Subscribe to Gizbot

9,500 ರೂ.ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಮೇಲೆ 2000ರೂ 'ಜಿಯೋ' ಕ್ಯಾಶ್‌ಬ್ಯಾಕ್!!

Written By:

ಸ್ಯಾಮ್‌ಸಂಗ್ ಈ ವರ್ಷ ಬಿಡುಗಡೆ ಮಾಡಿರುವ ತನ್ನ ಅತ್ಯಂತ ಕಡಿಮೆ ಬೆಲೆಯ ಗ್ಯಾಲಕ್ಸಿ ಟ್ಯಾಬ್ ಎ7.0 ಮೇಲೆ ಜಿಯೋ ಭರ್ಜರಿ ಆಫರ್ ಘೋಷಿಸಿದೆ.! ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಜೊತೆಗೆ ಕೈ ಜೋಡಿಸಿರುವ ಜಿಯೋ 2,000 ರೂ. ಕ್ಯಾಶ್‌ಬ್ಯಾಕ್ ನೀಡಿ ಗಮನಸೆಳೆದಿದೆ.!!

ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯನ್ನು ಎತ್ತಲು ಸ್ಯಾಮ್‌ಸಂಗ್ ಕೇವಲ 9,500 ರೂ.ಗೆ ಗ್ಯಾಲಕ್ಸಿ ಎ 7.0 ಟ್ಯಾಬ್ಲೆಟ್ ಅನ್ನು ಪರಿಚಯಿಸಿದ್ದು, 4000mAh ಬ್ಯಾಟರಿ ಹಾಗೂ 7.0 ಇಂಚು ಡಿಸ್‌ಪ್ಲೇ ಹೊಂದಿರುವ ಟ್ಯಾಬ್ಲೆಟ್ ಇದಾಗಿದೆ.!! ಹಾಗಾದರೆ, ಗ್ಯಾಲಕ್ಸಿ ಎ 7.0 ಟ್ಯಾಬ್ಲೆಟ್ ಫೀಚರ್ಸ್ ಏನು? ಮತ್ತು ಜಿಯೋ ಆಫರ್ಸ್ ಏನು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಗ್ಯಾಲೆಕ್ಸಿ ಟ್ಯಾಬ್ A 7.0ನಲ್ಲಿ HD ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ನಾಲ್ಕು ಅಂಚುಗಳು ದುಂಡಾಗಿರುವುದಲ್ಲದೆ ನಾನ್-ಸ್ಲಿಪ್ ಮಾದರಿಯಲ್ಲಿ ಹೊರಬಂದಿದೆ. ಪರದೆ 800*1280 ಪಿಕ್ಸೆಲ್ ರೆಸ್ಯುಲೇಷನ್ ಹೊಂದಿರುವುದರಿಂದ ಟ್ಯಾಬ್ ಹೆಚ್‌ಡಿ ವಿಡಿಯೋ ವೀಕ್ಷಣೆಗೆ ಅತ್ಯುತ್ತಮವಾಗಿದೆ ಎಂದು ಹೇಳಬಹುದು.!!

ದೊಡ್ಡ ಬ್ಯಾಟರಿ!!

ದೊಡ್ಡ ಬ್ಯಾಟರಿ!!

ಅಲ್ಲದೇ 4000mAh ಅನ್ನು ಈ ಫೋನಿನಲ್ಲಿ ಅಳವಡಿಸಲಾಗಿದ್ದು, 8 ಗಂಟೆಗಳ ವಿಡಿಯೋ ಪ್ಲೇ ಬ್ಯಾಕ್ ಹೊಂದಿದೆ ಎಂದು ಸ್ಯಾಮ್‌ಸಂಗ್ ಹೇಳಿದೆ. ಅತ್ಯಂಕ ಕಡಿಮೆ ಬೆಲೆಗೆ 4000mAh ಬ್ಯಾಟರಿ ಹೊಂದಿರುವ ಸ್ಯಾಮ್‌ಸಂಗ್‌ನ ಮೊದಲ ಟ್ಯಾಬ್ ಇದಾಗಿದ್ದು, ಬ್ಯಾಟರಿ ಪ್ರಿಯ ಗ್ಯಾಜೆಟ್ ಬಳಕೆದಾರರಿಗೆ ಹೇಳಿ ಮಾಡಿಸಿದ ಟ್ಯಾಬ್.!!

