Home
ಸುದ್ದಿಜಾಲ

ಗ್ರಾಹಕರಿಗೆ ಶಾಕ್‌ ನೀಡಿದ ಏರ್‌ಟೆಲ್‌; ಈ ರೀಚಾರ್ಜ್‌ ಪ್ಲ್ಯಾನ್‌ಗೆ ವಿದಾಯ

ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್‌ಟೆಲ್‌ ತನ್ನ ಬಳಕೆದಾರರಿಗೆ ವಿವಿಧ ರೀತಿಯ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಲಾಗಿದ್ದು, ಬಳಕೆದಾರರು ಸಾಕಷ್ಟು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಏರ್‌ಟೆಲ್‌ ಗ್ರಾಹಕರು ಹೆಚ್ಚಾಗಿ ಬಳಕೆ ಮಾಡುತ್ತಿದ್ದ ರೀಚಾರ್ಜ್‌ ಪ್ಲ್ಯಾನ್‌ ಒಂದನ್ನು ತೆಗೆದುಹಾಕಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಹೊಸ ರೀಚಾರ್ಜ್‌ ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದೆ.

ಗ್ರಾಹಕರಿಗೆ ಶಾಕ್‌ ನೀಡಿದ ಏರ್‌ಟೆಲ್‌; ಈ ರೀಚಾರ್ಜ್‌ ಪ್ಲ್ಯಾನ್‌ಗೆ ವಿದಾಯ

ಹೌದು, ಭಾರ್ತಿ ಏರ್‌ಟೆಲ್ ತನ್ನ 99 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್‌ ಅನ್ನು ಒಂಬತ್ತು ವಲಯಗಳಿಂದ ತೆಗೆದುಹಾಕಿದ್ದು, ಈ ಮೂಲಕ ಹಲವಾರು ಗ್ರಾಹಕರಿಗೆ ಬ್ಯಾಡ್‌ ನ್ಯೂಸ್ ನೀಡಿದೆ. ಹಾಗಿದ್ರೆ, ಈ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಯಾವ ಉದ್ದೇಶಕ್ಕಾಗಿ ತೆಗೆದುಹಾಕಲಾಗಿದೆ?, ಇದಕ್ಕೆ ಪರ್ಯಾಯವಾಗಿರುವ ಹೊಸ ರೀಚಾರ್ಜ್‌ ಪ್ಲ್ಯಾನ್‌ ಯಾವುದು?, ಈ ಹಳೆಯ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಏನೆಲ್ಲಾ ಪ್ರಯೋಜನಗಳು ಇದ್ದವು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

99 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್‌ ರಿಮೂವ್‌ ಮಾಡಿದ ಏರ್‌ಟೆಲ್‌

99 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್‌ ಅನ್ನು ಸದ್ಯಕ್ಕೆ ಒಂಬತ್ತು ವಲಯಗಳಿಂದ ತೆಗೆದುಹಾಕಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಲಯಗಳಿಂದ ಈ ರೀಚಾರ್ಜ್‌ ಪ್ಲ್ಯಾನ್‌ ಅನ್ನು ತೆಗೆದುಹಾಕಲಾಗುತ್ತದೆ ಎನ್ನಲಾಗಿದೆ. ವಿಷಯ ಏನೆಂದರೆ ಈ ಮೊದಲು 99 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್ 79 ರೂ. ಗಳಾಗಿತ್ತು. ಆದರೆ, ಈ ಎರಡು ವರ್ಷಗಳ ಅವಧಿಯಲ್ಲಿ ಬೇಸ್ ಪ್ಲ್ಯಾನ್‌ದರ 150 ರೂ. ಗಳ ಗಡಿ ದಾಟಿದೆ.

49 ರೂ. ಗಳ ಏರ್‌ಟೆಲ್ ರೀಚಾರ್ಜ್‌ ಪ್ಲ್ಯಾನ್‌ 79 ರೂ. ಗಳಾಗಿತ್ತು!

ಎರಡು ವರ್ಷಗಳ ಹಿಂದೆ ಇದೇ ಪ್ಲ್ಯಾನ್‌ 49 ರೂ. ಗಳನ್ನು ಪಡೆದಿತ್ತು. ಆದರೆ, ಬಳಕೆದಾರರು 2021 ರಲ್ಲಿ ಈ ರೀಚಾರ್ಜ್‌ ಪ್ಲ್ಯಾನ್‌ಗೆ 79 ರೂ. ಗಳನ್ನು ಪಾವತಿಗೆ ಮಾಡುವಂತಾಗಿತ್ತು. ಇದಾದ ಬಳಿಕ ಅಂದರೆ ಡಿಸೆಂಬರ್ 2021 ರಲ್ಲಿ ಸುಂಕದ ಹೆಚ್ಚಳ ಹಿನ್ನೆಲೆ 79 ರೂ. ಗಳ ಪ್ಲ್ಯಾನ್‌ ಅನ್ನು ತೆಗೆದುಹಾಕಿ ಇದಕ್ಕೆ ಉತ್ತಮ ಪರ್ಯಾಯವಾಗಿ 99 ರೂ. ಗಳ ಪ್ಲ್ಯಾನ್‌ ಅನ್ನು ಏಪರಿಚಯಿಸಲಾಗಿತ್ತು. ಆದರೆ, ಈ ಪ್ಲ್ಯಾನ್‌ಗೂ ಕೂಡ ಈಗ ಏರ್‌ಟೆಲ್‌ ವಿದಾಯ ಹೇಳುತ್ತಿದೆ.

