ಏರ್‌ಟೆಲ್ 349ರೂ. ಪ್ರೀಪೇಯ್ಡ್ ಪ್ಲ್ಯಾನ್ ಜಿಯೋಗಿಂತ ಉತ್ತಮವೇ?
ದೇಶದ ಟೆಲಿಕಾಂ ವಲಯದಲ್ಲಿ ಉತ್ತಮ ಸೇವೆ ನೀಡುವ ಭರದಲ್ಲಿ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಮುನ್ನುಗ್ಗುತ್ತಿವೆ. ಏರ್‌ಟೆಲ್ ಹಾಗೂ ಜಿಯೋದ ಈ ಎರಡೂ ಟೆಲಿಕಾಂಗಳು ಅನೇಕ ಪ್ರಿಪೇಯ್ಡ್ ಯೋಜನೆಗಳ ಮೂಲಕ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡಿವೆ. ಅವುಗಳಲ್ಲಿ ಕೆಲವು ಯೋಜನೆಗಳು ಒಂದೇ ಪ್ರೈಸ್‌ನಲ್ಲಿದ್ದು, ಆದರೆ ವಿಭಿನ್ನ ಪ್ರಯೋಜನಗಳನ್ನು ನೀಡುತ್ತವೆ. ಆ ಪೈಕಿ ಜಿಯೋನ ಕೆಲವು ಯೋಜನೆಗಳು ಆಕರ್ಷಕ ಅನಿಸಿವೆ. ಹಾಗೆಯೇ ಏರ್‌ಟೆಲ್‌ನ ಕೆಲವು ಯೋಜನೆಗಳು ಯೋಗ್ಯ ಎಂದೆನಿಸುತ್ತವೆ. ಈ ನಿಟ್ಟಿನಲ್ಲಿ ಈ ಎರಡೂ ಟೆಲಿಕಾಂಗಳ 349ರೂ. ಪ್ರೀಪೇಯ್ಡ್ ಪ್ಲಾನ್‌ಗಳ ಪ್ರಯೋಜನಗಳನ್ನು ಗಮನಿಸೋಣ.

ಹೌದು, ರಿಲಾಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಟೆಲಿಕಾಂನ ಕೆಲವು ಪ್ರೀಪೇಯ್ಡ್ ಯೋಜನೆಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆದಿವೆ. ಆ ಪೈಕಿ ಮುಖ್ಯವಾಗಿ 349ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಯು ಪ್ರತಿದಿನ ಡೇಟಾ ಸೌಲಭ್ಯ, ವಾಯಿಸ್ ಕರೆ, ಎಸ್‌ಎಮ್‌ಎಸ್ ಹಾಗೂ ಅಧಿಕ ವ್ಯಾಲಿಡಿಟಿ ಅವಧಿಯಂತಹ ಪ್ರಯೋಜನಗಳನ್ನು ಹೊಂದಿದ್ದು, ಬಹುತೇಕ ಬಳಕೆದಾರರನ್ನು ಆಕರ್ಷಿಸಿದೆ. ಹಾಗಾದರೇ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂನ 349ರೂ. ಪ್ರೀಪೇಯ್ಡ್ ಯೋಜನೆಯಲ್ಲಿ ಯಾವುದು ಬೆಸ್ಟ್?..ಯೋಜನೆಯ ಪ್ರಯೋಜನಗಳೆನು?..ಎನ್ನುವ ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ಜಿಯೋ 349ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋದ 349ರೂ. ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಪ್ರತಿದಿನ 3GB ದೈನಂದಿನ ಡೇಟಾವನ್ನು ನೀಡುತ್ತದೆ, ಅಂದರೆ ಬಳಕೆದಾರರು ಒಟ್ಟು 84GB ಡೇಟಾವನ್ನು ಪಡೆಯುತ್ತಾರೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ದೊರೆಯುತ್ತದೆ. ಇದರೊಂದಿದೆ ಈ ಯೋಜನೆಯು ಸಹ ಸಂಪೂರ್ಣ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವನ್ನು ಪಡೆದಿದೆ. ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಜಿಯೋಟಿವಿ, ಜಿಯೋ ಸಿನಿಮ, ಜಿಯೋ ಸೆಕ್ಯುರಿಟಿ, ಜಿಯೋನ್ಯೂಸ್ ಮತ್ತು ಜಿಯೋಕ್ಲೌಡ್ ಸೇರಿದಂತೆ ಹಲವು ಅಪ್ಲಿಕೇಶನ್‌ಗಳನ್ನು ನೀಡುತ್ತದೆ.

