ಅಸಲಿ ಆಟ ಈಗ ಶುರು... ಏರ್‌ಟೆಲ್ ಸಿಮ್ ಹೊಂದಿರುವ ಎಲ್ಲರಿಗೂ ಗುಡ್ ನ್ಯೂಸ್!
ಟೆಲಿಕಾಂ ಸಂಸ್ಥೆಗಳಲ್ಲಿ ಪ್ರಮುಖ ಎನಿಸಿರುವ ಏರ್‌ಟೆಲ್ (Airtel) ಈಗಾಗಲೇ ಸಾಕಷ್ಟು ವಿಶೇಷ ಪ್ಲ್ಯಾನ್‌ಗಳ ಮೂಲಕ ಚಂದಾದಾರನ್ನು ಸೆಳೆದಿದೆ. ಈ ನಡುವೆ ನೀವು ಏರ್‌ಟೆಲ್ ಸಿಮ್ ಕಾರ್ಡ್ ಅನ್ನು ಬಳಸುತ್ತಿದ್ದರೆ ಸಂತಸ ಪಡಲೇ ಬೇಕು. ಏರ್‌ಟೆಲ್ ಸಿಮ್ ಬಳಕೆ ಮಾಡದಿದ್ರೆ ಈಗಲೇ ಖರೀದಿ ಮಾಡುವಂತೆ ಮಾಡಲಿದೆ ಈ ಸುದ್ದಿ.
ಹೌದು, ಭಾರತದಾದ್ಯಂತ ಏರ್‌ಟೆಲ್ ತನ್ನ 22 ಟೆಲಿಕಾಂ ವಲಯಗಳಲ್ಲಿನ ತನ್ನ ಎಲ್ಲಾ ಗ್ರಾಹಕರಿಗೆ ಒಳ್ಳೆಯ ಸುದ್ದಿಯನ್ನು ನೀಡಿದೆ. ಅದೇನೆಂದರೆ ಭಾರತೀಯ ದೂರಸಂಪರ್ಕ ಇಲಾಖೆ (DoT) ನಿಗದಿಪಡಿಸಿದ ಮಾನದಂಡಗಳ ಪ್ರಕಾರ 5G ಯ ಕನಿಷ್ಠ ರೋಲ್-ಔಟ್ ಬಾಧ್ಯತೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಏರ್‌ಟೆಲ್ ತಿಳಿಸಿದೆ. ಹಾಗಿದ್ರೆ ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಏರ್‌ಟೆಲ್ ಸಿಮ್ ಇರುವವರಿಗೆ ಗುಡ್ ನ್ಯೂಸ್: ಏರ್‌ಟೆಲ್ ಇದೀಗ ಭಾರತದ ಎಲ್ಲಾ 22 ಟೆಲಿಕಾಂ ಸರ್ಕಲ್‌ಗಳಲ್ಲಿ 26 GHz ಸ್ಪೆಕ್ಟ್ರಮ್‌ನಲ್ಲಿ 5G ಸೇವೆಗಳನ್ನು ಪರಿಚಯಿಸಿದೆ. ಈ ಮೂಲಕ ಏರ್‌ಟೆಲ್‌ನ 5G ಸೇವೆಗಳು ಈಗ ದೇಶಾದ್ಯಂತ 5000 ನಗರಗಳು ಮತ್ತು ಪಟ್ಟಣಗಳಲ್ಲಿ ಲಭ್ಯವಿದೆ. ಏರ್‌ಟೆಲ್ ತನ್ನ 5G ನೆಟ್‌ವರ್ಕ್‌ನಲ್ಲಿ ರಾಷ್ಟ್ರೀಯವಾಗಿ 10 ಮಿಲಿಯನ್ ಅನನ್ಯ ಗ್ರಾಹಕರನ್ನು ಹೊಂದಿದ್ದು, 5G ನೆಟ್‌ವರ್ಕ್ ಸೆಪ್ಟೆಂಬರ್ 2023 ರ ವೇಳೆಗೆ ಪ್ರತಿ ನಗರ ಮತ್ತು ಪ್ರಮುಖ ಗ್ರಾಮೀಣ ಪ್ರದೇಶಗಳನ್ನು ತಲುಪಲಿದೆ ಎಂದು ಉಲ್ಲೇಖಿಸಿದೆ.
