ವಿಮಾನದಲ್ಲಿ ವೈ-ಫೈ ಸೇವೆಗೆ ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್!

|

ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಇನ್ಮುಂದೆ ವೈಫೈ ಸೇವೆಯು ಲಭ್ಯವಾಗಲಿದೆ. ಬಹುನಿರೀಕ್ಷೆ ವಿಮಾನದಲ್ಲಿ ವೈಫೈ ಸೇವೆಯ ಯೋಜನೆಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಮೂಲಕ ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಪ್ರಯಾಣಿಕರು ವಿಮಾನದಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್, ಸ್ಮಾರ್ಟ್‌ವಾಚ್ ಸೇರಿದಂತೆ ಇನ್ನಿತರೆ ಇಂಟರ್ನೆಟ ಆಧಾರಿತ ಡಿವೈಸ್‌ಗಳನ್ನು ಬಳಸಬಹುದಾಗಿದೆ.

ವೈಫೈ ಸೌಲಭ್ಯ

ಹೌದು, ವಿಮಾನದಲ್ಲಿ ಪ್ರಯಾಣಿಕರಿಗೆ ವೈಫೈ ಸೌಲಭ್ಯ ಒದಗಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ವಿಮಾನದಲ್ಲಿ ಪ್ರಯಾಣಿಕರು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌, ಟ್ಯಾಬ್, ಇತರೆ ಡಿವೈಸ್‌ ಬಳಕೆಮಾಡುವಾಗ ವಿಮಾನದ ಪೈಲೆಟ್ ವೈಫೈ ಸೇವೆಯನ್ನು ಸಕ್ರಿಯ ಮಾಡುವರು. ಪ್ರಯಾಣಿಕರು ಇಂಟರ್ನೆಟ ಬೆಂಬಲಿತ ಸ್ಮಾರ್ಟ್‌ ಡಿವೈಸ್‌ಗಳನ್ನು ಫ್ಲೈಟ್‌ ಮೋಡ್‌ ಅಥವಾ ಏರೋಪ್ಲೇನ್‌ ಮೋಡ್ ನಲ್ಲಿ ಹಾಕಿ ವೈಫೈ ಬಳಕೆ ಮಾಡಬಹುದಾಗಿದೆ.

ವಿಮಾನ

ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರು ವೈಫೈ ಸೌಲಭ್ಯ ಬಳಸಲು ತಮ್ಮ ಸ್ಮಾರ್ಟ್‌ ಡಿವೈಸ್‌ಗಳನ್ನು ಎರೋಪ್ಲೇನ್‌ ಮೋಡ್‌ಗೆ ಹಾಕಬೇಕಿರುತ್ತದೆ. ಆದರೆ ಈ ಸೇವೆಯು ಎಂದು ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ ಎನ್ನುವ ಬಗ್ಗೆ ವಿಮಾನಯಾನ ಸಚಿವಾಲವು ಯಾವುದೆ ಮಾಹಿತಿ ನೀಡಿಲ್ಲ. ವಿಮಾನದಲ್ಲಿ ವೈಫೈ ಇಂಟರ್ನೆಟ್ ಬಳಕೆಯ ಸೇವೆಯು ಸದ್ಯ ದೇಶದ ರಕ್ಷಣಾ ಸಿಬ್ಬಂದಿಗಳಿಗೆ ಮಾತ್ರ ಲಭ್ಯವಿದೆ.

ವೈಫೈ ಸೇವೆ

ಸದ್ಯದಲ್ಲಿಯೇ ವಿಮಾನದಲ್ಲಿ ವೈಫೈ ಸೇವೆಯು ಆರಂಭಗೊಳ್ಳಲಿದ್ದು, Boeing 787-9 aircraft ವಿಮಾನದಲ್ಲಿ ಮೊದಲು ಈ ಸೇವೆ ಶುರುಮಾಡಲಿದ್ದಾರೆ ಎನ್ನಲಾಗಿದೆ. ಇನ್ನು ವಿದೇಶಿ ವಿಮಾನಯಾನ ಸಂಸ್ಥೆಗಳು ಈಗಾಗಲೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಮಾನ ಪ್ರಯಾಣಗಳಲ್ಲಿ ಪ್ರಯಾಣಿಕರಿಗೆ ವೈಫೈ ಸೌಲಭ್ಯ ಒದಗಿಸುತ್ತಿವೆ. ವಿಮಾನದಲ್ಲಿ ವೈಫೈ ಇಂಟರ್ನೆಟ ಸೇವೆ ಹಾಗೂ ಮೊಬೈಲ್ ಸೇವೆಯನ್ನು ಬಳಸಬಹುದು ಎಂದು ಕಳೆದ 2018ರಲ್ಲಿ ದೂರಸಂಪರ್ಕ ಇಲಾಖೆ ಹೇಳಿತ್ತು.

ಚಾನೆಲ್ ವೀಕ್ಷಣೆ

ಈ ಹೊಸ ನಿಯಮವು ಜಾರಿಯಾದ ನಂತರ ಪ್ರಯಾಣಿಕರು ಮೊಬೈಲ್ ಸ್ವಿಚ್ ಆಫ್ ಮಾಡದೇ ವೈಫೈ ಸೇವೆಯ ಮೂಲಕ ಇಂಟರ್ನೆಟ್ ಬಳಕೆ ಸೇವೆ ದೊರೆಯಲಿದೆ. ವಿಸ್ತಾರ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ವಿಸ್ತಾರ ಚಾನೆಲ್ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದೆ ಹಾಗೂ ನಿಯಮಿತ ವೈಫೈ ಸೇವೆಯನ್ನು ಒದಗಿಸಲಿದೆ.

Most Read Articles
Best Mobiles in India

English summary
It is important to note in this case is that all devices using in-flight WiFi will have to be on airplane mode.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X