ಏರ್‌ಟೆಲ್ ಗ್ರಾಹಕರೇ, ಡೇಟಾ ಮುಗಿದರೆ ಈ ಅಗ್ಗದ ಬೆಲೆಯ ಪ್ಲ್ಯಾನ್ ಬೆಸ್ಟ್!
ದೇಶದ ಟೆಲಿಕಾಂ ಸಂಸ್ಥೆಗಳು ಅಧಿಕ ಚಂದಾದಾರರನ್ನು ಸೆಳೆಯಲು ಆಕರ್ಷಕ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ನೀಡಿವೆ. ಆ ಪೈಕಿ ಎರಡನೇ ದೊಡ್ಡ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್ ದೈನಂದಿನ ಅಧಿಕ ಡೇಟಾ ಯೋಜನೆಗಳ ಜೊತೆಗೆ ಹೆಚ್ಚುವರಿ ಡೇಟಾಗಾಗಿ ಪ್ರತ್ಯೇಕ ಪ್ಲ್ಯಾನ್‌ಗಳ ಆಯ್ಕೆ ಕೂಡಾ ನೀಡಿದೆ.
ಹೌದು, ಭಾರ್ತಿ ಏರ್‌ಟೆಲ್ ಟೆಲಿಕಾಂ ಹೆಚ್ಚುವರಿ ಡೇಟಾಗಾಗಿ ಅಗ್ಗದ ಬೆಲೆಯಲ್ಲಿ ಕೆಲವು ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಒದಗಿಸಿದೆ. ದೈನಂದಿನ ಡೇಟಾ ಮುಗಿದ ಸಂದರ್ಭದಲ್ಲಿ ಈ ಡೇಟಾ ರೀಚಾರ್ಜ್ ಯೋಜನೆಗಳು ಗ್ರಾಹಕರಿಗೆ ಉಪಯುಕ್ತ ಎನಿಸುತ್ತವೆ. ಹಾಗಾದರೆ ಭಾರ್ತಿ ಏರ್‌ಟೆಲ್ ಟೆಲಿಕಾಂನ ಡೇಟಾ ರೀಚಾರ್ಜ್ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ ಡೇಟಾ ರೀಚಾರ್ಜ್ ಯೋಜನೆಗಳು
ಏರ್‌ಟೆಲ್ ಟೆಲಿಕಾಂನ 49ರೂ. ರೀಚಾರ್ಜ್ ಪ್ಲ್ಯಾನ್ ಒಂದು ದಿನದ ವ್ಯಾಲಿಡಿಟಿ ಪಡೆದಿದ್ದು, 6GB ಡೇಟಾ ಪ್ರಯೋಜನ ಪಡೆದಿದೆ. ಅದೇ ರೀತಿ ಏರ್‌ಟೆಲ್ ಟೆಲಿಕಾಂನ 148ರೂ. ರೀಚಾರ್ಜ್ ಪ್ಲ್ಯಾನ್ 15GB ಡೇಟಾ ಪ್ರಯೋಜನ ಒಳಗೊಂಡಿದ್ದು, ಮೂಲ ಯೋಜನೆಯ ವ್ಯಾಲಿಡಿಟಿ ಇರುವಷ್ಟು ದಿನ ಲಭ್ಯ ಇರುತ್ತದೆ.
ಹಾಗೆಯೇ ಏರ್‌ಟೆಲ್ 118ರೂ. ರೀಚಾರ್ಜ್ ಯೋಜನೆಯು 12GB ಡೇಟಾ ಪ್ರಯೋಜನ ಪಡೆದಿದ್ದು, ಇದು ಸಹ ಗ್ರಾಹಕರ ಮೂಲ ಯೋಜನೆ ವ್ಯಾಲಿಡಿಟಿಯೇ, ಈ ಪ್ಲ್ಯಾನಿನ ವ್ಯಾಲಿಡಿಟಿ ಆಗಿದೆ. ಅದಲ್ಲದೇ ಏರ್‌ಟೆಲ್ ಟೆಲಿಕಾಂನ 301ರೂ. ರೀಚಾರ್ಜ್ ಯೋಜನೆಯು ಒಟ್ಟು 50GB ಡೇಟಾ ಪ್ರಯೋಜನ ಒಳಗೊಂಡಿದ್ದು, ಗ್ರಾಹಕರ ಚಾಲ್ತಿ ಇರುವ ಯೋಜನೆ ವ್ಯಾಲಿಡಿಟಿಯನ್ನೇ ಇದು ಪಡೆದಿದೆ.
