ಲಾಕ್‌ಡೌನ್ ಎಫೆಕ್ಟ್: ಏರ್‌ಟೆಲ್ DTH ಗ್ರಾಹಕರಿಗೆ 4 ಉಚಿತ ಚಾನೆಲ್‌ಗಳು ಲಭ್ಯ!
ದೇಶದ ಡಿಟಿಎಚ್ ವಲಯದಲ್ಲಿ ಜನಪ್ರಿಯ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಏರ್‌ಟೆಲ್ ಡಿಜಿಟಲ್ ಟಿವಿ ಈಗಾಗಲೇ ಹಲವು ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಆದರೆ ಇದೀಗ ಕೊರೊನಾ ವೈರಸ್ ತಡೆಯಲು ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಎಲ್ಲರು ಮನೆಯಲ್ಲಿಯೇ ಇರುವುದು ಅಗತ್ಯವಾಗಿದೆ. ಈ ವೇಳೆ ತನ್ನ ಗ್ರಾಹಕರಿಗೆ ಅನುಕೂಲವಾಗಲೆಂದು ಕೊಡುಗೆಯೊಂದನ್ನು ಘೋಷಿಸಿದೆ.

ಹೌದು, ಲಾಕ್‌ಡೌನ್ ಕಾರಣದಿಂದಾಗಿ ಮನೆಯಲ್ಲಿರುವ ಬಹುತೇಕರಿಗೆ ಟಿವಿ ವೀಕ್ಷಣೆಯೇ ಸದ್ಯ ಮನರಂಜನೆಯ ಕೇಂದ್ರವಾಗಿದೆ. ಈ ಅವಧಿಯಲ್ಲಿ ಏರ್‌ಟೆಲ್ ಡಿಟಿಎಚ್ ಸಂಸ್ಥೆಯು ತನ್ನ ಚಂದಾದಾರಿಗೆ ನಾಲ್ಕು ಪ್ರೀಮಿಯಂ ಚಾನೆಲ್‌ಗಳ ಸೇವೆಯನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. ಹಾಗೆಯೇ ಹೊಸ ಏರ್‌ಟೆಲ್ ಕ್ಯೂರಿಯಾಸಿಟಿ ಸ್ಟ್ರೀಮ್ ಸಹ ಇದೇ ಏಪ್ರಿಲ್ 14 ರವರೆಗೆ ಉಚಿತವಾಗಿ ಲಭ್ಯವಿದೆ ಎಂದು ತಿಳಿಸಿದೆ.

ಏರ್‌ಟೆಲ್ ಸಂಸ್ಥೆಯು 30 ಕ್ಕೂ ಹೆಚ್ಚು ಮೌಲ್ಯವರ್ಧಿತ ಚಾನಲ್‌ಗಳನ್ನು ಹೊಂದಿದ್ದು, ಇತ್ತೀಚಿಗೆ ಏರ್‌ಟೆಲ್ ಹೊಸದಾಗಿ ಕ್ಯೂರಿಯಾಸಿಟಿ ಸ್ಟ್ರೀಮ್ ಚಾನೆಲ್ ಅನ್ನು ಪರಿಚಯಿಸಿದೆ. ಗ್ರಾಹಕರು ಚಾನೆಲ್ ನಂಬರ್ 419 ರಲ್ಲಿ ಈ ಸೇವೆಯನ್ನು ಪಡೆಯಬಹುದು. ಹಾಗೆಯೇ ಲೆಟ್ಸ್‌ಡಾನ್ಸ್, ಆಪ್ಕಿ ರಸೋಯಿ, ಮತ್ತು ಏರ್‌ಟೆಲ್ ಸೀನಿಯರ್ಸ್ ಟಿವಿ ಲಭ್ಯವಿದೆ. ಈ ಚಾನಲ್‌ಗಳಿಗೆ ಈಗಾಗಲೇ ಚಂದಾದಾರರಾಗಿರುವ ಬಳಕೆದಾರರಿಗೆ ಈ ಸೇವೆಯ ಪ್ರಯೋಜನ ದೊರೆಯುತ್ತದೆ.

