Home
ಸುದ್ದಿಜಾಲ

e-SIM: ಭೌತಿಕ ಸಿಮ್ ಬದಲು ಇ-ಸಿಮ್‌ಗೆ ಬದಲಾಗಿ! ಏರ್‌ಟೆಲ್‌ ಸಿಇಒ ಹೀಗಂದಿದ್ಯಾಕೆ? ಅನುಕೂಲಗಳೇನು?

ಟೆಲಿಕಾಂ ವಲಯದಲ್ಲಿ ಏರ್‌ಟೆಲ್‌ (Airtel) ಅಗ್ರ ಸ್ಥಾನದಲ್ಲಿದೆ. ಅದರಲ್ಲೂ ಈಗ 5G ಸೇವೆಯನ್ನು ಎಲ್ಲೆಡೆ ನೀಡುತ್ತಿರುವ ಪರಿಣಾಮ ಈ ಏರ್‌ಟೆಲ್‌ ಕಡೆ ಹೊಸ ಗ್ರಾಹಕರು ವಾಲುತ್ತಿದ್ದಾರೆ. ಅದರಲ್ಲೂ ಜಿಯೋಗೆ ಏರ್‌ಟೆಲ್‌ ತೀವ್ರವಾದ ಪೈಪೋಟಿ ನೀಡುತ್ತಲೇ ಬಂದಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಏರ್‌ಟೆಲ್ ಸಿಇಒ ಗೋಪಾಲ್ ವಿಟ್ಟಲ್ ಸಿಮ್‌ ಸಂಬಂಧ ಹೊಸ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಏರ್‌ಟೆಲ್‌ನ ಸಿಇಒ ಗೋಪಾಲ್ ವಿಟ್ಟಲ್ ಅವರು ಸಾಂಪ್ರದಾಯಿಕ ಭೌತಿಕ ಸಿಮ್ ಕಾರ್ಡ್‌ಗಳ (SIM card) ಬಗ್ಗೆ ಹಾಗೂ ಇ-ಸಿಮ್‌ಗಳ (E-SIM) ಬಗ್ಗೆ ಹೇಳಿಕೆ ನೀಡಿದ್ದು, ಈ ಸಂಬಂಧ ಎಲ್ಲಾ ಕಡೆ ದೊಡ್ಡ ಚರ್ಚೆ ಆಗುತ್ತಿದೆ. ಅಷ್ಟಕ್ಕೂ ಇವರು ಯಾಕೆ ಈ ಹೇಳಿಕೆ ನೀಡಿದ್ದಾರೆ?, ಈ ವಿಷಯದಲ್ಲಿ ಸುಧಾರಿತ ಬಳಕೆದಾರ ಅನುಭವ ಮತ್ತು ಭದ್ರತಾ ಕ್ರಮಗಳಂತಹ ಪ್ರಯೋಜನಗಳನ್ನು ಉಲ್ಲೇಖಿಸಿದ್ದು ಯಾಕೆ? ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ಭೌತಿಕ ಸಿಮ್ ಬದಲು ಇ-ಸಿಮ್‌ಗೆ ಬದಲಾಗಿ! ಏರ್‌ಟೆಲ್‌ ಸಿಇಒ ಹೀಗಂದಿದ್ಯಾಕೆ?

ಇ-ಸಿಮ್ ಅಳವಡಿಸಿಕೊಳ್ಳಿ: ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ವಿಟ್ಟಲ್ ಅವರು ಸಾಂಪ್ರದಾಯಿಕ ಸಿಮ್ ಕಾರ್ಡ್‌ಗಳಿಂದ ಇ-ಸಿಮ್‌ಗಳಿಗೆ ಬದಲಾಯಿಸಲು ಬಳಕೆದಾರರನ್ನು ಒತ್ತಾಯಿಸಿದ್ದಾರೆ. ಇನ್ನು ಇ-ಸಿಮ್‌ಗಳನ್ನು ನೇರವಾಗಿ ಡಿವೈಸ್‌ಗಳಲ್ಲಿ ಸಂಯೋಜಿಸಲಾಗಿದೆ ಮತ್ತು ತಡೆರಹಿತ ಸಂಪರ್ಕ, ಸುಲಭ ಡಿವೈಸ್‌ ಪರಿವರ್ತನೆ ಮತ್ತು ವರ್ಧಿತ ಭದ್ರತೆಯನ್ನು ನೀಡುತ್ತದೆ ಎಂದು ಈ ವೇಳೆ ತಿಳಿಸಿದ್ದಾರೆ.

ಇದರೊಂದಿಗೆ ಇ-ಸಿಮ್ ಅನ್ನು ಏರ್‌ಟೆಲ್ ಥ್ಯಾಂಕ್ಸ್ ಆಪ್‌ ಮೂಲಕ ಪ್ರಾರಂಭಿಸಬಹುದು ಮತ್ತು ಈ ತಂತ್ರಜ್ಞಾನವನ್ನು ಬೆಂಬಲಿಸುವ ವ್ಯಾಪಕ ಶ್ರೇಣಿಯ ಡಿವೈಸ್‌ಗಳಲ್ಲಿ ಅವುಗಳನ್ನು ಬಳಸಬಹುದು. ಹಾಗೆಯೇ ಜನರು ತಮ್ಮ ಫೋನ್‌ಗಳಿಗೆ ಸಾಮಾನ್ಯ ಸಿಮ್ ಕಾರ್ಡ್‌ಗಳ ಬದಲಿಗೆ ಇ-ಸಿಮ್‌ಗಳನ್ನು ಬಳಸುವುದನ್ನು ಪರಿಗಣಿಸಬೇಕೆಂದು ಇಚ್ಚಿಸುತ್ತಾರೆ. ಇ-ಸಿಮ್‌ಗಳು ಹಲವಾರು ಪ್ರಯೋಜನಗಳನ್ನು ನೀಡುತ್ತವೆ ಎಂದು ಅವರು ನಂಬುತ್ತಾರೆ, ವಿಶೇಷವಾಗಿ ಸುರಕ್ಷತೆ ಮತ್ತು ಬಳಕೆಯ ಸುಲಭತೆಯ ವಿಷಯದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂದೂ ಸಹ ವಿಟ್ಟಲ್ ಹೇಳಿದ್ದಾರೆ.

ಇನ್ನು ಇ-ಸಿಮ್‌ಗಳ ಪ್ರಯೋಜನಗಳ ಕುರಿತು ವಿಟ್ಟಲ್ ಇತ್ತೀಚೆಗೆ ಏರ್‌ಟೆಲ್ ಗ್ರಾಹಕರಿಗೆ ಇಮೇಲ್ ಸಹ ಕಳುಹಿಸಿದ್ದಾರೆ. ಇ-ಸಿಮ್‌ಗಳು ತಡೆರಹಿತ ಸಂಪರ್ಕವನ್ನು ಒದಗಿಸುತ್ತವೆ, ಡಿವೈಸ್‌ಗಳ ನಡುವೆ ಬದಲಾಯಿಸಲು ಸುಲಭವಾಗುತ್ತದೆ ಎಂದು ಅವರು ಇಮೇಲ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇ-ಸಿಮ್‌ಗಳು ಫೋನ್‌ ಕದ್ದ ಕಳ್ಳರಿಗೆ ಕಷ್ಟ ಉಂಟು ಮಾಡುತ್ತವೆ. ಪರಿಣಾಮ ಕದ್ದ ಫೋನ್ ಅನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಭೌತಿಕ ಸಿಮ್ ಬದಲು ಇ-ಸಿಮ್‌ಗೆ ಬದಲಾಗಿ! ಏರ್‌ಟೆಲ್‌ ಸಿಇಒ ಹೀಗಂದಿದ್ಯಾಕೆ?

