ಏರ್‌ಟೆಲ್‌ ಟೆಲಿಕಾಂನಿಂದ ಗ್ರಾಹಕರಿಗೆ ಉಚಿತ ರೀಚಾರ್ಜ್ ಪ್ಯಾಕ್ ಘೋಷಣೆ!

|

ದೇಶದಲ್ಲಿ ಕೊವಿಡ್ -19 ಸಾಂಕ್ರಾಮಿಕ ಎರಡನೇ ಅಲೆ ಹೆಚ್ಚಿದ್ದು, ಅದನ್ನು ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್‌, ಕರ್ಫ್ಯೂಗಳ ಜಾರಿ ಮಾಡಿದೆ. ಈ ವೇಳೆ ಜನರಿಗೆ ಪರಸ್ಪರ ಸಂಪರ್ಕದಲ್ಲಿರಲು ಸಹಾಯ ಮಾಡಲು ಭಾರ್ತಿ ಏರ್ಟೆಲ್ ಟೆಲಿಕಾಂ ಸಂಸ್ಥೆಯು ತನ್ನ ಚಂದಾದಾರರಲ್ಲಿ ಕಡಿಮೆ ಆದಾಯ ಹೊಂದಿರುವ ಗ್ರಾಹಕರಿಗೆ 49ರೂ.ಗಳ ಉಚಿತ ರಿಚಾರ್ಜ್ ಘೋಷಿಸಿದೆ. ಇದಲ್ಲದೆ 79ರೂ. ರಿಚಾರ್ಜ್ ಕೂಪನ್ ಖರೀದಿಸುವ ಪ್ರೀಪೇಡ್ ಗ್ರಾಹಕರಿಗೆ ಡಬಲ್‌ ಪ್ರಯೋಜನವನ್ನು ತಿಳಿಸಿದೆ.

ಹೌದು, ಲಾಕ್‌ಡೌನ್‌ಗಳಿಂದಾಗಿ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿರುವ ಕಡಿಮೆ-ಆದಾಯದ ಗ್ರಾಹಕರಿಗೆ ಹಾಗೂ ಆನ್‌ಲೈನ್‌ನಲ್ಲಿ ತಮ್ಮ ಫೋನ್‌ಗಳನ್ನು ಹೇಗೆ ರೀಚಾರ್ಜ್ ಮಾಡುವುದನ್ನು ತಿಳಿದಿಲ್ಲದ ಗ್ರಾಹಕರಿಗೆ ಏರ್‌ಟೆಲ್‌ ಟೆಲಿಕಾಂ ಉಚಿತ ರೀಚಾರ್ಜ್ ಕೊಡುಗೆ ನೀಡಿದೆ. ಹಾಗೆಯೇ ಅಗ್ಗದ 79ರೂ. ಯೋಜನೆಯನ್ನು ರೀಚಾರ್ಜ್ ಮಾಡಿಕೊಳ್ಳುವ ಚಂದಾದಾರರಿಗೆ ಡಬಲ್ ಪ್ರಯೋಜನಗಳನ್ನು ಒದಗಿಸಲಿದೆ ಎಂದಿದೆ. ಈ ಮೂಲಕ ಗ್ರಾಹಕರು ಅವರ ಪ್ರೀತಿಪಾತ್ರರೊಂದಿಗೆ ಕರೆ ಮಾಡಲು ಮತ್ತು ಸಂಪರ್ಕಿಸಲು ಸಾಧ್ಯವಾಗಿಸುವುದಾಗಿದೆ.

ಏರ್‌ಟೆಲ್‌ 49ರೂ. ಪ್ಯಾಕ್

ಏರ್‌ಟೆಲ್‌ 49ರೂ. ಪ್ಯಾಕ್

ಭಾರ್ತಿ ಏರ್‌ಟೆಲ್‌ ಟೆಲಿಕಾಂನ 49ರೂ. ರೀಚಾರ್ಜ್ ಪ್ಯಾಕ್ ಒಟ್ಟು 38 ದಿನಗಳ ಟಾಕ್‌ಟೈಮ್ ಅವಧಿಯನ್ನು ಪಡೆದಿದೆ ಮತ್ತು 100 ದಿನಗಳ ಡೇಟಾ ಸೌಲಭ್ಯವನ್ನು ಪಡೆದಿದೆ. ಇನ್ನು ಈ ಯೋಝನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಒಳಗೊಂಡಿದೆ. ಈ ಪ್ಯಾಕ್ ಅನ್ನು ಬಳಕೆದಾರರಿಗೆ ಏರ್‌ಟೆಲ್‌ ಯಾವುದೇ ಶುಲ್ಕವಿಲ್ಲದೆ ನೀಡಲಾಗುವುದು.

