ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ನಲ್ಲಿ 3 ತಿಂಗಳು 'ನೆಟ್‌ಫ್ಲೆಕ್ಸ್' ಉಚಿತ!

|

ಭಾರತೀಯ ಟೆಲಿಕಾಂ ಇಂಡಸ್ಟ್ರಿಗೆ ಜಿಯೋ ನೆಟ್‌ವರ್ಕ್‌ ಎಂಟ್ರಿ ಕೊಟ್ಟಾಗಿನಿಂದ ಊಹಿಸಿರದ ಬದಲಾವಣೆಗಳು ನಡೆದಿವೆ. ಇದೀಗ ಜಿಯೋ ಗಿಗಾಫೈಬರ್ ಆರಂಭಿಸುವ ಸನಿಹದಲ್ಲಿದ್ದು, ಇತ್ತ ಕಡೆ ಏರ್‌ಟೆಲ್, ಟಾಟಾಸ್ಕೈ, ಬಿಎಸ್‌ಎನ್‌ಎಲ್ ಸಂಸ್ಥೆಗಳು ಜಿಯೋಗೆ ಸ್ಟ್ರಾಂಗ್ ಪೈಪೋಟಿ ನೀಡಲು ಅಣಿಯಾಗುವತ್ತ ಮನ್ನಡೆದಿವೆ. ಆ ಫೈಕಿ ಜನಪ್ರಿಯ ಏರ್‌ಟೆಲ್ ತನ್ನ ಗ್ರಾಹಕರಿಗೆ ಭರ್ಜರಿ ಮನರಂಜನೆಯ ಹೂರಣ ನೀಡಲು ಮುಂದಾಗಿದೆ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ನಲ್ಲಿ 3 ತಿಂಗಳು 'ನೆಟ್‌ಫ್ಲೆಕ್ಸ್' ಉಚಿತ!

ಹೌದು, ಭಾರ್ತಿ ಏರ್‌ಟೆಲ್ ಟೆಲಿಕಾಂ ಸಂಸ್ಥೆಯು ತನ್ನ ಬ್ರಾಡ್‌ಬ್ಯಾಂಡ್‌ ಗ್ರಾಹಕರಿಗೆ ಏರ್‌ಟೆಲ್‌ ಥ್ಯಾಂಕ್ಸ್‌ ಬೇನಿಫಿಟ್ಸ್ ಅಡಿಯಲ್ಲಿ 3 ತಿಂಗಳ ಕಾಲ ಉಚಿತ ನೆಟ್‌ಫ್ಲೆಕ್ಸ್‌ ಸೇವೆಯನ್ನು ನೀಡಲು ಮುಂದಾಗಿದೆ. ಕಂಪನಿಯ 1,099ರೂ ಪ್ಲ್ಯಾನ್‌ ಗಿಂತಲೂ ಅಧಿಕ ಬೆಲೆಯ ಯಾವುದೇ ರೀಚಾರ್ಜ್ ಪ್ಲ್ಯಾನ್‌ನಲ್ಲಿಯೂ ಸಹ ಈ ಪ್ರಯೋಜನ ದೊರೆಯಲಿದೆ. ಹಾಗೆಯೇ ಅಮೆಜಾನ್ ಪ್ರೈಮ್‌, ಜೀ5 ಪ್ರೀಮಿಯಮ್ ಸೇವೆ ಲಭ್ಯವಾಗಲಿದೆ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ನಲ್ಲಿ 3 ತಿಂಗಳು 'ನೆಟ್‌ಫ್ಲೆಕ್ಸ್' ಉಚಿತ!

