ಹೆಚ್ಚಿನ ಡೇಟಾ ಅಗತ್ಯ ಇದ್ದರೆ, ಏರ್‌ಟೆಲ್ ಈ ಡೇಟಾ ಪ್ಲ್ಯಾನ್‌ಗಳು ಬೆಸ್ಟ್!
ದೇಶದ ಟೆಲಿಕಾಂ ವಲಯದಲ್ಲಿ ಏರ್‌ಟೆಲ್ ಜಿಯೋಗೆ ನೇರ ಪೈಪೋಟಿ ನೀಡುವ ಹೆಜ್ಜೆಗಳನ್ನು ಹಾಕುತ್ತ ಸಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಇತ್ತೀಚೆಗೆ ಪ್ರಿಪೇಯ್ಡ್ ಬಳಕೆದಾರರಿಗಾಗಿ ಒಟಿಟಿ ಚಂದಾದಾರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಡೇಟಾ ಪ್ಯಾಕ್‌ಗಳನ್ನು ಪರಿಚಯಿಸಿದೆ. ಕೆಲವು ವಾರಗಳ ಹಿಂದೆ, ಏರ್‌ಟೆಲ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯೊಂದಿಗೆ ಹೊಸ ಯೋಜನೆಗಳನ್ನು ಪರಿಚಯಿಸಿತು. ಕೆಲವು ಡೇಟಾ ಯೋಜನೆಗಳನ್ನು ವಿಂಕ್ ಪ್ರೀಮಿಯಂ ಚಂದಾದಾರಿಕೆಯೊಂದಿಗೆ ಸಂಯೋಜಿಸಿದೆ.

ಏರ್ಟೆಲ್ ಈ ಮೊದಲು ಕೇವಲ ಮೂರು ಡೇಟಾ ಪ್ಯಾಕ್‌ಗಳನ್ನು ಹೊಂದಿತ್ತು, ಆದರೆ ಈಗ ಆ ಸಂಖ್ಯೆ ಎಂಟಕ್ಕೆ ಹೆಚ್ಚಿಸಲಾಗಿದೆ. ಇನ್ನು ಈ ಡೇಟಾ ಪ್ಯಾಕ್‌ಗಳ ಆರಂಭಿಕ ಬೆಲೆ 48ರೂ. ಆಗಿದ್ದು, ಹಾಗೆಯೇ 401ರೂ.ಗಳ ಡಾಟಾ ಪ್ಯಾಕ್‌ನ ಸಹ ಏರ್‌ಟೆಲ್ ಹೊಂದಿದೆ. ಈ ಯೋಜನೆಗಳು ಒಟಿಟಿ ಚಂದಾದಾರಿಕೆಗಳನ್ನು ಒಟ್ಟುಗೂಡಿಸುವುದು ಹೆಚ್ಚುವರಿ ಪ್ರಯೋಜನವಾಗಿದೆ. ಹಾಗಾದರೇ ಏರ್‌ಟೆಲ್ ಡಾಟಾ ಪ್ಯಾಕ್‌ಗಳ ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್ 401ರೂ. ಡೇಟಾ ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ ಈ ಪ್ರೀಪೇಯ್ಡ್ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಆದರೆ ಈ ಪ್ಲ್ಯಾನಿನಲ್ಲಿ ಯಾವುದೇ ಉಚಿತ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಿರುವುದಿಲ್ಲ.

