Home
ಸುದ್ದಿಜಾಲ

ಮೊಬೈಲ್‌ ಡೇಟಾ ಖಾಲಿ ಆಯ್ತಾ?..ಕೂಡಲೇ ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿ ಬಿಡಿ!

ಭಾರ್ತಿ ಏರ್‌ಟೆಲ್‌ ಟೆಲಿಕಾಂ (Airtel) ಅಗ್ಗದ ಬೆಲೆಯಲ್ಲಿ ಹಲವು ರೀಚಾರ್ಜ್‌ ಯೋಜನೆಗಳನ್ನು ಪರಿಚಯಿಸಿ ಚಂದಾದಾರರಿಂದ ಸೈ ಎನಿಸಿಕೊಂಡಿದೆ. ಹಾಗೆಯೇ ತನ್ನ ಚಂದಾದಾರರಿಗೆ ಅನುಕೂಲಕರ ವ್ಯಾಲಿಡಿಟಿ ಹಾಗೂ ಡೇಟಾ ಸೌಲಭ್ಯದ ಪ್ಲ್ಯಾನ್‌ಗಳನ್ನು ಸಹ ಪರಿಚಯಿಸಿ ಗಮನ ಸೆಳೆದಿದೆ. ಇದರ ಜೊತೆಗೆ ಹೆಚ್ಚುವರಿ ಡೇಟಾ ಬಯಸುವ ಬಳಕೆದಾರರಿಗಾಗಿ ಕಡಿಮೆ ಬೆಲೆಯಲ್ಲಿ ಕೆಲವು 4G ಡೇಟಾ ವೋಚರ್‌ ಪ್ಯಾಕ್‌ಗಳ ಆಯ್ಕೆಯನ್ನು ಸಹ ಏರ್‌ಟೆಲ್‌ ಒಳಗೊಂಡಿದೆ.

ಹೌದು, ಏರ್‌ಟೆಲ್‌ (Airtel) ಟೆಲಿಕಾಂ ಭಿನ್ನ ಬೆಲೆ ಶ್ರೇಣಿಯಲ್ಲಿ ಆಕರ್ಷಕ 4G ಡೇಟಾ ವೋಚರ್‌ಗಳ ಆಯ್ಕೆಯನ್ನು ಚಂದಾದಾರರಿಗೆ ನೀಡಿದೆ. ಬಹುತೇಕ ಚಂದಾದಾರರು ದೀರ್ಘ ವ್ಯಾಲಿಡಿಟಿ ಪ್ರಯೋಜನ ಇರುವ ಪ್ರೀಪೇಯ್ಡ್‌ ಪ್ಲ್ಯಾನ್ ರೀಚಾರ್ಜ್ ಮಾಡಿಸಿರುತ್ತಾರೆ. ಅದಾಗ್ಯೂ, ಕೆಲವು ವೇಳೆ ವ್ಯಾಲಿಡಿಟಿ ಇರುತ್ತೆ ಆದರೆ, ಪ್ಲ್ಯಾನ್‌ ಮುಗಿಯುವ ಮುನ್ನವೇ ನಿಗದಿತ ಡೇಟಾ ಪ್ರಯೋಜನ ಖಾಲಿ ಆಗಿ ಹೋಗಿರುತ್ತದೆ. ಆಗ ಈ ಡೇಟಾ ವೋಚರ್‌ಗಳು ಅನುಕೂಲಕರ ಎನಿಸುತ್ತವೆ.

ಮೊಬೈಲ್‌ ಡೇಟಾ ಖಾಲಿ ಆಯ್ತಾ?..ಕೂಡಲೇ ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿ ಬಿಡಿ!

ಅಂದಹಾಗೇ ಕೆಲವು ಏರ್‌ಟೆಲ್‌ (Airtel) ಟೆಲಿಕಾಂನ 4G ಡೇಟಾ ವೋಚರ್‌ಗಳು ಚಂದಾದಾರರಿಗೆ ಅವರ ಎಕ್ಸಿಸ್ಟಿಂಗ್ ಪ್ಲ್ಯಾನ್ ವ್ಯಾಲಿಡಿಟಿಯನ್ನೇ ಒದಗಿಸುತ್ತವೆ. ಇನ್ನು ಕೆಲ ಯೋಜನೆಗಳು ನಿರ್ಧಿಷ್ಟ ವ್ಯಾಲಿಡಿಟಿ ಪಡೆದಿವೆ. ಹಾಗಾದರೇ ಏರ್‌ಟೆಲ್‌ (Airtel) ಟೆಲಿಕಾಂ ನ ಪ್ರಮುಖ 4G ಡೇಟಾ ವೋಚರ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ಏರ್‌ಟೆಲ್‌ 49ರೂ. ಡೇಟಾ ರೀಚಾರ್ಜ್‌ ವೋಚರ್

ಏರ್‌ಟೆಲ್‌ 49ರೂ. ಡೇಟಾ ವೋಚರ್ ಬಳಕೆದಾರರಿಗೆ ಅನಿಯಮಿತ ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಆದರೆ ಈ ರೀಚಾರ್ಜ್‌ ವೋಚರ್ ವ್ಯಾಲಿಡಿಟಿಯು ಕೇವಲ ಒಂದು ದಿನ ಮಾತ್ರ. ಹೀಗಾಗಿ ನೀವು ಒಂದು ದಿನದಲ್ಲಿ ಸಂಪೂರ್ಣ ಹೆಚ್ಚಿನ ಡೇಟಾವನ್ನು ಬಳಸದಿದ್ದರೆ, ಅದರ ಅವಧಿ ಮುಗಿಯುತ್ತದೆ.

