Home
ಸುದ್ದಿಜಾಲ

ಏರ್‌ಟೆಲ್‌ ಮತ್ತು ಜಿಯೋ 249ರೂ. ಪ್ಲ್ಯಾನ್: ಯಾವ ಪ್ಲ್ಯಾನ್‌ ರೀಚಾರ್ಜ್‌ಗೆ ಬೆಸ್ಟ್?

ಭಾರತೀಯ ಟೆಲಿಕಾಂ ವಲಯದಲ್ಲಿ ಹಂತ ಹಂತವಾಗಿ ಈಗಾಗಲೇ ಮಹತ್ತರವಾದ ಅಪ್‌ಡೇಟ್‌ಗಳು ನಡೆದಿವೆ. ಖಾಸಗಿ ಟೆಲಿಕಾಂ ಸಂಸ್ಥೆಗಳು ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ರಿಲಾಯನ್ಸ್‌ ಜಿಯೋ ಹಾಗೂ ಏರ್‌ಟೆಲ್ ಸಂಸ್ಥೆಗಳು ಹೆಚ್ಚು ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಸಂಸ್ಥೆಗಳ ಬಜೆಟ್‌ ದರದ. ಡೇಟಾ ಸೌಲಭ್ಯ ಪಡೆದಿರುವ ಅಲ್ಪಾವಧಿಯ ಪ್ಲ್ಯಾನ್‌ಗಳು ಆಕರ್ಷಕ ಅನಿಸುತ್ತದೆ.

ಪ್ರೀಪೇಯ್ಡ್‌

ಹೌದು, ಜಿಯೋ ಹಾಗೂ ಏರ್‌ಟೆಲ್ ಕೆಲವು ಪ್ರೀಪೇಯ್ಡ್‌ ಯೋಜನೆಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆದಿವೆ. ಮುಖ್ಯವಾಗಿ 249ರೂ. ಬೆಲೆಯ ಪ್ರೀಪೇಯ್ಡ್‌ ಯೋಜನೆಯು ಪ್ರತಿದಿನ ಡೇಟಾ ಸೌಲಭ್ಯ, ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಹಾಗೂ ಅಧಿಕ ವ್ಯಾಲಿಡಿಟಿ ಅವಧಿಯಂತಹ ಪ್ರಯೋಜನಗಳನ್ನು ಹೊಂದಿದ್ದು, ಬಹುತೇಕ ಬಳಕೆದಾರರನ್ನು ಆಕರ್ಷಿಸಿದೆ. ಹಾಗಾದರೇ ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂನ 249ರೂ. ಯೋಜನೆಯಲ್ಲಿ ಯಾವುದು ಬೆಸ್ಟ್‌?..ಪ್ರಯೋಜನಗಳೆನು?..ಮುಂದೆ ಓದಿರಿ.

ರಿಲಾಯನ್ಸ್‌ ಜಿಯೋ 249ರೂ. ಪ್ರೀಪೇಯ್ಡ್‌ ಪ್ಲಾನ್

ರಿಲಾಯನ್ಸ್‌ ಜಿಯೋ 249ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್‌ ಸಹ ಲಭ್ಯ.

ಭಾರ್ತಿ ಏರ್‌ಟೆಲ್‌ 249ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಭಾರ್ತಿ ಏರ್‌ಟೆಲ್‌ 249ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ನ 249ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್‌ ಕರೆ ಮಾಡುವ ಪ್ರಯೋಜನವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಸಹ ಸಿಗಲಿದೆ.

