ಏರ್‌ಟೆಲ್‌ನಿಂದ ಹೊಸ ಪ್ಲ್ಯಾನ್ ಲಾಂಚ್; ಸಿಗುತ್ತೆ 250GB ಡೇಟಾ!..ಬೆಲೆ ಎಷ್ಟು?
ಜಿಯೋ, ಏರ್‌ಟೆಲ್ ಮತ್ತು ವಿ ಟೆಲಿಕಾಂಗಳು ಪ್ರಿಪೇಯ್ಡ್‌ನಂತೆ ಆಕರ್ಷಕ ಪೋಸ್ಟ್‌ಪೇಯ್ಡ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿವೆ. ಆ ಪೈಕಿ ಜನಪ್ರಿಯ ಏರ್‌ಟೆಲ್ ಈಗಾಗಲೇ ಹಲವು ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಸದ್ದಿಲ್ಲದೇ ಏರ್‌ಟೆಲ್ ಟೆಲಿಕಾಂ ತನ್ನ ಪೋಸ್ಟ್‌ಪೇಯ್ಡ್ ಯೋಜನೆಗಳ ಲಿಸ್ಟ್‌ಗೆ ನೂತನವಾಗಿ 1199 ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಸೇರ್ಪಡೆ ಮಾಡಿದೆ. ಈ ಯೋಜನೆಯ ಗ್ರಾಹಕರಿಗೆ ಆಕರ್ಷಕ ಎನಿಸಲಿದೆಯೇ?

ಹೌದು, ಏರ್‌ಟೆಲ್ ಟೆಲಿಕಾಂ ಹೊಸದಾಗಿ 1199 ರೂ. ಪೋಸ್ಟ್‌ಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಒಟ್ಟು 250GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಡೇಟಾ ರೋಲ್ ಓವರ್ ಪ್ರಯೋಜನ, ಅನಿಯಮಿತ ವಾಯಿಸ್ ಕರೆ ಸೌಲಭ್ಯ ಹಾಗೂ ಎಸ್‌ಎಮ್‌ಎಸ್ ಪ್ರಯೋಜನವನ್ನು ಒಳಗೊಂಡಿದೆ. ಜೊತೆಗೆ ಪ್ರಮುಖ ಓಟಿಟಿ ಅಪ್ಲಿಕೇಶನ್ ಗಳ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಹಾಗಾದರೇ ಏರ್‌ಟೆಲ್ ಟೆಲಿಕಾಂನ ಹೊಸ 1199 ರೂ. ಪೋಸ್ಟ್‌ಪೇಯ್ಡ್ ಯೋಜನೆಯ ಪ್ರಯೋಜನಗಳೆನು?..ಇತರೆ ಅತ್ಯುತ್ತಮ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ 1199ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 1199 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಒಟ್ಟು 250 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ 100 ಎಸ್‌ಎಮ್‌ಎಸ್ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಬೇಸಿಕ್ ಅನ್ಲಿಮಿಟೆಡ್ ಪ್ರವೇಶ, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಸೌಲಭ್ಯಗಳು ಸೇರಿದಂತೆ ಇತರೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ. ಇನ್ನು ಈ ಪೋಸ್ಟ್‌ಪೇಯ್ಡ್ ಯೋಜನೆಗಳು ಇದೀಗ ಏರ್‌ಟೆಲ್ ಅಪ್ಲಿಕೇಶನ್, ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ರೀಚಾರ್ಜ್ ಮಾಡಲು ಲಭ್ಯವಿದೆ.

ಏರ್‌ಟೆಲ್ 999ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್ 999 ರೂ. ಯೋಜನೆಯು ತಿಂಗಳಿಗೆ 100GB ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ನೀಡುತ್ತದೆ. ಎರಡು ಕುಟುಂಬದ ಸದಸ್ಯರನ್ನು ಆಡ್-ಆನ್‌ಗಳಾಗಿ ಸೇರಿಸುವ ಆಯ್ಕೆಯನ್ನು ಸಿಗಲಿವೆ. ಇದಲ್ಲದೆ ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಮೊಬೈಲ್, ಏರ್‌ಟೆಲ್ ಸೆಕ್ಯೂರ್, ವೈಂಕ್ ಮ್ಯೂಸಿಕ್, ಶಾ ಅಕಾಡೆಮಿ, ಫಾಸ್ಟ್‌ಟ್ಯಾಗ್, ಏರ್‌ಟೆಲ್ ವಿಐಪಿ ಸೇವೆ ಮತ್ತು ಅನಿಯಮಿತ ಬದಲಾವಣೆಗಳೊಂದಿಗೆ ಉಚಿತ ಹೆಲೋಟ್ಯೂನ್‌ಗಳನ್ನು ಸಹ ಲಭ್ಯ.

ಏರ್‌ಟೆಲ್ 1599 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್ 1599 ರೂ. ಯೋಜನೆಯು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್ ಜೊತೆಗೆ 250GB ಡೇಟಾವನ್ನು ನೀಡುತ್ತದೆ. ಇದು ಹೊಸದಾಗಿ ಪರಿಚಯಿಸಲಾದ 1199 ರೂ ರಂತೆ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಬೇಸಿಕ್ ಅನ್ಲಿಮಿಟೆಡ್ ಪ್ರವೇಶ, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಸೌಲಭ್ಯಗಳು ಸೇರಿದಂತೆ ಇತರೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ. ಇನ್ನು ಈ ಪೋಸ್ಟ್‌ಪೇಯ್ಡ್ ಯೋಜನೆಗಳು ಇದೀಗ ಏರ್‌ಟೆಲ್ ಅಪ್ಲಿಕೇಶನ್, ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ರೀಚಾರ್ಜ್ ಮಾಡಲು ಲಭ್ಯವಿದೆ.

ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಬಳಕೆದಾರರು 4G/3G ಬೆಂಬಲಿತ 40GB ಡೇಟಾವನ್ನು ಪಡೆಯುತ್ತಾರೆ. ಹಾಗೆಯೇ ಇದರೊಂದಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ದೊರೆಯುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಯ ಚಂದಾದಾರಿಕೆಗಳ ಜೊತೆಗೆ ಒಂದು ವರ್ಷದವರೆಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಇದೆ. ಫಾಸ್ಟ್ಯಾಗ್ ವಹಿವಾಟಿನಲ್ಲಿ ರಿಯಾಯಿತಿ ಹಾಗೂ ಉಚಿತ ಹೆಲೋಟೂನ್ಸ್ ಲಭ್ಯ.


Click it and Unblock the Notifications