ಏರ್‌ಟೆಲ್ 48ರೂ. ಡೇಟಾ ಪ್ಲ್ಯಾನ್
ಈ ಪ್ಲ್ಯಾನ್ ಒಟ್ಟು 3GB ಉಚಿತ ಡೇಟಾವನ್ನು ಒಳಗೊಂಡಿದ್ದು, 3G ಅಥವಾ 4G ನೆಟ್‌ವರ್ಕ್‌ನಲ್ಲಿ ಡೇಟಾ ಬಳಸಬಹುದಾಗಿದೆ. 28 ದಿನಗಳ ವ್ಯಾಲಿಡಿಟಿಯಲ್ಲಿ ದೊರೆಯಲಿದ್ದು, ಇದರಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್ ನೀಡಿಲ್ಲ. ಕಂಪನಿಯ ಪ್ರೀಪೇಡ್ ಬಳಕೆದಾರರು ಈ ಪ್ಲ್ಯಾನ್ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಕೆಲವು ಬಳಕೆದಾರರಿಗೆ ಏರ್‌ಟೆಲ್ ಹೆಚ್ಚುವರಿ 3GB ಡೇಟಾವನ್ನು ಒದಗಿಸುತ್ತಿದ್ದು, ಒಟ್ಟಾರೆ ಡೇಟಾ ಪ್ರಯೋಜನ 6GB ಲಭ್ಯ.

ಏರ್‌ಟೆಲ್ 89ರೂ. ಡೇಟಾ ಪ್ಲ್ಯಾನ್
ಏರ್‌ಟೆಲ್‌ನ ಈ ಪ್ಯಾಕ್‌ನಲ್ಲಿ ಬಳಕೆದಾರರಿಗೆ 6GB ಡೇಟಾ ಲಭ್ಯವಾಗಲಿದ್ದು, ಇದರೊಂದಿಗೆ ಅಸ್ತಿತ್ವದಲ್ಲಿರುವ ಯಾವುದೇ ಏರ್‌ಟೆಲ್ ಪ್ರೀಪೇಯ್ಡ್ ಯೋಜನೆ ವ್ಯಾಲಿಡಿಟಿಯೇ ಹೊಂದಿದೆ. 28 ದಿನಗಳ ಅವಧಿಗೆ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಚಂದಾದಾರಿಗೆ ಹಾಗೂ ಉಚಿತ ಹೆಲೋಟೂನ್ಸ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಸದಸ್ಯತ್ವ ಲಭ್ಯ.

ಏರ್‌ಟೆಲ್ 98ರೂ. ಡೇಟಾ ಪ್ಲ್ಯಾನ್
ಏರ್‌ಟೆಲ್‌ನ ಈ ಪ್ಲ್ಯಾನ್ ಒಟ್ಟು 12GB ಉಚಿತ ಡೇಟಾವನ್ನು ಒಳಗೊಂಡಿದ್ದು, 3G ಅಥವಾ 4G ನೆಟ್‌ವರ್ಕ್‌ನಲ್ಲಿ ಡೇಟಾ ಬಳಸಬಹುದಾಗಿದೆ. ಇದು ಸಹ 28 ದಿನಗಳ ವ್ಯಾಲಿಡಿಟಿಯಲ್ಲಿ ದೊರೆಯಲಿದ್ದು, ಪ್ರತಿ ದಿನ 10 ಉಚಿತ ಎಸ್‌ಎಮ್‌ಎಸ್ ಮಾಡಬಹುದಾಗಿದೆ. ಕಂಪನಿಯ ಪ್ರೀಪೇಡ್ ಬಳಕೆದಾರರು ಈ ರೀಚಾರ್ಜ್‌ನ ಪ್ರಯೋಜನ ಪಡೆಯಬಹುದಾಗಿದೆ.

ಏರ್‌ಟೆಲ್ 251ರೂ. ಡೇಟಾ ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ ಈ ಡೇಟಾ ಯೋಜನೆಯಲ್ಲಿ ಒಟ್ಟು 50GB ಡೇಟಾ ಸಿಗಲಿದೆ. ವರ್ಕ್ ಫ್ರಂ ಹೋಮ್ ಕೆಲಸಕ್ಕೆ ಅನುಕೂಲವಾಗಲೆಂದು ಕಂಪನಿಯು ಈ ಯೋಜನೆಯನ್ನು ಪರಿಚಯಿಸಿತ್ತು. ಇನ್ನು ಮೂಲ ಪ್ಲ್ಯಾನಿನ ವ್ಯಾಲಿಡಿಯೇ ಈ ಯೋಜನೆಯಲ್ಲಿ ಮುಂದುವರೆಯಲಿದೆ.


Click it and Unblock the Notifications