ಏರ್‌ಟೆಲ್ 349ರೂ ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂ ಕಂಪೆನಿಯ 349ರೂ, ಗಳ ಪ್ರಿಪೇಯ್ಡ್ ಪ್ಲಾನ್ ಈ ಹಿಂದೆ 2GB ಹೈಸ್ಪೀಡ್ ಡೇಟಾವನ್ನು 28 ದಿನಗಳ ಮಾನ್ಯತೆಯಲ್ಲಿ ನೀಡುತ್ತಿತ್ತು. ಇದೀಗ ಈ ಪ್ಲಾನ್ ಅನ್ನು ಪರಿಷ್ಕರಣೆ ಮಾಡಿದೆ. ಸದ್ಯ ಇದೀಗ ಈ ಪ್ಲಾನ್ 2.5GB ದೈನಂದಿನ ಡೇಟಾವನ್ನು ನೀಡಲಿದೆ. ಈ ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಿಗಲಿದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮೂರು ತಿಂಗಳ ಕಾಲ ಅಪೊಲೊ 24/7 ಸರ್ಕಲ್, ಉಚಿತ ಹೆಲೋಟ್ಯೂನ್ಸ್, ವಿಂಕ್ ಮ್ಯೂಸಿಕ್, ಶಾ ಅಕಾಡೆಮಿಯಿಂದ ಒಂದು ವರ್ಷದ ಮೌಲ್ಯದ ತರಗತಿಗಳು ಮತ್ತು ಫಾಸ್ಟ್ ಟ್ಯಾಗ್ ವಹಿವಾಟುಗಳಲ್ಲಿ ರೂ 100 ಕ್ಯಾಶ್‌ಬ್ಯಾಕ್‌ನಂತಹ ಇತರ ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳಿವೆ.
ಭಾರ್ತಿ ಏರ್‌ಟೆಲ್ ಮತ್ತು ಜಿಯೋ ಎರಡು ಟೆಲಿಕಾಂಗಳ 349 ರೂ.ಗಳ ಒಟ್ಟು 28 ದಿನಗಳ ಅಲ್ಪಾವಧಿಯ ವ್ಯಾಲಿಡಿಟಿ ಪಡೆದಿವೆ. ಜಿಯೋ ಯೋಜನೆಯು 3GB ದೈನಂದಿನ ಡೇಟಾವನ್ನು ನೀಡುತ್ತದೆ ಅಂದರೆ ಬಳಕೆದಾರರು ಒಟ್ಟು 84GB ಡೇಟಾವನ್ನು ಪಡೆಯುತ್ತಾರೆ. ಏರ್‌ಟೆಲ್ 2.5GB ಡೇಟಾ ಒಳಗೊಂಡಿದ್ದು, ಒಟ್ಟು 70GB ಡೇಟಾ ಪ್ರಯೋಜನ ನೀಡುತ್ತದೆ. ಕೆಲವು ಬಳಕೆದಾರರಿಗೆ, ಜಿಯೋದ ಯೋಜನೆಯು ನೀಡುವ ಹೆಚ್ಚುವರಿ ಡೇಟಾವು ಅನುಕೂಲಕರ ಎನಿಸುತ್ತದೆ. ಆದರೆ ಮತ್ತೆ ಕೆಲವರಿಗೆ ಏರ್‌ಟೆಲ್‌ನ ಯೋಜನೆಯಲ್ಲಿ ಸಿಗುವ ಅಮೆಜಾನ್ ಪ್ರೈಮ್ ವೀಡಿಯೋ ಚಂದಾದಾರಿಕೆಯ ಲಾಭದಾಯಕ ಎನಿಸಲಿದೆ. ಹೀಗಾಗಿ ಓಟಿಟಿ ಸೌಲಭ್ಯ ಇಷ್ಟಪಡುವ ಗ್ರಾಹಕರು ಏರ್‌ಟೆಲ್‌ನತ್ತ ಮನಸ್ಸು ಮಾಡಬಹುದು. ಹಾಗೆಯೇ ಅಧಿಕ ಡೇಟಾ ಬೇಕಿರುವ ಗ್ರಾಹಕರು ಜಿಯೋನತ್ತ ವಾಲುತ್ತಾರೆ.
ಏರ್‌ಟೆಲ್ 449ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂ 449ರೂ. ಪ್ರೀಪೇಯ್ಡ್ ಪ್ರೀಪೇಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.


Click it and Unblock the Notifications








