Subscribe to Gizbot

ಧೈರ್ಯವಾಗಿ ಡೆಬಿಟ್‌ಕಾರ್ಡ್‌ ಬಳಸಿ ಡಿಜಿಟಲ್ ವ್ಯವಹರಿಸಿ: ಯಾವುದೇ ಶುಲ್ಕವಿಲ್ಲ..!

Written By:

ಕೇಂದ್ರ ಸರ್ಕಾರವು ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಹೊಸದೊಂದು ಸೇವೆಯನ್ನು ನೀಡಲು ಮುಂದಾಗಿದೆ. ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡ್ ಬಳಕೆದಾರರಿಗೆ ಅತೀ ಹೆಚ್ಚಿನ ಸೌಲಭ್ಯವನ್ನು ನೀಡಲು ಮುಂದಾಗಿದೆ ಎನ್ನಲಾಗಿದೆ. ಇದಕ್ಕಾಗಿ ಕಾರ್ಡ್ ಖರೀದಿಯ ಮೇಲೆ ಪಾವತಿ ಶುಲ್ಕವನ್ನು ಸರಕಾರವೇ ಪಾವತಿ ಮಾಡಲಿದೆ.

ಧೈರ್ಯವಾಗಿ ಡೆಬಿಟ್‌ಕಾರ್ಡ್‌ ಬಳಸಿ ಡಿಜಿಟಲ್ ವ್ಯವಹರಿಸಿ: ಯಾವುದೇ ಶುಲ್ಕವಿಲ್ಲ..!

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಇನ್ನು ಮುಂದೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇರಲ್ಲ..! ಬದಲಾಗಲಿದೆ.!

ಆನ್‌ಲೈನ್‌ ವ್ಯವಹಾರಗಳಿಗೆ ಡೆಬಿಟ್‌ ಕಾರ್ಡ್‌ ಬಳಸಿ ರೂ.2,000ವರೆಗಿನ ಹಣವನ್ನು ಪಾವತಿಸುವ ಸಂದರ್ಭದಲ್ಲಿ ಬ್ಯಾಂಕ್‌ಗಳು ವಿಧಿಸುವ MDR ಶುಲ್ಕವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಡಿಜಿಟಲ್ ವ್ಯವಹಾರವು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಗದು ರಹಿತ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ:

ನಗದು ರಹಿತ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ:

ನಗದು ರಹಿತ ವಹಿವಾಟು ಅಳವಡಿಸಿಕೊಳ್ಳಲು ಉತ್ತೇಜನ ನೀಡಲು ಮತ್ತು ನಗದು ಬಳಕೆ ಪ್ರಮಾಣವನ್ನು ಇಳಿಕೆ ಮಾಡಲು ಈ ಕ್ರಮಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕಾಗಿ ರೂ. 2,000 ವರೆಗಿನ ಎಲ್ಲ ನಗದು ರಹಿತ ವಹಿವಾಟು ನಡೆಸಿದ ಸಂದರ್ಭದಲ್ಲಿ ಗ್ರಾಹಕರು ಹಾಗೂ ವರ್ತಕರ ಮೇಲೆ ಹೆಚ್ಚಿನ ಹೊರೆ ಬೀಳುವುದಿಲ್ಲ ಎನ್ನಲಾಗಿದೆ.

ಆಧಾರ್ ಪಾವತಿ ಮಾಡುವವರಿಗೆ:

ಆಧಾರ್ ಪಾವತಿ ಮಾಡುವವರಿಗೆ:

ಕೇಂದ್ರ ಸರ್ಕಾರವು ಡೆಬಿಟ್‌ ಕಾರ್ಡ್‌, ಭೀಮ್‌ ಆಪ್ ಅಥವಾ ಆಧಾರ್‌ ಆಧರಿಸಿದ ಪಾವತಿ ವ್ಯವಸ್ಥೆ ಮೂಲಕ ಹಣ ಪಾವತಿಸಿದ ಸಂದರ್ಭದಲ್ಲಿ ಬ್ಯಾಂಕ್‌ಗಳು ವಿಧಿಸುವ ಶುಲ್ಕವನ್ನು ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಗೆ ಮರು ಪಾವತಿಸಲಿದೆ.

ಹಣದ ಬಳಕೆ ಮತ್ತಷ್ಟು ಕಡಿಮೆಯಾಗಲಿದೆ:

ಹಣದ ಬಳಕೆ ಮತ್ತಷ್ಟು ಕಡಿಮೆಯಾಗಲಿದೆ:

ಈಗಾಗಲೇ ಡಿಜಿಟಲ್ ವ್ಯವಹಾರವು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದಕ್ಕೆ ಇನಷ್ಟು ಉತ್ತೇಜವನ್ನು ನೀಡುವ ಕಾರ್ಯಕ್ಕೆ ಕೇಂದ್ರ ಸರಕಾರವು ಮುಂದಾಗಿದೆ. ಇದರಿಂದಾಗಿ ಭಾರತ ಕ್ಯಾಷ್ ಲೈಸ್ ಆರ್ಥಿಕತೆಗೆ ಕಡೆಗೆ ವೇಗವಾಗಿ ಹೆಜ್ಜೆ ಹಾಕಲು ಸಾಧ್ಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
No MDR charges on debit card payments up to Rs 2000. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot