ನೀವು ಏರ್‌ಟೆಲ್ ಗ್ರಾಹಕರೇ?..ಡೇಟಾ ಖಾಲಿ ಆದ್ರೆ, ಖಂಡಿತಾ ಈ ಪ್ಲ್ಯಾನ್ ನಿಮಗೆ ಬೆಸ್ಟ್!
ಭಾರತೀಯ ಟೆಲಿಕಾಂ ಪೂರೈಕೆದಾರ ಸಂಸ್ಥೆಗಳು ಅಧಿಕ ಸೌಲಭ್ಯದ ರೀಚಾರ್ಜ್ ಯೋಜನೆಗಳ ಮೂಲಕ ಹೆಚ್ಚಿನ ಚಂದಾದಾರರನ್ನು ಆಕರ್ಷಿಸಲು ಪ್ರಯತ್ನ ಮುನ್ನಡೆಸಿವೆ. ಆ ಪೈಕಿ ದೇಶದ ದ್ವಿತೀಯ ದೊಡ್ಡ ಟೆಲಿಕಾಂ ಎಂದು ಬಿಂಬಿತವಾಗಿರುವ ಭಾರ್ತಿ ಏರ್‌ಟೆಲ್ ಅಧಿಕ ಡೇಟಾ, ಬಿಗ್ ವ್ಯಾಲಿಡಿಟಿ ಹಾಗೂ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಒಳಗೊಂಡ ಪ್ಲ್ಯಾನ್‌ಗಳ ಆಯ್ಕೆ ಕೂಡಾ ಪರಿಚಯಿಸಿದೆ.
ಹಾಗೆಯೇ ಏರ್‌ಟೆಲ್ ಟೆಲಿಕಾಂ ಗ್ರಾಹಕರಿಗೆ ಹೆಚ್ಚುವರಿ ಡೇಟಾಗಾಗಿ ಅಗತ್ಯತೆಗಾಗಿ ಭಿನ್ನ ಬೆಲೆಯಲ್ಲಿ ಕೆಲವು ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಒದಗಿಸಿದೆ. ಬಳಕೆದಾರರ ದೈನಂದಿನ ಡೇಟಾ ಮುಗಿದ ವೇಳೆ ಈ ಡೇಟಾ ರೀಚಾರ್ಜ್ ಪ್ಲ್ಯಾನ್‌ಗಳು ಬಳಕೆದಾರರ ಅನುಕೂಲಕ್ಕೆ ಬರಲಿವೆ.

ಬಳಕೆದಾರರು ಅವರ ಅನುಕೂಲಕ್ಕೆ ಅನುಗುಣವಾಗಿ ಡೇಟಾ ಪ್ಯಾಕ್ ರೀಚಾರ್ಜ್ ಮಾಡಿಸಬಹುದಾಗಿದೆ. ಏರ್‌ಟೆಲ್ 19ರೂ. ಗಳಿಂದ ಡೇಟಾ ಯೋಜನೆ ಆಯ್ಕೆ ಹೊಂದಿದ್ದು, ದೈನಂದಿನ ಡೇಟಾ ಸೌಲಭ್ಯದ ಯೋಜನೆಗಳು ಇವೆ. ಹಾಗಾದರೆ ಭಾರ್ತಿ ಏರ್‌ಟೆಲ್ ಟೆಲಿಕಾಂನ ಡೇಟಾ ರೀಚಾರ್ಜ್ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಏರ್‌ಟೆಲ್ ಹೆಚ್ಚಿವರಿ ಡೇಟಾ ರೀಚಾರ್ಜ್ ಪ್ಯಾಕ್
ಭಾರ್ತಿ ಏರ್‌ಟೆಲ್ ಟೆಲಿಕಾಂನ 49ರೂ. ರೀಚಾರ್ಜ್ ಯೋಜನೆಯು ಒಂದು ದಿನದ ವ್ಯಾಲಿಡಿಟಿ ಪಡೆದಿದ್ದು, 6GB ಡೇಟಾ ಪ್ರಯೋಜನ ಹೊಂದಿದೆ. ಅದೇ ರೀತಿ ಏರ್‌ಟೆಲ್ ಟೆಲಿಕಾಂನ 148ರೂ. ರೀಚಾರ್ಜ್ ಪ್ಲ್ಯಾನ್ 15GB ಡೇಟಾ ಸೌಲಭ್ಯ ಪಡೆದಿದ್ದು, ಮೂಲ ಪ್ಲ್ಯಾನಿನ ವ್ಯಾಲಿಡಿಟಿಯ ಸೌಲಭ್ಯ ಪಡೆದಿದೆ.

ಅದೇ ರೀತಿ ಏರ್‌ಟೆಲ್ 118ರೂ. ರೀಚಾರ್ಜ್ ಪ್ಲ್ಯಾನ್ 12GB ಡೇಟಾ ಪ್ರಯೋಜನ ಹೊಂದಿದ್ದು, ಇದು ಕೂಡಾ ಗ್ರಾಹಕರ ಮೂಲ ಪ್ಲ್ಯಾನಿನ ವ್ಯಾಲಿಡಿಟಿಯನ್ನೇ ಇದು ಕೂಡಾ ಪಡೆದಿದೆ. ಅದಲ್ಲದೇ ಏರ್‌ಟೆಲ್ ಟೆಲಿಕಾಂನ 301ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 50GB ಡೇಟಾ ಸೌಲಭ್ಯ ಒಳಗೊಂಡಿದ್ದು, ಗ್ರಾಹಕರ ಚಾಲ್ತಿ ಇರುವ ಯೋಜನೆ ವ್ಯಾಲಿಡಿಟಿಯನ್ನೇ ಇದು ಒಳಗೊಂಡಿದೆ.
ಇನ್ನು ಭಾರ್ತಿ ಏರ್‌ಟೆಲ್ 65 ರೂ. ರೀಚಾರ್ಜ್ ಪ್ಲ್ಯಾನ್ 4GB ಡೇಟಾ ಪ್ರಯೋಜನ ಪಡೆದಿದ್ದು, ಗ್ರಾಹಕರ ಚಾಲ್ತಿ ಇರುವ ಮೂಲ ಯೋಜನೆ ವ್ಯಾಲಿಡಿಟಿಯನ್ನೇ ಇದು ಒಳಗೊಂಡಿದೆ. ಅದಲ್ಲದೇ ಏರ್‌ಟೆಲ್ ಟೆಲಿಕಾಂನ 29 ರೂ. ರೀಚಾರ್ಜ್ ಪ್ಯಾಕ್ ಒಟ್ಟು 2 GB ಡೇಟಾ ಪ್ರಯೋಜನ ಒಳಗೊಂಡಿದ್ದು, ಒಂದು ದಿನದ ವ್ಯಾಲಿಡಿಟಿಯ ಸೌಲಭ್ಯ ಒಳಗೊಂಡಿದೆ.

ಅಲ್ಲದೇ ಏರ್‌ಟೆಲ್ ಟೆಲಿಕಾಂನ 181 ರೂ. ರೀಚಾರ್ಜ್ ಪ್ಯಾಕ್ ಪ್ರತಿದಿನ 1 GB ಡೇಟಾ ಪ್ರಯೋಜನ ಒಳಗೊಂಡಿದ್ದು, ಈ ಪ್ಲ್ಯಾನ್ ಒಟ್ಟು 30 ದಿನಗಳ ವ್ಯಾಲಿಡಿಟಿಯ ಸೌಲಭ್ಯ ಹೊಂದಿದೆ. ಇನ್ನು ಭಾರ್ತಿ ಏರ್‌ಟೆಲ್ ಟೆಲಿಕಾಂನ 19ರೂ. ಬೆಲೆಯ ಪ್ಯಾಕ್ 1GB ಡೇಟಾ ಸೌಲಭ್ಯ ಪಡೆದಿದ್ದು, ಒಂದು ದಿನದ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ.
ಇತರೆ ಜನಪ್ರಿಯ ಯೋಜನೆಗಳು
ಏರ್‌ಟೆಲ್ 666ರೂ. ಪ್ಲಾನ್ ಸೌಲಭ್ಯಗಳು
ಏರ್‌ಟೆಲ್ ಸಂಸ್ಥೆಯ ಈ 666 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಪಡೆದಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ.
ಏರ್‌ಟೆಲ್ 699ರೂ. ಪ್ಲ್ಯಾನ್ ಸೌಲಭ್ಯಗಳು
ಏರ್‌ಟೆಲ್ ಸಂಸ್ಥೆಯ 699ರೂ. ಪ್ರೀಪೇಯ್ಡ್ ಪ್ಲ್ಯಾನ್ ಸಹ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಕೂಡಾ ಸಿಗಲಿದ್ದು, ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಿಗಲಿದೆ.
ಏರ್‌ಟೆಲ್ 839ರೂ. ಪ್ಲ್ಯಾನ್ ಸೌಲಭ್ಯಗಳು
ಏರ್‌ಟೆಲ್ ಟೆಲಿಕಾಂನ 839ರೂ. ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಪಡೆದಿದ್ದು, ಇದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಹೊಂದಿದೆ. ಅಲ್ಲದೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದ್ದು, ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಸೌಲಭ್ಯ ದೊರೆಯುತ್ತದೆ.


Click it and Unblock the Notifications








