Home
ಸುದ್ದಿಜಾಲ

ಮೈಸೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಏರ್‌ಟೆಲ್‌ 5G ಲಭ್ಯ! 500 ನಗರಗಳಿಗೆ ವಿಸ್ತರಿಸಿದ ಸೇವೆ!

ಏರ್‌ಟೆಲ್‌ ತನ್ನ 5G ಸೇವೆಯನ್ನು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಎಲ್ಲಾ ಕಡೆ ವಿಸ್ತರಣೆ ಮಾಡಿಕೊಂಡು ಬರುತ್ತಿದೆ. ಹಾಗೆಯೇ ಜಿಯೋ ಮತ್ತು ಏರ್‌ಟೆಲ್ ದೇಶದಲ್ಲಿ 5G ರೋಲ್‌ಔಟ್‌ನಲ್ಲಿ ಮುಂಚೂಣಿಯಲ್ಲಿದ್ದು, ಈ ಎರಡೂ ಟೆಲಿಕಾಂ ಸಂಸ್ಥೆಗಳೂ ಸಹ ಭಾರತದ ನಗರಗಳಿಗೆ ವೇಗದ ಇಂಟರ್ನೆಟ್ ಸೇವೆಯನ್ನು ನೀಡಲು ಮುಂದಾಗಿವೆ.

ಹೌದು, ಇದೀಗ ಏರ್‌ಟೆಲ್ ತನ್ನ 5G ಸೇವೆಯಾದ ಏರ್‌ಟೆಲ್ 5G ಪ್ಲಸ್ ಅನ್ನು ದೇಶದ ಒಟ್ಟು 500 ನಗರಗಳಿಗೆ ವಿಸ್ತರಿಸಿದಂತೆ ಆಗಿದೆ. ಯಾಕೆಂದರೆ ಇದೀಗ ಏರ್‌ಟೆಲ್‌ ಹೊಸದಾಗಿ 235 ಹೊಸ ನಗರಗಳಿಗೆ 5G ಸೇವೆಯನ್ನು ವಿಸ್ತರಣೆ ಮಾಡುವ ಮೂಲಕ ತನ್ನದೇ ಆದ ದಾಖಲೆ ಬರೆದಿದೆ. ಹಾಗಿದ್ರೆ, ಯಾವೆಲ್ಲಾ ನಗರಗಳಿಗೆ ಏರ್‌ಟೆಲ್ 5G ಪ್ಲಸ್ ಒದಗಿಸಲಾಗಿದೆ?, ಕರ್ನಾಟಕದ ಯಾವ ನಗರಗಳು ಈ ಸೇವೆಯನ್ನು ಪಡೆದುಕೊಂಡಿವೆ ಎಂಬ ಮಾಹಿತಿಗಾಗಿ ಈ ಲೇಖನ ಓದಿ.

ಮೈಸೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಏರ್‌ಟೆಲ್‌ 5G ಲಭ್ಯ!

ಒಟ್ಟಾರೆ 500 ನಗರಗಳಲ್ಲಿ ಏರ್‌ಟೆಲ್ 5G ಪ್ಲಸ್: ಏರ್‌ಟೆಲ್‌ ಇದೀಗ ಒಟ್ಟಾರೆ ದೇಶದ 500 ನಗರಗಳ ಗ್ರಾಹಕರಿಗೆ ಹೆಚ್ಚಿನ ವೇಗದ 5G ಸೇವೆಯನ್ನು ಒದಗಿಸಿದ್ದು, ಈ ಮೂಲಕ ಗ್ರಾಹಕರು
5G ಸೇವೆಯ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಗಮನಿಸಬೇಕಾದ ವಿಷಯ ಏನೆಂದರೆ ಏರ್‌ಟೆಲ್‌ ಪ್ರತಿದಿನವೂ ಸಹ 30 ರಿಂದ 40 ನಗರಗಳನ್ನು 5G ವ್ಯಾಪ್ತಿಗೆ ಸೇರಿಸುತ್ತಿರುವುದು ಮತ್ತೊಂದು ವಿಶೇಷ.

ಕರ್ನಾಟಕದ ಯಾವೆಲ್ಲಾ ನಗರಗಳಲ್ಲಿ 5G? : ಭಾರತದ ಹಲವು ರಾಜ್ಯಗಳಲ್ಲಿ ಈ 5G ಸೇವೆ ಲಭ್ಯವಿದ್ದು, ಮೊನ್ನೆಯಷ್ಟೇ ಜಿಯೋ ಕೋಲಾರದ ರಾಬರ್ಟ್‌ಸನ್‌ ಪ್ರದೇಶ ಸೇರಿದಂತೆ ವಿವಿಧ ಕಡೆ ತನ್ನ 5G ಸೇವೆಯನ್ನು ವಿಸ್ತರಣೆ ಮಾಡಿಕೊಂಡಿದೆ. ಇದರ ನಡುವೆಯೇ ಈಗ ಏರ್‌ಟೆಲ್‌ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಮಂಗಳೂರು, ಮೈಸೂರು, ಬೆಂಗಳೂರು, ಗುಲ್ಬರ್ಗ, ಹಾಸನ, ರಾಯಚೂರಿಗೆ ಈ 5G ಸೇವೆ ವಿಸ್ತರಣೆ ಮಾಡಿದೆ.

ಮೈಸೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಏರ್‌ಟೆಲ್‌ 5G ಲಭ್ಯ!

