ಏರ್‌ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!

|

ಏರ್‌ಟೆಲ್ ತನ್ನ ಗ್ರಾಹಕರಿಗೆ ವಿವಿಧ ರೀತಿಯ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಬರುತ್ತಿದ್ದು, ಅದಾಗ್ಯೂ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಅಸ್ತಿತ್ವದಲ್ಲಿ ಇರುವ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲೇ ಹಲವು ಸೌಲಭ್ಯವನ್ನು ಕಲ್ಪಿಸಿಕೊಡುತ್ತಾ ಬರುತ್ತಿದೆ. ಅದರಂತೆ 359 ರೂ. ಗಳ ರೀಚಾರ್ಜ್ ಪ್ಲ್ಯಾನ್‌ ಮೂಲಕ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಸಂತಸದ ವಿಷಯ ತಿಳಿಸಿದೆ.

ಏರ್‌ಟೆಲ್‌ನ  ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!

ಹೌದು, ಏರ್‌ಟೆಲ್‌ನ ಸಾಕಷ್ಟು ಚಂದಾದಾರರು ಸಾಮಾನ್ಯವಾಗಿ 359 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಖರೀದಿಸುತ್ತಾರೆ. ಇದು ಹೆಚ್ಚಿನ ಡೇಟಾ ಬಳಕೆ ಮಾಡುವವರಿಗೆ ಹಾಗೂ ದಿನವೂ ಎಸ್‌ಎಮ್‌ಎಸ್‌ ಕಳುಹಿಸುವವರಿಗೆ ಅತ್ಯಾನುಕೂಲ. ಈ ಅನುಕೂಲದ ಜೊತೆಗೆ ಇನ್ನಷ್ಟು ಸೌಕರ್ಯವನ್ನು ನೀಡಲು ಏರ್‌ಟೆಲ್‌ ಮುಂದಾಗಿದೆ. ಈ ಮೂಲಕ 28 ದಿನಗಳಿಗೂ ಅಧಿಕ ಮಾನ್ಯತೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಈ ವಿಶೇಷ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಏನೆಲ್ಲಾ ಪ್ರಯೋಜನ ಇದೆ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಏರ್‌ಟೆಲ್‌ ನ ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ 1 ತಿಂಗಳ ಮಾನ್ಯತೆ
359 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ನ ಪ್ರಮುಖ ಬದಲಾವಣೆ ಎಂದರೆ ಈ ಹಿಂದೆ ಬಳಕೆದಾದರರು 28 ದಿನಗಳಿಗೆ ಒಮ್ಮೆ ರೀಚಾರ್ಜ್‌ ಮಾಡಬೇಕಾಗಿತ್ತು. ಆದರೆ ಈ ಸಮಯವನ್ನು ವಿಸ್ತರಣೆ ಮಾಡಲಾಗಿದ್ದು, ಈ ಮೂಲಕ ಬರೋಬ್ಬರಿ 1 ತಿಂಗಳ ಮಾನ್ಯತೆಯನ್ನು ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ನೀಡಲಾಗಿದೆ.

ಏರ್‌ಟೆಲ್‌ 359 ರೂ. ಪ್ಲ್ಯಾನ್‌ನ ಪ್ರಯೋಜನ
359 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಗ್ರಾಹಕರು ದಿನವೂ 2GB ಡೇಟಾ ಪಡೆಯಬಹುದಾಗಿದ್ದು, ಇದರೊಂದಿಗೆ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಇದೆ. ಹಾಗೆಯೇ ಅನಿಯಮಿತ ಕರೆ ಯೊಂದಿಗೆ ಇನ್ಮುಂದೆ ಬಳಕೆದಾರರು ಒಟ್ಟಾರೆಯಾಗಿ 60GB ಡೇಟಾ ಬಳಕೆ ಮಾಡಿಕೊಳ್ಳಬಹುದು. ಹಾಗೆಯೇ 31 ದಿನಗಳಿರುವ ತಿಂಗಳಲ್ಲಿ 62GB ಸೌಲಭ್ಯ ಲಭ್ಯವಾಗಲಿದೆ.

ಏರ್‌ಟೆಲ್‌ನ  ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!

ಇದರೊಂದಿಗೆ ಎಕ್ಸ್‌ಸ್ಟ್ರೀಮ್ ಆಪ್‌, ಅಪೊಲೊ 24|7 ಸರ್ಕಲ್, ಫಾಸ್ಟ್‌ಟ್ಯಾಗ್‌ನಲ್ಲಿ 100 ರೂ. ಕ್ಯಾಶ್‌ಬ್ಯಾಕ್, ಉಚಿತ ಹಲೋಟ್ಯೂನ್ಸ್‌ ಮತ್ತು ಉಚಿತ ವಿಂಕ್ ಮ್ಯೂಸಿಕ್ ನೊಂದಿಗೆ ಇನ್ನೂ ಹೆಚ್ಚಿನ ಪ್ರಯೋಜನಗಳು ಈ ರೀಚಾರ್ಜ್‌ ಪ್ಲ್ಯಾನ್‌ನಿಂದ ಲಭ್ಯ.

