Home
ಸುದ್ದಿಜಾಲ

ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿದ್ರೆ, ಮತ್ತೇ ಮತ್ತೇ ರೀಚಾರ್ಜ್ ಮಾಡುವ ಕಿರಿ ಕಿರಿ ಇಲ್ಲ!

ಭಾರ್ತಿ ಏರ್‌ಟೆಲ್‌ ಭಿನ್ನ ಶ್ರೇಣಿಯ ಪ್ರೀಪೇಯ್ಡ್‌ ಯೋಜನೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಸಂಸ್ಥೆಯ ಬಹುತೇಕ ಯೋಜನೆಗಳು ಅಧಿಕ ಡೇಟಾ ಪ್ರಯೋಜನ ಪಡೆದಿದ್ದು, ಮತ್ತೆ ಕೆಲವು ಯೋಜನೆಗಳು ದೀರ್ಘ ವ್ಯಾಲಿಡಿಟಿ ಸೌಲಭ್ಯ ಪಡೆದಿವೆ. ಹಾಗೆಯೇ ಇನ್ನು ಕೆಲವು ಪ್ಲ್ಯಾನ್‌ಗಳು ಅಧಿಕ ಡೇಟಾ ಜೊತೆಗೆ ದೀರ್ಘ ವ್ಯಾಲಿಡಿಟಿ ಸೌಲಭ್ಯ ಸಹ ಒಳಗೊಂಡಿವೆ.

ಹೌದು, ಏರ್‌ಟೆಲ್‌ ಟೆಲಿಕಾಂ ಹಲವು ಭಿನ್ನ ಪ್ರಯೋಜನಗಳ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಸಂಸ್ಥೆಯ ಕೆಲವು ಯೋಜನೆಗಳು ಆಕರ್ಷಕ ಪ್ರಯೋಜನ ಪಡೆದಿದ್ದು, ಒಮ್ಮೆ ರೀಚಾರ್ಜ್ ಮಾಡಿದರೆ, ಮತ್ತೆ ಮುಂದಿನ ರೀಚಾರ್ಜ್‌ ಒಂದು ವರ್ಷದ ಬಳಿಕವೇ ಮಾಡಬಹುದಾಗಿದೆ.

ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿದ್ರೆ, ಮತ್ತೇ ಮತ್ತೇ ರೀಚಾರ್ಜ್ ಕಿರಿ ಕಿರಿ ಇಲ್ಲ!

ಏರ್‌ಟೆಲ್‌ ಸಂಸ್ಥೆಯು ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳ ಲಿಸ್ಟ್‌ ಹೊಂದಿದೆ. ಇವು ದುಬಾರಿ ಎನಿಸಿದರೂ ಡೇಟಾ, ಅನಿಯಮಿತ ಧ್ವನಿ ಕರೆ ಜೊತೆಗೆ 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿರುವುದು ಪ್ಲಸ್‌ ಪಾಯಿಂಟ್‌ ಆಗಿ ಕಾಣಿಸುತ್ತದೆ. ಹಾಗಾದರೆ ಏರ್‌ಟೆಲ್‌ ಟೆಲಿಕಾಂನ ವಾರ್ಷಿಕ ವ್ಯಾಲಿಡಿಟಿ ಅವಧಿಯ ಪ್ಲ್ಯಾನ್‌ಗಳ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

ಭಾರ್ತಿ ಏರ್‌ಟೆಲ್‌ ಟೆಲಿಕಾಂನ 3359ರೂ. ಪ್ರೀಪೇಯ್ಡ್‌ ಪ್ಲಾನಿನ ಸೌಲಭ್ಯಗಳ ಮಾಹಿತಿ : ಜನಪ್ರಿಯ ಏರ್‌ಟೆಲ್‌ ಟೆಲಿಕಾಂನ 3359ರೂ. ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ (365 ದಿನಗಳ) ವ್ಯಾಲಿಡಿಟಿ ಸೌಲಭ್ಯ ಅನ್ನು ಪಡೆದಿದೆ. ಇದರೊಂದಿಗೆ ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5 GB ಡೇಟಾ ಪ್ರಯೋಜನ ಸಹ ದೊರೆಯಲಿದ್ದು, ಇದು ಇಂಟರ್ನೆಟ್ ಬಳಕೆಗೆ ಪೂರಕ ಎನಿಸುತ್ತದೆ.

