Subscribe to Gizbot

ವಿಮಾನ ಪ್ರಯಾಣಿಕರ ಬಳಕೆಗೆ 'ಲ್ಯಾಪ್‌ಟಾಪ್‌'!!

Written By:

ಬಿಸಿನೆಸ್ ಕ್ಲಾಸ್ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಬಿಸಿನೆಸ್‌ ಕ್ಲಾಸ್‌ ಪ್ರಯಾಣಿಕರ ಬಳಕೆಗೆ 'ಲ್ಯಾಪ್‌ಟಾಪ್‌' ನೀಡಲು ಏರ್‌ಇಂಡಿಯಾ ಮುಂದಾಗಿದೆ.!! ಈ ಬಗ್ಗೆ ಏರ್‌ಇಂಡಿಯಾ ವಿಮಾನಯಾನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.!!

ವಿಮಾನ ಪ್ರಯಾಣದಲ್ಲಿ ಬಿಸಿನೆಸ್‌ ಕ್ಲಾಸ್‌ನ ಅರ್ಧದಷ್ಟು ಆಸನಗಳು ಖಾಲಿ ಉಳಿಯುತ್ತಿವೆ. ಹೀಗಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ಇರುವ ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು, ಬಿಸಿನೆಸ್ ಕ್ಲಾಸ್ ಪ್ರಯಾಣಿಕರ ಬಳಕೆಗೆ ಲ್ಯಾಪ್‌ಟಾಪ್‌ ನೀಡಲು ಮುಂದಾಗಿರುವುದಾಗಿ ಖರೋಲಾ ಅವರು ಹೇಳಿದ್ದಾರೆ.!!

ವಿಮಾನ ಪ್ರಯಾಣಿಕರ ಬಳಕೆಗೆ 'ಲ್ಯಾಪ್‌ಟಾಪ್‌'!!

ಏರ್‌ಇಂಡಿಯಾ ವಿಮಾನಯಾನ ಗ್ರಾಹಕರಿಗೆ ಗುಣಮಟ್ಟದ ಸೇವೆ ಮತ್ತು ಮನರಂಜನೆ ನೀಡುವ ಬಗ್ಗೆ ಆದ್ಯತೆ ನೀಡಲಾಗುವುದು. ಸದ್ಯಕ್ಕೆ ಬಿಸಿನೆಸ್‌ ಕ್ಲಾಸ್‌ನ ಪ್ರಯಾಣಿಕರಿಗಾಗಿ ಲ್ಯಾಪ್‌ಟಾಪ್ ನೀಡುತ್ತಿದ್ದು, ಮುಂಬರು ದಿನಗಳಲ್ಲಿ ಎಲ್ಲಾ ಪ್ರಯಾಣಿಕರಿಗೂ ಈ ಸೇವೆಯನ್ನು ಮುಂದುವರೆಸುವ ಬಗ್ಗೆ ಕೂಡ ಅವರು ಮಾತನಾಡಿದರು.!!

ವಿಮಾನ ಪ್ರಯಾಣಿಕರ ಬಳಕೆಗೆ 'ಲ್ಯಾಪ್‌ಟಾಪ್‌'!!

ಪ್ರಯಾಣಿಕರು ವಿಮಾನಯಾನದಲ್ಲಿ ಸಂತಸದಿಂದ ಸಮಯ ಕಳೆಯಬೇಕೆಂಬುದು ನಮ್ಮ ಆಶಯ. ಹಾಗಾಗಿ, ಮೊಬೈಲ್ ಇಲ್ಲದಿರುವುದರಿಂದ ಲ್ಯಾಪ್‌ಟಾಪ್‌ಗಳಲ್ಲಿ ಅವರು ಮನರಂಜನಾತ್ಮಕವಾಗಿ ಸಮಯ ಕಳೆಯುವಂತೆ ಮಾಡುವುದು ಲ್ಯಾಪ್‌ಟಾಪ್ ನೀಡುತ್ತಿರುವ ಉದ್ದೇಶ ಎಂದು ಏರ್‌ಇಂಡಿಯಾ ಅಧಿಕಾರಿಯೋರ್ವರು ಹೇಳಿದರು.!!

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?

ಓದಿರಿ: 9,500 ರೂ.ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಮೇಲೆ 2000ರೂ 'ಜಿಯೋ' ಕ್ಯಾಶ್‌ಬ್ಯಾಕ್!!

English summary
Air India is considering providing laptops to its premium travellers, its Chairman and Managing Director Pradeep Singh Kharola said. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot