ಏರ್‌ಟೆಲ್ ಸಿಮ್ ಬಳಸುವ ಗ್ರಾಹಕರಿಗೆ ಈ ಪ್ಲ್ಯಾನ್ ಖಂಡಿತ ಇಷ್ಟ ಆಗುತ್ತೆ!..ಯಾಕಂದ್ರೆ..
ದೇಶಿಯ ಟೆಲಿಕಾಂ ಕ್ಷೇತ್ರದಲ್ಲಿ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆ ಎನಿಸಿಕೊಂಡಿರುವ ಏರ್‌ಟೆಲ್ (Airtel) ಕೆಲವು ಬೊಂಬಾಟ್ ರೀಚಾರ್ಜ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಅಲ್ಲದೇ ಏರ್‌ಟೆಲ್ ಸಂಸ್ಥೆಯು ಜಿಯೋ ಹಾಗೂ ವಿ ಟೆಲಿಕಾಂಗಳಿಗೆ ನೇರ ಫೈಟ್ ನೀಡುತ್ತ ಮುನ್ನಡೆದಿದ್ದು, ಅಲ್ಪಾವಧಿಯ ಮತ್ತು ದೀರ್ಘಾವಧಿಯ ಪ್ಲ್ಯಾನ್‌ಗಳ ಆಯ್ಕೆ ಪಡೆದಿದೆ. ಆ ಪೈಕಿ ಬಹುತೇಕ ಯೋಜನೆಗಳು ದೈನಂದಿನ ಡೇಟಾ ಸೌಲಭ್ಯ ಪಡೆದಿರುವುದು ಪ್ರಮುಖ ಹೈಲೈಟ್ ಎನಿಸಿದೆ.
ಹೌದು, ಏರ್‌ಟೆಲ್ ( Airtel ) ಟೆಲಿಕಾಂ ಭಿನ್ನ ಪ್ಲ್ಯಾನ್‌ಗಳ ಪೈಕಿ ಗ್ರಾಹಕರಿಗೆ ಅನುಕೂಲಕರ ಎನಿಸುವ ಯೋಜನೆಗಳು ಇವೆ. ಏರ್‌ಟೆಲ್ 859ರೂ, 929ರೂ ಹಾಗೂ 979ರೂ. ಪ್ರೀಪೇಯ್ಡ್ ಯೋಜನೆಗಳು ಬಹಳ ಆಕರ್ಷಕ ಎನಿಸಿವೆ. ಈ ಮೂರು ಪ್ಲ್ಯಾನ್‌ಗಳು ಗ್ರಾಹಕರ ಸ್ನೇಹಿ ಬೆಲೆ ಪಡೆದಿದ್ದು, ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಹಾಗೂ ದೈನಂದಿನ ಡೇಟಾ ಪ್ರಯೋಜನ ಪಡೆದಿದೆ.

ಹಾಗೆಯೇ ಈ ಪ್ಲ್ಯಾನ್‌ಗಳು ಎಸ್‌ಎಮ್‌ಎಸ್, ವಾಯಿಸ್ ಕರೆಯ ಸೌಲಭ್ಯದ ಆಯ್ಕೆಗಳನ್ನು ಪಡೆದಿವೆ. ಅಲ್ಲದೇ ಈ ಮೂರು ಪ್ರೀಪೇಯ್ಡ್ ಯೋಜನೆಗಳು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಪ್ಲ್ಯಾನ್ ಬಯಸುವ ಗ್ರಾಹಕರು ಹೆಚ್ಚು ಸೂಕ್ತ ಎನಿಸುತ್ತವೆ. ಹಾಗಾದರೇ ಏರ್‌ಟೆಲ್ 859ರೂ, 929ರೂ ಹಾಗೂ 979ರೂ. ಪ್ರೀಪೇಯ್ಡ್ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಮುಂದೆ ಓದಿರಿ.
ಏರ್‌ಟೆಲ್ 859ರೂ. ರೀಚಾರ್ಜ್ ಯೋಜನೆ ಮಾಹಿತಿ
ಭಾರ್ತಿ ಏರ್‌ಟೆಲ್ (Airtel) ಟೆಲಿಕಾಂನ 859 ರೂ. ಗಳ ರೀಚಾರ್ಜ್ ಯೋಜನೆಯು ಸಹ ದೀರ್ಘಾವಧಿಯ ಸೌಲಭ್ಯ ಪಡೆದಿದ್ದು, ಒಟ್ಟು 84 ದಿನಗಳ ವ್ಯಾಲಿಡಿಟಿ ( Validity ) ಪ್ರಯೋಜನ ಪಡೆದುಕೊಂಡಿದೆ. ಈ ವೇಳೆ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ಲಭ್ಯ ಆಗಲಿದೆ. ಅಲ್ಲದೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಲಭ್ಯ ಆಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ಹೆಲೋ ಫ್ರೀ ಟ್ಯೂನ್ ಪ್ರಯೋಜನಗಳು ಸಿಗಲಿವೆ.
ಏರ್‌ಟೆಲ್ 929ರೂ. ರೀಚಾರ್ಜ್ ಯೋಜನೆ ಮಾಹಿತಿ
ಏರ್‌ಟೆಲ್ ( Airtel ) ಟೆಲಿಕಾಂನ 929 ರೂ. ಗಳ ರೀಚಾರ್ಜ್ ಯೋಜನೆಯು ಕೂಡಾ ದೀರ್ಘಾವಧಿಯ ಪ್ರಯೋಜನ ಪಡೆದಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿ ( Validity ) ಸೌಲಭ್ಯ ಹೊಂದಿರುವುದು ಪ್ಲಸ್ ಪಾಯಿಂಟ್ ಎನಿಸಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ಲಭ್ಯ ಆಗಲಿದೆ. ಅಲ್ಲದೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ದೊರೆಯುತ್ತವೆ. ಅಲ್ಲದೇ ಹೆಚ್ಚುವರಿಯಾಗಿ ಹೆಲೋ ಫ್ರೀ ಟ್ಯೂನ್ ಪ್ರಯೋಜನಗಳು ಸಿಗಲಿವೆ.
ಏರ್‌ಟೆಲ್ 979ರೂ. ರೀಚಾರ್ಜ್ ಯೋಜನೆ ಮಾಹಿತಿ
ಏರ್‌ಟೆಲ್ ( Airtel ) ಟೆಲಿಕಾಂನ 979 ರೂ. ಗಳ ರೀಚಾರ್ಜ್ ಯೋಜನೆಯು ಕೂಡಾ ದೀರ್ಘಾವಧಿಯ ಪ್ರಯೋಜನ ಪಡೆದಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿ ( Validity ) ಸೌಲಭ್ಯ ಹೊಂದಿರುವುದು ಪ್ಲಸ್ ಪಾಯಿಂಟ್ ಎನಿಸಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ಸಿಗಲಿದೆ.
ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ಲಭ್ಯ ಆಗಲಿದೆ. ಅಲ್ಲದೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ದೊರೆಯುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ಎರ್‌ಟೆಲ್ ಎಕ್ಸ್‌ಟ್ರೀಮ್ ಪ್ಲೇ ಪ್ರೀಮಿಯಂ ಸೇವೆ, ಹೆಲೋ ಫ್ರೀ ಟ್ಯೂನ್ ಪ್ರಯೋಜನಗಳು ಸಿಗಲಿವೆ.


Click it and Unblock the Notifications