RAM ಮತ್ತು ಮೆಮೊರಿ.!!

RAM ಮತ್ತು ಮೆಮೊರಿ.!!

1.5GHz ವೇಗದ ಕ್ವಾಡ್‌ ಕೋರ್ ಪ್ರೋಸೆಸರ್ ಹಾಗೂ 1.5GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಗ್ಯಾಲೆಕ್ಸಿ ಟ್ಯಾಬ್ A7.0ಟ್ಯಾಬ್‌ನಲ್ಲಿ ನೀಡಲಾಗಿದೆ.! ವಿಶೇಷವೆಂದರೆ, ಮೈಕ್ರೋ SD ಕಾರ್ಟ್ ಮೂಲಕ 200GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾದ ಆಯ್ಕೆಯನ್ನು ಈ ಟ್ಯಾಬ್‌ನಲ್ಲಿ ಸ್ಯಾಮ್‌ಸಂಗ್ ನೀಡಿದೆ.!!

ಇತರೆ ವಿಶೇಷತೆಗಳೇನು?

ಇತರೆ ವಿಶೇಷತೆಗಳೇನು?

5MP ಕ್ಯಾಮೆರಾ ರಿಯರ್ ಮತ್ತು 2MP ಸೆಲ್ಫಿ ಕ್ಯಾಮೆರಾ, 4G ವೋಲ್ಟ್, ಬ್ಲೂಟೂತ್ "ಕಿಡ್ಸ್ ಮೋಡ್" ಮತ್ತು ಬ್ಲೂಟೂತ್ ಸೌಲಭ್ಯಗಳನ್ನು ಗ್ಯಾಲೆಕ್ಸಿ ಟ್ಯಾಬ್ A7.0 ಟ್ಯಾಬ್ ಹೊಂದಿದೆ. ಹಾಗಾಗಿ, ಈ ಟ್ಯಾಬ್ಲೆಟ್ ನಾವು ನೀಡುವ ಹಣಕ್ಕೆ ಸ್ಯಾಮ್‌ಸಂಗ್‌ನಲ್ಲಿ ಖರೀದಿಸಬಹುದಾದ ಉತ್ತಮ ಟ್ಯಾಬ್ಲೆಟ್ ಆಗಿದೆ.!!

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಜಿಯೋ ಆಫರ್!!

ಜಿಯೋ ಆಫರ್!!

9,500 ರೂಪಾಯಿಗಳಿಗೆ ಕೇವಲ ಒಂದು ವಾರದ ಹಿಂದಷ್ಟೆ ಬಿಡುಗಡೆಯಾಗಿರುವ ಗೆ ಗ್ಯಾಲಕ್ಸಿ ಎ 7.0 ಟ್ಯಾಬ್ಲೆಟ್ ಮೇಲೆ ಜಿಯೋ ಭರ್ಜರಿ ಆಫರ್ ಘೋಷಿಸಿದೆ. 299 ರೂ. ಆಫರ್ ಅನ್ನು 24 ತಂಗಳ ವರೆಗೆ ರೀಚಾರ್ಜ್ ಮಾಡಿಸಿದರೆ ಜಿಯೋವಿನ 2,000 ರೂ. ಕ್ಯಾಶ್‌ಬ್ಯಾಕ್ ಜಿಯೋ ಮಿನಿ ಅಕೌಂಟ್‌ನಲ್ಲಿ ಸಿಗಲಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Betting on a strong comeback in the tablet industry, Samsung said it will launch more affordable products this year.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot