Home
ಸುದ್ದಿಜಾಲ

ಏರ್‌ಪಾಡ್ಸ್‌ ಕೇಸ್‌ನಲ್ಲಿ ಇನ್ಮುಂದೆ ಟಚ್‌ಸ್ಕ್ರೀನ್ ಸೌಲಭ್ಯ?: ಮಾರುಕಟ್ಟೆಯಲ್ಲಿ ಬಿರುಗಾಳಿ ಪಕ್ಕಾ!

ಆಪಲ್‌ ಸ್ಮಾರ್ಟ್‌‌ಡಿವೈಸ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಈ ನಡುವೆ ಸುಧಾರಿತ ಫೀಚರ್ಸ್‌ ಇರುವ ಹೊಸ ಹೊಸ ಸ್ಮಾರ್ಟ್‌ ಡಿವೈಸ್‌ಗಳ ಲಾಂಚ್‌ಗೆ ಆಪಲ್‌ ಸಿದ್ಧವಾಗುತ್ತಿದೆ. ಅದರಲ್ಲಿ ಐಫೋನ್‌ನ 15 ಸಹ ಒಂದು. ಈ ನಡುವೆ ನೀವೆಲ್ಲರೂ ಈವರೆಗೂ ಊಹಿಸದ ಹೊಸ ಇಯರ್‌ಬಡ್ಸ್‌ ಅನ್ನು ಆಪಲ್‌ ಪರಿಚಯಿಸಲಿದೆ ಎನ್ನಲಾಗಿದೆ.

ಹೌದು, ಇಯರ್‌ಬಡ್ಸ್‌ ಇದೀಗ ವಿವಿಧ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಅದರಂತೆ ಕೆಲವು ಚಾರ್ಜಿಂಗ್‌ ಕೇಸ್‌ನಲ್ಲಿ ಚಿಕ್ಕದಾದ ಎಲ್‌ಸಿಡಿ ಡಿಸ್‌ಪ್ಲೇ ನೀಡಲಾಗುತ್ತಿದ್ದು, ಅದರಲ್ಲಿ ಬ್ಯಾಟರಿ ಸಾಮರ್ಥ್ಯವನ್ನಷ್ಟೇ ತೋರಿಸಲಾಗುತ್ತದೆ. ಆದರೆ, ಮುಂದಿನ ಆಪಲ್‌ ಏರ್‌ಪಾಡ್ಸ್ ‌ವಿಶೇಷವಾದ ಡಿಸ್‌ಪ್ಲೇಯನ್ನೇ ಹೊಂದಿರಲಿವೆ ಎನ್ನಲಾಗಿದೆ. ಹಾಗಿದ್ರೆ, ಈ ಏರ್‌ಪಾಡ್ಸ್ ‌ಗಳು ಯಾವಾಗ ಲಭ್ಯ ಆಗುತ್ತವೆ? ಇವುಗಳ ಮೂಲಕ ವಿಡಿಯೋ ನೋಡಬಹುದಾ? ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಿ.

ಏರ್‌ಪಾಡ್ಸ್‌ ಕೇಸ್‌ನಲ್ಲಿ ಇನ್ಮುಂದೆ ಟಚ್‌ಸ್ಕ್ರೀನ್ ಸೌಲಭ್ಯ?...

