Home
ಸುದ್ದಿಜಾಲ

ಈ ಪ್ಲ್ಯಾನ್‌ ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಗ್ರಾಹಕರಿಗೆ ಖಂಡಿತಾ ಇಷ್ಟ!

ದೇಶದ ಟೆಲಿಕಾಂ ವಲಯದಲ್ಲಿ ಜನಪ್ರಿಯ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಭಾರ್ತಿ ಏರ್‌ಟೆಲ್‌ ಟೆಲಿಕಾಂ ಆಕರ್ಷಕ ಯೋಜನೆಗಳ ಮೂಲಕ ಚಂದಾದಾರರನ್ನು ಸೆಳೆದಿದೆ. ಅದೇ ರೀತಿ ವೀ ಟೆಲಿಕಾಂ ಮೂರನೇ ದೊಡ್ಡ ಟೆಲಿಕಾಂ ಪೂರೈಕೆದಾರ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಈ ಎರಡು ಟೆಲಿಕಾಂಗಳ ಈ ಒಂದು ಪ್ಲ್ಯಾನ್‌ ಸಖತ್‌ ಗಮನ ಸೆಳೆದಿದೆ.

ಹೌದು, ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಈ ಎರಡು ಸಂಸ್ಥೆಗಳು 666ರೂ. ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ ಆಯ್ಕೆ ಹೊಂದಿವೆ. ಈ ಯೋಜನೆಗಳು ಡೇಟಾ, ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ನಂತಹ ಪ್ರಯೋಜನ ಪಡೆದಿವೆ. ಬಹುತೇಕ ಒಂದೇ ಮಾದರಿಯ ಪ್ರಯೋಜನಗಳನ್ನು ನೀಡಿದ್ದರೂ, ಇತರೆ ಸೌಲಭ್ಯಗಳಲ್ಲಿ ಭಿನ್ನತೆ ಇವೆ.

ಈ ಪ್ಲ್ಯಾನ್‌ ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಗ್ರಾಹಕರಿಗೆ ಖಂಡಿತಾ ಇಷ್ಟ!

ಈ ಎರಡೂ ಟೆಲಿಕಾಂಗಳ 666ರೂ. ಬೆಲೆಯ ಯೋಜನೆಗಳ ಪ್ರಮುಖ ಹೈಲೈಟ್‌ ಎಂದರೆ ಅದು ವ್ಯಾಲಿಡಿಟಿ ಆಗಿದೆ. ಈ ಎರಡು ಪ್ಲ್ಯಾನ್‌ಗಳು 77 ದಿನಗಳ ವ್ಯಾಲಿಡಿಟಿ ಒಳಗೊಂಡಿದ್ದು, ಜೊತೆಗೆ ದೈನಂದಿನ ಡೇಟಾ ಪ್ರಯೋಜನ ಸಹ ಪಡೆದಿವೆ. ಹಾಗಾದರೆ ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಸಂಸ್ಥೆಗಳ 666ರೂ. ಪ್ಲ್ಯಾನಿನ ಪ್ರಯೋಜನಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್‌ 666ರೂ. ಪ್ರೀಪೇಯ್ಡ್‌ ಯೋಜನೆ ಸೌಲಭ್ಯಗಳ ಮಾಹಿತಿ : ಭಾರ್ತಿ ಏರ್‌ಟೆಲ್‌ ಟೆಲಿಕಾಂನ 666ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಯೋಜನೆಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಜೊತೆಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯುತ್ತದೆ. ಅಲ್ಲದೇ ವಿಂಕ್ ಮ್ಯೂಸಿಕ್‌ ಸೌಲಭ್ಯ ಇದೆ.

ವಿ ಟೆಲಿಕಾಂನ 666ರೂ, ಪ್ರಿಪೇಯ್ಡ್‌ ಯೋಜನೆ ಪ್ರಯೋಜನಗಳ ಮಾಹಿತಿ : ವಿ ಟೆಲಿಕಾಂನ 666ರೂ. ಪ್ರೀಪೇಯ್ಡ್‌ ಯೋಜನೆಯು ಸಹ ಒಟ್ಟು 77 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಯೋಜನೆಯು ಪ್ರತಿದಿನ 1.5 GB ಡೇಟಾ ಪ್ರಯೋಜನ ಪಡೆದುಕೊಂಡಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ, ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಗ್ರಾಹಕರಿಗೆ ಲಭ್ಯ ಆಗಲಿದೆ. ಅಲ್ಲದೇ ವೀಕೆಂಡ್ ಡೇಟಾ ರೋಲ್ ಓವರ್ ಪ್ರಯೋಜನ ಜೊತೆಗೆ ವಿ ಆಪ್ಸ್‌ ಸಹ ಲಭ್ಯ.

ಪ್ರಮುಖ ಭಿನ್ನತೆ ಏನಿದೆ : ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳ 666ರೂ. ಯೋಜನೆಯು ಬಹುತೇಕ ಸಾಮ್ಯತೆ ಆಗಿವೆ. ವ್ಯಾಲಿಡಿಟಿ, ಕರೆ, ಎಸ್‌ಎಮ್‌ಎಸ್‌ ಹಾಗೂ ಡೇಟಾ ಹೋಲಿಕೆ ಪಡೆದಿವೆ. ಅದಾಗ್ಯೂ, ವಿ ಟೆಲಿಕಾಂನಲ್ಲಿ ಹೆಚ್ಚುವರಿ 5GB ಡೇಟಾ ಲಭ್ಯವಾಗಲಿದೆ.

ಏರ್‌ಟೆಲ್‌ನ 779ರೂ. ಯೋಜನೆಯ ಸೌಲಭ್ಯಗಳ ಮಾಹಿತಿ : ಏರ್‌ಟೆಲ್‌ ಟೆಲಿಕಾಂ ಈ 779ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಹಾಗೆಯೇ ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ಧ್ವನಿ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 90 GB ಡೇಟಾ ಲಭ್ಯ ಖಚಿತ.

ವಿ ಟೆಲಿಕಾಂ 901ರೂ. ಯೋಜನೆಯ ಸೌಲಭ್ಯಗಳ ಮಾಹಿತಿ : ವಿ ಟೆಲಿಕಾಂನ ಈ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿ ಅನ್ನು ಪಡೆದಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಸಿಗಲಿದೆ. ಇದರ ಜೊತೆಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಸಹ ಸಿಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಯು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯ.

ಏರ್‌ಟೆಲ್‌ನ 839ರೂ. ಯೋಜನೆಯ ಸೌಲಭ್ಯಗಳ ಮಾಹಿತಿ : ಏರ್‌ಟೆಲ್‌ ಟೆಲಿಕಾಂನ 839ರೂ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಹೊಂದಿದೆ. ಇದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದುಕೊಂಡಿದೆ. ಅಲ್ಲದೇ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಪಡೆದಿದೆ. ಇನ್ನು ಈ ಪ್ರೀಪೇಯ್ಡ್‌ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಸದಸ್ಯತ್ವ ಸೌಲಭ್ಯ ಇದೆ.

Best Mobiles in India

English summary
Airtel and Vi this plan offers big validity with data. everything you need to know.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+