Home
ಸುದ್ದಿಜಾಲ

ಏರ್‌ಟೆಲ್‌ ಎಕ್ಸ್‌ಸ್ಟ್ರಿಮ್ ಬಾಕ್ಸ್‌ ಪ್ರೀಮಿಯಮ್ ಬಿಡುಗಡೆ; ಉಚಿತ OTT ಸದಸ್ಯತ್ವ!

ದೇಶದ ಪ್ರಮುಖ ಡಿಟಿಎಚ್‌ ಪೂರೈಕೆದಾರರ ಲಿಸ್ಟ್‌ನಲ್ಲಿ ಏರ್‌ಟೆಲ್‌ ಸಹ ಒಂದಾಗಿದ್ದು, ಗ್ರಾಹಕರಿಗೆ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಇತ್ತೀಚಿಗೆ ಏರ್‌ಟೆಲ್‌ ಎಕ್ಸ್‌ಸ್ಟ್ರಿಮ್ ಬಾಕ್ಸ್‌ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿದೆ. ಅದರ ಬೆನ್ನಲ್ಲೇ ಏರ್‌ಟೆಲ್‌ ಇದೀಗ ಹೊಸದಾಗಿ ಏರ್‌ಟೆಲ್‌ ಎಕ್ಸ್‌ಸ್ಟ್ರಿಮ್ ಪ್ರೀಮಿಯಮ್ ಪ್ಲ್ಯಾನ್‌ ಆಯ್ಕೆಯನ್ನು ಪರಿಚಯಿಸಿದೆ.

ಏರ್‌ಟೆಲ್

ಹೌದು, ಏರ್‌ಟೆಲ್ ಈಗಾಗಲೇ ಡಿ2ಎಚ್ ಸೇವೆಯಲ್ಲಿ ಜನಪ್ರಿಯ ಹೆಸರನ್ನು ಪಡೆದಿದ್ದು, ಆ ಸೇವೆಗೆ ಬಲ ತುಂಬಲು ಈಗ ಹೊಸದಾಗಿ 'ಏರ್‌ಟೆಲ್‌ ಎಕ್ಸ್‌ಸ್ಟ್ರಿಮ್ ಬಾಕ್ಸ್‌ ಪ್ರೀಮಿಯಮ್' ಪ್ಲ್ಯಾನ್‌ ಬಿಡುಗಡೆ ಮಾಡಿದೆ. ಇದರ ಬೆಲೆಯು 4,898ರೂ. ಆಗಿದೆ. ಹೊಸ ಬಾಕ್ಸ್‌ ಲೈವ್ ಟಿವಿ, ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌ ಸೇರಿದಂತೆ ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ (OTT) ಆಪ್ಸ್‌ ಮತ್ತು ಇಂಟರ್ನೆಟ್‌ ಸೇವೆಗಳನ್ನು ಪಡೆಯಬಹುದಾಗಿದೆ.

ಎಕ್ಸ್‌ಸ್ಟ್ರಿಮ್

ಏರ್‌ಟೆಲ್‌ ಈಗಾಗಲೇ ಎಕ್ಸ್‌ಸ್ಟ್ರಿಮ್ ಬಾಕ್ಸ್‌ ಬೇಸಿಕ್ ಪರಿಚಯಿಸಿದ್ದು, ಈಗ ಏರ್‌ಟೆಲ್‌ ಎಕ್ಸ್‌ಸ್ಟ್ರಿಮ್ ಬಾಕ್ಸ್ ಪ್ರೀಮಿಯಮ್ ಪರಿಚಯಿಸುವ ಮೂಲಕ ಎರಡು ಎಕ್ಸ್‌ಸ್ಟ್ರಿಮ್ ಬಾಕ್ಸ್‌ ಮಾದರಿಗಳ ಆಯ್ಕೆ ಪಡೆದಂತಾಗಿದೆ. ಇವು ಆಂಡ್ರಾಯ್ಡ್ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುವ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಹೈಬ್ರಿಡ್ ಸೆಟ್-ಟಾಪ್ ಬಾಕ್ಸ್ (STB) ಅನ್ನು ನೀಡುತ್ತದೆ. ಏಳು ದಿನಗಳ ವರೆಗೆ 462ರೂ. ಮೌಲ್ಯದ ಚಾನೆಲ್‌ ಪ್ಯಾಕ್ ಉಚಿತ ನೀಡುತ್ತದೆ.

ಪ್ರೀಮಿಯಂ

ಎಕ್ಸ್‌ಸ್ಟ್ರೀಮ್ ಬಾಕ್ಸ್ ಪ್ರೀಮಿಯಂ ಯೋಜನೆಯು 999ರೂ.ಗಳ ವಾರ್ಷಿಕ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಉಚಿತ ಒಳಗೊಂಡಿದೆ. ಹಾಗೆಯೇ ZEE5 ಪ್ರೀಮಿಯಂ ಚಂದಾದಾರಿಕೆ, 399 ಮೌಲ್ಯದ ಉಚಿತ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಸದಸ್ಯತ್ವ ಮತ್ತು 1,299 ರೂ.ಗಳ ಉಚಿತ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತದೆ. ಈ ಒಟಿಟಿ ಚಂದಾದಾರಿಕೆಗಳಿಗೆ ಒಟ್ಟಾರೆ ಚಂದಾದಾರಿಕೆ ಶುಲ್ಕಗಳು 3,696 ರೂ. ಆದಾಗ್ಯೂ, ಕಂಪನಿಯು ಈ ಎಲ್ಲಾ ಪ್ರಯೋಜನಗಳನ್ನು 2,399ರೂ.ಗಳಿಗೆ ನೀಡುತ್ತಿದೆ.

ಏರ್‌ಟೆಲ್

ಏರ್‌ಟೆಲ್‌ ಎಕ್ಸ್‌ಟ್ರಿಮ್‌ ಬಾಕ್ಸ್‌ ಬೇಸಿಕ್‌ ಯೋಜನೆಯ ಶುಲ್ಕವು 2,499ರೂ.ಗಳು ಆಗಿದೆ. ಹೊಸ ಬಳಕೆದಾರರು ಒಂದು ವರ್ಷದವರೆಗೆ ಉಚಿತ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಚಂದಾದಾರಿಕೆಯೊಂದಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಅನ್ನು ಪಡೆಯಬಹುದು. ಜೊತೆಗೆ ಒಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಕೆ ಪ್ಯಾಕೇಜ್ ಅನ್ನು ಆಯ್ಕೆ ಮಾಡಬಹುದು. ಹಾಗೆಯೇ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ZEE5 ಪ್ರೀಮಿಯಂ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆಗಳನ್ನು ನೀಡುತ್ತದೆ.

Best Mobiles in India

English summary
Airtel has brought new plans to digital TV subscribers who are looking to purchase its Android TV-based Xstream Box.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+