Home
ಸುದ್ದಿಜಾಲ

ಏರ್‌ಟೆಲ್ ಅನ್‌ಲಿಮಿಟೆಡ್ ಧಮಾಕಾ ಕೊಡುಗೆ: ರೀಚಾರ್ಜ್‌ ಶುಲ್ಕ 1,349ರೂ.!

ಕಳೆದ ವರ್ಷ ಭಾರತೀಯ ಡಿಟಿಎಚ್ ವಲಯದಲ್ಲಿ ಮಹತ್ತರ ಬದಲಾವಣೆಗಳು ನಡೆದಿದ್ದು, ಜನಪ್ರಿಯ ಡಿಟಿಎಚ್ ಸಂಸ್ಥೆ ಏರ್‌ಟೆಲ್ ಹಲವು ಯೋಜನೆಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಏರ್‌ಟೆಲ್ ಇದೀಗ ತನ್ನ ಗ್ರಾಹಕರಿಗೆ ಇದೀಗ ಭರ್ಜರಿ ಧಮಾಕಾ ಕೊಡುಗೆಯನ್ನು ಪರಿಚಯಿಸಿದೆ. ವಾರ್ಷಿಕ ರೀಚಾರ್ಜ್ ಯೋಜನೆಯೊಂದನ್ನು ಬಿಡುಗಡೆ ಮಾಡಿದ್ದು, ಹೆಚ್ಚಿನ ಚಾನೆಲ್‌ಗಳು ಲಭ್ಯವಾಗಲಿವೆ.

ಅನ್‌ಲಿಮಿಟೆಡ್‌ ಧಮಾಕಾ

ಹೌದು, ಏರ್‌ಟೆಲ್ ಡಿಟಿಎಚ್ ಸಂಸ್ಥೆಯು ಅನ್‌ಲಿಮಿಟೆಡ್‌ ಧಮಾಕಾ ರೀಚಾರ್ಜ್ ಯೋಜನೆ ಪರಿಚಯಿಸಿದೆ. ಇದೊಂದು ವಾರ್ಷಿಕ ರೀಚಾರ್ಜ್ ಪ್ಲ್ಯಾನ್ ಆಗಿದ್ದು, 1,349ರೂ. ಶುಲ್ಕದ ಪ್ರೈಸ್‌ಟ್ಯಾಗ್‌ನಲ್ಲಿದೆ. ಈ ಯೋಜನೆಯಲ್ಲಿ ಹಲವು ಚಾನೆಲ್‌ಗಳು ಲಭ್ಯವಾಗುತ್ತವೆ. ಈ ಪ್ಲ್ಯಾನ್‌ ಬಗ್ಗೆ ಏರ್‌ಟೆಲ್‌ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದ್ದು, ಹಾಗೆಯೇ ಏರ್‌ಟೆಲ್‌ ಆಪ್‌ನಲ್ಲಿಯೂ ಸಹ ಕಾಣಿಸಿಕೊಂಡಿದೆ. ಈ ವಾರ್ಷಿಕ ರೀಚಾರ್ಜ್ ಪ್ಲ್ಯಾನ್‌ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ವಾರ್ಷಿಕ ರೀಚಾರ್ಜ್ ಪ್ಲ್ಯಾನ್

ವಾರ್ಷಿಕ ರೀಚಾರ್ಜ್ ಪ್ಲ್ಯಾನ್

UDP ಪ್ಯಾಕ್‌ 12M ನ್ಯೂ ಎಂದೂ ಕರೆಯಲಾಗುವ ಈ ಅನ್‌ಲಿಮಿಟೆಡ್‌ ಧಮಾಕಾ ರೀಚಾರ್ಜ್ಯಲ್ಲಿ ವಿವಿಧ ಚಾನೆಲ್‌ಗಳನ್ನು ಪ್ರಸಾರವಾಗುತ್ತವೆ. ಅವುಗಳಲ್ಲಿ ಹಿಂದಿ ಸುದ್ದಿ, ಜಿಇಸಿ, ಚಲನಚಿತ್ರಗಳು, ಸಂಗೀತ ಮತ್ತು ಇತರೆ ಪ್ರಕಾರಗಳ ಚಾನಲ್‌ಗಳು ಇವುಗಳಲ್ಲಿ ಸೇರಿವೆ. ಗ್ರಾಹಕರು ಏರ್‌ಟೆಲ್ ಡಿಜಿಟಲ್ ಟಿವಿ ಆಪ್‌ ಸೇವೆಯ ಮೂಲಕ ದೀರ್ಘಾವಧಿಯ ಪ್ಯಾಕ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