ಪ್ರಯೋಜನಗಳಲ್ಲಿ ಭಿನ್ನತೆ

ಪ್ರಯೋಜನಗಳಲ್ಲಿ ಭಿನ್ನತೆ

ಜಿಯೋ ಹಾಗೂ ಏರ್‌ಟೆಲ್‌ ಟೆಲಿಕಾಂಗಳ ಬಹುತೇಕ ಯೋಜನೆಗಳಲ್ಲಿ ಸಾಮ್ಯತೆ ಕಂಡು ಬಂದರೂ, ಕೆಲವು ಭಿನ್ನ ಪ್ರಯೋಜನಗಳು ಕಾಣಿಸುತ್ತವೆ. ಸದ್ಯ 249ರೂ. ಬಜೆಟ್‌ ಬೆಲೆಯ ರೀಚಾರ್ಜ್‌ ಯೋಜನೆಯಲ್ಲಿ ಎರಡು ಟೆಲಿಕಾಂಗಳು ಡೈಲಿ ಡೇಟಾ ಪ್ರಯೋಜನ ಹೊಂದಿವೆ ಆದರೆ ಭಿನ್ನತೆಗಳಿವೆ. ಏರ್‌ಟೆಲ್‌ ಪ್ರತಿದಿನ 1.5GB ಡೇಟಾ ಪ್ರಯೋಜನ ನೀಡಿದರೇ, ಜಿಯೋದ 249ರೂ. ಪ್ಲ್ಯಾನ್ ಪ್ರತಿದಿನ 2GB ಡೇಟಾ ಸೌಲಭ್ಯ ನೀಡಿದೆ.

ರೀಚಾರ್ಜ್‌ ಮಾಡಿಸಲು ಯಾವುದು ಉತ್ತಮ ಆಯ್ಕೆ?

ರೀಚಾರ್ಜ್‌ ಮಾಡಿಸಲು ಯಾವುದು ಉತ್ತಮ ಆಯ್ಕೆ?

249ರೂ. ಪ್ರೀಪೇಯ್ಡ್‌ ಯೋಜನೆಯಲ್ಲಿ ಜಿಯೋ ಹಾಗೂ ಏರ್‌ಟೆಲ್‌ ಟೆಲಿಕಾಂಗಳು ಆಕರ್ಷಕ ಪ್ರಯೋಜನ ನೀಡಿದ್ದು, ಪ್ರತಿದಿನ ಡೇಟಾ ಆಫರ್ ಹೊಂದಿವೆ. ಡೇಟಾ ಜೊತೆಗೆ ಈ ಯೋಜನೆಗಳು ಅಲ್ಪಾವಧಿಯ ವ್ಯಾಲಿಡಿಟಿ ಹೊಂದಿವೆ. ಏರ್‌ಟೆಲ್‌ ಮತ್ತು ಜಿಯೋ ಎರಡು 28 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಹೆಚ್ಚುವರಿ ಸೌಲಭ್ಯ ಸಹ ಪಡೆದಿವೆ. ಈ ಟೆಲಿಕಾಂಗಳ ಇತರೆ ಕೆಲವು ಅಗ್ಗದ ಯೋಜನೆಗಳ ಬಗ್ಗೆ ಮುಂದೆ ನೋಡಿರಿ.

ಜಿಯೋದ 149ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ 149ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ 149ರೂ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 1GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು ಹಾಗೂ ಜಿಯೋ ಸೇರಿದಂತೆ ಇತರೆ ನೆಟ್‌ವರ್ಕ್‌ಗಳಿಗೆ ಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಿಗಲಿದೆ.

ಏರ್‌ಟೆಲ್‌ 298ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 298ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ನ ಈ ಯೋಜನೆಯು ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಜೊತೆಗೆ ಅನಿಯಮಿತ ಕರೆ ಮಾಡುವ ಪ್ರಯೋಜನವಿದೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸೇರಿಸಲಾಗಿದೆ. ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಚಂದಾದಾರಿಕೆ ಮತ್ತು ಉಚಿತ ಆನ್‌ಲೈನ್ ಕೋರ್ಸ್‌ಗಳಿಗೆ ಪ್ರವೇಶ ಹೊಂದಿರುವ ವಿಂಕ್ ಸಂಗೀತ ಮತ್ತು ಫಾಸ್ಟ್ಯಾಗ್‌ನಲ್ಲಿ ರಿಯಾಯಿತಿ ಸಹ ಲಭ್ಯ.

ಜಿಯೋದ 199ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ 199ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ ಟೆಲಿಕಾಂನ 199ರೂ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 42GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಜಿಯೋ ಟು ಜಿಯೋ ಹಾಗೂ ಜಿಯೋ ದಿಂದ ಇತರೆ ಟೆಲಿಕಾಂ ನೆಟವರ್ಕ ವಾಯಿಸ್‌ ಕರೆಗಳು ಅನಿಯಮಿತ ಉಚಿತವಾಗಿವೆ. ಜಿಯೋ ಆಪ್ಸ್‌ ಸೇವೆ ಲಭ್ಯ.

Best Mobiles in India

English summary
Airtel And Jio Rs 249 Prepaid Plans: Compared Which One Better To Recharge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+