ಈ ನಡುವೆ ಏರ್‌ಟೆಲ್ ಈಗಾಗಲೇ ತನ್ನ ಗ್ರಾಹಕರಿಗೆ ಅನಿಯಮಿತ 5G ಡೇಟಾವನ್ನು ನೀಡುತ್ತಾ ಬರುತ್ತಿರುವುದು ಮತ್ತೊಂದು ಸಂತಸ ವಿಷಯವಾಗಿದೆ. ಇದು ಏರ್‌ಟೆಲ್ ಗ್ರಾಹಕರಿಗೆ 5G ನೆಟ್‌ವರ್ಕ್ ಅನ್ನು ಸರಳ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದೆ. ಈ ನಡುವೆ ನಿಮಗೆ ಒಂದು ಪ್ರಶ್ನೆ ಮೂಡಿರಬಹುದು. ಹಾಗಿದ್ರೆ, ಏರ್‌ಟೆಲ್ ಜಿಯೋವನ್ನು ಹಿಂದಿಕ್ಕಿದೆಯಾ ಎಂದು. ಆದರೆ, ಖಂಡಿತಾ ಇಲ್ಲ ರಿಲಯನ್ಸ್ ಜಿಯೋ ಈ ಸಾಧನೆಯನ್ನು ಆಗಸ್ಟ್ 11 ರಲ್ಲೇ ಮಾಡಿ ಮುಗಿಸಿದೆ.
ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ಎನಿಸಿಕೊಂಡಿರುವ ಜಿಯೋ ಆಗಸ್ಟ್ 11 ರೊಳಗೆ ತನ್ನ 22 ಪರವಾನಗಿ ಪಡೆದ ಸೇವಾ ಕ್ಷೇತ್ರಗಳಲ್ಲಿ (LSA) ಕನಿಷ್ಠ 5G ರೋಲ್-ಔಟ್ ಅನ್ನು ಪೂರ್ಣಗೊಳಿಸಿದೆ. ಜಿಯೋ ಭಾರತೀಯ ಟೆಲಿಕಾಂ ಇಲಾಖೆಯು ನಿಗದಿಪಡಿಸಿದ ಮಾನದಂಡಗಳ ಪ್ರಕಾರ 26GHz mmWave ಸ್ಪೆಕ್ಟ್ರಮ್ ಅನ್ನು ಬಳಸಿಕೊಂಡು ಎಲ್ಲಾ 22 ಟೆಲಿಕಾಂ ವಲಯಗಳಲ್ಲಿ 5G ಆಧಾರಿತ ಸಂಪರ್ಕವನ್ನು ಹೊರತಂದಿದೆ ಎಂದು ಜಿಯೋ ತನ್ನ ಬಳಕೆದಾರರಿಗೆ ಸಂತಸ ನೀಡಿತ್ತು.
ಏರ್‌ಟೆಲ್‌ನ ಅನಿಯಮಿತ 5G ಪ್ರಯೋಜನ ನೀಡುವ ಪ್ರವೇಶ ಮಟ್ಟದ ಪ್ರಿಪೇಯ್ಡ್ ಪ್ಲ್ಯಾನ್: ಈ ನಡುವೆ ಏರ್‌ಟೆಲ್ ಗ್ರಾಹಕರು ಹಲವಾರು ರೀಚಾರ್ಜ್ ಪ್ಲ್ಯಾನ್ ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ 239 ಪ್ಲ್ಯಾನ್ ಪ್ರವೇಶ ಮಟ್ಟದ ಪ್ಲ್ಯಾನ್ ಆಗಿದೆ. ಇದು 24 ದಿನಗಳ ಮಾನ್ಯತೆ ಹೊಂದಿದ್ದು, ಬಳಕೆದಾರರಿಗೆ ಅನಿಯಮಿಯ ಕರೆ ಸೌಲಭ್ಯ, ನಿತ್ಯವೂ 100 ಎಸ್‌ಎಮ್ಎಸ್ ಹಾಗೂ ಅನಿಯಮಿತ 5G ಡೇಟಾ ಆಯ್ಕೆ ನೀಡುತ್ತದೆ.

ಇದರೊಂದಿಗೆ ಮತ್ತೊಂದು ರೀಚಾರ್ಜ್ ಪ್ಲ್ಯಾನ್ ಆಗಿರುವ 265 ರೂ.ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು 28 ದಿನಗಳ ಮಾನ್ಯತೆ ಪಡೆಯಬಹುದಾಗಿದ್ದು, ಇದು ಅನಿಯಮಿತ ಸ್ಥಳೀಯ, STD ಮತ್ತು ರೋಮಿಂಗ್ ಕರೆ ಸೌಲಭ್ಯ ನೀಡಲಿದೆ. ಜೊತೆಗೆ 100 ದೈನಂದಿನ ಎಸ್‌ಎಮ್‌ಎಸ್ ಮತ್ತು 1GB ದೈನಂದಿನ ಡೇಟಾ ಆಯ್ಕೆ ನೀಡಲಾಗಿದೆ. ಈ ದೈನಂದಿನ ಕೋಟಾವನ್ನು ಬಳಸಿದ ನಂತರ ಗ್ರಾಹಕರು 64 Kbps ವೇಗದಲ್ಲಿ ಅನಿಯಮಿತ ಡೇಟಾವನ್ನು ಆನಂದಿಸಬಹುದು.


Click it and Unblock the Notifications








