ಏರ್‌ಟೆಲ್‌ನಿಂದ ಅತ್ಯುತ್ತಮ ಪ್ಲ್ಯಾನ್!..ಒಂದೇ ರೀಚಾರ್ಜ್‌ನಲ್ಲಿ ಡೇಟಾ, DTH, ಒಟಿಟಿ ಲಭ್ಯ!
ದೇಶದ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್ ಈಗಾಗಲೇ ತನ್ನ ಚಂದಾದಾರರಿಗೆ ಹಲವು ಉಪಯುಕ್ತ ಸೇವೆಗಳನ್ನು ಲಭ್ಯ ಮಾಡಿದೆ. ಅದರ ಜೊತೆಗೆ ಕೆಲವು ಅತ್ಯುತ್ತಮ ಪೋಸ್ಟ್‌ಪೇಯ್ಡ್ ಹಾಗೂ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆ ಸಹ ನೀಡಿದೆ. ಇದೀಗ ಸಂಸ್ಥೆಯು ಒಂದೇ ಪ್ಲ್ಯಾನಿನಲ್ಲಿ ಹಲವು ಸೇವೆಗಳ ಸಂಯೋಜನೆಯ ಕೊಡುಗೆ ನೀಡಿದೆ.
ಹೌದು, ಭಾರ್ತಿ ಏರ್‌ಟೆಲ್ ಸಂಸ್ಥೆಯು ತನ್ನ ಚಂದಾದಾರರಿಗೆ DTH (ಡೈರೆಕ್ಟ್-ಟು-ಹೋಮ್), ಒಟಿಟಿ (ಓವರ್-ದಿ-ಟಾಪ್), ಫೈಬರ್ ಹಾಗೂ ಲ್ಯಾಂಡ್‌ಲೈನ್ ಕನೆಕ್ಷನ್ ಅನ್ನು ಕೇವಲ 1099 ರೂ. ಗಳಿಗೆ ನೀಡುತ್ತಿದೆ. ಏರ್‌ಟೆಲ್‌ನಿಂದ ಏರ್‌ಟೆಲ್ ಬ್ಲ್ಯಾಕ್ ಕೊಡುಗೆಯಲ್ಲಿ ಬಳಕೆದಾರರಿಗೆ ಈ ಎಲ್ಲಾ ಸೇವೆಗಳನ್ನು ಸಂಯೋಜಿಸಲಾಗಿದೆ. ಅಂದಹಾಗೆ ಏರ್‌ಟೆಲ್ ಬ್ಲ್ಯಾಕ್ ಇದು ಏರ್‌ಟೆಲ್‌ನಿಂದ ಬಂಡಲ್ ಸೇವೆ ಆಗಿದ್ದು, ಅದು ಗ್ರಾಹಕರ ಜೀವನವನ್ನು ಸುಲಭಗೊಳಿಸಲು ಉದ್ದೇಶಿಸಿದೆ.

ಈ ಮೂಲಕ ಏರ್‌ಟೆಲ್ ಸಂಸ್ಥೆಯು ತನ್ನ ಸೇವೆಗಳನ್ನು ಗ್ರಾಹಕ ಸ್ನೇಹಿ ಬೆಲೆಯಲ್ಲಿ ಲಭ್ಯವಾಗುವಂತೆ ಹಾಗೂ ಗ್ರಾಹಕರಿಗೆ ಹೆಚ್ಚು ಅನುಕೂಲಕರವಾಗಿಸಲು ರೂಪಿಸಿದೆ. ಹೀಗಾಗಿ ಗ್ರಾಹಕರು ವಿವಿಧ ಸೇವೆಗಳಿಗೆ ಪ್ರತ್ಯೇಕ ಬಿಲ್‌ಗಳನ್ನು ಪಾವತಿಸುವ ಬದಲು, ಎಲ್ಲಾ ಸೇವೆಗಳಿಗೆ ಒಂದೇ ಮೊತ್ತವನ್ನು ಪಾವತಿ ಮಾಡಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಏರ್‌ಟೆಲ್ ಬ್ಲಾಕ್ 1099ರೂ. ಪ್ಲಾನ್ ಮಾಹಿತಿ
ಏರ್‌ಟೆಲ್‌ನ ಈ 1099ರೂ ಯೋಜನೆಯು 200 Mbps ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ಪಡೆದಿದ್ದು, ಇದು 3.3TB ಮಾಸಿಕ ಡೇಟಾ ಹಾಗೂ ಡಿಟಿಎಚ್ ಕನೆಕ್ಷನ್ ಅನ್ನು ಒದಗಿಸುತ್ತದೆ. ಅಲ್ಲದೇ ಇದು 350ರೂ. ಗಳ ಮೌಲ್ಯದ ಟಿವಿ ಚಾನೆಲ್‌ಗಳನ್ನು ಫ್ರಿಯಾಗಿ ನೀಡುತ್ತದೆ. ಹಾಗೆಯೇ ಈ ಪ್ಲ್ಯಾನ್ ನಲ್ಲಿ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಒಟಿಟಿ ಅಪ್ಲಿಕೇಶನ್‌ಗಳು ಲಭ್ಯ.

