Home
ಸುದ್ದಿಜಾಲ

Airtel ಸಂಸ್ಥೆಯ ಈ ಪ್ಲ್ಯಾನಿನಲ್ಲಿ 365 ದಿನ ವ್ಯಾಲಿಡಿಟಿ ಜೊತೆಗೆ ಭರ್ಜರಿ ಡೇಟಾ ಪಕ್ಕಾ!

ದೇಶದ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆ ಎನಿಸಿರುವ ಏರ್‌ಟೆಲ್‌ (Airtel) ಅಧಿಕ ಗ್ರಾಹಕರನ್ನು ಸೆಳೆಯಲು ಈಗಾಗಲೇ ಅತ್ಯುತ್ತಮ ಪ್ರಿಪೇಯ್ಡ್‌ ರೀಚಾರ್ಜ್‌ ಯೋಜನೆಗಳನ್ನು ಪರಿಚಯಿಸಿದೆ. ಆ ಪೈಕಿ ಸಂಸ್ಥೆಯ ಬಹುತೇಕ ಯೋಜನೆಗಳು ಅಧಿಕ ದೈನಂದಿನ ಡೇಟಾ ಸೌಲಭ್ಯ ಹೊಂದಿದ್ದು, ಬಿಗ್ ವ್ಯಾಲಿಡಿಟಿ ಪಡೆದಿವೆ. ಅದಾಗ್ಯೂ, ದೀರ್ಘ ವ್ಯಾಲಿಡಿಟಿ ಸೌಲಭ್ಯ ಬಯಸುವ ಚಂದಾದಾರರಿಗಾಗಿ ಏರ್‌ಟೆಲ್‌ ವಾರ್ಷಿಕ ವ್ಯಾಲಿಡಿಟಿಯ ಪ್ರೀಪೇಯ್ಡ್‌ ಆಯ್ಕೆಗಳನ್ನು ನೀಡಿದೆ.

ಹೌದು, ಏರ್‌ಟೆಲ್‌ ಸಂಸ್ಥೆಯು ಹಲವು ದೀರ್ಘಾವಧಿಯ ಯೋಜನೆಗಳ ಪಟ್ಟಿ ಹೊಂದಿದ್ದು, ಅವುಗಳ ಪೈಕಿ 1999ರೂ, 3599ರೂ ಹಾಗೂ 3999ರೂ. ಪ್ರೀಪೇಯ್ಡ್‌ ಯೋಜನೆಗಳು 365 ದಿನಗಳ ವ್ಯಾಲಿಡಿಟಿಯೊಂದಿಗೆ ವಾವ್‌ ಎನಿಸುವ ಆಯ್ಕೆಗಳನ್ನು ಒಳಗೊಂಡಿವೆ. ಹಾಗಾದರೇ ಏರ್‌ಟೆಲ್‌ ಟೆಲಿಕಾಂನ ಈ ಮೂರು ವಾರ್ಷಿಕ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

Airtel ಸಂಸ್ಥೆಯ ಈ ಪ್ಲ್ಯಾನಿನಲ್ಲಿ 365 ದಿನ ವ್ಯಾಲಿಡಿಟಿ ಜೊತೆಗೆ ಭರ್ಜರಿ ಡೇಟಾ!

ಏರ್‌ಟೆಲ್‌ನ 3999ರೂ. ರೀಚಾರ್ಜ್‌ ಯೋಜನೆ

ಭಾರ್ತಿ ಏರ್‌ಟೆಲ್‌ ಸಂಸ್ಥೆಯ 3999ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ವಾರ್ಷಿಕ ಅವಧಿಯ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಹಾಗೂ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಹಾಗೆಯೇ ಏರ್‌ಟೆಲ್‌ನ ಈ ಯೋಜನೆಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ ಸೇವೆ ಲಭ್ಯ, ಅಲ್ಲದೇ ಫ್ರೀ ಹೆಲೋ ಟ್ಯೂನ್ ಹಾಗೂ ವೆಂಕ್‌ ಮ್ಯೂಸಿಕ್‌ ಸೇವೆಗಳು ಸಹ ಲಭ್ಯ.

ಏರ್‌ಟೆಲ್‌ನ 3599ರೂ. ರೀಚಾರ್ಜ್‌ ಯೋಜನೆ

ಭಾರ್ತಿ ಏರ್‌ಟೆಲ್‌ ಸಂಸ್ಥೆಯ 3599ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ವಾರ್ಷಿಕ ಅವಧಿಯ ಪ್ಲ್ಯಾನಿನಲ್ಲಿ ಪ್ರತಿದಿನ 2 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಮತ್ತು ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಹಾಗೆಯೇ ಏರ್‌ಟೆಲ್‌ನ ಈ ಯೋಜನೆಯಲ್ಲಿ ಫ್ರೀ ಹೆಲೋ ಟ್ಯೂನ್ ಹಾಗೂ ವೆಂಕ್‌ ಮ್ಯೂಸಿಕ್‌ ಸೇವೆಗಳು ಸಹ ದೊರೆಯುತ್ತವೆ.

ಏರ್‌ಟೆಲ್‌ನ 1999ರೂ. ರೀಚಾರ್ಜ್‌ ಯೋಜನೆ

ಭಾರ್ತಿ ಏರ್‌ಟೆಲ್‌ ಸಂಸ್ಥೆಯ 1999ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ವಾರ್ಷಿಕ ಅವಧಿಯ ಪ್ಲ್ಯಾನ್‌ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಅಲ್ಲದೇ ಈ ವಾರ್ಷಿಕ ಅವಧಿಯ ರೀಚಾರ್ಜ್‌ ಪ್ಲ್ಯಾನಿನ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ನಿತ್ಯ 100 ಎಸ್‌ಎಮ್‌ಎಸ್‌ ಸೌಲಭ್ಯ ಹಾಗೂ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಹಾಗೆಯೇ ಏರ್‌ಟೆಲ್‌ನ ಈ ಯೋಜನೆಯಲ್ಲಿ ಫ್ರೀ ಹೆಲೋ ಟ್ಯೂನ್ ಹಾಗೂ ವೆಂಕ್‌ ಮ್ಯೂಸಿಕ್‌ ಸೇವೆಗಳು ಸಹ ಸಿಗಲಿವೆ.

ಹಾಗೆಯೇ ಏರ್‌ಟೆಲ್‌ ಸಂಸ್ಥೆಯ 929ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ಸಹ ಉತ್ತಮ ವ್ಯಾಲಿಡಿಟಿ ಪಡೆದಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 90 ದಿನಗಳ ವ್ಯಾಲಿಡಿಟಿ ಲಭ್ಯ ಇದ್ದು, ಗ್ರಾಹಕರಿಗೆ ಪ್ರತಿದಿನ 1.5GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಅಲ್ಲದೇ ಏರ್‌ಟೆಲ್‌ನ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಫ್ರೀ ಹೆಲೋ ಟ್ಯೂನ್ ಹಾಗೂ ವೆಂಕ್‌ ಮ್ಯೂಸಿಕ್‌ ಸೇವೆಗಳು ಸಹ ಲಭ್ಯವಾಗಲಿವೆ.

Best Mobiles in India

English summary
Airtel Annual Recharge Plans. Check daily Data, sms and other benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+