ಏರ್‌ಟೆಲ್‌ 79ರೂ. ಪ್ಯಾಕ್

ಏರ್‌ಟೆಲ್‌ 79ರೂ. ಪ್ಯಾಕ್

ಏರ್‌ಟೆಲ್‌ 79ರೂ. ಪ್ಯಾಕ್ ರೀಚಾರ್ಜ್ ಯೋಜನೆಯು 128ರೂ. ಮೌಲ್ಯದ ಟಾಕ್‌ಟೈಮ್ ಮತ್ತು 200MB ಡೇಟಾದೊಂದಿಗೆ ಬರುತ್ತದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ವಾಯಿಸ್ ಕರೆ ಪ್ರಯೋಜನ ಮುಗಿತ ಬಳಿಕ ಪ್ರತಿ ನಿಮಿಷದ ವಾಯಿಸ್ ಕರೆ 60 ಪೈಸೆ ಶುಲ್ಕವನ್ನು ಆಕರ್ಷಿಸುತ್ತದೆ. ಇದಲ್ಲದೆ, 200MB ಡೇಟಾದ ನಂತರದ ಬಳಕೆ, ಪ್ರತಿ MB ಡೇಟಾವು 50 ಪೈಸೆ ಶುಲ್ಕವನ್ನು ಆಕರ್ಷಿಸುತ್ತದೆ.

5.5 ಕೋಟಿ ಗ್ರಾಹಕರಿಗೆ ಪ್ರಯೋಜನ ಲಭ್ಯ

5.5 ಕೋಟಿ ಗ್ರಾಹಕರಿಗೆ ಪ್ರಯೋಜನ ಲಭ್ಯ

ಈ ಉಪಕ್ರಮದ ಮೂಲಕ, ಭಾರತದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಸುಮಾರು 55 ಮಿಲಿಯನ್ (5.5 ಕೋಟಿ) ಕಡಿಮೆ ಆದಾಯದ ಗ್ರಾಹಕರಿಗೆ ಸಹಾಯ ಮಾಡಲು ಕಂಪನಿಯು ಉದ್ದೇಶಿಸಿದೆ. ಏರ್‌ಟೆಲ್ ಗ್ರಾಹಕರಿಗೆ ನೀಡುತ್ತಿರುವ ಒಟ್ಟು ಲಾಭಗಳು 270 ಕೋಟಿ ರೂ. ಈ ಕೊಡುಗೆಯು ಸೋಂಕಿತ ಬಳಕೆದಾರರು ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ ಮತ್ತು ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನವೀಕರಿಸಲಾಗುತ್ತದೆ.

ಜಿಯೋಫೋನ್

ರಿಲಯನ್ಸ್ ಜಿಯೋ ಇತ್ತೀಚೆಗೆ ಜಿಯೋಫೋನ್ ಬಳಕೆದಾರರಿಗೆ ರಿಲಯನ್ಸ್ ಫೌಂಡೇಶನ್ ಸಹಯೋಗದೊಂದಿಗೆ ತಮ್ಮ ಪ್ರೀತಿಪಾತ್ರರ ಜೊತೆ ಸಂಪರ್ಕದಲ್ಲಿರಲು ಸಹಾಯ ಮಾಡುವ ಪ್ರಸ್ತಾಪವನ್ನು ಘೋಷಿಸಿತು. ಜಿಯೋಫೋನ್ ಬಳಕೆದಾರರು ಈಗ ಒಂದು ತಿಂಗಳವರೆಗೆ ಪ್ರತಿದಿನ 10 ನಿಮಿಷಗಳವರೆಗೆ ಉಚಿತ ಕರೆ ಪಡೆಯುತ್ತಾರೆ, ಮತ್ತು ಕಂಪನಿಯು ತನ್ನ ಪ್ರತಿಯೊಂದು ಜಿಯೋಫೋನ್ ಯೋಜನೆಗಳೊಂದಿಗೆ ಬಳಕೆದಾರರಿಗೆ ‘ಖರೀದಿ-ಒಂದು-ಪಡೆಯಿರಿ-ಒಂದು-ಉಚಿತ ಕೊಡುಗೆಯನ್ನು ನೀಡುತ್ತದೆ. ಆದ್ದರಿಂದ ಬಳಕೆದಾರರು ಜಿಯೋಫೋನ್ ಯೋಜನೆಗಳಲ್ಲಿ ಒಂದನ್ನು ರೀಚಾರ್ಜ್ ಮಾಡಿದರೆ.

Most Read Articles
Best Mobiles in India

English summary
Bharti Airtel Giving Rs 49 Pack for Free and Doubling Benefits With Rs 79 Plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X