ಗ್ರಾಹಕರಿಗೆ ಶಾಕ್‌ ನೀಡಿದ ಏರ್‌ಟೆಲ್‌; ಈ ರೀಚಾರ್ಜ್‌ ಪ್ಲ್ಯಾನ್‌ಗೆ ವಿದಾಯ

ಏರ್‌ಟೆಲ್‌ನಿಂದ ಈಗ ಹೊಸ ಪರ್ಯಾಯ ರೀಚಾರ್ಜ್‌ ಪ್ಲ್ಯಾನ್‌ಯಾವುದು?

ಏರ್‌ಟೆಲ್‌ನಿಂದ 155 ರೂ. ಗಳ ಪ್ಲ್ಯಾನ್‌ 1GB ಡೇಟಾ, ಅನಿಯಮಿತ ವಾಯ್ಸ್‌ ಕಾಲ್‌ ಹಾಗೂ 300 ಎಸ್‌ಎಮ್‌ಎಸ್‌ ಆಯ್ಕೆಯೊಂದಿಗೆ 24 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಇದರ ಹೆಚ್ಚುವರಿ ಪ್ರಯೋಜನಗಳೆಂದರೆ ಉಚಿತ ಹೆಲೋಟ್ಯೂನ್ಸ್ ಹಾಗೂ ಉಚಿತ ವಿಂಕ್ ಮ್ಯೂಸಿಕ್ ಸೇವೆ ಪಡೆಯಬಹುದಾಗಿದೆ. ಈ ರೀಚಾರ್ಜ್‌ ಪ್ಲ್ಯಾನ್‌ ಏರ್‌ಟೆಲ್‌ ಬಳಕೆದಾರರಿಗೆ ಲಭ್ಯವಿರುವ ಮುಂದಿನ ಅತ್ಯುತ್ತಮ ಪರ್ಯಾಯವಾಗಿದೆ.

ಇದರ ನಡುವೆ ಗುಡ್‌ ನ್ಯೂಸ್‌ ಸಹ ಲಭ್ಯವಿದ್ದು, ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಶುಲ್ಕಗಳ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಆದರೆ, 155 ಕ್ಕಿಂತ ಕಡಿಮೆ ಇರುವ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಳಕೆದಾರರು ಹೆಚ್ಚಿನ ಶುಲ್ಕದೊಂದಿಗೆ ರೀಚಾರ್ಜ್ ಮಾಡಬೇಕಿದೆ.

ಏರ್‌ಟೆಲ್ 99 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಯಾಕೆ ತೆಗೆದುಹಾಕುತ್ತಿದೆ?

ಏರ್‌ಟೆಲ್ ಮುಂಬರುವ ವರ್ಷಗಳಲ್ಲಿ ಪ್ರತಿ ಬಳಕೆದಾರರಿಂದ ತಿಂಗಳಿಗೆ ಸರಾಸರಿ 300 ರೂ.ಗಳ ಆದಾಯ ಪಡೆಯಲು ಉದ್ದೇಶಿಸಲಾಗಿದ್ದು, ಇದನ್ನು ಪಡೆಯಬೇಕು ಎಂದರೆ ಟೆಲಿಕಾಂ ಕ್ರಮೇಣ ಶುಲ್ಕವನ್ನು ಹೆಚ್ಚಿಸುವ ಅನಿವಾರ್ಯತೆ ಇದೆ. ಅದರಲ್ಲೂ Q2 FY23 ರ ಅಂತ್ಯದಲ್ಲಿ ಏರ್‌ಟೆಲ್‌ನ ತಿಂಗಳಿಗೆ ARPU 190 ರೂ. ಆಗಿತ್ತು ಹಾಗೂ Q3 FY23 ನಲ್ಲಿ 194 ರೂ.ಗಳಿಗೆ ತಲುಪುವ ನಿರೀಕ್ಷೆಯಿದೆ.

ಗ್ರಾಹಕರಿಗೆ ಶಾಕ್‌ ನೀಡಿದ ಏರ್‌ಟೆಲ್‌; ಈ ರೀಚಾರ್ಜ್‌ ಪ್ಲ್ಯಾನ್‌ಗೆ ವಿದಾಯ

ಪ್ರಿಪೇಯ್ಡ್ ಗ್ರಾಹಕರಿಗೆ ಸುಂಕವನ್ನು ಹೆಚ್ಚಿಸುವ ಏರ್‌ಟೆಲ್‌ನ ಪ್ರಯತ್ನಗಳಿಗೆ ಇತರ ಟೆಲಿಕಾಂ ಸಂಸ್ಥೆಗಳು ಸಹ ಭಾಗಿಯಾಗುವ ಸಂಭವ ಇದೆ ಎನ್ನಲಾಗಿದೆ. ಈ ಮೂಲಕ ಟೆಲಿಕಾಂಗಳು ತಮ್ಮ ಲಾಭದ ವ್ಯವಸ್ಥೆಯನ್ನು ಸುಧಾರಿಸಲು ಹಾಗೂ ಹೂಡಿಕೆಯ ಮೇಲೆ ಉತ್ತಮ ಲಾಭವನ್ನು ಪಡೆಯಲು ಈ ಬೆಳವಣಿಗೆ ಅನುಕೂಲ ಮಾಡಿಕೊಡುತ್ತದೆ ಎನ್ನಲಾಗಿದೆ.

Best Mobiles in India

English summary
Airtel has removed its Rs 99 prepaid plan from nine circles and is also expected to remove it from more circles future.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+