ಏರ್‌ಟೆಲ್‌ನ ಲೆಟ್ಸ್‌ಡ್ಯಾನ್ಸ್, ಆಪ್ಕಿರಾಸೋಯಿ, ಏರ್‌ಟೆಲ್ ಸೀನಿಯರ್ಸ್ ಟಿವಿ ಮತ್ತು ಏರ್‌ಟೆಲ್ ಕ್ಯೂರಿಯಾಸಿಟಿ ಸ್ಟ್ರೀಮ್ ಈ ನಾಲ್ಕು ಪ್ಲಾಟ್‌ಫಾರ್ಮ್‌ಗಳು ಇದೇ ಏಪ್ರಿಲ್ 14, 2020 ರ ರವರೆಗೆ ಉಚಿತವಾಗಿ ಲಭ್ಯವಿರುತ್ತದೆ ಎಂದು ಏರ್‌ಟೆಲ್ ಡಿಜಿಟಲ್ ಟಿವಿ ತನ್ನ ಚಂದಾದಾರರಿಗೆ ಎಸ್‌ಎಂಎಸ್ ಕಳುಹಿಸುತ್ತಿದೆ. ಇತ್ತೀಚಿಗೆ ಟಾಟಾಸ್ಕೈ ಸಹ 12 ಸೇವೆಗಳನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡುವುದೆಂದು ತಿಳಿಸಿದೆ.

ಡಿಟಿಎಚ್ ವಲಯದಲ್ಲಿ ಮುಂಚೂಣಿಯಲ್ಲಿರುವ ಜನಪ್ರಿಯ ಟಾಟಾಸ್ಕೈ ಸಂಸ್ಥೆಗೆ ಪ್ರಬಲ ಪೈಪೋಟಿ ನೀಡುತ್ತಾ ಸಾಗಿರುವ ಏರ್‌ಟೆಲ್ ಡಿಟಿಎಚ್ ಹಲವು ಆಕರ್ಷಕ ಯೋಜನೆಗಳನ್ನು ಜಾರಿ ಮಾಡಿದೆ. ಉದಾಹರಣೆಗೆ, ಏರ್‌ಟೆಲ್ ಡಿಜಿಟಲ್ ಟಿವಿ ಏರ್‌ಟೆಲ್ ಕ್ಯೂರಿಯಾಸಿಟಿ ಸ್ಟ್ರೀಮ್, ಏರ್‌ಟೆಲ್ ಶಾರ್ಟ್ಸ್‌ಟಿವಿ, ಗುಡ್‌ಲೈಫ್, ದಿ ಹಾರರ್ ಟಿವಿ, ತೆಲುಗು ಟಾಕೀಸ್, ಸ್ಪಾಟ್‌ಲೈಟ್, ಲೆಟ್ಸ್ ಡ್ಯಾನ್ಸ್, ಹಾಲಿವುಡ್ ಡೈರೀಸ್, ಫಿಟ್‌ನೆಸ್ ಸ್ಟುಡಿಯೋ, ಮಿನಿಪ್ಲೆಕ್ಸ್, ಐಮ್ಯೂಸಿಕ್, ಸದಾಬಹಾರ್, ಒಎಂ ಶಕ್ತಿ, ಐಕೆಐಡಿಎಸ್ , ಡಿಸ್ನಿ ಸ್ಟೋರೀಸ್, ಪಂಜಾಬ್ ತಡ್ಕಾ, ಇಗಾಮ್ಸ್, ಹಮರ್ ಕ್ಯಾನಿಮಾ ಹೀಗೆ ಹಲವು ಸೇವೆಗಳನ್ನು ಶುರು ಮಾಡಿದೆ.


Click it and Unblock the Notifications