ಏರ್‌ಟೆಲ್‌ 1,099ರೂ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಏರ್‌ಟೆಲ್ ಥ್ಯಾಂಕ್ಸ್ ಬೇನಿಫಿಟ್ಸ್‌ನ ಆಫರ್‌ನಲ್ಲಿ 100 Mbps ವೇಗದಲ್ಲಿ, 300GB ಡೇಟಾ ದೊರೆಯಲಿದೆ. ಇದರೊಂದಿಗೆ 500GB ಬೋನಸ್‌ ಡೇಟಾ ಸಹ ಗ್ರಾಹಕರಿಗೆ ಸೀಗಲಿದ್ದು, ಈ ಪ್ಲ್ಯಾನ್‌ ಒಟ್ಟು 6 ತಿಂಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಅನಿಯಮಿತ ಉಚಿತ ಕರೆಗಳ ಮತ್ತು ಡೇಟಾ ರೋಲ್‌ಓವರ್ (ಉಳಿದ ಡೇಟಾ ಮುಂದಿನ ತಿಂಗಳಿಗೆ ಸೇರಲಿದೆ) ಸೌಲಭ್ಯವು ಸಹ ದೊರೆಯಲಿದೆ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ನಲ್ಲಿ 3 ತಿಂಗಳು 'ನೆಟ್‌ಫ್ಲೆಕ್ಸ್' ಉಚಿತ!

ಏರ್‌ಟೆಲ್‌ 1599ರೂ.ಗಳ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ ತಿಂಗಳಿಗೆ 600GB ಡೇಟಾ ಸೀಗಲಿದ್ದು, ಅಂತರ್ಜಾಲ ಬಳಕೆಯ ವೇಗವು 300 Mbpsಯಷ್ಟು ನೀಡಲಿದೆ. ಇದರೊಮದಿಗೆ 1000GB ಬೋನಸ್‌ ಡೇಟಾ ಸೌಲಭ್ಯವು ಸೇರಿಕೊಳ್ಳಲಿದ್ದು, ಒಟ್ಟು 6 ತಿಂಗಳ ವ್ಯಾಲಿಡಿಟಿ ಅವಧಿ ಆಗಿರುತ್ತದೆ. ಜೊತೆಗೆ ನೆಟ್‌ಫ್ಲೆಕ್ಸ್‌, ಅಮೆಜಾನ್ ಪ್ರೈಮ್, ಜೀ5 ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ವಿಡಿಯೊ ಸ್ಟ್ರಿಮಿಂಗ್ ಸೇವೆಗಳ ಸೌಲಭ್ಯ ಲಭ್ಯವಾಗಲಿದೆ.

ಕಂಪನಿಯ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳಲ್ಲಿಯೇ 1,999ರೂ.ಗಳ ಪ್ಲ್ಯಾನ್‌ ಅಧಿಕ ಬೆಲೆಯ ಪ್ಲ್ಯಾನ್‌ ಆಗಿದ್ದು, ಇಂಟರ್ನೆಟ್‌ ಬಳಕೆಯ ವೇಗವು 100 Mbps ನಲ್ಲಿರಲಿದೆ. ಈ ಪ್ಲ್ಯಾನ್‌ನಲ್ಲಿಯೂ ಸಹ ಗ್ರಾಹಕರಿಗೆ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್‌ಗಳಾದ ನೆಟ್‌ಫ್ಲೆಕ್ಸ್‌, ಅಮೆಜಾನ್ ಪ್ರೈಮ್, ಜೀ5 ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ವಿಡಿಯೊ ಸ್ಟ್ರಿಮಿಂಗ್ ಸೇವೆಗಳು ದೊರೆಯಲಿವೆ. ಹೈದ್ರಾಬಾದ್ ಹೊರೆತುಪಡೆಸಿ(ಹೈದ್ರಾಬಾದ್‌ನಲ್ಲಿ ಪ್ರತ್ಯೇಕ್ 1299ರೂ. ಪ್ಲ್ಯಾನ್‌), ಬೆಂಗಳೂರು, ದೆಹಲಿ, ಮುಂಬೈ, ಗುರುಗಾವ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಪ್ಲ್ಯಾನ್‌ಗಳು ಲಭ್ಯವಿದೆ.

Best Mobiles in India

English summary
Airtel Broadband is offering massive Airtel Thanks benefits to its subscribers on plans above Rs 1,999. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X