ಇನ್ನುಳಿದಂತೆ ಒಟ್ಟು 24 ರಾಜ್ಯದ 235 ಹೊಸ ನಗರಗಳಿಗೆ ಈ ಸೇವೆ ವಿಸ್ತರಣೆ ಮಾಡಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಆಂಧ್ರಪ್ರದೇಶದ ಕಡಪ, ಒಂಗೋಲ್, ಏಲೂರು, ವಿಜಯನಗರ, ನೆಲ್ಲೂರು, ಅನಂತಪುರ, ವೈಜಾಗ್, ವಿಜಯವಾಡ, ರಾಜಮಂಡ್ರಿ, ಕಾಕಿನಾಡ, ಗುಂಟೂರು, ಕರ್ನೂಲು, ತಿರುಪತಿ, ಅನಕಪೆಲ್ಲೆ, ತಾಡೆಪಲ್ಲಿಗುಡೆಂ, ಆದೋನಿ, ಚಿಲಕಲೂರಿಪೇಟ, ಕದಿರಿ, ಅಚಿತಪುರಂ, ಗದ್ವಾಲ್, ತಡಿಪತ್ತುಕೂರಿಗೆ ಈ ಸೇವೆ ಲಭ್ಯವಾಗಿದೆ.

ಅಸ್ಸೊಂನಲ್ಲಿ ಜೋರ್ಹತ್, ತೇಜ್‌ಪುರ, ಗುವಾಹಟಿ, ಸಿಲ್ಚಾರ್, ದಿಬ್ರುಗಢ, ತಿನ್ಸುಕಿಯಾ, ಬೊಂಗೈಗಾಂವ್, ಹೌಲಿ, ಬದರ್‌ಪುರ್, ಬೊಕಾಖಾಟ್, ಬರ್ಪೇಟಾ ರಸ್ತೆ, ಬಿಸ್ವನಾಥ್ ಚರಿಯಾಲಿ, ಗೋಲಾಘಾಟ್, ದಿಫು ಹಾಗೂ ಛತ್ತೀಸ್‌ಗದಲ್ಲಿ ಬಿಲಾಸ್ಪುರ್, ರಾಯ್ಪುರ್, ದುರ್ಗ್-ಭಿಲಾಯ್, ಕೊರ್ಬಾ, ರಾಯ್ಗಢ್, ರಾಜನಂದಗಾಂವ್‌ ನಗರಗಳಿಗೆ ಈ ಸೇವೆ ಒದಗಿಸಲಾಗಿದೆ.

ಮೈಸೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಏರ್‌ಟೆಲ್‌ 5G ಲಭ್ಯ!

ಜೊತೆಗೆ ಬಿಹಾರದಲ್ಲಿ ಬರೋಬ್ಬರಿ 40 ಕ್ಕೂ ಹೆಚ್ಚು ನಗರಗಳಿಗೆ ಈ ಸೇವೆ ಲಭ್ಯವಾಗುತ್ತಿದ್ದು, ಅದರಲ್ಲಿ ಫತ್ವಾ, ಅರಾರಿಯಾ, ಜೆಹಾನಾಬಾದ್, ಫೋರ್ಬ್ಸ್‌ಗಂಜ್, ಮೋತಿಹಾರಿ, ಸಿವಾನ್, ಸಹರ್ಸಾ, ಮಾಧೆಪುರ, ಲಖಿಸಾರೈ, ಸುಲ್ತಂಗಂಜ್, ಜಮುಯಿ, ಗಯಾ, ಖಗರಿಯಾ, ಬೆಟ್ಟಿಯಾ, ಪಾಟ್ನಾ, ಮುಜಾಫರ್‌ಪುರ್, ಭಾಗಲ್‌ಪುರ್, ಬೋಧ್ ಗಯಾ, ಬೇಗುಸರಾಯ್, ಕತಿಹಾರ್, ಕಿಶನ್‌ಗಂಜ್, ಬಿಹಾರ್ನಿಯಾ ಸೇರಿದಂತೆ ಇನ್ನಿತರೆ ನಗರಗಳಲ್ಲಿ ಈ ಸೇವೆ ಲಭ್ಯವಾಗುತ್ತಿದೆ.

ಇನ್ನುಳಿದಂತೆ ಛತ್ತೀಸ್‌ಗಢ, ಚಂಡೀಗಢ ಟ್ರೈ-ಸಿಟಿ, ದೆಹಲಿ, ಗುಜರಾತ್, ಹರಿಯಾಣ,ಹಿಮಾಚಲ ಪ್ರದೇಶ, ಜಾರ್ಖಂಡ್ , ಜಮ್ಮು ಮತ್ತು ಕಾಶ್ಮೀರ, ಕೇರಳ, ಮಧ್ಯಪ್ರದೇಶ,ಮಹಾರಾಷ್ಟ್ರ ಹಾಗೂ ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ,ಉತ್ತರ ಪ್ರದೇಶ , ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯದ ಪ್ರಮುಖ ಪ್ರದೇಶಗಳಿಗೆ ಈ ಸೇವೆ ನೀಡಲಾಗಿದೆ.

Best Mobiles in India

English summary
Now Airtel has extended its 5G service Airtel 5G Plus to a total of 500 cities in the country. Especially Mangalore, Mysore, Bangalore, Gulbarga, Hassan, Raichur in Karnataka have been given 5G Plus service.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+