ಹಾಗೆಯೇ ಏರ್‌ಟೆಲ್ 65 ರೂ. ರೀಚಾರ್ಜ್ ಯೋಜನೆಯು 4GB ಡೇಟಾ ಪ್ರಯೋಜನ ಪಡೆದಿದ್ದು, ಗ್ರಾಹಕರ ಚಾಲ್ತಿ ಇರುವ ಮೂಲ ಯೋಜನೆ ವ್ಯಾಲಿಡಿಟಿಯನ್ನೇ ಇದು ಪಡೆದಿದೆ. ಅದಲ್ಲದೇ ಏರ್‌ಟೆಲ್ ಟೆಲಿಕಾಂನ 29 ರೂ. ರೀಚಾರ್ಜ್ ಯೋಜನೆಯು ಒಟ್ಟು 2 GB ಡೇಟಾ ಪ್ರಯೋಜನ ಒಳಗೊಂಡಿದ್ದು, ಒಂದು ದಿನದ ವ್ಯಾಲಿಡಿಟಿಯ ಸೌಲಭ್ಯ ಪಡೆದುಕೊಂಡಿದೆ.
ಅದೇ ರೀತಿ ಏರ್‌ಟೆಲ್ ಟೆಲಿಕಾಂನ 181 ರೂ. ರೀಚಾರ್ಜ್ ಯೋಜನೆಯು ಪ್ರತಿದಿನ 1 GB ಡೇಟಾ ಪ್ರಯೋಜನ ಒಳಗೊಂಡಿದ್ದು, ಈ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿಯ ಸೌಲಭ್ಯ ಪಡೆದುಕೊಂಡಿದೆ. ಇನ್ನು ಏರ್‌ಟೆಲ್ ಟೆಲಿಕಾಂನ 19ರೂ. ಬೆಲೆಯ ಯೋಜನೆಯು 1GB ಡೇಟಾ ಸೌಲಭ್ಯ ಪಡೆದಿದ್ದು, ಒಂದು ದಿನದ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ.
ಏರ್‌ಟೆಲ್‌ನ ಇತರೆ ಜನಪ್ರಿಯ ಯೋಜನೆಗಳು
ಏರ್‌ಟೆಲ್ ಟೆಲಿಕಾಂನ 779ರೂ. ರೀಚಾರ್ಜ್ ಪ್ಲಾನ್ : ಏರ್‌ಟೆಲ್‌ನ ಈ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಅಂದರೇ ಪೂರ್ಣ ಮೂರು ತಿಂಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಈ ವೇಳೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ಜೊತೆಗೆ ಗ್ರಾಹಕರಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 135GB ಲಭ್ಯವಾಗಲಿದೆ.
ಏರ್‌ಟೆಲ್ ಟೆಲಿಕಾಂನ 519ರೂ. ರೀಚಾರ್ಜ್ ಪ್ಲಾನ್ : ಏರ್‌ಟೆಲ್ ಟೆಲಿಕಾಂನ 519ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 60 ದಿನಗಳ ವ್ಯಾಲಿಡಿಟಿ ಅವಧಿಯನ್ನು ಅಂದರೇ ಪೂರ್ಣ ಎರಡು ತಿಂಗಳ ವ್ಯಾಲಿಡಿಟಿ ಪಡೆದುಕೊಂಡಿದೆ. ಈ ವೇಳೆ ಪ್ರತಿದಿನ 1.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 90GB ಡೇಟಾ ಲಭ್ಯ ಆಗಲಿದ್ದು, ಇದರ ಜೊತೆಗೆ ಹೆಚ್ಚುವರಿಯಾಗಿ ಏರ್‌ಟೆಲ್ ಆಪ್‌ಗಳ ಸೌಲಭ್ಯ ಸಿಗುತ್ತವೆ.


Click it and Unblock the Notifications








