Subscribe to Gizbot

ಆಧಾರ್ ಇದ್ರೆ ಸಾಕು ವಿಮಾನ ಪ್ರಯಾಣ: ಬೇರೆನು ಬೇಕಾಗಿಲ್ಲ..!

Written By:

ಕೇಂದ್ರ ಸರಕಾರವೂ ಆಧಾರ್ ಎಲ್ಲಾ ಸೇವೆಗಳನ್ನು ಪಡೆಯಲು ಕಡ್ಡಾಯ ಮಾಡುತ್ತಿದೆ. ಯಾವುದೇ ಸೇವೆಯನ್ನು ಪಡೆಯುವ ಸಲುವಾಗಿ ಆಧಾರ್ ಬೇಕೆ ಬೇಕು ಎನ್ನುವಂತೆ ಮಾಡುತ್ತಿದೆ. ಇದರಿಂದಾಗಿ ದೇಶದ ಎಲ್ಲಾ ನಾಗರೀಕರು ಆಧಾರ್ ಮಾಡಿಸುವುದು ಅಗತ್ಯವಾಗಿದೆ.

ಆಧಾರ್ ಇದ್ರೆ ಸಾಕು ವಿಮಾನ ಪ್ರಯಾಣ: ಬೇರೆನು ಬೇಕಾಗಿಲ್ಲ..!

ಓದಿರಿ: ಧೈರ್ಯವಾಗಿ ಡೆಬಿಟ್‌ಕಾರ್ಡ್‌ ಬಳಸಿ ಡಿಜಿಟಲ್ ವ್ಯವಹರಿಸಿ: ಯಾವುದೇ ಶುಲ್ಕವಿಲ್ಲ..!

ಪ್ಯಾನ್-ಬ್ಯಾಂಕ್-ಮೊಬೈಲ್ ನಂಬರ್ ನೊಂದಿಗೆ ಆಧಾರ್ ಲಿಂಕ್ ಮಾಡಿ ಎನ್ನುವ ಕರೆಯನ್ನು ಕೇಂದ್ರ ಸರಕಾರವೂ ನೀಡಿದೆ. ಆದರೆ ಇದೆಲ್ಲವೂ ನಿಮಗೆ ಕಷ್ಟವಾಗುತ್ತಿರಬಹುದು ಆದರೆ ಆಧಾರ್ ನಿಂದ ಲಾಭವಾಗಲಿದೆ. ಆಧಾರ್ ನಿಂದ ಶೀಘ್ರವೇ ಲಾಭವಾಗುವ ಸೇವೆಗಳು ನಿಮಗೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಮಾನ ಪ್ರಯಾಣವನ್ನು ಸುಲಭವಾಗಲಿದೆ:

ವಿಮಾನ ಪ್ರಯಾಣವನ್ನು ಸುಲಭವಾಗಲಿದೆ:

ವಿಮಾನ ನಿಲ್ದಾಣಗಳಲ್ಲಿ ಪೇಪರ್‌ ಲೆಸ್‌ ಸೇವೆಯೂ ಲಭ್ಯವಾಗಿದೆ. ಆಧಾರ್‌ ಕಾರ್ಡ್‌ ಆಧಾರಿತ ಪ್ರವೇಶ ಸೌಲಭ್ಯವನ್ನು 2018ರಿಂದ ಜಾರಿಗೊಳಿಸಲು ಕೇಂದ್ರ ಸರಕಾರವೂ ಮುಂದಾಗಿದೆ ಎನ್ನಲಾಗಿದೆ. ಇದರಿಂದಾಗಿ ನೀವು ಯಾವುದೇ ಪೇಪರ್(ವೋಟರ್ ಐಡಿ-ಡಿಎಲ್‌)ಗಳನ್ನು ತೆಗೆದಕೊಂಡು ಹೋಗುವ ಅವಶ್ಯಕತೆ ಇಲ್ಲ ಎನ್ನಲಾಗಿದೆ.

ಶೀಘ್ರವೇ ಇ-ಗೇಟ್‌ಗಳು

ಶೀಘ್ರವೇ ಇ-ಗೇಟ್‌ಗಳು

ಆಧಾರ್ ಮೂಲಕ ವಿಮಾನಯಾನಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ವಿಮಾನ ನಿಲ್ದಾಣಗಳಲ್ಲಿ ಶೀಘ್ರವೇ ಇ-ಗೇಟ್‌ಗಳನ್ನು ತೆರೆಯಲು ಕೇಂದ್ರ ವಿಮಾನಯಾನ ಸಚಿವಾಲಯವು ಚಿಂತನೆಯನ್ನು ನಡೆಸಿದೆ. ಹೊಸ ವರ್ಷದಿಂದ ಈ ಹೊಸ ಸೇವೆಯೂ ಆರಂಭವಾಗಲಿದೆ.

ಬಯೋಮೆಟ್ರಿಕ್ ಎಂಟ್ರಿ:

ಬಯೋಮೆಟ್ರಿಕ್ ಎಂಟ್ರಿ:

ವಿಮಾನ ನಿಲ್ದಾಣವನ್ನು ಬಯೊಮೆಟ್ರಿಕ್‌ ಆಧಾರದಲ್ಲಿ ಪ್ರವೇಶಿಸಬಹುದು. ನೀವು ಆಧಾರ್ ಗೆ ನೀಡುವ ಹೆಬ್ಬೆರಳು, ಬೆರಳಚ್ಚು ಗುರುತಿನ ಮೂಲಕ ಪ್ರವೇಶ ಪಡೆಯಬಹುದು. ದೇಶದ ಪ್ರಮುಖ ಏರ್‌ ಪೋರ್ಟ್‌ಗಳಲ್ಲಿ ಇ-ಗೇಟ್‌ಗಳು ಶೀಘ್ರವೇ ಕಾಣಿಸಿಕೊಳ್ಳಲಿದೆ.

ಪ್ರಮುಖ ಏರ್‌ಫೋರ್ಟ್‌ಗಳಲ್ಲಿ ಲಭ್ಯ:

ಪ್ರಮುಖ ಏರ್‌ಫೋರ್ಟ್‌ಗಳಲ್ಲಿ ಲಭ್ಯ:

ದೇಶದ ಪ್ರಮುಖ ಏರ್‌ಫೋರ್ಟ್‌ಗಳಾದ ದೆಹಲಿ, ಮುಂಬಯಿ, ಹೈದರಾಬಾದ್‌, ಬೆಂಗಳೂರು, ಕೊಚ್ಚಿ‌ಗಳಲ್ಲಿ ಇ-ಗೇಟ್‌ಗಳು ವ್ಯವಸ್ಥೆ ಅಳವಡಿಸಲು ಚಿಂತನೆಯನ್ನು ನಡೆಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airports set to install e-gates for Aadhaar-based travel from 2018. to know more visit kannda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot