Home
ಸುದ್ದಿಜಾಲ

ಏರ್‌ಟೆಲ್‌ ಚಂದಾದಾರರಿಗೆ ಗುಡ್‌ನ್ಯೂಸ್‌: ಈ ಯೋಜನೆಗಳಲ್ಲಿ ಈಗ ಭಾರೀ ಆಫರ್!

ದೇಶದ ಟೆಲಿಕಾಂ ವಲಯದಲ್ಲಿ ಭಾರ್ತಿ ಏರ್‌ಟೆಲ್‌ ತನ್ನದೇ ಆದ ಗಟ್ಟಿಸ್ಥಾನ ಪಡೆದಿದೆ. ಏರ್‌ಟೆಲ್‌ ಟೆಲಿಕಾಂ ಹಲವು ಆಕರ್ಷಕ ಪ್ರೀಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಅವುಗಳಲ್ಲಿ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಂತೆ ಪೋಸ್ಟ್‌ಪೇಯ್ಡ್‌ ಯೋಜನೆಗಳು ಸಹ ಗ್ರಾಹಕರ ಗಮನ ಸೆಳೆದಿವೆ. ಇದೀಗ ಏರ್‌ಟೆಲ್‌ ತನ್ನ ಪೋಸ್ಟ್‌ಪೇಯ್ಡ್‌ ಯೋಜನೆಗಳಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ತಿಳಿಸಿದೆ ಗ್ರಾಹಕರಿಗೆ ಖುಷಿ ತಂದಿದೆ.

ಸಂಸ್ಥೆಯು

ಹೌದು, ಏರ್‌ಟೆಲ್‌ ಟೆಲಿಕಾಮ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆರಂಭಿಕ ಬೆಲೆ ಜಸ್ಟ್‌ 399ರೂ.ಗಳು ಆಗಿದೆ. ಸಂಸ್ಥೆಯು ಈಗ ಮಿ ಆಂಡ್‌ ಮೈ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿಯಾಗಿ ಓಟಿಟಿ ಚಂದಾದಾರಿಕೆಯನ್ನು ಹಾಗೂ 500 ಜಿಬಿ ಡೇಟಾ ಸೌಲಭ್ಯವನ್ನು ಘೋಷಿಸಿದೆ. ಈ ಮೂಲಕ ಓಟಿಟಿ ಪ್ರಿಯ ಗ್ರಾಹಕರಿಗೆ ಭರ್ಜರಿ ಖುಷಿ ನೀಡಿದೆ. ಹಾಗಾದರೇ ಹೆಚ್ಚುವರಿ ಯಾಗಿ ಓಟಿಟಿ ಹಾಗೂ ಡೇಟಾ ಆಫರ್ ಪಡೆದ ಏರ್‌ಟೆಲ್‌ ಟೆಲಿಕಾಂನ ಪೋಸ್ಟ್‌ಪೇಯ್ಡ್‌ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಭಾರ್ತಿ ಏರ್‌ಟೆಲ್ 749ರೂ. ಪೋಸ್ಟ್‌ಪೇಯ್ಡ್ ಯೋಜನೆ

ಭಾರ್ತಿ ಏರ್‌ಟೆಲ್ 749ರೂ. ಪೋಸ್ಟ್‌ಪೇಯ್ಡ್ ಯೋಜನೆ

ಏರ್‌ಟೆಲ್‌ನ 749ರೂ.ಗಳ ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಯೋಜನೆಯಡಿ, ಏರ್‌ಟೆಲ್ ಎರಡು ಉಚಿತ ಆಡ್-ಆನ್ ಸಂಖ್ಯೆಗಳನ್ನು ನೀಡುತ್ತಿದೆ. ಒಂದು ನಿಯಮಿತ ಮತ್ತು ಒಂದು ಡೇಟಾ ಮಾತ್ರ. ಪೋಸ್ಟ್‌ಪೇಯ್ಡ್ ಯೋಜನೆಯು 200 ಜಿಬಿ ವರೆಗೆ ರೋಲ್‌ಓವರ್‌ನೊಂದಿಗೆ 125 ಜಿಬಿ ಮಾಸಿಕ ಡೇಟಾವನ್ನು ನೀಡುತ್ತದೆ (ಬಳಕೆಗೆ ಮೀರಿ 2 ಪಿ / ಎಂಬಿ ದರ ವಿಧಿಸಲಾಗುತ್ತದೆ). ಇದು ಅನಿಯಮಿತ ವಾಯಿಸ್‌ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳೊಂದಿಗೆ ಬರುತ್ತದೆ.