ಇನ್ನು ಆಪಲ್ ಐಫೋನ್ 12 ಸರಣಿಯೊಂದಿಗೆ ಈ ಸಿಮ್‌ ಅನ್ನು ಪರಿಚಯಿಸಲಾಗಿದೆ. ಇ-ಸಿಮ್‌ಗಳನ್ನು ಬಳಸುವ ಪ್ರವೃತ್ತಿಯು ಇಲ್ಲಿಂದ ಆರಂಭ ಆಗಿದ್ದು, ಈಗಾಗಲೇ ಸಾಕಷ್ಟು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಆಪಲ್‌ ತರುವಾಯ ಸ್ಯಾಮ್‌ಸಂಗ್‌, ಮೊಟೊರೊಲಾ, ಮತ್ತು ಒನ್‌ಪ್ಲಸ್‌ನಂತ ಅನೇಕ ಇತರ ಫೋನ್ ಬ್ರ್ಯಾಂಡ್‌ಗಳು ಇ-ಸಿಮ್‌ಗಳೊಂದಿಗೆ ಕೆಲಸ ಮಾಡುವ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಸಜ್ಜಾಗಿವೆ.

ಇ-ಸಿಮ್‌ ಎಂದರೇನು?: ಇ-ಸಿಮ್‌ ಈಗ ನೀವು ಬಳಕೆ ಮಾಡುವ ರೀತಿಯಲ್ಲಿ ಇರುವುದಿಲ್ಲ. ಬದಲಾಗಿ ನಿಮ್ಮ ಫೋನ್‌ನಲ್ಲಿಯೇ ಇನ್‌ಬಿಲ್ಟ್‌ ಆಗಿ ಕಾಣಿಸಿಕೊಳ್ಳುತ್ತದೆ. ಇವು ಉತ್ತಮವಾಗಿ ಕಾರ್ಯನಿರ್ವಹಿಸಲು ನಿಮ್ಮ ಡಿವೈಸ್‌ನ ವಿಶೇಷ ಸಾಫ್ಟ್‌ವೇರ್ ಅನ್ನು ಬಳಕೆ ಮಾಡಿಕೊಳ್ಳುತ್ತವೆ. ಆದರೆ, ಈಗ ಇ-ಸಿಮ್‌ನೊಂದಿಗೆ ಹೊಸ ಫೋನ್‌ಗೆ ಬದಲಾಯಿಸುವುದು ಹೆಚ್ಚು ಜಟಿಲವಾಗಿದೆ ಎಂದೂ ಸಹ ಹೇಳಲಾಗುತ್ತಿದೆ.

ಭೌತಿಕ ಸಿಮ್ ಬದಲು ಇ-ಸಿಮ್‌ಗೆ ಬದಲಾಗಿ! ಏರ್‌ಟೆಲ್‌ ಸಿಇಒ ಹೀಗಂದಿದ್ಯಾಕೆ?

ಇ-ಸಿಮ್‌ ನಿಂದಾಗುವ ಇತರೆ ಪ್ರಯೋಜನ ಏನು?: ಇ-ಸಿಮ್‌ಗಳಿಗೆ ಬದಲಾಯಿಸುವುದರಿಂದ ನಾವು ನಮ್ಮ ಫೋನ್‌ಗಳನ್ನು ಹೇಗೆ ಬಳಸುತ್ತೇವೆ ಎಂಬುದರಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದಾಗಿದೆ. ಇದು ಬಳಕೆದಾರರಿಗೆ ಯಾವುದೇ ಮಾಹಿತಿಯನ್ನು ಸುಲಭ ಮತ್ತು ಹೆಚ್ಚು ಸುರಕ್ಷಿತವಾಗಿಸಿಕೊಳ್ಳಬಹುದಾಗಿದೆ. ಭೌತಿಕ ಸಿಮ್ ಕಾರ್ಡ್‌ಗಳಿಂದ ದೂರ ಸರಿಯುವ ಮೂಲಕ ಮತ್ತು ಇ-ಸಿಮ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ಅನುಭವವನ್ನೂ ಸಹ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Airtel CEO Gopal Vittal made a statement about traditional physical SIM cards and E-SIM, and this relationship is being discussed everywhere. Also encouraged to use e-SIM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+