ಯಾವೆಲ್ಲಾ ಚಾನೆಲ್‌ ಇರಲಿವೆ

ಯಾವೆಲ್ಲಾ ಚಾನೆಲ್‌ ಇರಲಿವೆ

ಈ ಪ್ಲ್ಯಾನಿನಲ್ಲಿ ಬಿಗ್ ಮ್ಯಾಜಿಕ್, ಕಲರ್ಸ್ ರಿಸ್ತೆ, ಎಪಿಕ್, ಸೋನಿ ಪಾಲ್ ಮತ್ತು ಸ್ಟಾರ್ ಭಾರತ್ ಚಾನೆಲ್‌ಗಳು ಲಭ್ಯ, ಹಾಗೆಯೇ ಸ್ಟಾರ್ ಉತ್ಸವ್, ಜೀ ಅನ್ಮೋಲ್ ಮತ್ತು Punjee ಪಂಜಾಬಿ ಕೂಡ ಸೇರಿವೆ. ಸುದ್ದಿಗಾಗಿ ಆಜ್ ತಕ್, ಎನ್ಡಿಟಿವಿ ಇಂಡಿಯಾ, ನ್ಯೂಸ್ 18 ಬಿಹಾರ / ಜಾರ್ಖಂಡ್, ಮತ್ತು ನ್ಯೂಸ್ 18 ಇಂಡಿಯಾ, ನ್ಯೂಸ್ 18 ಚತ್ತಿಸ್‌ಗಡ್, 18 ಹರಿಯಾಣ ಹಿಮಾಚಲ, ನ್ಯೂಸ್ 18 ರಾಜಸ್ಥಾನ, ಮತ್ತು ಜೀ ಬಿಹಾರ ಜಾರ್ಖಂಡ್ ಕೂಡ ಇದೆ. ಇದಲ್ಲದೆ, ಪ್ಯಾಕ್‌ನಲ್ಲಿ ನ್ಯೂಸ್ 18 ಯುಪಿ ಯುಕೆ, ನ್ಯೂಸ್ 18 ಉರ್ದು, ತೇಜ್, ಚಾನೆಲ್‌ಗಳು ಇರುತ್ತವೆ.

ಕ್ರೀಡೆ ಮತ್ತು ಮ್ಯೂಸಿಕ್ ಚಾನೆಲ್ಸ್‌

ಕ್ರೀಡೆ ಮತ್ತು ಮ್ಯೂಸಿಕ್ ಚಾನೆಲ್ಸ್‌

ಈ ಯೋಜನೆಯಲ್ಲಿ ಸಂಗೀತಕ್ಕಾಗಿ ಚಾನೆಲ್‌ಗಳನ್ನು ಒದಗಿಸಲಾಗಿದ್ದು, ಇಟಿಸಿ, ಎಂಟಿವಿ ಬೀಟ್ಸ್, ಜಿಂಗ್ ಮತ್ತು ಸೋನಿ ಮಿಕ್ಸ್ ಅನ್ನು ಒಳಗೊಂಡಿದೆ. ಹಾಗೆಯೇ ಮಕ್ಕಳಿಗಾಗಿ ಕಾರ್ಟೂನ್ ನೆಟ್‌ವರ್ಕ್ ಮತ್ತು ಪೊಗೊವನ್ನು ಒಳಗೊಂಡಿದೆ. ಭೋಜ್‌ಪುರಿಯಯಲ್ಲಿ, ಬಿಗ್ ಗಂಗಾ ಚಾನೆಲ್, ಇನ್ನು ಚಲನಚಿತ್ರಗಳಿಗಾಗಿ ಕಲರ್ ಸಿನೆಪ್ಲೆಕ್ಸ್, ಸೋನಿ ವಾಹ್, ಸ್ಟಾರ್ ಉತ್ಸವ್ ಮೂವೀಸ್ ಚಾನೆಲ್‌ಗಳನ್ನು ಒಳಗೊಂಡಿದೆ. ಕೊನೆಯದಾಗಿ, ಕ್ರೀಡೆಗಳಿಗಾಗಿ ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಮತ್ತು ಸ್ಟಾರ್ ಸ್ಪೋರ್ಟ್ಸ್ ಫಸ್ಟ್ ಸೇರಿವೆ.

ಧಮಾಕಾ

ಏರ್‌ಟೆಲ್‌ನ ಈ ಅನ್ಲಿಮಿಟೆಡ್ ಧಮಾಕಾ ಪ್ಯಾಕ್‌ನ ರೀಚಾರ್ಜ್ ಮಾಡಿಸಿಕೊಂಡರೇ ಚಂದಾದಾರರಿಗೆ 200 FTA ಚಾನೆಲ್‌ಗಳನ್ನು ಸಹ ಲಭ್ಯವಾಗಲಿವೆ. ಇನ್ನು ರೀಚಾರ್ಜ್ ಮೊತ್ತ 1,349 ರೂ. ಆಗಿದ್ದು, (ತಿಂಗಳಿಗೆ 112.ರೂ.ಶುಲ್ಕ)..ಅಗ್ಗದ ರೀಚಾರ್ಜ್ ಪ್ಯಾಕ್ ಹುಡುಕುವವರಿಗೆ ಉತ್ತಮ ಆಯ್ಕೆ ಅನಿಸಲಿದೆ.

Best Mobiles in India

English summary
Airtel Digital TV's new 'Unlimited Dhamaka' pack costs Rs 1,349 and brings a lot of channels under its belt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+