Home
ಸುದ್ದಿಜಾಲ

AI ನಿಂದಾಗಿ ಈ ಉದ್ಯೋಗಿಗಳ ಹೊಟ್ಟೆಗೆ ತಣ್ಣೀರ ಬಟ್ಟೆ... ಅಧ್ಯಯನದಿಂದ ತಿಳಿದುಬಂದಿದ್ದೇನು?

ಎಐ(AI) ಬಳಕೆ ಈಗ ಈಗೇನೋ ತುಂಬಾ ಸೊಗಸಾಗಿದೆ ಜೊತೆಗೆ ಬಳಕೆದಾರರಿಗೆ ರೋಮಾಂಚನವನ್ನೇನು ಉಂಟು ಮಾಡುತ್ತಿದೆ. ಅಷ್ಟು ಮಾತ್ರವಲ್ಲದೆ ಬಳಕೆದಾರರ ಕುತೂಹಲ ಸಹ ಹೆಚ್ಚು ಮಾಡುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಲಕ್ಷಾಂತರ ಮಾನವ ಉದ್ಯೋಗಗಳನ್ನು ಬದಲಾಯಿಸುತ್ತದೆ ಎಂದು ತಿಳಿದುಬಂದಿದೆ. ಅದರಲ್ಲೂ ಈ ಕೆಲವು ಉದ್ಯೋಗಗಳು ಹೆಚ್ಚು ಅಪಾಯದಲ್ಲಿರುತ್ತವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಹೌದು, ಮೆಕಿನ್ಸೆ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ನ (McKinsey Global Institute) ವರದಿಯೊಂದನ್ನು ಪ್ರಕಟಿಸಿದ್ದು, ಯುಎಸ್‌ನಲ್ಲಿನ ಉದ್ಯೋಗ ಮಾರುಕಟ್ಟೆಯ ಮೇಲೆ ಎಐಯ ಸಂಭಾವ್ಯ ಪ್ರಭಾವವನ್ನು ಎತ್ತಿ ತೋರಿಸಲಾಗಿದೆ. ಡೇಟಾ ಸ್ಟೋರೇಜ್‌ ಮತ್ತು ಪುನರಾವರ್ತಿತ ಕಾರ್ಯಗಳಂತಹ ಯಾಂತ್ರೀಕೃತಗೊಂಡ ಉದ್ಯೋಗಗಳನ್ನು ಎಐ ತನ್ನ ವಶಕ್ಕೆ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ. ಹಾಗಿದ್ರೆ, ಈ ಎಐ ಮಾನವ ಉದ್ಯೋಗಿಗಳಿಗೆ ಹೇಗೆ ಮಾರಕ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.

AI ನಿಂದಾಗಿ ಈ ಉದ್ಯೋಗಿಗಳ ಹೊಟ್ಟೆಗೆ ತಣ್ಣೀರ ಬಟ್ಟೆ ...

ಉದ್ಯೋಗಿಗಳ ಮೇಲೆ ಎಐ ಸಂಭಾವ್ಯ ಪ್ರಭಾವ: ಜಗತ್ತಿನಲ್ಲಿ ಆಗುತ್ತಿರುವ ಕೃತಕ ಬುದ್ಧಿಮತ್ತೆ (Artificial intelligence) ಕ್ರಾಂತಿಯು ಮುಂದಿನ ದಿನಗಳಲ್ಲಿ ಮಾನವ ಉದ್ಯೋಗಗಳಿಗೆ ಗಮನಾರ್ಹ ಅಪಾಯವನ್ನುಂಟು ಮಾಡುವ ಭಯವಿದೆ ಎನ್ನಲಾಗಿದೆ. ಎಐ ಮಾನವ ಕೆಲಸಗಾರರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದು, ಇದು ಬಹುಪಾಲು ಉದ್ಯೋಗಗಳನ್ನು ಸಮರ್ಥವಾಗಿ ನಿಭಾಯಿಸುತ್ತದೆ ಎಂಬ ಎಲ್ಲಾ ಚರ್ಚೆಗಳು ನಡೆಯುತ್ತಿವೆ.

