ಏರ್‌ಟೆಲ್ ಅತೀ ಅಗ್ಗದ ರೀಚಾರ್ಜ್ ಪ್ಲ್ಯಾನ್‌ಗಳ ಮಾಹಿತಿ ಇಲ್ಲಿದೆ!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋಗೆ ಪ್ರಬಲ ಪೈಪೋಟಿ ನೀಡುವ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್ ಭಿನ್ನ ಪ್ರೈಸ್‌ನಲ್ಲಿ ಪ್ರೀಪೇಯ್ಡ್ ಯೋಜನೆಗಳನ್ನು ಹೊಂದಿದೆ. ಬಹುತೇಕ ಯೋಜನೆಗಳು ಡೇಟಾ ಜೊತೆಗೆ ಅನಿಯಮಿತ ಕಾಲಿಂಗ್ ಸೌಲಭ್ಯ ಪಡೆದಿವೆ. ಇನ್ನು ಕೆಲವು ಯೋಜನೆಗಳು ಅತೀ ಅಗ್ಗದ ಬೆಲೆಯನ್ನು ಒಳಗೊಂಡಿದ್ದು, ಗ್ರಾಹಕರನ್ನು ಸೆಳೆದಿವೆ.

ಹೌದು, ಏರ್‌ಟೆಲ್ ಅಗ್ಗದ ದರದಲ್ಲಿ ಹಲವು ರೀಚಾರ್ಜ್ ಆಯ್ಕೆಗಳನ್ನು ಒಳಗೊಂಡಿದೆ. ಅಗ್ಗದ ಯೋಜನೆಗಳು ಅಲ್ಪಾವಧಿಯ ವ್ಯಾಲಿಡಿಟಿ, ವಾಯಿಸ್ ಕರೆ, ಎಸ್‌ಎಮ್‌ಎಸ್, ಹಾಗೂ ಡೇಟಾ ಸೌಲಭ್ಯಗಳನ್ನು ಸಹ ಪಡೆದಿವೆ. ಇದರೊಂದಿಗೆ ಮತ್ತಷ್ಟು ಯೋಜನೆಗಳು ಸೀಮಿತ ಪ್ರಯೋಜನಗಳನ್ನು ಮಾತ್ರ ಒದಗಿಸುತ್ತವೆ. ಹಾಗಾದರೆ ಏರ್‌ಟೆಲ್‌ನ ಅತೀ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ರೀಚಾರ್ಜ್ ಯೋಜನೆಗಳ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 45ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಸ್ಥಳೀಯ ಹಾಗೂ ರಾಷ್ಟ್ರೀಯ ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.

ಏರ್‌ಟೆಲ್ 49ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ರೀಚಾರ್ಜ್‌ನಲ್ಲಿ 64ರೂ. ಟಾಕ್‌ಟೈಮ್ ಲಭ್ಯವಾಗಲಿದ್ದು, 100MB ಡೇಟಾ ಸೌಲಭ್ಯವು ಸಿಗಲಿದೆ. ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.

ಏರ್‌ಟೆಲ್ 79ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ರೀಚಾರ್ಜ್‌ನಲ್ಲ 64ರೂ. ಟಾಕ್‌ಟೈಮ್ ಲಭ್ಯವಾಗಲಿದ್ದು, 200MB ಡೇಟಾ ಸೌಲಭ್ಯವು ಸಿಗಲಿದೆ. ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.

ಅಗ್ಗದ ಪ್ಲ್ಯಾನ್ ಪ್ರಯೋಜನ
ಪ್ರಸ್ತುತ ಬಹುತೇಕ ಬಳಕೆದಾರರು ಡ್ಯುಯಲ್ ಸಿಮ್ ಬಳಕೆ ಮಾಡುತ್ತಿರುತ್ತಾರೆ. ಕರೆ ಮಾಡಲೊಂದು ಹಾಗೂ ಒಳಬರುವ ಕರೆಗಳಿಗಾಗಿ ಒಂದು ಸಿಮ್ ಉಳಿಸಿಕೊಂಡಿರುತ್ತಾರೆ. ಹೀಗಾಗಿ ಅವರು ಎರಡು ಸಿಮ್ ಚಾಲ್ತಿ ಆಗಿ ಇಟ್ಟುಕೊಳ್ಳಬೇಕಿರುತ್ತದೆ. ಆಗ ಸಿಮ್ ಚಾಲ್ತಿ ಇರಿಸಲು ಅಗ್ಗದ ರೀಚಾರ್ಜ್ ಮಾಡಿಸಲು ಇಂತಹ ಯೋಜನೆಗಳು ಉಪಯುಕ್ತ ಅನಿಸಲಿವೆ.


Click it and Unblock the Notifications