ಭಾರ್ತಿ ಏರ್‌ಟೆಲ್ 999ರೂ. ಪೋಸ್ಟ್‌ಪೇಯ್ಡ್ ಯೋಜನೆ

ಭಾರ್ತಿ ಏರ್‌ಟೆಲ್ 999ರೂ. ಪೋಸ್ಟ್‌ಪೇಯ್ಡ್ ಯೋಜನೆ

ಏರ್‌ಟೆಲ್‌ನ 999ರೂ. ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಯೊಂದಿಗೆ, ಗ್ರಾಹಕರು ನಾಲ್ಕು ಉಚಿತ ಆಡ್-ಆನ್ ಸಂಪರ್ಕಗಳನ್ನು ಪಡೆಯುತ್ತಾರೆ. ಮೂರು ನಿಯಮಿತ ಮತ್ತು ಒಂದು ಡೇಟಾ ಆಡ್-ಆನ್. ಎಲ್ಲಾ ನಾಲ್ಕು ಪೋಸ್ಟ್‌ಪೇಯ್ಡ್ ಸಂಪರ್ಕಗಳು ಅನಿಯಮಿತ ವಾಯಿಸ್‌ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳೊಂದಿಗೆ ಬರುತ್ತವೆ. ಸಾಕಷ್ಟು ಏರ್‌ಟೆಲ್ ಸಂಪರ್ಕಗಳನ್ನು ಹೊಂದಿರುವ ಕುಟುಂಬಕ್ಕೆ ಇದು ಪರಿಪೂರ್ಣ ಪೋಸ್ಟ್‌ಪೇಯ್ಡ್ ಯೋಜನೆಯಾಗಿದೆ. ಕಂಪನಿಯು ನೀಡುವ ಡೇಟಾ ಲಾಭ 200 ಜಿಬಿ ಆಗಿದೆ.

ನಿಯಮಿತ

ನಿಗದಿಪಡಿಸಿದ ಆಡ್-ಆನ್‌ಗಳ ಬಳಕೆಯನ್ನು ಮೀರಿ 749 ಮತ್ತು 999 ರೂ. ಯೋಜನೆಗಳಿಗೆ ಕಂಪನಿಯು ನಿಯಮಿತ ಸಂಪರ್ಕಕ್ಕಾಗಿ 249 ರೂ. (ಅನಿಯಮಿತ ಕರೆಗಳು + 10 ಜಿಬಿ ಡೇಟಾ + ದಿನಕ್ಕೆ 100 ಎಸ್‌ಎಂಎಸ್) ಮತ್ತು ಕೇವಲ ಡೇಟಾ ಸಿಮ್‌ಗೆ 99 ರೂ. ಪೋಸ್ಟ್‌ಪೇಯ್ಡ್ ಬಳಕೆದಾರರು ಎಂಟು ಆಡ್-ಆನ್ ಸಂಪರ್ಕಗಳನ್ನು ಪಡೆಯಬಹುದು.

ಭಾರ್ತಿ ಏರ್‌ಟೆಲ್ 1,599ರೂ. ಪೋಸ್ಟ್‌ಪೇಯ್ಡ್ ಯೋಜನೆ

ಭಾರ್ತಿ ಏರ್‌ಟೆಲ್ 1,599ರೂ. ಪೋಸ್ಟ್‌ಪೇಯ್ಡ್ ಯೋಜನೆ

ಏರ್‌ಟೆಲ್‌ನ 1,599ರೂ.ಗಳ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಯೋಜನೆ ಪ್ರೀಮಿಯಂ ಕೊಡುಗೆಯಾಗಿದೆ. ಇದು ಒಂದು ಉಚಿತ ಆಡ್-ಆನ್ (ನಿಯಮಿತ) ನೀಡುತ್ತದೆ. 200 ಜಿಬಿ ವರೆಗೆ ರೋಲ್‌ಓವರ್, ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳೊಂದಿಗೆ 500 ಜಿಬಿ ಡೇಟಾ ಪ್ರಯೋಜನವನ್ನು ಹೊಂದಿದೆ. ಈ ಯೋಜನೆಯು ಉಚಿತ 200 ಐಎಸ್‌ಡಿ ನಿಮಿಷಗಳನ್ನು ಮತ್ತು ಐಆರ್ ಪ್ಯಾಕ್‌ಗಳಲ್ಲಿ 10% ರಿಯಾಯಿತಿ ನೀಡುತ್ತದೆ.

Best Mobiles in India

English summary
Bharti Airtel's Me & My Family postpaid plans are unique offerings from the telecom operator.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+