ಏರ್‌ಟೆಲ್‌ 99ರೂ. ಡೇಟಾ ರೀಚಾರ್ಜ್‌ ವೋಚರ್

ಏರ್‌ಟೆಲ್‌ 99ರೂ. ಡೇಟಾ ವೋಚರ್ ಬಳಕೆದಾರರಿಗೆ ಅನಿಯಮಿತ ಡೇಟಾ ಸೌಲಭ್ಯವನ್ನು ನೀಡುತ್ತದೆ. ಆದರೆ ಈ ರೀಚಾರ್ಜ್‌ ವೋಚರ್ ವ್ಯಾಲಿಡಿಟಿಯು ಕೇವಲ 2 ದಿನ ಮಾತ್ರ. ಹೀಗಾಗಿ ನೀವು ಒಂದು ದಿನದಲ್ಲಿ ಸಂಪೂರ್ಣ ಹೆಚ್ಚಿನ ಡೇಟಾವನ್ನು ಬಳಸದಿದ್ದರೆ, ಅದರ ವ್ಯಾಲಿಡಿಟಿ ಅವಧಿ ಮುಗಿಯುತ್ತದೆ.

ಏರ್‌ಟೆಲ್‌ 161ರೂ. ಡೇಟಾ ರೀಚಾರ್ಜ್‌ ವೋಚರ್

ಏರ್‌ಟೆಲ್‌ 161ರೂ. ಡೇಟಾ ವೋಚರ್ ಬಳಕೆದಾರರಿಗೆ 12GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಹಾಗೆಯೇ ಈ ರೀಚಾರ್ಜ್‌ ವೋಚರ್ ವ್ಯಾಲಿಡಿಟಿಯು 30 ದಿನ ಮಾತ್ರ. ಈ ಅವಧಿಯಲ್ಲಿ ಬಳಕೆದಾರರು ಡೇಟಾ ಸೌಲಭ್ಯವನ್ನು ಬಳಕೆ ಮಾಡಬಹುದು. ಇದರಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯ ಗಳು ಲಭ್ಯ ಇರುವುದಿಲ್ಲ.

ಏರ್‌ಟೆಲ್‌ 181ರೂ. ಡೇಟಾ ರೀಚಾರ್ಜ್‌ ವೋಚರ್

ಭಾರ್ತಿ ಏರ್‌ಟೆಲ್‌ 181ರೂ. ಡೇಟಾ ವೋಚರ್ ಬಳಕೆದಾರರಿಗೆ 15 GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಹಾಗೆಯೇ ಈ ರೀಚಾರ್ಜ್‌ ವೋಚರ್ ವ್ಯಾಲಿಡಿಟಿಯು 30 ದಿನ ಮಾತ್ರ. ಈ ಅವಧಿಯಲ್ಲಿ ಬಳಕೆದಾರರು ಡೇಟಾ ಸೌಲಭ್ಯವನ್ನು ಬಳಕೆ ಮಾಡಬಹುದು. ಇದರಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯ ಗಳು ಲಭ್ಯ ಇರುವುದಿಲ್ಲ.

ಏರ್‌ಟೆಲ್‌ 211ರೂ. ಡೇಟಾ ರೀಚಾರ್ಜ್‌ ವೋಚರ್

ಭಾರ್ತಿ ಏರ್‌ಟೆಲ್‌ 211ರೂ. ಡೇಟಾ ವೋಚರ್ ಬಳಕೆದಾರರಿಗೆ ನಿತ್ಯ 1GB ಡೇಟಾ ಲಭ್ಯವಾಗಲಿದ್ದು, ಒಟ್ಟು 30GB ಡೇಟಾ ಸೌಲಭ್ಯವನ್ನು ದೊರೆಯುತ್ತದೆ. ಹಾಗೆಯೇ ಈ ರೀಚಾರ್ಜ್‌ ವೋಚರ್ ವ್ಯಾಲಿಡಿಟಿಯು 30 ದಿನ ಮಾತ್ರ. ಈ ಅವಧಿಯಲ್ಲಿ ಬಳಕೆದಾರರು ಡೇಟಾ ಸೌಲಭ್ಯವನ್ನು ಬಳಕೆ ಮಾಡಬಹುದು. ಇದರಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯ ಗಳು ಲಭ್ಯ ಇರುವುದಿಲ್ಲ.

Best Mobiles in India

English summary
Airtel Data Vouchers: Check Affordable Plans Benefits and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+