ಮೆಕಿನ್ಸೆ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ನ 'ಜನರೇಟಿವ್ ಎಐ ಮತ್ತು ಫ್ಯೂಚರ್ ಆಫ್ ವರ್ಕ್ ಇನ್ ಅಮೇರಿಕ' (Generative AI and the Future of Work in America)ಎಂಬ ಹೊಸ ಅಧ್ಯಯನವು ಯುಎಸ್‌ನಲ್ಲಿನ ಉದ್ಯೋಗ ಮಾರುಕಟ್ಟೆಯ ಮೇಲೆ ಕೃತಕ ಬುದ್ಧಿಮತ್ತೆಯ ಸಂಭಾವ್ಯ ಪ್ರಭಾವವನ್ನು ಎತ್ತಿ ತೋರಿಸಿದೆ. ವರದಿಯ ಪ್ರಕಾರ, ಎಐ ಮತ್ತು ಬದಲಾಗುತ್ತಿರುವ ಗ್ರಾಹಕರ ಅಭ್ಯಾಸಗಳು ವಿವಿಧ ವಿಭಾಗಗಳಲ್ಲಿನ ಉದ್ಯೋಗಾವಕಾಶಗಳಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.

ಅದರಲ್ಲೂ ಆರ್ಥಿಕ ಯಾಂತ್ರೀಕರಣವನ್ನು ಹೆಚ್ಚು ವೇಗಗೊಳಿಸುವ ಶಕ್ತಿಯನ್ನು ಈ ಎಐ ಹೊಂದಿದ್ದು, 2030 ರ ವೇಳೆಗೆ ಯುಎಸ್‌ ಆರ್ಥಿಕತೆಯಲ್ಲಿ ಕೆಲಸ ಮಾಡುವ 30 ಪ್ರತಿಶತವನ್ನು ಪ್ರತಿನಿಧಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅಂದರೆ ದತ್ತಾಂಶ ಸಂಗ್ರಹಣೆ ಮತ್ತು ಪುನರಾವರ್ತಿತ ಕಾರ್ಯಗಳಂತಹ ಕೆಲವು ರೀತಿಯ ಯಾಂತ್ರೀಕೃತಗೊಂಡ ಅಗತ್ಯವಿರುವ ಎಲ್ಲಾ ಉದ್ಯೋಗಗಳನ್ನು ಇದು ಮಾಡುತ್ತದೆ ಎಂದು ತಿಳಿಸಲಾಗಿದೆ.

ಯಾವೆಲ್ಲಾ ಉದ್ಯೋಗಗಳಿಗೆ ಸಮಸ್ಯೆ?: ಈ ನಡುವೆ ಎಐ ಹಲವಾರು ವಿಭಾಗಗಳಿಗೆ ಎಂಟ್ರಿ ಕೊಟ್ಟರೂ ಸಹ ಈ ಪ್ರಮುಖ ಉದ್ಯೋಗಗಳು ಹೆಚ್ಚಾಗಿ ಎಐ ವಶವಾಗಲಿವೆ ಎಂದು ತಿಳಿಸಲಾಗಿದೆ. ಅದರಲ್ಲಿ ಕಚೇರಿ ಬೆಂಬಲ, ಗ್ರಾಹಕ ಸೇವೆ ಮತ್ತು ಆಹಾರ ಸೇವೆಯ ಉದ್ಯೋಗಗಳಲ್ಲಿ ಎಐ ಹೆಚ್ಚಿನ ಪ್ರಭಾವ ಬೀರಲಿದೆ ಎಂದು ಹೇಳಲಾಗಿದೆ. 2030ರ ವೇಳೆಗೆ ಯುಎಸ್‌ ನಲ್ಲಿಯೇ ಹೆಚ್ಚುವರಿ 12 ಮಿಲಿಯನ್ ಔದ್ಯೋಗಿಕ ಸ್ಥಿತ್ಯಂತರಗಳಾಗುತ್ತವೆ ಎಂದು ತಿಳಿದುಬಂದಿದೆ.