ಅಲ್ಲದೇ ಈ ಯೋಜನೆಯಲ್ಲಿ ಗ್ರಾಹಕರಿಗೆ ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ಧ್ವನಿ ಕರೆಗಳ ಪ್ರಯೋಜನ ಸಿಗಲಿದೆ. ಹಾಗೆಯೇ ನಿತ್ಯವೂ 100 ಉಚಿತ ಎಸ್ಎಮ್ಎಸ್ ಪ್ರಯೋಜನ ಸಹ ಲಭ್ಯವಾಗಲಿದೆ. ಹೆಚ್ಚುವರಿಯಾಗಿ ವರ್ಷದ ಅವಧಿಗೆ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಸಹ ಲಭ್ಯ. ಜೊತೆಗೆ ಉಚಿತ ಹೆಲೋ ಟ್ಯೂನ್ಸ್‌ ಹಾಗೂ ವಿಂಕ್ ಮ್ಯೂಸಿಕ್‌ ಕೂಡಾ ಸಿಗಲಿದೆ.

ಭಾರ್ತಿ ಏರ್‌ಟೆಲ್‌ ಸಂಸ್ಥೆಯ 2999ರೂ. ಪ್ರೀಪೇಯ್ಡ್‌ ಯೋಜನೆಯ ವಿವರ ಇಲ್ಲಿದೆ : ಭಾರ್ತಿ ಏರ್‌ಟೆಲ್‌ ಟೆಲಿಕಾಂ 2999ರೂ. ಪ್ರೀಪೇಯ್ಡ್‌ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದಿದ್ದು, 365 ಜನಪ್ರಿಯ ದೀರ್ಘಾವಧಿಯ ಪ್ಲ್ಯಾನ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಗ್ರಾಹಕರಿಗೆ ಈ ಯೋಜನೆಯಲ್ಲಿ ನಿತ್ಯವೂ 2 GB ಡೇಟಾ ಪ್ರಯೋಜನಗಳು ಕೂಡಾ ದೊರೆಯುತ್ತದೆ.

ಹಾಗೆಯೇ ಭಾರ್ತಿ ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಧ್ವನಿ ಕರೆಗಳ ಪ್ರಯೋಜನ ಇದರ ಜೊತೆಗೆ ನಿತ್ಯವೂ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಕೂಡಾ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಏರ್‌ಟೆಲ್ ಎಕ್ಸ್‌ಟ್ರಿಮ್‌ ಪ್ರೀಮಿಯಂ ಸೇವೆ, ವಿಂಕ್ ಮ್ಯೂಸಿಕ್, ಫಾಸ್ಟ್‌ ಟ್ಯಾಗ್ ಕ್ಯಾಶ್‌ಬ್ಯಾಕ್ ಪ್ರಯೋಜನಗಳು ಕೂಡಾ ದೊರೆಯುತ್ತವೆ.

ಏರ್‌ಟೆಲ್‌ ಸಂಸ್ಥೆಯ 1799ರೂ. ಪ್ರೀಪೇಯ್ಡ್‌ ಯೋಜನೆಯ ಮಾಹಿತಿ ಇಲ್ಲಿದೆ : ಏರ್‌ಟೆಲ್‌ ಟೆಲಿಕಾಂನ 1799 ರೂ. ಪ್ರೀಪೇಯ್ಡ್‌ ಯೋಜನೆಯು ಕೂಡಾ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಇದರೊಂದಿಗೆ ಗ್ರಾಹಕರಿಗೆ ಈ ವಾರ್ಷಿಕ ಅವಧಿಗೆ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24GB ಡೇಟಾ ಸೌಲಭ್ಯ ಸಿಗುತ್ತದೆ. ಇದರ ಜೊತೆಗೆ ಒಟ್ಟು 3600 ಉಚಿತ ಎಸ್ಎಮ್ಎಸ್ ಸೌಲಭ್ಯ ಕೂಡಾ ಲಭ್ಯ ಆಗಲಿದೆ.

ಹಾಗೆಯೇ ಭಾರ್ತಿ ಏರ್‌ಟೆಲ್‌ ಟೆಲಿಕಾಂ ಸೇರಿದಂತೆ ಇತರೆ ಟೆಲಿಕಾಂ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಲಭ್ಯ ಇದೆ. ಇದರೊಂದಿಗೆ ಈ ಯೋಜನೆಯಲ್ಲಿ ಫ್ರಿ ಹೆಲೋ ಟ್ಯೂನ್‌, ಏರ್‌ಟೆಲ್‌ ವಿಂಕ್ ಮ್ಯೂಸಿಕ್‌ ಇದರ ಜೊತೆಗೆ ಇತರೆ ಏರ್‌ಟೆಲ್‌ ಅಪ್ಲಿಕೇಶನ್‌ಗಳು ಕೂಡಾ ಲಭ್ಯ.

Best Mobiles in India

English summary
airtel annual validity recharge plans 2023 in karnataka. all benefits details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+