ಗ್ರಾಹಕರು ಮುಂಗಡವಾಗಿ 3300ರೂ. ಪಾವತಿಸಬಹುದಾಗಿದ್ದು, ಹಾರ್ಡ್‌ವೇರ್ ಮತ್ತು ಇನ್‌ಸ್ಟಾಲೇಶನ್ ಅನ್ನು ಉಚಿತವಾಗಿ ಪಡೆಯಬಹುದು. ಇದಲ್ಲದೆ, ಏರ್‌ಟೆಲ್ ಬ್ಲಾಕ್ ಪ್ಲಾನ್‌ನ ನಿಮ್ಮ ಸ್ವಂತ ಮಾರ್ಪಡಿಸಿದ ಆವೃತ್ತಿಯನ್ನು ನೀವು ಯಾವಾಗಲೂ ರಚಿಸಬಹುದು. ಗ್ರಾಹಕರು ಎಲ್ಲಾ ಸೇವೆಗಳು ಒಂದೇ ಬಿಲ್‌ನಲ್ಲಿ ಬರುವುದು. ಇತರೆ ಕೆಲವು ಜನಪ್ರಿಯ ಪ್ರೀಪೇಯ್ಡ್ ಪ್ಲ್ಯಾನ್ ಬಗ್ಗೆ ಮುಂದೆ ನೋಡೋಣ.

ಏರ್‌ಟೆಲ್ 719ರೂ. ಪ್ಲಾನ್ ಸೌಲಭ್ಯಗಳ ಮಾಹಿತಿ
ಏರ್‌ಟೆಲ್‌ನ ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದ್ದು. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ನೀಡುತ್ತದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒದಗಿಸಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಲಭ್ಯ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 126GB ಡೇಟಾ ಲಭ್ಯ.
ಏರ್‌ಟೆಲ್‌ನ 779ರೂ. ಪ್ಲಾನ್ ಸೌಲಭ್ಯಗಳ ಮಾಹಿತಿ
ಏರ್‌ಟೆಲ್ ಟೆಲಿಕಾಂನ ಈ 779ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದ್ದು, ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗುತ್ತದೆ. ಹಾಗೆಯೇ ನಿತ್ಯವು 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಪಡೆದಿದ್ದು, ಇದರ ಜೊತೆಗೆ ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ಧ್ವನಿ ಕರೆಗಳ ಸೌಲಭ್ಯ ಖಚಿತ.
ಏರ್‌ಟೆಲ್ 666ರೂ. ಪ್ರೀಪೇಯ್ಡ್ ಪ್ಲಾನ್ ಸೌಲಭ್ಯಗಳ ಮಾಹಿತಿ
ಏರ್‌ಟೆಲ್ ಸಂಸ್ಥೆಯ ಈ ಪ್ರೀಪೇಯ್ಡ್ ಯೋಜನೆಯು ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಅನಿಯಮಿತ ಧ್ವನಿ ಕರೆಗಳು ಸಿಗಲಿದೆ.


Click it and Unblock the Notifications