ಪ್ರಯೋಜನಗಳನ್ನು ಕಡಿಮೆ ಮಾಡದ ಏರ್‌ಟೆಲ್‌
ಇನ್ನು ಏರ್‌ಟೆಲ್‌ 359 ರೂ.ಗಳ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಈ ಬದಲಾವಣೆ ಮಾಡಲು ಈ ಹಿಂದೆ ನೀಡಲಾಗುತ್ತಿದ್ದ ಯಾವ ಪ್ರಯೋಜನಗಳಿಗೂ ಕತ್ತರಿ ಹಾಕಿಲ್ಲ, ಬದಲಾಗಿ ಹೆಚ್ಚುವರಿ ಡೇಟಾ ಹಾಗೂ ಇನ್ನಿತರೆ ಸೌಲಭ್ಯವನ್ನು ನೀಡಿದೆ. ಇದು ಹಲವು ಗ್ರಾಹಕರಿಗೆ ಖುಷಿಯ ವಿಚಾರವಾಗಿದೆ.

ಟ್ರಾಯ್ ಆದೇಶಕ್ಕೆ ಮಣಿಯಿತಾ ಏರ್‌ಟೆಲ್‌?
359 ಈ ಪ್ಲ್ಯಾನ್‌ ಹಲವಾರು ಗ್ರಾಹಕರಿಗೆ ಇಷ್ಟವಾದರೂ ಹೆಚ್ಚಿನ ಡೇಟಾ ಬಳಕೆ ಮಾಡುವವರಿಗೆ ಇದು ಸಂಕಷ್ಟದ ವಿಚಾರ. ಆದರೆ, 1 ತಿಂಗಳ ವ್ಯಾಲಿಡಿಟಿಯೊಂದಿಗೆ ಬರುವ ಯೋಜನೆಗೆ ಚಂದಾದಾರರಾಗಲು ಇಷ್ಟಪಡುವ ಅನೇಕ ಗ್ರಾಹಕರು ಮಾರುಕಟ್ಟೆಯಲ್ಲಿದ್ದಾರೆ ಎಂದು ಏರ್‌ಟೆಲ್‌ ಕಂಡುಕೊಂಡಿದೆ. ಇದರೊಂದಿಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಸಹ ಟೆಲಿಕಾಂಗಳಿಗೆ ಈ ಸಂಬಂಧ ಆದೇಶ ನೀಡಿದ್ದು, 28 ದಿನಗಳ ಬದಲಾಗಿ 30 ದಿನಗಳು ಅಥವಾ ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ ಪ್ಲಾನ್‌ಗಳನ್ನು ಪರಿಚಯಿಸಲು ತಿಳಿಸಿದೆ. ಇದರ ಆಧಾರದಲ್ಲಿಯೇ ಏರ್‌ಟೆಲ್‌ ಈ ಹೊಸ ಪ್ಲ್ಯಾನ್‌ ಅನ್ನು ಪರಿಚಯಿಸಿರಬಹುದು ಎಂದು ಹೇಳಲಾಗುತ್ತಿದೆ.

ಏರ್‌ಟೆಲ್‌ನ  ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!

359 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ಗೆ ಪರ್ಯಾಯ ಯಾವುದಿದೆ?
ಇನ್ನು ಏರ್‌ಟೆಲ್‌ನ ತಿಂಗಳ ಮಾನ್ಯತೆ ಇರುವ 359 ರೂ. ಗಳ ಪ್ಲ್ಯಾನ್ ಇಷ್ಟ ಇಲ್ಲ ಎಂದವರು 549 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ಗೆ ಬದಲಾಗಬಹುದು. ಇದರಲ್ಲಿ ನೀವು ದಿನವೂ 2GB ದೈನಂದಿನ ಡೇಟಾ ಪಡೆಯಬಹುದಾಗಿದೆ. ಗಮನಿಸಬೇಕಾದ ವಿಷಯ ಎಂದರೆ 359 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಎರಡು ತಿಂಗಳು ಬಳಕೆ ಮಾಡಲು ನೀವು 718 ರೂ. ಗಳನ್ನು ಪಾವತಿ ಮಾಡಬೇಕು. ಆದರೆ, ಒಮ್ಮೆಲೆ 549 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಖರೀದಿ ಮಾಡಿದರೆ ಯಾವುದೇ ಸಮಸ್ಯೆ ಇಲ್ಲದೆ ಎರಡು ತಿಂಗಳು ಬಳಕೆ ಮಾಡಬಹುದಾಗಿದೆ. ಈ ಮೂಲಕ ನೀವು 169 ರೂ. ಗಳನ್ನು ಉಳಿಸಬಹುದು.

Best Mobiles in India

English summary
Airtel has Increased Validity of Rs 359 Plan for Users. The validity is now 1 month instead of the earlier 28 days. Read more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X