Home
ಸುದ್ದಿಜಾಲ

ಏರ್‌ಟೆಲ್‌ನ ಅತ್ಯುತ್ತಮ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳ ಲಿಸ್ಟ್‌ ಇಲ್ಲಿದೆ!

ಜನಪ್ರಿಯ ಏರ್‌ಟೆಲ್‌ ಟೆಲಿಕಾಂ ಅಧಿಕ ಪ್ರಯೋಜನಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಅದೇ ರೀತಿ ಏರ್‌ಟೆಲ್‌ ಸಂಸ್ಥೆಯು ಕೆಲವು ಅತ್ಯುತ್ತಮ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆ ಸಹ ಗ್ರಾಹಕರಿಗೆ ನೀಡಿದೆ. ಅವುಗಳಲ್ಲಿ ಕೆಲವು ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳು ಆಕರ್ಷಕ ಎನಸಿಕೊಂಡಿವೆ.

ಹೌದು, ಏರ್‌ಟೆಲ್‌ ಟೆಲಿಕಾಂನ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ (Airtel Family Postpaid) ಯೋಜನೆಗಳು ಭಿನ್ನ ಪ್ರೈಸ್‌ಟ್ಯಾಗ್‌ ರೇಂಜ್‌ನ ಆಯ್ಕೆಯಲ್ಲಿ ಲಭ್ಯ ಇವೆ. ಸಂಸ್ಥೆಯ ಆರಂಭಿಕ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ರೀಚಾರ್ಜ್‌ ಯೋಜನೆ 599ರೂ. ಆಗಿದೆ. ಹಾಗೆಯೇ 1499ರೂ. ಗಳ ಹೈ ಎಂಡ್‌ ಪೋಸ್ಟ್‌ಪೇಯ್ಡ್‌ ಯೋಜನೆಯ ಆಯ್ಕೆ ಸಹ ಕಾಣಬಹುದಾಗಿದೆ.

ಏರ್‌ಟೆಲ್‌ನ ಅತ್ಯುತ್ತಮ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳ ಲಿಸ್ಟ್‌ ಇಲ್ಲಿದೆ!

ಇನ್ನು ಭಾರ್ತಿ ಏರ್‌ಟೆಲ್‌ ಟೆಲಿಕಾಂನ ಈ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ರೀಚಾರ್ಜ್‌ ಯೋಜನೆಗಳು ಡೇಟಾ ಸೌಲಭ್ಯ, ಎಸ್‌ಎಮ್ಎಸ್‌, ಕರೆ ಹಾಗೂ ಓಟಿಟಿ ಪ್ರಯೋಜನೆಗಳನ್ನು ಪಡೆದಿವೆ. ಹಾಗಾದರೇ ಏರ್‌ಟೆಲ್‌ ಸಂಸ್ಥೆಯ ಜನಪ್ರಿಯ ಫ್ಯಾಮಿಲಿ ಫೋಸ್ಟ್‌ಪೇಯ್ಡ್‌ ಪ್ಲ್ಯಾನ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ 599ರೂ. ಪೋಸ್ಟ್‌ಪೇಯ್ಡ್‌ ರೀಚಾರ್ಜ್‌

ಏರ್‌ಟೆಲ್‌ ಟೆಲಿಕಾಂನ ಈ ಪೋಸ್ಟ್‌ಪೇಯ್ಡ್‌ ಯೋಜನೆಯು 75GB ಡೇಟಾ ಸೌಲಭ್ಯ ಹೊಂದಿದ್ದು, ಕುಟುಂಬದ ಒಬ್ಬ ಸದಸ್ಯರ ಫೋನ್ ಸಂಖ್ಯೆ ಆಡ್-ಆನ್ ಮಾಡುವ ಆಯ್ಕೆ ಪಡೆದಿದೆ. ಈ ಪ್ಲ್ಯಾನ್ ಅನ್‌ಲಿಮಿಟೆಡ್‌ 5G ಇಂಟರ್ನೆಟ್‌ ಸೌಲಭ್ಯ ಪಡೆದಿದೆ. ಹಾಗೆಯೇ ಯೋಜನೆಯು ಅನಿಯಮಿತ ಧ್ವನಿ ಕರೆಯ ಸೌಲಭ್ಯ ಸಹ ಹೊಂದಿದ್ದು, ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಹೊಂದಿದೆ. ಅಲ್ಲದೇ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ ಓಟಿಟಿ, ಅಮೆಜಾನ್ ಪ್ರೈಮ್ ಓಟಿಟಿ ಹಾಗೂ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ ಸೌಲಭ್ಯ ಇವೆ.

