ಏರ್‌ಟೆಲ್ ಡಿಟಿಎಚ್ : ಗ್ರಾಹಕರಿಗೆ ಒಂದು ತಿಂಗಳು ಉಚಿತ ಸೇವೆ!
ದೇಶದ ಡಿಟಿಎಚ್ ಕ್ಷೇತ್ರದಲ್ಲಿ ಹಲವಾರು ಏರಿಳಿತಗಳು ನಡೆದಿದ್ದು, ಪೂರೈಕೆದಾರರ ನಡುವೆ ಪ್ರಬಲ ಪೈಪೋಟಿ ಶುರುವಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯಲು ಡಿಟಿಎಚ್ ಪೂರೈಕೆ ಸಂಸ್ಥೆಗಳು ಆಕರ್ಷಕ ಆಫರ್‌ಗಳನ್ನು ಘೋಷಿಸುತ್ತಾ ಸಾಗಿವೆ. ಟಾಟಾಸ್ಕೈ, ವಿಡಿಯೊಕಾನ್, ಡಿಶ್ ಟಿವಿ ಹಾಗೂ ಏರ್‌ಟೆಲ್ ಡಿಟಿಎಚ್ ಸಂಸ್ಥೆಗಳು ಹೆಚ್ಚು ಗಮನಸೆಳೆದಿದೆ. ಅವುಗಳಲ್ಲಿ ಏರ್‌ಟೆಲ್ ಸಂಸ್ಥೆಯು ಇದೀಗ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ.

ಹೌದು, ಏರ್‌ಟೆಲ್ ಡಿಟಿಎಚ್ ಸಂಸ್ಥೆಯು ಹೊಸದಾಗಿ ಕನೆಕ್ಷನ್ ಪಡೆಯುವ ಗ್ರಾಹಕರಿಗೆ ಒಂದು ತಿಂಗಳ ಉಚಿತ ಡಿಟಿಎಚ್ ಸೇವೆ ನೀಡುವುದಾಗಿ ತಿಳಿಸಿದೆ. ಈ ಕೊಡಿಗೆಯು ಇನ್‌ಸ್ಟಾಲೇಶನ್ ಸಹ ಒಳಗೊಂಡಿದ್ದುಯ, ಗ್ರಾಹಕರು ಹೆಚ್ಚುವರಿಯಾಗಿ ಯಾವುದೇ ಶುಲ್ಕ ನೀಡುವ ಅಗತ್ಯ ಇರುವುದಿಲ್ಲ ಎಂದು ತಿಳಿಸಿದೆ. ಏರ್‌ಟೆಲ್ ಎಸ್‌ಡಿ ಸೆಟ್‌ಟಾಪ್ ಬಾಕ್ಸ್ ಬೆಲೆಯು 1,100ರೂ.ಗಳಾಗಿದ್ದು, ಮತ್ತು ಹೆಚ್‌ಡಿ ಸೆಟ್‌ಟಾಪ್ ಬಾಕ್ಸ್ ಬೆಲೆಯು 1,300ರೂ.ಗಳಾಗಿದೆ.

ಹೊಸ ಗ್ರಾಹಕರು ಏರ್‌ಟೆಲ್‌ನ ಎಸ್‌ಡಿ ಅಥವಾ ಹೆಚ್‌ಡಿ ಸೆಟ್‌ಟಾಪ್ ಬಾಕ್ಸ್ ಕನೆಕ್ಷನ್ ಪಡೆದುಕೊಂಡರೇ ಆ ಗ್ರಾಹಕರಿಗೆ ಒಂದು ತಿಂಗಳು ಡಿಟಿಎಚ್ ಸೇವೆಯು ಉಚಿತವಾಗಿ ಲಭ್ಯವಾಗಲಿದೆ. ಉಚಿತ ಸೇವೆ ಬಳಿಕ ಗ್ರಾಹಕರು ಅಗತ್ಯ ಪ್ಲ್ಯಾನ್‌ಗಳನ್ನು ಆಯ್ದುಕೊಳ್ಳಬಹುದು. ಏರ್‌ಟೆಲ್ ಸಂಸ್ಥೆಯು ಗ್ರಾಹಕರಿಗೆ 271ರೂ. 281ರೂ. 286ರೂ. 290ರೂ. ಮತ್ತು 329ರೂ.ಗಳ ಹಲವು ಆಕರ್ಷಕ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆಯನ್ನು ನೀಡಿದೆ.

ದೇಶದ ಎರಡನೇ ದೊಡ್ಡ ಡಿಟಿಎಚ್ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಏರ್‌ಟೆಲ್ ಇತ್ತೀಚಿಗೆ ಸೆಟ್‌ಟಾಪ್ ಬಾಕ್ಸ್‌ಗಳ ಬೆಲೆಯಲ್ಲಿಯೂ ಇಳಿಕೆ ಮಾಡಿದೆ. ಸದ್ಯ ಏರ್‌ಟೆಲ್ ಎಸ್‌ಡಿ ಸೆಟ್‌ಟಾಪ್ ಬಾಕ್ಸ್ ಬೆಲೆಯು 1,100ರೂ.ಗಳಗೆ ಸಿಗಲಿದೆ. ಹಾಗೂ ಹೆಚ್‌ಡಿ ಸೆಟ್‌ಟಾಪ್ ಬಾಕ್ಸ್ ಬೆಲೆಯು 1,300ರೂ.ಗಳಿಗೆ ಖರೀದಿಸಬಹುದಾಗಿದೆ.

ಗ್ರಾಹಕರೇನಾದರೂ ಏರ್‌ಟೆಲ್ ಸೆಟ್‌ಟಾಪ್ ಬಾಕ್ಸ್ ಅನ್ನು ಕಂಪನಿಯ ಅಧಿಕೃತ ವೆಬ್‌ತಾಣದ ಮೂಲಕ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೇ, ಗ್ರಾಹಕರಿಗೆ ಚಾನೆಲ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಲು ಅಲ್ಲಿ ಅವಕಾಶ ಸಿಗಲಿದೆ. ಸೆಟ್‌ಟಾಪ್ ಬಾಕ್ಸ್ ಮಾದರಿಯನ್ನು ಸೆಲೆಕ್ಟ್ ಮಾಡಿಕೊಂಡು ಆನಂತರ ಗ್ರಾಹಕರು ಅವರಿಗೆ ಅಗತ್ಯ ಎನಿಸುವ ಚಾನೆಲ್‌ಗಳ ಪ್ಯಾಕ್ ಅನ್ನು ಆಯ್ದುಕೊಳ್ಳಬಹುದಾಗಿದೆ.


Click it and Unblock the Notifications








