Subscribe to Gizbot

ಕಡಿಮೆ ದರದಲ್ಲಿ ಏರ್‌ಸೆಲ್‌ 2ಜಿ ಇಂಟರ್‌ನೆಟ್‌

Written By:

ಏರ್‌ಸೆಲ್‌ ಗ್ರಾಹಕರಿಗೆ ಗುಡ್‌ನ್ಯೂಸ್‌.ಏರ್‌ಸೆಲ್‌ 2ಜಿ ಇಂಟರ್‌ನೆಟ್‌ ಗ್ರಾಹಕರಿಗಾಗಿ ಹೊಸ ಪ್ಲ್ಯಾನ್‌ ಬಿಡುಗಡೆ ಮಾಡಿದೆ. 24 ರೂಪಾಯಿ ರಿಚಾರ್ಜ್ ಮಾಡಿದ್ರೆ ಮೂವತ್ತು ದಿನಗಳವರೆಗೆ 100 ಎಂಬಿ ಡೇಟಾ ಯೋಜನೆಯನ್ನು ಏರ್‌ಸೆಲ್ ಬಿಡುಗಡೆ ಮಾಡಿದೆ.

ಕಳೆದ ಬಾರಿ 3ಜಿಯಲ್ಲಿ ಕಡಿಮೆ ಬೆಲೆಯ ಇಂಟರ್‌ನೆಟ್‌ ಯೋಜನೆ ಬಿಡುಗಡೆ ಮಾಡಿದ ಏರ್‌ಸೆಲ್‌ ಈಗ 2ಜಿ ಇಂಟರ್‌ನೆಟ್‌ನಲ್ಲೂ ಕಡಿಮೆ ಬೆಲೆಯ ಯೋಜನೆ ಪ್ರಕಟಿಸಿದ್ದು, ಒಂದು ತಿಂಗಳ ಒಳಗೆ ಈ ಪಾಕೆಟ್‌ ಇಂಟರ್‌ನೆಟ್‌ ಮುಗಿದಲ್ಲಿ ಪುನಃ ರಿಚಾರ್ಜ್ ಮಾಡಬಹುದು ಎಂದು ಏರ್‌ಸೆಲ್‌ ಹೇಳಿದೆ.

ಕಡಿಮೆ ದರದಲ್ಲಿ ಏರ್‌ಸೆಲ್‌ 2ಜಿ ಇಂಟರ್‌ನೆಟ್‌

ಈ ಯೋಜನೆ ಕರ್ನಾಟಕದ ಜನತಗೆ ಈಗ ಲಭ್ಯವಿಲ್ಲ. ಸದ್ಯಕ್ಕೆ ಈ ಯೋಜನೆ ಜಮ್ಮು ಕಾಶ್ಮೀರ,ಒರಿಸ್ಸಾ,ಕೋಲ್ಕತ್ತಾ,ತಮಿಳುನಾಡು ಮತ್ತು ಬಿಹಾರದಲ್ಲಿ ಲಭ್ಯವಿದ್ದು, ಏಪ್ರಿಲ್‌ 24ರಿಂದ ಇದು ದೇಶದ ಉಳಿದ ಏರ್‌ಸೆಲ್‌ ಸರ್ಕಲ್‌ನ ಬಳಕೆದಾರರಿಗೆ ಲಭ್ಯವಾಗಲಿದೆ.

ಈಗ 2ಜಿ ಇಂಟರ್‌ನೆಟ್‌ನಲ್ಲಿ ಈ ವಿಶೇಷ ಯೋಜನೆ ಪ್ರಕಟಿಸಿದ್ದು, ಮುಂದಿನ ದಿನಗಳಲ್ಲಿ 3ಜಿಯಲ್ಲೂ ಇದೇ ರೀತಿಯ ಯೋಜನೆ ಪ್ರಕಟಿಸಲಾಗುವುದು ಎಂದು ಏರ್‌ಸೆಲ್‌ ಮುಖ್ಯ ಮಾರ್ಕೆಟಿಂಗ್‌ ಅಧಿಕಾರಿ ಅನುಪಮ್‌ ವಾಸುದೇವ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಎಲ್ಲಾ ಕಂಪೆನಿಗಳ 3ಜಿ ಪ್ಲ್ಯಾನ್‌ ತಿಳಿಯಿರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot