Airtel: ಏರ್‌ಟೆಲ್‌ನಿಂದ ಹೊಸ ಪ್ರಿಪೇಯ್ಡ್ ಪ್ಲ್ಯಾನ್! ನಿತ್ಯ 2GB ಡೇಟಾ.. OTT ಪ್ರಯೋಜನ
ಟೆಲಿಕಾಂ ಸಂಸ್ಥೆಗಳಲ್ಲಿ ಅಗ್ರ ಸ್ಥಾನ ಪಡೆದಿರುವ ಏರ್‌ಟೆಲ್ (Airtel) ಆಗಾಗ್ಗೆ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡುತ್ತಲೇ ಇರುತ್ತದೆ. ಮೊನ್ನೆಯಷ್ಟೇ ಓಟಿಟಿ ಆಧಾರಿತ ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯಿಸಿತ್ತು. ಆದರೆ ಈಗ ಮಗದೊಂದು ವಿಶೇಷವಾದ ಅದರಲ್ಲೂ ಕಡಿಮೆ ಬೆಲೆಯ ಓಟಿಟಿ ಆಧಾರಿತ ಪ್ಲ್ಯಾನ್ ಪರಿಚಯಿಸಿದೆ.
ಹೌದು, ಏರ್‌ಟೆಲ್ ಸದಾ ಜಿಯೋ ಹಾಗೂ ಬಿಎಸ್‌ಎನ್ಎಲ್, ವಿ ಟೆಲಿಕಾಂಗೆ (Jio,BSNL, Vi Telecom) ಸ್ಪರ್ಧೆ ನೀಡುತ್ತಲೇ ಇರುತ್ತದೆ. ಇದರ ಭಾಗವಾಗಿಯೇ ಈಗ ಮಗದೊಂದು ಹೊಸ ಪ್ಲ್ಯಾನ್ ಅನ್ನು ಪರಿಚಯಿಸಿದ್ದು, ಇದು ಪ್ರತಿದಿನ 2GB ಡೇಟಾದೊಂದಿಗೆ ಹೊಸ ವಿವಿಧ ಸೌಲಭ್ಯ ಹೊಂದಿದೆ. ಹಾಗಿದ್ರೆ, ಈ ಪ್ಲ್ಯಾನ್‌ನಲ್ಲಿ ಏನೆಲ್ಲಾ ಪ್ರಯೋಜನೆ ಇದೆ?, ಇದರ ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏರ್‌ಟೆಲ್‌ನಿಂದ ಹೊಸ ಪ್ಲ್ಯಾನ್: ಏರ್‌ಟೆಲ್ ಇದೀಗ 869ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಆರಂಭ ಮಾಡಿದೆ. ಈ 869ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಮೂರು ತಿಂಗಳವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡಲಿದ್ದು, ನಿತ್ಯವೂ ಬಳಕೆದಾರರಿಗೆ 2GB ಡೇಟಾ ಪ್ರಯೋಜನವನ್ನು ನೀಡುತ್ತದೆ. ಹಾಗೆಯೇ 84 ದಿನಗಳ ದೀರ್ಘ ಮಾನ್ಯತೆಯನ್ನು ಈ ಪ್ಲ್ಯಾನ್ ಹೊಂದಿದೆ.
ಉಳಿದಂತೆ ಈ ಪ್ಲ್ಯಾನ್‌ನಲ್ಲಿ ಅನಿಯಮಿತ ಕರೆ ಪ್ರಯೋಜನಗಳು ಮತ್ತು 100 ದೈನಂದಿನ ಎಸ್‌ಎಮ್‌ಎಸ್ ಪ್ರಯೋಜನಗಳು ಸಹ ಇದ್ದು, ರಿವಾರ್ಡ್ ಮಿನಿ ಚಂದಾದಾರಿಕೆ ಆಯ್ಕೆ, ಅಪೊಲೊ 24/7 ಸರ್ಕಲ್, ಉಚಿತ ಹಲೋಟ್ಯೂನ್ಸ್, ವಿಂಕ್ ಮ್ಯೂಸಿಕ್, ಅನಿಯಮಿತ 5G ಡೇಟಾ ಸೇರಿದಂತೆ ಇತರೆ ಉತ್ತಮ ಪ್ರಯೋಜನಗಳನ್ನು ಈ ಪ್ಲ್ಯಾನ್ ಮೂಲಕ ನೀಡಲಾಗಿದೆ. ಇದರಿಂದ ಸಾಕಷ್ಟು ಗ್ರಾಹಕರನ್ನು ಪಡೆಯುವ ಉದ್ದೇಶ ಪಡೆದಿದೆ.

ಈ ಪ್ಲ್ಯಾನ್‌ನ ವಿಶೇಷತೆ ಏನು?: ಈ ಮೊದಲು ಏರ್‌ಟೆಲ್ 839 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಚಯಿಸಿತ್ತು. ಆದರೆ, ಈ ಹೊಸ 869 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡಿರುವುದು ವಿಶೇಷವಾದ ಸಂಗತಿಯಾಗಿದೆ. ಈ ಕಾರಣಕ್ಕೆ ಯಾರೆಲ್ಲಾ ಡಿಸ್ನಿ+ ಹಾಟ್‌ಸ್ಟಾರ್ ಪ್ರಿಯರಿದ್ದಾರೋ ಅವರು ಉಚಿತವಾಗಿ ಮೂರು ತಿಂಗಳವರೆಗೆ ಈ ಸೌಲಭ್ಯ ಪಡೆಯಬಹುದಾಗಿದೆ.
ಇನ್ನು ಈ ಮೊದಲು ಪರಿಚಯಿಸಿದ 839 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಕಡೆ ಕಣ್ಣಾಯಿಸುವುದಾದರೆ ಇದರಲ್ಲಿ ದಿನಕ್ಕೆ 2GB ಡೇಟಾ ಪ್ರಯೋಜನ, ಅನಿಯಮಿತ ಕರೆ ಪ್ರಯೋಜನಗಳು, ಪ್ರತಿದಿನ 100 ಎಸ್‌ಎಮ್‌ಎಸ್, ಅಪೊಲೊ 24/7 ಸರ್ಕಲ್, ಉಚಿತ ಹೆಲೋಟ್ಯೂನ್ಸ್, ವಿಂಕ್ ಮ್ಯೂಸಿಕ್, ಅನಿಯಮಿತ 5G ಡೇಟಾ, ಎಕ್ಸ್ಟ್ರೀಮ್ ಪ್ಲೇ ನೊಂದಿಗೆ 84 ದಿನಗಳ ಮಾನ್ಯತೆಯನ್ನು ಈ ಪ್ಲ್ಯಾನ್ ಹೊಂದಿದೆ. ಹಾಗಿದ್ರೆ, ಏರ್‌ಟೆಲ್‌ನ ಕೆಲವು ಇತರೆ ವಿಶೇಷ ಪ್ಲ್ಯಾನ್‌ಗಳ ಬಗ್ಗೆ ತಿಳಿಯೋಣ ಬನ್ನಿ.
ಏರ್‌ಟೆಲ್‌ನ 359 ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ ನಿತ್ಯ 2.5GB ಡೇಟಾ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದ್ದು, ಈ ಪ್ಲ್ಯಾನ್ ಅನಿಯಮಿತ ವಾಯ್ಸ್ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್ ಸೇರಿದಂತೆ ವಿವಿಧ ಪ್ರಯೋಜನ ನೀಡಲಿದೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ, ಅಪೊಲೊ 24/7 ಸರ್ಕಲ್, ವಿಂಕ್ ಮ್ಯೂಸಿಕ್ ಪ್ರೀಮಿಯಂ, ಉಚಿತ ಹಲೋಟ್ಯೂನ್ಸ್‌ಗೆ ಈ ಮೂಲಕ ಪ್ರವೇಶ ಪಡೆಯಬಹುದಾಗಿದೆ. ಇದು ಒಂದು ತಿಂಗಳ ಮಾನ್ಯತೆ ಹೊಂದಿದೆ.

ಏರ್‌ಟೆಲ್ 319 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ನಿತ್ಯವೂ 2GB ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದ್ದು, ಈ ಯೋಜನೆಯು ಅನಿಯಮಿತ ವಾಯ್ಸ್ ಕರೆ ಸೌಲಭ್ಯ, 100 ಎಸ್‌ಎಮ್‌ಎಸ್ ಸೇರಿದಂತೆ ಅನೇಕ ಪ್ರಯೋಜನಗಳನ್ನು ಪಡೆದಿದೆ. ಅಂದರೆ ಅಪೊಲೊ 24/7 ಸರ್ಕಲ್, ವಿಂಕ್ ಮ್ಯೂಸಿಕ್ ಪ್ರೀಮಿಯಂ ಮತ್ತು ಉಚಿತ ಹಲೋಟ್ಯೂನ್ಸ್ ಸೇರಿದಂತೆ ಹಲವು ಪ್ರಯೋಜನಗಳು ಇದರಲ್ಲಿ ಸಿಗಲಿದೆ.

ಏರ್‌ಟೆಲ್‌ನ 299ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ ಬಳಕೆದಾರರು 1.5GB ದೈನಂದಿನ ಡೇಟಾ ಪ್ರಯೋಜನವನ್ನು ಪಡೆಯಬಹುದು. ಜೊತೆಗೆ ಇದು 28 ದಿನಗಳ ಮಾನ್ಯತೆ ಹೊಂದಿದ್ದು, ಅನಿಯಮಿತ ಕರೆ ಪ್ರಯೋಜನಗಳು, ದಿನಕ್ಕೆ 100 ಎಸ್‌ಎಮ್‌ಎಸ್ ಸೇರಿದಂತೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹಾಗೆಯೇ ಅಪೊಲೊ 24/7 ಸರ್ಕಲ್, ವಿಂಕ್ ಮ್ಯೂಸಿಕ್ ಪ್ರೀಮಿಯಂ, ಉಚಿತ ಹಲೋಟ್ಯೂನ್ಸ್ ಅನ್ನು ಈ ಪ್ಲ್ಯಾನ್ ನಲ್ಲಿ ಪಡೆಯಬಹುದಾಗಿದೆ.


Click it and Unblock the Notifications








