ಜಿಯೋ V/S ಏರ್‌ಟೆಲ್ 666ರೂ. ಯೋಜನೆ: ರೀಚಾರ್ಜ್‌ಗೆ ಯಾವುದು ಬೆಸ್ಟ್?
ದೇಶದಲ್ಲಿ ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಅವುಗಳಲ್ಲಿ ಪ್ರೀಪೇಯ್ಡ್ ಯೋಜನೆಗಳು ಹಾಗೂ ಪೋಸ್ಟ್‌ಪೇಯ್ಡ್ ಯೋಜನೆಗಳು ಸೇರಿವೆ. ಆದರೆ ಗ್ರಾಹಕ ಸ್ನೇಹಿ ಬೆಲೆಯಲ್ಲಿ ಕೆಲವು ಪ್ರೀಪೇಯ್ಡ್ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಗಮನ ಸೆಳೆದಿವೆ. ಆ ಪೈಕಿ ಬಹುತೇಕ ಬಳಕೆದಾರರು 666ರೂ. ಬೆಲೆಯ ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್‌ಗೆ ಮುಂದಾಗುತ್ತಾರೆ.

ಹೌದು, ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳು 666ರೂ. ಬೆಲೆಯ ಪ್ರೀಪೇಯ್ಡ್ ಪ್ಲ್ಯಾನ್ ಆಯ್ಕೆ ಹೊಂದಿವೆ. ಈ ಎರಡು ಟೆಲಿಕಾಂಗಳ ಈ ಮೊತ್ತದ ರೀಚಾರ್ಜ್ ಯೋಜನೆಯಲ್ಲಿ ಅಧಿಕ ದೈನಂದಿನ ಡೇಟಾ, ಆಕರ್ಷಕ ವ್ಯಾಲಿಡಿಟಿ, ಅನಿಯಮಿತ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಪ್ರಯೋಜನಗಳು ಸೇರಿವೆ. ಹಾಗೆಯೇ ಹೆಚ್ಚುವರಿಯಾಗಿ ಓಟಿಟಿ ಸೌಲಭ್ಯಗಳು ಸಿಗಲಿವೆ. ಆದರೂ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೇ ಜಿಯೋ ಮತ್ತು ಏರ್‌ಟೆಲ್ 719ರೂ. ಪ್ರಿಪೇಯ್ಡ್ ಪ್ಲ್ಯಾನಿನಲ್ಲಿ ಯಾವುದು ಯೋಗ್ಯ? ಈ ಯೋಜನೆಗಳ ಒಟ್ಟಾರೇ ಪ್ರಯೋಜನಗಳೆನು ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.
ಜಿಯೋದ 666ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ 666 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 126 GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್‌ಗಳ ಸೌಲಭ್ಯ ದೊರೆಯುತ್ತದೆ.

ಏರ್‌ಟೆಲ್ 666ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 666 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 126 GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಏರ್‌ಟೆಲ್ ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ಉಚಿತ ಹೆಲೋ ಟ್ಯೂನ್ ಸೌಲಭ್ಯ ದೊರೆಯುತ್ತದೆ.
ರೀಚಾರ್ಜ್‌ಗೆ ಯಾವುದು ಉತ್ತಮ?
ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಈ ಎರಡು ಕಂಪನಿಗಳು 666 ರೂ, ಪ್ರೀಪೇಯ್ಡ್ ಪ್ಲ್ಯಾನ್ ನಲ್ಲಿ ಆಕರ್ಷಕ ಸೌಲಭ್ಯಗಳನ್ನು ನೀಡಿವೆ. ಈ ಎರಡು ಟೆಲಿಕಾಂಗಳು ಬಹುತೇಕ ಸಾಮ್ಯತೆಯ ಪ್ರಯೋಜನ ಹೊಂದಿದ್ದರೂ, ಭಿನ್ನತೆ ಒಳಗೊಂಡಿವೆ. ಎರಡು ಪ್ಲ್ಯಾನ್ ಗಳ ವ್ಯಾಲಿಡಿಟಿಯಲ್ಲಿ ಭಿನ್ನತೆ ಕಾಣಬಹುದು. ಏರ್‌ಟೆಲ್‌ನ ಯೋಜನೆಯು 77 ದಿನಗಳ ವ್ಯಾಲಿಡಿಟಿ ಹೊಂದಿದ್ದರೆ, ಜಿಯೋ ಟೆಲಿಕಾಂನ ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿ ಒದಗಿಸಿದೆ. ಆದರೆ ಡೇಟಾ ವಿಷಯಕ್ಕೆ ಬಂದಾಗ ಜಿಯೋ ಮತ್ತು ಏರ್‌ಟೆಲ್ ಎರಡು ಟೆಲಿಕಾಂಗಳು ಪ್ರತಿದಿನ 1.5 GB ಡೇಟಾ ನೀಡುತ್ತದೆ. ಇನ್ನು ಈ ಎರಡು ಯೋಜನೆಗಳು ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ಪಡೆದಿವೆ. ಹಾಗೆಯೆ ಜಿಯೋ ಮತ್ತು ಏರ್‌ಟೆಲ್ ಹೆಚ್ಚುವರಿಯಾಗಿ ಕೆಲವು ಆಪ್‌ಗಳ ಸೌಲಭ್ಯ ನೀಡಿವೆ. ಒಟ್ಟಾರೆ ನೋಡುವುದಾದರೆ, ಜಿಯೋದ 666 ರೂ, ಪ್ರೀಪೇಯ್ಡ್ ಪ್ಲ್ಯಾನ್ ಉತ್ತಮ ಆಯ್ಕೆ ಎನಿಸುತ್ತವೆ.


Click it and Unblock the Notifications