ಇನ್ನು ಈ ಎಐ ಪ್ರಭಾವದಿಂದಾಗಿ ಗುಮಾಸ್ತರ ವಿಭಾಗದಲ್ಲಿ 1.6 ಮಿಲಿಯನ್ ಉದ್ಯೋಗಗಳು ಕಡಿಮೆಯಾಗಬಹುದು ಎಂದು ನಾವು ಅಂದಾಜು ಮಾಡಿದ್ದೇವೆ. ಇನ್ನು ರಿಟೇಲರ್‌ ಮಾರಾಟಗಾರರ ವಿಭಾಗದಲ್ಲಿ 830,000, ಆಡಳಿತಾತ್ಮಕ ಸಹಾಯಕ (Administrative Assistant) ವಿಭಾಗದಲ್ಲಿ 710,000 ಮತ್ತು ಕ್ಯಾಷಿಯರ್‌ ವಿಭಾಗದಲ್ಲಿ(Cashier Dept) 630,000 ಉದ್ಯೋಗದ ನಷ್ಟ ಆಗಲಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಈ ಬದಲಾವಣೆಯಿಂದಾಗಿ ಉದ್ಯೋಗಾಕಾಂಕ್ಷಿಗಳನ್ನು ವಿವಿಧ ಉದ್ಯೋಗ ಕ್ಷೇತ್ರಗಳಿಗೆ ಸ್ಥಳಾಂತರಿಸಲು ಒತ್ತಾಯಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಕುಗ್ಗುತ್ತಿರುವ ಬೇಡಿಕೆಯೊಂದಿಗೆ ಪ್ರಸ್ತುತ ಉದ್ಯೋಗದಲ್ಲಿರುವ 11.8 ಮಿಲಿಯನ್ ಕಾರ್ಮಿಕರು 2030 ರ ವೇಳೆಗೆ ವಿಭಿನ್ನ ಕೆಲಸಗಳಿಗೆ ಹೋಗುವ ಅನಿವಾರ್ಯತೆ ಈ ಎಐನಿಂದಾಗಿ ಎದುರಾಗುತ್ತದೆ ಎಂದು ಅಧ್ಯಯನಕಾರರು ಅಂದಾಜು ಮಾಡಿದ್ದಾರೆ.

AI ನಿಂದಾಗಿ ಈ ಉದ್ಯೋಗಿಗಳ ಹೊಟ್ಟೆಗೆ ತಣ್ಣೀರ ಬಟ್ಟೆ ...

ಕಡಿಮೆ ಸಂಬಳ ಪಡೆಯುವವರಿಗೆ ಕಷ್ಟ: ಅದರಲ್ಲೂ ಈ ಎಐ ಕಡಿಮೆ ವೇತನದ ಕೆಲಸಗಾರರ ಮೇಲೆ ತೀವ್ರ ಪ್ರಭಾವ ಬೀರಲಿದೆಯಂತೆ. ಅಂದರೆ ವರ್ಷಕ್ಕೆ $30,800 ಕ್ಕಿಂತ ಕಡಿಮೆ ಗಳಿಸುವವರು ಸಮಸ್ಯೆಗೆ ಸಿಲುಕಲಿದ್ದಾರೆ. ಅದರಲ್ಲೂ ವರ್ಷಕ್ಕೆ $30,800 ಹಾಗೂ $38,200 ಗಳಿಸುವವರು ಈ ದಶಕದ ಅಂತ್ಯದ ವೇಳೆಗೆ 10 % ಮತ್ತು 14 % ಹೆಚ್ಚು ಔದ್ಯೋಗಿಕ ಬದಲಾವಣೆಗಳನ್ನು ಬಯಸುತ್ತಾರೆ ಎಂದು ತಿಳಿಸಲಾಗಿದೆ.

Best Mobiles in India

English summary
A report by the McKinsey Global Institute has highlighted the potential impact of AI on the job market in the US.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+