ಏರ್‌ಟೆಲ್ ಮತ್ತು ಜಿಯೋ ಟೆಲಿಕಾಂಗಳ 129ರೂ. ಪ್ಲ್ಯಾನ್‌ಗಳಲ್ಲಿ ಯಾವುದು ಉತ್ತಮ?
ದೇಶಿಯ ಟೆಲಿಕಾಂ ವಲಯದಲ್ಲಿ ಇದೀಗ ಸಾಕಷ್ಟು ಅಪ್‌ಡೇಟ್‌ಗಳು ನಡೆದಿವೆ. ಪ್ರಮುಖ ಟೆಲಿಕಾಂ ಸಂಸ್ಥೆಗಳು ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ರಿಲಾಯನ್ಸ್ ಜಿಯೋ ಹಾಗೂ ಏರ್‌ಟೆಲ್ ಸಂಸ್ಥೆಗಳು ಹೆಚ್ಚು ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಸಂಸ್ಥೆಗಳ ಅಗ್ಗದ ದರದ ಪ್ರೀಪೇಯ್ಡ್ ಪ್ಲ್ಯಾನ್‌ಗಳು ಆಕರ್ಷಕ ಅನಿಸುತ್ತದೆ.

ಹೌದು, ಜಿಯೋ ಹಾಗೂ ಏರ್‌ಟೆಲ್ ಕೆಲವು ಪ್ರೀಪೇಯ್ಡ್ ಯೋಜನೆಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆದಿವೆ. ಮುಖ್ಯವಾಗಿ ಆರಂಭಿಕ 129ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಯು ಡೇಟಾ ಸೌಲಭ್ಯ, ವಾಯಿಸ್ ಕರೆ, ಎಸ್‌ಎಮ್‌ಎಸ್ ಹಾಗೂ ಅಲ್ಪಾವಧಿಯ ವ್ಯಾಲಿಡಿಟಿ ಅವಧಿಯಂತಹ ಪ್ರಯೋಜನಗಳನ್ನು ಹೊಂದಿದ್ದು, ಬಹುತೇಕ ಬಳಕೆದಾರರನ್ನು ಆಕರ್ಷಿಸಿದೆ. ಹಾಗಾದರೇ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂನ 129ರೂ. ಯೋಜನೆಯಲ್ಲಿ ರೀಚಾರ್ಜ್‌ಗೆ ಯಾವುದು ಉತ್ತಮ?..ಪ್ರಯೋಜನಗಳೆನು?..ಮುಂದೆ ಓದಿರಿ.

ಏರ್‌ಟೆಲ್ 129ರೂ. ಪ್ಲ್ಯಾನ್ ಪ್ರಯೋಜನ
ಏರ್‌ಟೆಲ್ ಟೆಲಿಕಾಂನ 129ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ 1GB ಡೇಟಾ, 300 ಎಸ್‌ಎಂಎಸ್ ಮತ್ತು ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಲಭ್ಯವಾಗಲಿದೆ.

ಜಿಯೋ 129ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನ
ಜಿಯೋ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ 1000 ನಿಮಿಷಗಳ ಕರೆ ಮಿತಿಯನ್ನು ಪಡೆದಿರುವ ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ರೀಚಾರ್ಜ್ ಮಾಡಿಸಲು ಯಾವುದು ಉತ್ತಮ?
129ರೂ. ಪ್ರೀಪೇಯ್ಡ್ ಯೋಜನೆಯಲ್ಲಿ ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳು ಆಕರ್ಷಕ ಪ್ರಯೋಜನ ನೀಡಿದ್ದು, 1GB ಡೇಟಾ ಆಫರ್ ಹೊಂದಿವೆ. ಡೇಟಾ ಜೊತೆಗೆ ಎಸ್‌ಎಮ್‌ಎಸ್ ಹಾಗೂ ವಾಯಿಸ್ ಕರೆಯ ಸೌಲಭ್ಯ ಒದಗಿಸಿವೆ. ವ್ಯಾಲಿಡಿಟಿ ನೋಡುವುದಾದರೇ ಜಿಯೋ 28 ದಿನ ನೀಡಿದೆ. ಆದರೆ ಏರ್‌ಟೆಲ್ 24 ದಿನ ವ್ಯಾಲಿಡಿಟಿ ಹೊಂದಿದೆ.


Click it and Unblock the Notifications