ಏರ್‌ಟೆಲ್‌ 999ರೂ. ಪೋಸ್ಟ್‌ಪೇಯ್ಡ್‌ ರೀಚಾರ್ಜ್‌

ಏರ್‌ಟೆಲ್‌ ಟೆಲಿಕಾಂನ ಏರ್‌ಟೆಲ್‌ 999ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು 100GB ಡೇಟಾ ಸೌಲಭ್ಯ ಹೊಂದಿದ್ದು, ಕುಟುಂಬದ ಮೂರು ಸದಸ್ಯರ ಫೋನ್ ಸಂಖ್ಯೆ ಆಡ್-ಆನ್ ಮಾಡುವ ಆಯ್ಕೆ ಇದೆ. ಈ ಯೋಜನೆ ಸಹ ಅನ್‌ಲಿಮಿಟೆಡ್‌ 5G ಇಂಟರ್ನೆಟ್‌ ಸೌಲಭ್ಯ ಪಡೆದಿದೆ. ಜೊತೆಗೆ ಈ ಪ್ಲ್ಯಾನ್ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಪಡೆದಿದ್ದು, ಇದಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಪಡೆದಿದೆ. ಅಲ್ಲದೇ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ ಓಟಿಟಿ, ಅಮೆಜಾನ್ ಪ್ರೈಮ್ ಓಟಿಟಿ ಹಾಗೂ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ ಸೌಲಭ್ಯ ದೊರೆಯಲಿವೆ.

ಏರ್‌ಟೆಲ್‌ 1199ರೂ. ಪೋಸ್ಟ್‌ಪೇಯ್ಡ್‌ ರೀಚಾರ್ಜ್‌

ಏರ್‌ಟೆಲ್‌ನ ಈ ಪೋಸ್ಟ್‌ಪೇಯ್ಡ್‌ ಯೋಜನೆಯು 150GB ಡೇಟಾ ಪ್ರಯೋಜನ ಪಡೆದುಕೊಂಡಿದ್ದು, ಹಾಗೆಯೇ ಕುಟುಂಬದ ಮೂರು ಸದಸ್ಯರ ಫೋನ್ ಸಂಖ್ಯೆ ಆಡ್-ಆನ್ ಮಾಡಬಹುದು. ಈ ಪ್ಲ್ಯಾನ್‌ ಸಹ ಅನ್‌ಲಿಮಿಟೆಡ್‌ 5G ಇಂಟರ್ನೆಟ್‌ ಪ್ರಯೋಜನ ಪಡೆದಿದೆ. ಇದರೊಂದಿಗೆ ಪ್ಲ್ಯಾನ್ ಅನಿಯಮಿತ ಧ್ವನಿ ಕರೆಯ ಪ್ರಯೋಜನ ಸಹ ಪಡೆದಿದ್ದು, ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಹೊಂದಿದೆ. ಅಲ್ಲದೇ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ ಓಟಿಟಿ, ಅಮೆಜಾನ್ ಪ್ರೈಮ್ ಓಟಿಟಿ ಹಾಗೂ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ ಪ್ರಯೋಜನಗಳು ದೊರೆಯಲಿವೆ.

ಏರ್‌ಟೆಲ್‌ 1499ರೂ. ಪೋಸ್ಟ್‌ಪೇಯ್ಡ್‌ ರೀಚಾರ್ಜ್‌

ಏರ್‌ಟೆಲ್‌ನ ಈ ಪೋಸ್ಟ್‌ಪೇಯ್ಡ್‌ ಯೋಜನೆಯು 200GB ಡೇಟಾ ಪ್ರಯೋಜನ ಪಡೆದುಕೊಂಡಿದ್ದು, ಹಾಗೆಯೇ ಕುಟುಂಬದ ನಾಲ್ಕು ಸದಸ್ಯರ ಫೋನ್ ಸಂಖ್ಯೆ ಆಡ್-ಆನ್ ಮಾಡಬಹುದು. ಈ ಪ್ಲ್ಯಾನ್‌ ಸಹ ಅನ್‌ಲಿಮಿಟೆಡ್‌ 5G ಇಂಟರ್ನೆಟ್‌ ಪ್ರಯೋಜನ ಪಡೆದಿದೆ. ಇದರ ಜೊತೆಗೆ ಪ್ಲ್ಯಾನ್ ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ ಸಹ ಪಡೆದಿದ್ದು, ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಹೊಂದಿದೆ. ಇದರೊಂದಿಗೆ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ ಓಟಿಟಿ, ಅಮೆಜಾನ್ ಪ್ರೈಮ್ ಓಟಿಟಿ ಹಾಗೂ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ ಪ್ರಯೋಜನಗಳು ಇವೆ.

Best Mobiles in India

English summary
Airtel Family Postpaid Recharge Plans 2024. Postpaid Plans Benefits Explained.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+