ಆಪಲ್‌ ಏರ್‌ಪಾಡ್ಸ್ ‌ನಲ್ಲಿ ಬದಲಾವಣೆ: ಮುಂದಿನ ದಿನಗಳಲ್ಲಿ ಲಾಂಚ್ ಆಗಲಿರುವ ಆಪಲ್‌ ಏರ್‌ಪೋಡ್ಸ್‌ ನ ಚಾರ್ಜಿಂಗ್‌ ಕೇಸ್‌ನಲ್ಲಿ ಹೊಸ ಬದಲಾವಣೆ ಆಗಲಿದೆ. ಅದರಂತೆ ಏರ್‌ಪಾಡ್ಸ್ ನಲ್ಲಿ ಡಿಸ್‌ಪ್ಲೇ ಇರಲಿದ್ದು, ಇದು ಟಚ್‌ ಕಂಟ್ರೋಲ್‌ನೊಂದಿಗೆ ಔಟ್‌ಪುಟ್ ಸ್ಪೀಕರ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗೆಯೇ ಈ ಫೀಚರ್ಸ್‌ ಇರುವ ಏರ್‌ಪಾಡ್ಸ್ ಖಂಡಿತಾ ಲಾಂಚ್‌ ಆಗುತ್ತವೆ ಎಂದೂ ಸಹ ಹೇಳಲಾಗುತ್ತಿದೆ.

ಈ ರೀತಿಯ ಹೊಸ ಫೀಚರ್ಸ್‌ಗಾಗಿ ಡಿವೈಸ್‌ಗಳು, ವಿಧಾನಗಳು ಮತ್ತು ಹೆಡ್‌ಫೋನ್‌ಗಳ ಕೇಸ್‌ನೊಂದಿಗೆ ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ ಇಂಟರಾಕ್ಷನ್‌ಗಳು ಎಂಬ ಹೆಸರಿನೊಂದಿಗೆ ಪೇಟೆಂಟ್ ಪಡೆದುಕೊಳ್ಳಲು ಸೆಪ್ಟೆಂಬರ್ 2021 ರಲ್ಲಿಯೇ ಮನವಿ ಸಲ್ಲಿಸಲಾಗಿದೆ ಎಂದು ಹೇಳಲಾಗಿದ್ದು, ಇದರ ಪ್ರಕಾರ ಸಂಭವನೀಯ ಚಾರ್ಜಿಂಗ್‌ ಕೇಸ್‌ ವಿನ್ಯಾಸದ ಬಗ್ಗೆ ಮಾಹಿತಿ ತಿಳಿದುಬಂದಿದೆ.

ಈ ಮೊದಲು ಲಾಂಚ್‌ ಆಗುತ್ತಿದ್ದ ಚಾರ್ಜಿಂಗ್ ಕೇಸ್‌ ನಂತೆಯೇ ಇದು ಇದ್ದರೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ. ಯಾಕೆಂದರೆ ಮೊದಲೇ ತಿಳಿಸಿದಂತೆ ಇದರಲ್ಲಿ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಇರಲಿದೆ. ಈ ಟಚ್‌ ಸ್ಕ್ರೀನ್‌ ಆಯ್ಕೆ ಇರುವ ಚಾರ್ಜಿಂಗ್‌ ಕೇಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲದೆ ಬಡ್ಸ್‌ಗಳು ಕಾಣಿಸಿಕೊಳ್ಳಲಿವೆ. ಆದರೆ, ಬಡ್ಸ್‌ಗಳು ಹೊಸ ಫೀಚರ್ಸ್‌ಅನ್ನು ಪಡೆದುಕೊಂಡಿರುತ್ತವೆ ಎಂದು ನಂಬಲಾಗಿದೆ.

ಈ ಟಚ್‌ಸ್ಕ್ರೀನ್‌ ಚಾರ್ಜಿಂಗ್‌ ಕೇಸ್‌ ನಿಂದ ಪ್ರಯೋಜನ ಏನು?: ಈ ಟಚ್‌ಸ್ಕ್ರೀನ್‌ನಲ್ಲಿ ನೀವು ಬ್ಯಾಟರಿ ಸಾಮರ್ಥ್ಯ, ಹವಾಮಾನ ವರದಿ ಮತ್ತು ನಕ್ಷೆಗಳಂತಹ ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನಲಾಗಿದ್ದು, ಹೆಡ್ ಮೂವ್ಮೆಂಟ್ ಟ್ರ್ಯಾಕಿಂಗ್ ಆಡಿಯೊ ಫೀಚರ್ಸ್‌ ಅನ್ನು ಸಹ ಹೊಂದಿರಲಿದೆ ಎನ್ನಲಾಗಿದೆ. ಇದಿಷ್ಟೇ ಅಲ್ಲದೆ ಈ ಸಣ್ಣ ಡಿಸ್‌ಪ್ಲೇಯಲ್ಲಿ ಸಿನಿಮಾಗಳನ್ನೂ ಸಹ ನೋಡಬಹುದು ಎಂದು ಹೇಳಲಾಗುತ್ತಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

