗಿ ಕಾರ್ಮಿಕ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಮತ್ತು 10 ವರ್ಷಗಳ ಅವಧಿಯಲ್ಲಿ ವಾರ್ಷಿಕ ವಾಗಿ ಜಾಗತಿಕ GDP ಯನ್ನು 7% ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ವರದಿ ಹೇಳಿದೆ.

'ಕಾರ್ಮಿಕ ಮಾರುಕಟ್ಟೆಯಲ್ಲಿ AI ಯ ಪ್ರಭಾವವು ಗಮನಾರ್ಹವಾಗಿ ಇರಬಹುದು ಅದಾಗ್ಯೂ, ಹೆಚ್ಚಿನ ಉದ್ಯೋಗಗಳು ಮತ್ತು ಕೈಗಾರಿಕೆಗಳು ಯಾಂತ್ರೀಕರಣಕ್ಕೆ ಭಾಗಶಃ ಒಡ್ಡಿಕೊಳ್ಳುತ್ತವೆ ಮತ್ತು ಆದ್ದರಿಂದ AI ನಿಂದ ಬದಲಿಯಾಗಿರುವುದಕ್ಕಿಂತ ಹೆಚ್ಚಾಗಿ ಪೂರಕವಾಗಿರುತ್ತವೆ' ಎಂದು ವರದಿಯು ಗಮನಿಸಿದೆ.

Best Mobiles in India

English summary
AI Platforms like ChatGPT could impact 300M jobs around the world. Says economist Goldman Sachs. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+