ಏರ್‌ಪಾಡ್ಸ್‌ ಕೇಸ್‌ನಲ್ಲಿ ಇನ್ಮುಂದೆ ಟಚ್‌ಸ್ಕ್ರೀನ್ ಸೌಲಭ್ಯ?...

ಈ ಹೊಸ ಏರ್‌ಪಾಡ್ಸ್ ಡಿವೈಸ್‌ ಹ್ಯಾಪ್ಟಿಕ್ ಟಚ್ ಕಂಟ್ರೋಲ್‌ನೊಂದಿಗೆ ಪ್ಯಾಕ್‌ ಆಗಿರಲಿದ್ದು, ಈ ಮೂಲಕ ಬಳಕೆದಾರರು ಏರ್‌ಪಾಡ್‌ ಕೇಸ್ ಅನ್ನು ಭದ್ರವಾಗಿ ಹಿಡಿದಿಟ್ಟುಕೊಂಡರೆ, ಇಯರ್‌ಬಡ್‌ಗಳು ಆಟೋಮ್ಯಾಟಿಕ್‌ ಆಗಿ ಎಎನ್‌ಸಿ ಮತ್ತು ಇತರ ಧ್ವನಿ ಮೋಡ್‌ಗಳಿಗೆ ಬದಲಾಗುತ್ತವೆ ಎಂದು ತಿಳಿದುಬಂದಿದೆ. ಹಾಗೆಯೇ ಸಿರಿ ಸೌಲಭ್ಯ ಸಹ ಲಭ್ಯವಾಗಲಿದ್ದು, ಈ ಮೂಲಕ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿದುಬಂದಿದೆ.

ಇನ್ನುಳಿದಂತೆ ಬಳಕೆದಾರರ ನಿಯಂತ್ರಣವನ್ನು ಸಕ್ರಿಯಗೊಳಿಸಲು ಇಂಟರ್ಯಾಕ್ಟಿವ್ ಯೂಸರ್ ಇಂಟರ್‌ಫೇಸ್‌ನೊಂದಿಗೆ ಚಾರ್ಜಿಂಗ್‌ ಕೇಸ್ ಅನ್ನು ಕಾನ್ಫಿಗರ್ ಮಾಡುವ ಮೂಲಕ ಬಳಕೆದಾರರ ವಾಯರ್‌ಲೆಸ್ ಬಡ್ಸ್‌ಗಳ ಮೇಲೆ ನಿಯಂತ್ರಣವನ್ನು ಸುಧಾರಿಸಬಹುದು ಎಂದು ಪೇಟೆಂಟ್ ನಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ಪೇಟೆಂಟ್ ವಿನ್ಯಾಸದಲ್ಲಿ ಮಾತ್ರ ಲಭ್ಯವಿದ್ದು, ಈ ವಿನ್ಯಾಸವನ್ನು ಅನುಮೋದಿಸಿದರೆ ಮಾತ್ರ ಈ ರೀತಿಯ ಸ್ಮಾರ್ಟ್‌ ಚಾರ್ಜಿಂಗ್ ಕೇಸ್‌ ಇರುವ ಇಯರ್‌ಬಡ್ಸ್‌ ಅನ್ನು ನಾವು ನೀವೆಲ್ಲಾ ಬಳಕೆ ಮಾಡಲು ಸಾಧ್ಯವಾಗುತ್ತದೆ.

Best Mobiles in India

English summary
Next generation of AirPods will be have built-in touchscreen display, along with other various features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+